Wednesday, 5 May 2021

ಎಲ್ಲಾ ಸ್ಥಳೀಯ ರೈಲು ಸೇವೆಗಳು ಸ್ಥಗಿತ:ಮಮತಾ ಬ್ಯಾನರ್ಜಿ


ಎಲ್ಲಾ ಸ್ಥಳೀಯ ರೈಲು ಸೇವೆಗಳು ಸ್ಥಗಿತ:ಮಮತಾ ಬ್ಯಾನರ್ಜಿ 

ಕೋಲ್ಕತಾ: ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ದೃಷ್ಟಿಯಿಂದ, ಬಂಗಾಳ ಸರಕಾರ ಸ್ಥಳೀಯ ರೈಲು ಸೇವೆಗಳನ್ನು ನಾಳೆಯಿಂದ ಸ್ಥಗಿತಗೊಳಿಸಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ.

ಮೆಟ್ರೊ ಸೇರಿದಂತೆ ರಾಜ್ಯ ಸಾರಿಗೆ ನಾಳೆಯಿಂದ ಶೇಕಡಾ 50 ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿವೆ ಎಂದು ಅವರು ಪ್ರಕಟಿಸಿದರು.

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ ಹಾಗೂ  ಎಲ್ಲಾ ಸಾಮಾಜಿಕ ಮತ್ತು ರಾಜಕೀಯ ಸಭೆಗಳನ್ನು ನಿಷೇಧಿಸಲಾಗಿದೆ. ಮಾಸ್ಕ್ ಗಳನ್ನು ಧರಿಸುವುದು ಕಡ್ಡಾಯವಾಗಿರಬೇಕು, ರಾಜ್ಯ ಸರಕಾರಿ ಕಚೇರಿಗಳಿಗೆ ಕೇವಲ 50 ಪ್ರತಿಶತದಷ್ಟು ಹಾಜರಾತಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ಇದೆ. ಶಾಪಿಂಗ್ ಸಂಕೀರ್ಣಗಳು, ಜಿಮ್‌ಗಳು, ಸಿನೆಮಾ ಹಾಲ್‌ಗಳು, ಬ್ಯೂಟಿ ಪಾರ್ಲರ್‌ಗಳು ಮುಚ್ಚಲ್ಪಡುತ್ತವೆ" ಎಂದು ಅವರು ಹೇಳಿದರು.

ವೈರಸ್ ಹರಡುವುದನ್ನು ತಡೆಯಲು ರಾಜ್ಯದ ಮಾರುಕಟ್ಟೆಗಳು ಬೆಳಿಗ್ಗೆ 7 ರಿಂದ 10 ರವರೆಗೆ ಹಾಗೂ ಸಂಜೆ 5 ರಿಂದ 7 ರವರೆಗೆ ಮಾತ್ರ ತೆರೆದಿರುತ್ತವೆ.SHARE THIS

Author:

0 التعليقات: