Thursday, 27 May 2021

ಪೆಟ್ರೋಲ್‌, ಡೀಸೆಲ್‌ ದರ ಮತ್ತೆ ಏರಿಕೆ


ಪೆಟ್ರೋಲ್‌, ಡೀಸೆಲ್‌ ದರ ಮತ್ತೆ ಏರಿಕೆ

ನವದೆಹಲಿ (ಪಿಟಿಐ): ಈ ತಿಂಗಳಲ್ಲಿ 14 ಬಾರಿ ತೈಲ ಬೆಲೆ ಏರಿಕೆಯಾಗಿದ್ದು, ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ₹100 ಗಡಿ ದಾಟಿದೆ. ಸದ್ಯ ಠಾಣೆಯಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ₹100.06 ಮತ್ತು ಡೀಸೆಲ್‌ ದರ ಲೀಟರ್‌ಗೆ ₹ 91.99ಕ್ಕೆ ಏರಿಕೆಯಾಗಿದೆ.

ಗುರುವಾರ ಪೆಟ್ರೋಲ್ ಬೆಲೆ ಲೀಟರ್‌ಗೆ 24 ಪೈಸೆ ಮತ್ತು ಡೀಸೆಲ್‌ ಬೆಲೆ ಲೀಟರ್‌ಗೆ 29 ಪೈಸೆ ಹೆಚ್ಚಾಗಿದೆ.

ಮುಂಬೈನಲ್ಲೂ ಇಂಧನ ದರ ಹೆಚ್ಚಾಗಿದ್ದು, ನೂರರ ಗಡಿಯ ಹತ್ತಿರದಲ್ಲಿದೆ. ಮುಂಬೈನಲ್ಲಿ ಪೆಟ್ರೋಲ್ ಲೀಟರ್‌ಗೆ ₹99.94 ಹಾಗೂ ಡೀಸೆಲ್‌ ದರ ಲೀಟರ್‌ಗೆ ₹91.87ಕ್ಕೆ ತಲುಪಿದೆ.

ಮೇ 4ರಿಂದ ಇಲ್ಲಿಯವರೆಗೂ ದೇಶದಲ್ಲಿ ಇಂಧನ ದರ 14 ಬಾರಿ ಏರಿಕೆ ಕಂಡಿದೆ. ಇದರಿಂದ ದೇಶದಾದ್ಯಂತ ಇಂಧನ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ಈಗಾಗಲೇ ನೂರರ ಗಡಿ ದಾಟಿದ್ದ ರಾಜಸ್ಥಾನದಲ್ಲಿ ಇಂಧನ ಇನ್ನಷ್ಟು ದುಬಾರಿಯಾಗಿದೆ. ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ₹104.67 ಮತ್ತು ಡೀಸೆಲ್‌ ₹97.49ಕ್ಕೆ ತಲುಪಿದೆ.SHARE THIS

Author:

0 التعليقات: