ಅಸ್ಸಾಂ: ಮತ ಎಣಿಕೆ ಕೇಂದ್ರದ ಬಳಿ ಬಳಕೆಯಾಗದ ಇವಿಎಂ ಪತ್ತೆ
ಗುವಾಹಟಿ: ಶನಿವಾರ ಸಂಜೆ ಇಲ್ಲಿ ಎಣಿಕೆಯ ಕೇಂದ್ರದ ಆವರಣದಲ್ಲಿ ಬಳಕೆಯಾಗದ ಇವಿಎಂ ಯಂತ್ರವೊಂದು ಪತ್ತೆಯಾಗಿದೆ ಎಂದು ಸರಕಾರದ ಪ್ರಕಟನೆ ತಿಳಿಸಿದೆ.
ಇವಿಎಂ ಯಂತ್ರ ಪತ್ತೆಯಾದ ನಂತರ ಜಿಲ್ಲಾ ಚುನಾವಣಾ ಅಧಿಕಾರಿ ಮೇಘಾ ನಿಧಿ ದಹಲ್ ಅವರು ರಿಟರ್ನಿಂಗ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಯಂತ್ರದ ಬಗ್ಗೆ ವಿಚಾರಿಸಿದರು.ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳೂ ಸ್ಥಳಕ್ಕೆ ತಲುಪಿದರು.
ಮತದಾನದ ದಿನದಂದು ಬಳಕೆಯಾಗದ ಇವಿಎಂ ಅನ್ನು ಮೀಸಲು ಇಡಲಾಗಿತ್ತು, ಅಜಾಗರೂಕತೆಯಿಂದ ಎಣಿಕೆಯ ಸ್ಥಳದಲ್ಲಿ ಇದು ಕಂಡುಬಂದಿದೆ. ಇವಿಎಂನಲ್ಲಿ ಯಾವುದೇ ಮತಗಳು ಇರಲಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪ್ರಕಟನೆಯೊಂದರಲ್ಲಿ ತಿಳಿಸಲಾಗಿದೆ.
0 التعليقات: