Friday, 21 May 2021

ದುಬಾರಿಯಾಯ್ತು ಪೆಟ್ರೋಲ್, ಡೀಸಲ್..!


ದುಬಾರಿಯಾಯ್ತು ಪೆಟ್ರೋಲ್, ಡೀಸಲ್..!

ನವದೆಹಲಿ,ಮೇ.21-ಮತ್ತೆ ತೈಲ ಬೆಲೆ ಏರಿಕಯಾಗಿದ್ದು ಪೆಟ್ರೋಲ್ ಬೆಲೆ 100 ರೂ.ಗಳ ಅಂಚಿಗೆ ತಲುಪಿದ್ದರೆ, ಡೀಸಲ್ ಬೆಲೆ 91 ರೂ.ಗಳ ಗಡಿ ತಲುಪಿದೆ. ಇಂದು ಪೆಟ್ರೋಲ್ ಬೆಲೆ 19 ಪೈಸೆ ಹಾಗೂ ಡೀಸಲ್ ಬೆಲೆ 29 ಪೈಸೆ ಹೆಚ್ಚಳವಾಗಿರುವುದರಿಂದ ತೈಲ ಬೆಲೆ ಗಗನಮುಖಿಯಾಗಿದೆ.

ಒಂದು ತಿಂಗಳಿನಲ್ಲಿ 11 ಭಾರಿ ತೈಲ ಬೆಲೆ ಏರಿಕೆಯಾಗಿರುವುದರಿಂದ ದೇಶದಲ್ಲೇ ಇದೆ ಪ್ರಥಮ ಭಾರಿಗೆ ತೈಲ ಬೆಲೆ ಇಷ್ಟೊಂದು ದುಬಾರಿಯಾಗಿ ಪರಿಣಮಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ 93.04ರೂ.ಗಳಾಗಿದ್ದರೆ, ಡೀಸಲ್ ಬೆಲೆ 83.80 ರೂ.ಗಳಾಗಿದೆ.ಕೆಲ ರಾಜ್ಯಗಳಲ್ಲಿ ಈಗಾಗಲೆ ತೈಲ ಬೆಲೆ 100 ರೂ.ಗಳ ಗಡಿ ದಾಟಿದೆ. ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ 100 ರೂ.ಗಳ ಅಂಚಿಗೆ ಬಂದು ನಿಂತಿದೆ.

ಆಯಾ ರಾಜ್ಯಗಳ ತೆರಿಗೆ ಆಧಾರದ ಮೇಲೆ ಅಲ್ಲಿನ ತೈಲ ಬೆಲೆ ನಿಗಧಿಯಾಗುವುದರಿಂದ ಒಂದು ರಾಜ್ಯದಿಂದ ಮತ್ತೊಂದು ರಾಜ್ಯದ ತೈಲ ಬೆಲೆಯಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ.SHARE THIS

Author:

0 التعليقات: