ಅನಂತನಾಗ್ ಎನ್'ಕೌಂಟರ್ : ಸೇನೆಯ ದಾಳಿಗೆ ಮೂವರು ಉಗ್ರರು ಬಲಿ
ಶ್ರೀನಗರ್,: ಜಮ್ಮು-ಕಾಶ್ಮೀರದ ಆನಂತ್ನಾಗ್ ಜಿಲ್ಲೆಯಲ್ಲಿ ನಿನ್ನೆ ನಡೆದ ಎನ್'ಕೌಂಟರ್ ನಲ್ಲಿ ಭದ್ರತಾ ಪಡೆಗಳ ಗುಂಡಿ ದಾಳಿಗೆ ಮೂವರು ಉಗ್ರರು ಬಲಿಯಾಗಿದ್ದಾರೆ.
ಕೋಮೆರ್ನಾಗ್ ಪ್ರಾಂತ್ಯದ ವೈಲೂ ಗ್ರಾಮದಲ್ಲಿ ಉಗ್ರರು ಆಡಗಿದ್ದಾರೆ ಎಂಬ ಮಾಹಿತಿಯನ್ನಾಧರಿಸಿ ಭದ್ರತಾ ಪಡೆಗಳು ಶೋಧ ಕಾರ್ಯ ಕೈಗೊಂಡಿದ್ದರು.
ಈ ಸಂದರ್ಭದಲ್ಲಿ ಸೇನೆ ಮೇಲೆ ಉಗ್ರರು ಗುಂಡಿನ ದಾಳಿಗೆ ಮುಂದಾದರೂ ಇದಕ್ಕೆ ಪ್ರತಿದಾಳಿ ನಡೆಸಿದಾಗ ಮೂವರು ಉಗ್ರರು ಬಲಿಯಾಗಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
0 التعليقات: