Sunday, 2 May 2021

ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಚಿವ ಎಸ್.ಅಂಗಾರ ನೇಮಕ

 

ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಚಿವ ಎಸ್.ಅಂಗಾರ ನೇಮಕ

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ನೂತನ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಖಾತೆ ಸಚಿವ ಎಸ್.ಅಂಗಾರ ಅವರನ್ನು ನೇಮಕ ಮಾಡಿ ಸಿಎಂ ಯಡಿಯೂರಪ್ಪ ಅವರು ಆದೇಶ ಹೊರಡಿಸಿದ್ದಾರೆ.

ಹಿಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಗಂಡಸಿ ಶಿವರಾಮ್, ಕೆ.ಜೆ.ಜಾರ್ಜ್ ಹಾಗೂ ರೋಷನ್‍ಬೇಗ್ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಸಚಿವ ಸಿ.ಟಿ.ರವಿ ಅವರು ಉಸ್ತುವಾರಿ ಸಚಿವರಾಗಿ ಕೆಲ ತಿಂಗಳುಗಳ ಕಾಲ ಕಾರ್ಯನಿರ್ವಹಿಸಿದ್ದರು. ಸಿ.ಟಿ.ರವಿ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನೀಡಿದ್ದರಿಂದ ಅವರು 2020, ನ.5ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಸುಮಾರು 1 ವರ್ಷಗಳ ಕಾಲ ಚಿಕ್ಕಮಗಳೂರು ನೂತನ ಉಸ್ತುವಾರಿ ಸಚಿವರನ್ನು ಸರಕಾರ ನೇಮಕ ಮಾಡಿರಲಿಲ್ಲ.


SHARE THIS

Author:

0 التعليقات: