ಫುಜೈರ ಹೋಲಿ ಕುರ್ಆನ್ ಅಂತರಾಷ್ಟ್ರ ವ್ಯಕ್ತಿತ್ವ ಅವಾರ್ಡ್ ಸ್ವೀಕರಿಸುತ್ತಿರುವ
ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ
ಫುಜೈರ: ಫುಜೈರ ರಾಜಕುಮಾರ ಶೈಖ್ ಮುಹಮ್ಮದ್ ಬಿನ್ ಅಹ್ಮದ್ ಬಿನ್ ಶರ್ಕಿಯವರ ಆಶ್ರಯದಲ್ಲಿ ಕಾರ್ಯಾಚರಿಸುವ ಫುಜೈರ ಸೋಷಿಯಲ್ ಏನ್ಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ನಡೆಯುವ ಫುಜೈರ ಹೋಲಿ ಕುರ್ಆನ್ ಪಾರಾಯಣೆ ಕಾರ್ಯಕ್ರಮದ ಭಾಗವಾಗಿ ಏರ್ಪಡಿಸಿದ 2021ರ ಫುಜೈರ ಹೋಲಿ ಕುರ್ಆನ್ ಅಂತರಾಷ್ಟ್ರೀಯ ಇಸ್ಲಾಮಿಕ ವ್ಯಕ್ತಿತ್ವ ಪ್ರಶಸ್ತಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಮತ್ತು ಶೈಖ್ ಝಾಇದ್ ಇಂಟರ್ ನ್ಯಾಷನಲ್ ಪೀಸ್ ಫೋರಂನ ಚೆಯರ್ಮ್ಯಾನ್ ಆಗಿರುವ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಸ್ವೀಕರಿಸಿದರು.
ವಿದ್ಯಾಭ್ಯಾಸ, ಸಮಾಧಾನ, ಲೋಕೋಪಕಾರ ಕ್ಷೇತ್ರಗಳಲ್ಲಿ ಭಾರತ ಮತ್ತು ಯುಎಇ ಸೌಹಾರ್ದ ಸಕ್ರಿಯಗೊಳಿಸುವಲ್ಲಿ ಕಳೆದ 50 ವರ್ಷಗಳ ಕಾರ್ಯಾಚರಣೆಗಳನ್ನು ಪರಿಗಣಿಸಿಕೊಂಡು ಅಂತರಾಷ್ಟ್ರೀಯ ವ್ಯಕ್ತಿತ್ವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಫುಜೈರ ಸೋಷಿಯಲ್ ಏನ್ಡ್ ಕಲ್ಚರಲ್ ಅಸೋಸಿಯೇಷನ್ ಪ್ರೆಸಿಡೆಂಟ್ ಖಾಲಿದ್ ಅಲ್ ದನ್ಹಾನಿ ಸುದ್ದಿ ಗೋಷ್ಠಿಯಲ್ಲಿ ಹೇಳಿದ್ದರು.
0 التعليقات: