Tuesday, 4 May 2021

ಚುನಾವಣೆ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ


ಚುನಾವಣೆ  ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ

ಹೊಸದಿಲ್ಲಿ: ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯ  ಫಲಿತಾಂಶ ರವಿವಾರ ಪ್ರಕಟವಾದ ನಂತರ ಸರಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಮಂಗಳವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿವೆ.

ಫೆಬ್ರವರಿ 23 ರ ನಂತರ ಇದೇ ಮೊದಲ ಬಾರಿಗೆ ಸಾರಿಗೆ ಇಂಧನ ಬೆಲೆಗಳನ್ನು ಹೆಚ್ಚಿಸಲಾಗಿದೆ. ಇದರ ಪರಿಣಾಮವಾಗಿ, ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 15 ಪೈಸೆ ಏರಿಕೆಯಾದರೆ, ಡೀಸೆಲ್ ಬೆಲೆಯನ್ನು ಲೀಟರ್‌ಗೆ 18 ಪೈಸೆ ಹೆಚ್ಚಿಸಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದಿಲ್ಲಿಯಲ್ಲಿ ಮಂಗಳವಾರ ಕ್ರಮವಾಗಿ ಲೀಟರ್‌ಗೆ ರೂ .90.55 ಮತ್ತು ರೂ .80.91 ಗೆ ಮಾರಾಟವಾಗುತ್ತಿದೆ.

ಚುನಾವಣೆಯ ಸಮಯದಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ಬೆಲೆಗಳಲ್ಲಿ ಏರಿಕೆಯಾಗಿದೆ ಸ್ಥಿರವಾಗಿದ್ದವು.

ಚುನಾವಣೆಗೂ, ಸಾರಿಗೆ ಇಂಧನ ಬೆಲೆ ಏರಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಸರಕಾರಿ ಸ್ವಾಮ್ಯದ ಒಎಂಸಿ ಸಮರ್ಥಿಸಿಕೊಂಡಿದೆ.SHARE THIS

Author:

0 التعليقات: