Sunday, 16 May 2021

ಕೇಂದ್ರ ಸರಕಾರದ ಕೋವಿಡ್ ಸಮಿತಿ ತ್ಯಜಿಸಿದ ಹಿರಿಯ ವೈರಾಲಜಿಸ್ಟ್ ಶಾಹಿದ್ ಜಮೀಲ್


ಕೇಂದ್ರ ಸರಕಾರದ ಕೋವಿಡ್ ಸಮಿತಿ ತ್ಯಜಿಸಿದ ಹಿರಿಯ ವೈರಾಲಜಿಸ್ಟ್ ಶಾಹಿದ್ ಜಮೀಲ್

ಹೊಸದಿಲ್ಲಿ: ಕೊರೋನವೈರಸ್‌ನ ರೂಪಾಂತರಗಳನ್ನು ಪತ್ತೆ ಹಚ್ಚಲು ಸರಕಾರ ಸ್ಥಾಪಿಸಿರುವ ವೈಜ್ಞಾನಿಕ ಸಲಹೆಗಾರರ ವೇದಿಕೆಗೆ ಹಿರಿಯ ವೈರಾಲಜಿಸ್ಟ್ ಶಾಹಿದ್ ಜಮೀಲ್  ರಾಜೀನಾಮೆ ನೀಡಿದ್ದಾರೆ. ಈ ವಿಚಾರವನ್ನು ಅವರು  ರವಿವಾರ  NDTVಗೆ ತಿಳಿಸಿದರು.

ಅಧಿಕಾರಿಗಳು ಕೊರೋನ ನಿಭಾಯಿಸಿರುವ ರೀತಿಯನ್ನು, ಸರಕಾರದ ಕೋವಿಡ್ ನೀತಿಯನ್ನು ಪ್ರಶ್ನಿಸಿದ ವಾರಗಳ ಬಳಿಕ ಡಾ.ಜಮೀಲ್ ರಾಜೀನಾಮೆ ನೀಡಿದ್ದಾರೆ.

"ನನ್ನ ನಿರ್ಧಾರ ಸರಿಯಾಗಿದೆ ಹಾಗೂ  ನಾನು ಹೆಚ್ಚು ಹೇಳಲು ಏನೂ ಇಲ್ಲ" ಎಂದು ಇನ್‌ಸಾಕೋಗ್‌( INSACOG) ಎಂದು ಕರೆಯಲ್ಪಡುವ ವೇದಿಕೆಯ ವೈಜ್ಞಾನಿಕ ಸಲಹಾ ಗುಂಪಿನ ಅಧ್ಯಕ್ಷ ಡಾ.ಜಮೀಲ್ ಹೇಳಿದರು.


 



SHARE THIS

Author:

0 التعليقات: