Monday, 24 May 2021

'ಸಿ.ಡಿಯಲ್ಲಿರುವುದು ನಾನೇ' ತನಿಖಾಧಿಕಾರಿ ಎದುರು ರಮೇಶ್ ಜಾರಕಿಹೊಳಿ ಹೇಳಿಕೆ..!?

'ಸಿ.ಡಿಯಲ್ಲಿರುವುದು ನಾನೇ' ತನಿಖಾಧಿಕಾರಿ ಎದುರು ರಮೇಶ್ ಜಾರಕಿಹೊಳಿ ಹೇಳಿಕೆ..!?

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆ ಹುಟ್ಟಸಿ ಹಾಕಿದ್ಧ ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಸಿ.ಡಿ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ.

ಸಿ.ಡಿಯಲ್ಲಿರುವುದು ನಾನೇ, ಗೊತ್ತಿಲ್ಲದೇ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ ಎಂದು ಸ್ವತಃ ರಮೇಶ್ ಜಾರಿಕಿಹೊಳಿ ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿರುವುದಾಗಿ ವರದಿಯಾಗಿದೆ.

ವೀಡಿಯೊದಲ್ಲಿ ಇರುವ ಯುವತಿ ನನಗೆ ಪರಿಚಯದವಳು. ಯಾವುದೋ ಪ್ರಾಜೆಕ್ಟ್ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಪರಿಚಯ ಮಾಡಿಕೊಂಡಿದ್ದಳು. ನನ್ನನಂಬರ್ ಗೆ ಆಗಾಗ ಕರೆ ಮಾಡುತ್ತಿದ್ದಳು. ಆಕೆ ನನ್ನನ್ನು ಕೆಲವೊಮ್ಮೆ ಭೇಟಿಯಾಗುತ್ತಿದ್ದಳು. ಮೊದಲ ಭಾರಿಗೆ ಅಪಾರ್ಟ್ ಮೆಂಟ್ ವೊಂದರಲ್ಲಿ ಭೇಟಿಯಾಗಿದ್ದಳು ಎಂದಿದ್ದಾರೆ.

ಇನ್ನು, ಆಕೆಯನ್ನು ನಾನು ಅತ್ಯಾಚಾರ ಮಾಡಿಲ್ಲ. ಆಕೆಯ ಸಹಮತದೊಂದಿಗೆ ಲೈಂಗಿಕ ಸಂಪರ್ಕ ಮಾಡಿರುವುದಾಗಿ ಜಾರಕಿಹೊಳಿ ತನಿಖಾಧಿಕಾರಿ ಕವಿತಾ ಎದುರು ಹೇಳಿಕೊಂಡಿರುವುದು ದಾಖಲಾಗಿವೆ ಎಂದು ಖಾಸಗಿ ಸುದ್ದಿ ವಾಹಿನಿಗಳು ವರದಿ ಮಾಡಿವೆ.

ಈ ಸಿ.ಡಿ ಹೊರ ಬಿದ್ದಾಗ ರಮೇಶ್ ಜಾರಕಿಹೊಳಿ, ಇದನ್ನು ನಕಲಿ ವೀಡಯೊ ಎಂದು ಸಮರ್ಥಿಸಿಕೊಂಡಿದ್ದಲ್ಲದೇ, ನನ್ನನ್ನು ರಾಜಕೀಯ ಕುತಂತ್ರಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ ಎಂದು ದೂರು ನೀಡಿದ್ದರು.SHARE THIS

Author:

0 التعليقات: