ಕೊರೋನಾ ಕಾರಣ ವಿದ್ಯುತ್, ನೀರಿನ ಬಿಲ್ ಇಲ್ಲ : ಸಾಲ ವಸೂಲಿಗೂ ಬ್ರೇಕ್
ತಿರುವನಂತಪುರ (ಮೇ.07): ಕೊರೋನಾ ಕಾರಣಕ್ಕೆ ರಾಜ್ಯದ ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ, ಮುಂದಿನ 2 ತಿಂಗಳ ಕಾಲ ಬಾಕಿಯಿರುವ ವಿದ್ಯುತ್ ಹಾಗೂ ನೀರಿನ ಬಿಲ್ ವಸೂಲಿ ಮಾಡದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆದೇಶಿಸಿದ್ದಾರೆ.
ಅಲ್ಲದೆ ಬ್ಯಾಂಕಿಂಗ್ ವಲಯವೂ ಸಹ ಸಾಲಗಾರರ ಬಳಿ ವಸೂಲಿಗೆ ತೆರಳದಂತೆಯೂ ಸಿಬ್ಬಂದಿಗೆ ಸೂಚಿಸಲಾಗಿದೆ. ಔಷಧ ಸೇರಿದಂತೆ ಇನ್ನಿತರ ಸಾಮಗ್ರಿಗಳ ಖರೀದಿಗಾಗಿ ಮನೆಯಿಂದ ಹೊರಹೋಗಲಾಗದ ಅಸಹಾಯಕರು ಪೊಲೀಸ್ ನಿಯಂತ್ರಣ ಕೊಟಡಿಗೆ ಕರೆ ಮಾಡುವ ಮೂಲಕ ಔಷಧಿಗಳನ್ನು ತರಿಸಿಕೊಳ್ಳಬಹುದಾಗಿದೆ.
ಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೊಲೀಸರು ಕೊರೋನಾ ಜಾಗೃತಿ ಮೂಡಿಸಲಿದ್ದಾರೆ ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿಸಿದರು.
0 التعليقات: