Monday, 3 May 2021

ಪಿಣರಾಯಿ ವಿಜಯನ್ ಐತಿಹಾಸಿಕ ಗೆಲುವು: ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ಅಭಿನಂದನೆ


 ಪಿಣರಾಯಿ ವಿಜಯನ್ ಐತಿಹಾಸಿಕ ಗೆಲುವು: ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ಅಭಿನಂದನೆ

ಕಲ್ಲಿಕೋಟೆ: ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್ ನೇತೃತ್ವದಲ್ಲಿರುವ ಸರಕಾರಕ್ಕೆ ಮುಂದಿನ ಐದು ವರ್ಷ ಆಡಳಿತ ನಡೆಸಲು ಕೇರಳೀಯ ಜನತೆ ಜನಾದೇಶ ನೀಡಿರುವುದು ಸಂತೋಷದ ವಿಷಯವಾಗಿದೆ.

ಪ್ರಕೃತಿ ವಿಕೋಪ ಸಹಿತ ಹಲವಾರು ಸಂಕಷ್ಟಗಳನ್ನು ಕೇರಳೀಯರು ಎದುರಿಸಿದಾಗ ಜನರಿಗೆ ಅಗತ್ಯವಾದ ಎಲ್ಲಾ ಸೇವೆಗಳನ್ನು ನೀಡಿ ಸಂಕಷ್ಟಗಳನ್ನು ಒಟ್ಟಿಗೆ ನಿಂತು ಎದುರಿಸುವಲ್ಲಿ ನೇತೃತ್ವ ನೀಡಿದ ಮುಖ್ಯಮಂತ್ರಿಯ ನಿಲುವು ಕೇರಳ ಜನತೆಯ ಮದ್ಯೆ ಸರ್ವಾಂಗೀಕಾರ ಪಡೆದದ್ದು ಎಲ್ಲರಿಗೂ ತಿಳಿದ ವಿಚಾರ.

NRC CAA ಸಮಸ್ಯೆಯನ್ನು ಸಂವಿಧಾನ ಬದ್ಧವಾಗಿ ಸಮೀಪಿಸಿ ಅದು ಕೇವಲ ಮುಸಲ್ಮಾನರ ಸಮಸ್ಯೆ ಮಾತ್ರ ಅಲ್ಲ ಬದಲಾಗಿ ಸಂವಿಧಾನದ ವಿರುದ್ಧ ಕಾಯ್ದೆಯಾಗಿದೆಯೆಂಬುದನ್ನು ಜನರಿಗೆ ಮನದಟ್ಟು ಮಾಡಿಕೊಡುವಲ್ಲಿ ಅವರು ಯಶಸ್ವಿಯಾಗಿದ್ದರು. ಅದರ ವಿರುದ್ದ ಬೃಹತ್ ಪ್ರತಿಭಟನಾ ಸಭೆಗಳನ್ನು ಏರ್ಪಡಿಸುವುದಕ್ಕೆ ನೇತೃತ್ವ ಕೊಟ್ಟಿದ್ದರು.

ಭಾರತದ ಅಡಿಪಾಯ ಜಾತ್ಯಾತೀತವಾಗಿದ್ದು,ಎಲ್ಲಾ ಧರ್ಮಾನುಯಾಯಿಗಳಿಗೆ ಒಂದೇ ರೀತಿಯ ನ್ಯಾಯ ಒದಗಿಸಿಕೊಟ್ಟು,ಪ್ರಜೆಗಳನ್ನು ಸಮಾನವಾಗಿ ಕಾಣುವುದು ಸರಕಾರಗಳ ಭಾದ್ಯತೆ.

ಅಂತಹ ಸಂದೇಶಗಳನ್ನು ನೀಡಲು NRC CAA ವಿರುದ್ದ ಪ್ರತಿಭಟನೆಗಳಿಗೆ ಸಾದ್ಯವಾಗಿದೆ.

ಕೇರಳಿಯರು ಒಗ್ಗಟ್ಟಾಗಿ ನಡೆಸಿದ ಅಂತಹ ಪ್ರತಿಭಟನೆಗಳು ವಿಶ್ವಾಸಿಗಳಿಗೆ ನೀಡಿದ ನಿರೀಕ್ಷೆ ಅವರ್ಣನೀಯವಾಗಿತ್ತು.

ಕಣ್ಣೂರು ಕೋಝಿಕ್ಕೋಡ್,ಎರ್ಣಾಕುಲಂ ಸಹಿತ ಹಲವಡೆಡೆ ಮುಖ್ಯಮಂತ್ರಿ ಖುದ್ದಾಗಿ ಸಂಘಟಿಸಿದ ಪ್ರತಿಭಟನಾ ಸಭೆಗಳಲ್ಲಿ ಭಾಷಣ ಮಾಡಲು ಮುಖ್ಯಮಂತ್ರಿ ಆಹ್ವಾನ ನೀಡಿದಾಗಲೂ ಅವರ ಜೊತೆ ಮಾತನಾಡಿದಾಗಲೂ ಸರಕಾರ ಈ ವಿಷಯವನ್ನು ಅತೀ ಗಂಭೀರವಾಗಿ ಪರಿಗಣಿಸಿದೆ ಎಂಬುದು ಸ್ಪಷ್ಟವಾಗಿತ್ತು.

ಸಮುದಾಯಕ್ಕೆ ಸಂಬಂಧಿಸಿದ ವಿಷಯವಾಗಿರಲಿ,ಶಿಕ್ಷಣ,ಸಾಮಾಜಿಕ ವಿಷಯವಾಗಿರಲಿ ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯ ರವರನ್ನು ಮುಖತ ಭೇಟಿಯಾಗಿ ಮಾತನಾಡಿದಾಗಲೂ,ಫೋನ್ ಸಂಭಾಷಣೆ ನಡೆಸಿ ಮನವರಿಕೆ ಮಾಡಿದಾಗಲೆಲ್ಲಾ ಪ್ರತಿಯೊಂದು ವಿಷಯಗಳನ್ನು ಸೂಕ್ಷಮವಾಗಿ ಚರ್ಚಿಸಿ ಸೂಕ್ತ ತೀರ್ಮಾನಗಳನ್ನು ಜಾರಿಗೊಳಿಸುವಲ್ಲಿ ಅವರ ಸರಕಾರ ಮುತುವರ್ಜಿ ವಹಿಸಿದ್ದು ಮಾದರಿಯುತವಾಗಿತ್ತು.

ಕೋವಿಡ್ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಮಲಯಾಳಿಗಳು ನಲುಗಾಡಿದಾಗ ಕಳೆದ ಒಂದು ವರ್ಷದಿಂದ ಎಲ್ಲರಿಗೂ ಸಹಾಯ ಸಾಂತ್ವನ ನೀಡಿ ಪಿನರಾಯ್ ಸರಕಾರ ಶಹಬ್ಬಾಸ್ ಗಿಟ್ಟಿಸಿಕೊಂಡಿದೆ.

ಮುಸ್ಲಿಮರ ಆರಾದನಾಲಯ ಸಂಬಂಧಿಸಿದ ವಿಷಯಗಳಲ್ಲಿ ತೀರ್ಮಾನ ಕೈಗೊಳ್ಳಲು ಸಮುದಾಯ ನಾಯಕರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಂಡು ಮಾದರಿಯಾದದ್ದು ಸ್ಮರಣಾರ್ಹ.

ಮದರಸ ಅಧ್ಯಾಪಕರ ಕ್ಷೇಮನಿಧಿ,ಮಸೀದಿ ನಿರ್ಮಾಣ ಅನುಮತಿಗಳನ್ನು ಪಂಚಾಯತ್‌ಗಳ ಸುರ್ಪದಿಗೆ ತಂದದ್ದು ಪ್ರಶಂನೀಯ ತೀರ್ಮಾನವಾಗಿದೆ.

ಇತರ ಧರ್ಮಾನುಯಾಯಿಗಳಿಗೆ ಕೂಡಾ ಇಂತಹ ಉತ್ತಮ ನಿಲುವು ಕೈಗೊಳ್ಳಲು ಪಿಣರಾಯಿ ಸರಕಾರ ಮುಂದಾಗಿದ್ದು, ಜಾತ್ಯಾತೀತ ನಿಲುವುಗಳು ಇನ್ನಷ್ಟು ಗಟ್ಡಿಗೊಳ್ಳಲು ಅದು ಪ್ರೇರಣೆಯಾಗಿದೆ.

ಮುಂದಿನ ಐದು ವರ್ಷ ಶ್ರೀ ಪಿಣರಾಯಿ ಸರಕಾರ ಇದಕ್ಕಿಂತಲೂ ಉತ್ತಮವಾಗಿ ಆಡಳಿತ ನಡೆಸುವಂತಾಗಲಿ ಎಂದು ಹಾರೈಸುತ್ತೇನೆ.

ವಿಜಯ ಪತಾಕೆ ಹಾರಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಗಳು.

ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

https://www.facebook.com/673812582702569/posts/4077363862347407


SHARE THIS

Author:

0 التعليقات: