Monday, 10 May 2021

ಎಮ್ ಎನ್ ಜಿ ಫೌಂಡೇಶನ್ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ಈದ್ ಕಿಟ್ ವಿತರಣೆ


 ಎಮ್ ಎನ್ ಜಿ ಫೌಂಡೇಶನ್ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ಈದ್ ಕಿಟ್ ವಿತರಣೆ

ಮಂಗಳೂರು: ದ.ಕ ಜಿಲ್ಲೆಯ ಪ್ರತಿಷ್ಠಿತ ಸಮಾಜಸೇವಾ ಸಂಸ್ಥೆ ಎಮ್ ಎನ್ ಜಿ ಫೌಂಡೇಶನ್ ವತಿಯಿಂದ ಜಿಲ್ಲೆಯ ಆಯ್ದ ಅರ್ಹ ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಈದ್ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಸಂಸ್ಥೆಯ ಪದಾಧಿಕಾರಿ ಇಸಾಕ್ ತುಂಬೆ ಅವರು ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸ್ಥಾಪಕ ಇಲ್ಯಾಸ್ ಮಂಗಳೂರು ಅವರು ರಮದಾನ್ ತಿಂಗಳ ಸಂಸ್ಥೆಯ ವಿವಿಧ ಯೋಜನೆಗಳಲ್ಲಿ ಈ ಮೊದಲು ರಮದಾನ್ ಕಿಟ್ ವಿತರಣಾ ‌ಕಾರ್ಯಕ್ರಮ, ನಂತರದಲ್ಲಿ ನಮಾಝ್ ವಸ್ತ್ರ ಮತ್ತು ಖುರಾನ್ ವಿತರಣಾ ಕಾರ್ಯಕ್ರಮ ಇದೀಗ ಕೊನೆಯ ಹಂತದ ಈದ್ ಕಿಟ್ ವಿತರಣಾ ಕಾರ್ಯಕ್ರಮದ ಮೂಲಕ ಜಿಲ್ಲೆಯ ನಾನ ಭಾಗಗಳಿಂದ ಸಮೀಕ್ಷೆ ನಡೆಸಿ ಆಯ್ಕೆ ಮಾಡಿದ ಆಯ್ದ ಅರ್ಹ ಕುಟುಂಬಗಳು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ ಎಂದು ತಿಳಿಸಿದರು.

ಸರಕಾರದ ಕೋವಿಡ್ ಶಿಷ್ಟಾಚಾರಗಳನ್ನು ಪಾಲಸಿ ನಡೆದ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿ ಫಯಾಝ್ ಮಾಡೂರು ಅವರು ಸ್ವಾಗತಿಸಿದರು ಹಾಗೂ ಕೊನೆಯಲ್ಲಿ ಸಿದ್ದೀಕ್ ಕೊಳಕೆ ಅವರು ವಂದಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಎಮ್.ಎಮ್ ಇಬ್ರಾಹಿಂ ನಂದಾವರ, ಇಮ್ತಿಯಾಝ್ ಕೆದುಂಬಾಡಿ, ಬಶೀರ್ ಪರ್ಲಡ್ಕ, ಮನ್ಸೂರ್ ಬಿ.ಸಿ ರೋಡ್, ಶಿಹಾಬ್ ತಂಙಳ್, ರಫೀಕ್ ಪರ್ಲಿಯಾ, ನವಾಝ್ ಕೋಟೆಕಣಿ, ಶಾಕಿರ್ ಪಾವೂರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.


SHARE THIS

Author:

0 التعليقات: