Saturday, 1 May 2021

ಚೆನ್ನೈ ಗೆಲುವಿನ ಓಟಕ್ಕೆ ಇಂಡಿಯನ್ಸ್ ಬ್ರೇಕ್


ಚೆನ್ನೈ ಗೆಲುವಿನ ಓಟಕ್ಕೆ ಇಂಡಿಯನ್ಸ್ ಬ್ರೇಕ್

ಹೊಸದಿಲ್ಲಿ: ಸ್ಫೋಟಕ ಬ್ಯಾಟ್ಸ್ ಮನ್ ಕೀರನ್ ಪೊಲಾರ್ಡ್(ಔಟಾಗದೆ 87 ರನ್, 34 ಎಸೆತ) ಅರ್ಧಶತಕದ ಕೊಡುಗೆಯ ಸಹಾಯದಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು 4 ವಿಕೆಟ್ ಗಳ ಅಂತರದಿಂದ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು.

ಡುಪ್ಲೆಸಿಸ್ (50), ಮೊಯೀನ್ ಅಲಿ(58), ಅಂಬಟಿ ರಾಯುಡು(72) ಭರ್ಜರಿ ಬ್ಯಾಟಿಂಗ್ ಮಾಡಿದರು. ಪೊಲಾರ್ಡ್ ಎರಡು ವಿಕೆಟ್ ಪಡೆದರು.

ಗೆಲ್ಲಲು ಸವಾಲಿನ ಮೊತ್ತ ಬೆನ್ನಟ್ಟಿದ್ದ ಮುಂಬೈ 6 ವಿಕೆಟ್ ನಷ್ಟದಲ್ಲಿ ಕೊನೆಯ ಎಸೆತದಲ್ಲಿ ಗೆಲುವಿನ ಗಟಿ ದಾಟಿತು. ತಾನಾಡಿದ 7ನೇ ಪಂದ್ಯದಲ್ಲಿ ನಾಲ್ಕನೇ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

ಕ್ವಿಂಟನ್ ಡಿಕಾಕ್(38) ಹಾಗೂ ರೋಹಿತ್ ಶರ್ಮಾ (35) ಕೃನಾಲ್ ಪಾಂಡ್ಯ (32) ತಂಡದ ಗೆಲುವಿಗೆ ಪ್ರಮುಖ ಕಾಣಿಕೆ ನೀಡಿದರು.

ಚೆನ್ನೈ ಪರವಾಗಿ ಸ್ಯಾಮ್ ಕರ್ರನ್(3-34)ಯಶಸ್ವಿ ಪ್ರದರ್ಶನ ನೀಡಿದರು.


 SHARE THIS

Author:

0 التعليقات: