Saturday, 1 May 2021

ಭಾರತಕ್ಕೆ ಅಮೆರಿಕ, ಫ್ರಾನ್ಸ್ ನಿಂದ ಸಹಾಯಹಸ್ತ

 

ಭಾರತಕ್ಕೆ ಅಮೆರಿಕ, ಫ್ರಾನ್ಸ್ ನಿಂದ ಸಹಾಯಹಸ್ತ

ಹೊಸದಿಲ್ಲಿ: ಭಾರತದಲ್ಲಿ ದೈನಂದಿನ ಕೊರೋನ ಪ್ರಕರಣಗಳು 4 ಲಕ್ಷ ಗಡಿ ದಾಟಿದ್ದು,ಎರಡನೇ ಕೊರೋನ ಅಲೆಯನ್ನು ಎದುರಿಸುತ್ತಿರುವ ಭಾರತಕ್ಕೆ ವಿಶ್ವದೆಲ್ಲೆಡೆಯ ದೇಶಗಳು ನೆರವಿನ ಹಸ್ತ ನೀಡಿವೆ.

ಆಮ್ಲಜನಕ ಸಾಂದ್ರಕಗಳು(ಕಾನ್ಸನ್ ಟ್ರೇಟರ್) ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತ ಉಜ್ಬೇಕಿಸ್ತಾನದಿಂದ ಒಂದು ವಿಮಾನ ರವಿವಾರ ಮುಂಜಾನೆ ದಿಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿತು, ಮತ್ತೊಂದೆಡೆ ಅಮೆರಿಕದಿಂದ  ಮತ್ತೊಂದು ವಿಮಾನವು 1,000 ಕ್ಕೂ ಹೆಚ್ಚು ಆಮ್ಲಜನಕ ಸಿಲಿಂಡರ್‌ಗಳು, ರೆಗುಲೇಟರ್ ಗಳು ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ಹೊತ್ತು ತಂದಿದೆ.

ಆಸ್ಪತ್ರೆಯ ಮಟ್ಟದ ಎಂಟು ಆಮ್ಲಜನಕ ಜನರೇಟರ್ ಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳು ಸೇರಿದಂತೆ 28 ಟನ್ ವೈದ್ಯಕೀಯ ಉಪಕರಣಗಳು ಫ್ರಾನ್ಸ್‌ನಿಂದ ಆಗಮಿಸಿವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.


SHARE THIS

Author:

0 التعليقات: