Tuesday, 11 May 2021

ಇಸ್ರೇಲ್​ ದುರಂತ : ಕೇರಳ ಮಹಿಳೆ ಸಾವು!


ಇಸ್ರೇಲ್​ ದುರಂತ : ಕೇರಳ ಮಹಿಳೆ ಸಾವು!

ಜೆರುಸಲೇಮ್​: ಇಸ್ರೇಲ್​ ಮೇಲೆ ನಡೆದ ಪ್ಯಾಲೇಸ್ಟಿನಿಯನ್ ರಾಕೆಟ್​ ದಾಳಿ ವೇಳೆ ಕೇರಳ ಮೂಲದ ಮಹಿಳೆಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ಮಂಗಳವಾರ ನಡೆದಿರುವುದಾಗಿ ಮೃತಳ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಸೌಮ್ಯ (31) ಮೃತ ದುರ್ದೈವಿ. ಈಕೆ ಆಯಶ್​ಕೆಲೊನ್​ ನಗರದಲ್ಲಿ ವಾಸವಿದ್ದಳು. ಮಂಗಳವಾರ ಸಂಜೆ ತನ್ನ ಪತಿ ಸಂತೋಷ್​ರೊಂದಿಗೆ ವಿಡಿಯೋ ಕಾಲ್​ ಮೂಲಕ ಮಾತನಾಡುವಾಗ ರಾಕೆಟ್​ ನೇರವಾಗಿ ಸೌಮ್ಯ ಮನೆಯ ಮೇಲೇ ಬಿದ್ದಿದೆ.

ವಿಡಿಯೋ ಕಾಲ್​ ವೇಳೆ ನನ್ನ ಸಹೋದರ ಭಾರಿ ಶಬ್ದವನ್ನು ಕೇಳಿದರು. ಇದ್ದಕ್ಕಿದ್ದಂತೆ ಫೋನ್​ ಸಂಪರ್ಕ ಕಡಿತಗೊಂಡಿತು. ತಕ್ಷಣ ನಾವು ಅಲ್ಲಿಯೇ ಕೆಲಸದ ನಿಮಿತ್ತ ವಾಸವಿದ್ದ ಇತರೆ ಮಲಯಾಳಿಗಳನ್ನು ಸಂಪರ್ಕಿಸಿದೆವು. ಆ ಬಳಿಕ ಈ ದುರ್ಘಟನೆ ನಮಗೆ ತಿಳಿಯಿತು ಎಂದು ಸಂತೋಷ್​ ಸಹೋದರ ಸಾಜಿ ಮಾಹಿತಿ ನೀಡಿದ್ದಾರೆ.

ಸೌಮ್ಯ ಕೇರಳದ ಇಡುಕ್ಕಿ ಜಿಲ್ಲೆಯ ಕೀರಿಥೋಡು ಮೂಲದವರು. ಕಳೆದ 7 ವರ್ಷಗಳಿಂದ ಇಸ್ರೇಲ್​ನಲ್ಲಿ ಮನೆ ಕೆಲಸ ಮಾಡುತ್ತಿದ್ದರು ಎಂದು ಅವಳ ಸಂಬಂಧಿಕರು ಹೇಳಿದ್ದಾರೆ.

ಇನ್ನು ಘಟನೆಯ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ. ಆದರೆ, ಹೊಸದಾಗಿ ಶಾಸಕರಾಗಿ ಆಯ್ಕೆಯಾದ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷದ ನಾಯಕ ಮಣಿ ಸಿ ಕಪ್ಪನ್​ ಘಟನೆಯನ್ನು ಖಂಡಿಸಿದ್ದಾರೆ.

ಕಪ್ಪನ್​ ಅವರು ಬೆರೆದುಕೊಂಡಿರುವ ಫೇಸ್​ಬುಕ್​ ಪೋಸ್ಟ್​ ಮಾಹಿತಿ ಪ್ರಕಾರ ಸಾವಿರಾರು ಕೇರಳಿಗರು ಇಸ್ರೇಲ್​ನಲ್ಲಿ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆಂದು ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯಸ್ಥಿಕೆ ವಹಿಸಬೇಕೆಂದು ಕಪ್ಪನ್​ ಕೇಳಿಕೊಂಡಿದ್ದಾರೆ. (ಏಜೆನ್ಸೀಸ್​)



SHARE THIS

Author:

0 التعليقات: