Tuesday, 11 May 2021

ಕೊರೋನಾದಿಂದ ತತ್ತರಿಸಿರುವ ಭಾರತಕ್ಕೆ ಸ್ವಿಟ್ಜರ್​ಲ್ಯಾಂಡ್​, ನೆದರ್​ಲ್ಯಾಂಡ್ ನಿಂದ ನೆರವಿನ ಹಸ್ತ


ಕೊರೋನಾದಿಂದ ತತ್ತರಿಸಿರುವ ಭಾರತಕ್ಕೆ ಸ್ವಿಟ್ಜರ್​ಲ್ಯಾಂಡ್​, ನೆದರ್​ಲ್ಯಾಂಡ್ ನಿಂದ ನೆರವಿನ ಹಸ್ತ

ನವದೆಹಲಿ: ಪ್ರಸ್ತುತ ಭಾರತ ಕೊರೊನಾ ಎರಡನೇ ಅಲೆಯ ಅಬ್ಬರಕ್ಕೆ ತತ್ತರಿಸುತ್ತಿದೆ. ಈ ಹಿನ್ನೆಲೆಯಲ್ಲಿ ವಿದೇಶಗಳು ಸಹಾಯ ಹಸ್ತ ಚಾಚುತ್ತಿದ್ದು, ಇದೀಗ ವೈದ್ಯಕೀಯ ಉಪಕರಣಗಳನ್ನು ಹೊತ್ತು ಸ್ವಿಟ್ಜರ್​ಲ್ಯಾಂಡ್​, ನೆದರ್​ಲ್ಯಾಂಡ್​ ಮತ್ತು ದಕ್ಷಿಣ ಕೊರಿಯಾದ ವಿಮಾನಗಳು ದೆಹಲಿಗೆ ಬಂದಿಳಿದಿವೆ.

ನೆದರ್‌ಲ್ಯಾಂಡ್‌ ದೇಶವು 449 ವೆಂಟಿಲೇಟರ್‌ಗಳು, 100 ಆಮ್ಲಜನಕ ಸಾಂದ್ರಕಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ರವಾನಿಸಿದೆ.

ಸ್ವಿಟ್ಜರ್​ಲ್ಯಾಂಡ್​ 600 ಆಮ್ಲಜನಕ ಸಾಂದ್ರಕಗಳು, 50 ವೆಂಟಿಲೇಟರ್‌ಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದೆ.ದಕ್ಷಿಣ ಕೊರಿಯಾದಿಂದ 200 ಆಮ್ಲಜನಕ ಸಾಂದ್ರಕಗಳನ್ನು ಹೊತ್ತ ವಿಮಾನ ದೆಹಲಿ ನಿಲ್ದಾಣಕ್ಕೆ ಆಗಮಿಸಿದೆ.



SHARE THIS

Author:

0 التعليقات: