Sunday, 2 May 2021

ಕಠಿಣ ಕರ್ಫ್ಯೂ ನಿಯಮ ಸಡಿಲಿಕೆ: ಅಧಿಕಾರಿಗಳಿಗೇ ಇಲ್ಲದ ಮಾಹಿತಿ!


 ಕಠಿಣ ಕರ್ಫ್ಯೂ ನಿಯಮ ಸಡಿಲಿಕೆ: ಅಧಿಕಾರಿಗಳಿಗೇ ಇಲ್ಲದ ಮಾಹಿತಿ!

ಮಂಗಳೂರು: ಕೋವಿಡ್ ನಿಯಂತ್ರಣಕ್ಕೆ ಹೇರಲಾಗಿರುವ ಕಠಿಣ ಕರ್ಫ್ಯೂ ನಿಯಮದಲ್ಲಿ ಕೆಲ ಸಡಿಲಿಕೆಯನ್ನು ಮಾಡಿ ರಾಜ್ಯ ಸರಕಾರ ಶನಿವಾರ ರಾತ್ರಿ ಆದೇಶ ಹೊರಡಿಸಿದೆ. ಅದರಂತೆ ದಿನಸಿ ಅಂಗಡಿಗಳನ್ನು ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ತಳ್ಳುಗಾಡಿಗಳಲ್ಲಿ ಸಂಜೆಯವರೆಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಆದರ ಮಂಗಳೂರಿನ ಕಾರ್‌ಸ್ಟ್ರೀಟ್ ಬಳಿ ತಳ್ಳುಗಾಡಿಯಲ್ಲಿ ಹಣ್ಣು, ತರಕಾರಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳನ್ನು ಮೊಬೈಲ್ ಸಂಚಾರಿ ಪೊಲೀಸರು 10 ಗಂಟೆಯ ವೇಳೆಗೆ ಇಂದು ಗದರಿಸಿ ವ್ಯಾಪಾರ ಬಂದ್ ಮಾಡುವಂತೆ ಸೂಚಿಸಿದರು. ಪೊಲೀಸರು ವಾಹನದಲ್ಲಿ ಧ್ವನಿವರ್ಧಕ ಮೂಲಕ ವ್ಯಾಪಾರ ನಿಲ್ಲಿಸುವಂತೆ ಸೂಚಿಸುತ್ತಿದ್ದಾಗ, ಅಲ್ಲಿದ್ದ ಕೆಲ ವ್ಯಾಪಾರಿಗಳು ನಮಗೆ ವ್ಯಾಪಾರಕ್ಕೆ ಅವಕಾಶವಿದೆಯಲ್ಲಾ ಎಂದು ಹೇಳಿದರೆ ಮತ್ತೆ ಕೆಲವರು ಅದು ಕೇವಲ ಬೆಂಗಳೂರಿಗೆ ಮಾತ್ರ ಇರಬೇಕು ಎಂಬ ಸಮಜಾಯಿಷಿ ನೀಡಿಕೊಂಡು ವ್ಯಾಪಾರ ಮೊಟಕುಗೊಳಿಸಿದರು. ಇನ್ನು ನಗರದ ಕೆಲವೆಡೆ ತರಕಾರಿ ಹಣ್ಣು ಹಂಪಲುಗಳ ವ್ಯಾಪಾರ 10 ಗಂಟೆಯ ಬಳಿಕವೂ ಮುಂದುವರಿದಿತ್ತು. ಆದರೆ ಜನರ ಓಡಾಟಕ್ಕೆ ಅವಕಾಶ ಇಲ್ಲದ ಕಾರಣ ತಳ್ಳು ಗಾಡಿಯಲ್ಲಿ ವ್ಯಾಪಾರ ನಡೆಸುವವರು ಮಾತ್ರ ಹತಾಶರಾದರು.

ದಿನಸಿ ಅಂಗಡಿಗಳಲ್ಲಿ ಮಧ್ಯಾಹ್ನ 12 ಗಂಟೆಯವರೆಗೆ ವ್ಯಾಪಾರಕ್ಕೆ ಅವಕಾಶ ನೀಡಿ ಸರಕಾರ ಆದೇಶಿಸಿದ್ದರೂ, ನಗರದ ಬಹುತೇಕ ಅಂಗಡಿಗಳು 10 ಗಂಟೆಯ ವೇಳೆಗೆ ವ್ಯವಹಾರವನ್ನು ಕೊನೆಗೊಳಿಸಿದ್ದವು.

‘‘ಅಂಗಡಿ 12 ಗಂಟೆ ತೆರೆಯುವ ಬಗ್ಗೆ ಪೊಲೀಸರಿಗೆ ಕರೆ ಮಾಡಿ ಕೇಳಿದಾಗ ಆ ಆದೇಶ ಮೇ 3ರಿಂದ ಅನ್ವಯ ಎಂದು ಹೇಳಿದ್ದಾರೆ. ಹಾಗಾಗಿ ನಾವು 10 ಗಂಟೆಗೆ ಮುಚ್ಚುತ್ತಿದ್ದೇವೆ’’ ಎಂದು ವೆಲೆನ್ಶಿಯಾ ಸಮೀಪದ ಸೂಪರ್ ಬಜಾರ್‌ನ ಪ್ರತಿನಿಧಿಯೊಬ್ಬರು ಪ್ರತಿಕ್ರಿಯಿಸಿದರು.


SHARE THIS

Author:

0 التعليقات: