Sunday, 30 May 2021

ಸಂಸದೆ ಸುಮಲತಾ ಅಂಬರೀಶ್ ಕೊರೊನಾ ಮಾರ್ಗಸೂಚಿ ಉಲ್ಲಂಘನೆ

 ಸಂಸದೆ ಸುಮಲತಾ ಅಂಬರೀಶ್ ಕೊರೊನಾ ಮಾರ್ಗಸೂಚಿ ಉಲ್ಲಂಘನೆ

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಅವರು ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡಿ ಮತ್ತೆ ಸುದ್ದಿಯಾಗಿದ್ದಾರೆ‌. ನಿನ್ನೆ ಶನಿವಾರ ಮಂಡ್ಯದ ಗಂಡು, ರೆಬೆಲ್ ಸ್ಟಾರ್ ದಿವಂಗತ ಅಂಬರೀಶ್ ಅವರ ಹುಟ್ಟುಹಬ್ಬದ ಸಂಭ್ರಮ. ಮಂಡ್ಯ ಜಿಲ್ಲೆಯ ಅಂಬಿ ಹುಟ್ಟೂರಿಗೆ ಪುತ್ರನೊಂದಿಗೆ ತೆರಳಿದ ಸಂಸದೆ ಸುಮಲತಾ ಅಲ್ಲಿ ಸುಮಾರು 30 ಜನರನ್ನು ಒಂದೇ ಕಡೆ ಸೇರಿಸಿ ಅಂಬಿಯ ಬರ್ತಡೇ ಆಚರಿಸಿದ್ದಾರೆ. ಈ ವೇಳೆ ಸಾಮಾಜಿಕ ಅಂತರ ಕಾದುಕೊಳ್ಳೋದನ್ನ ಮರೆತೇಬಿಟ್ಟಿದ್ದಾರೆ‌.

ಅಲ್ಲಿನ ಜನರೆಲ್ಲ ಮಾಸ್ಕ್ ಹಾಕಿದ್ರು ನಿಜ. ಆದ್ರೆ ಲಾಕ್ ಡೌನ್ ಸಂದರ್ಭದಲ್ಲಿ ಒಂದು ಕಡೆ ಗುಂಪು ಸೇರಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದು ಎಷ್ಟು ಸರಿ? ಅದ್ರಲ್ಲೂ ಒಬ್ಬ ಜನಪ್ರತಿನಿಧಿಯಾಗಿರುವ ಸುಮಲತಾ ಮೇಡಂ ಮಾಡಿದ್ದು ಸರಿಯಲ್ಲ ಅಂತಾ ಮಂಡ್ಯ ಮಂದಿ ಮಾತಾಡಿಕೊಳ್ತಿದ್ದಾರೆ.




SHARE THIS

Author:

0 التعليقات: