Friday, 7 May 2021

ಕೋವಿಡ್‌ ನಿಂದ ಮೃತಪಟ್ಟ ಕುಖ್ಯಾತ ಭೂಗತ ಪಾತಕಿ ಚೋಟಾ ರಾಜನ್‌


 ಕೋವಿಡ್‌ ನಿಂದ ಮೃತಪಟ್ಟ ಕುಖ್ಯಾತ ಭೂಗತ ಪಾತಕಿ ಚೋಟಾ ರಾಜನ್‌

ಹೊಸದಿಲ್ಲಿ: ಭೂಗತ ಪಾತಕಿ ಹಾಗೂ ಗ್ಯಾಂಗ್‌ ಸ್ಟರ್‌ ಆಗಿ ಕುಖ್ಯಾತಿ ಗಳಿಸಿದ್ದ ಚೋಟಾ ರಾಜನ್‌ ಕೋವಿಡ್‌ ಪೀಡಿತನಾಗಿ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ. ದಿಲ್ಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಚೋಟಾ ರಾಜನ್‌ ಮೃತಪಟ್ಟಿದ್ದಾನೆಂದು hindustantimes.com ವರದಿ ಮಾಡಿದೆ.

ಎಪ್ರಿಲ್‌ 26ರಂದು ಚೋಟಾ ರಾಜನ್‌ ಅಲಿಯಾಸ್‌ ರಾಜೇಂದ್ರ ನಿಕಲ್ಜೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನನ್ನು 2015ರಲ್ಲಿ ಇಂಡೋನೇಶ್ಯಾದಿಂದ ಬಂಧಿಸಲಾಗಿತ್ತು. ಕೊಲೆ ಪ್ರಕರಣ ಸೇರಿದಂತೆ 70ಕ್ಕೂ ಹೆಚ್ಚು ಪ್ರಕರಣಗಳು ಚೋಟಾ ರಾಜನ್‌ ವಿರುದ್ಧ ದಾಖಲಾಗಿತ್ತು.


SHARE THIS

Author:

0 التعليقات: