Tuesday, 4 May 2021

ಮದನೀಯಂ: ಕೊರೋನ ಮಹಾ ಮಾರಿಯಿಂದ ಮುಕ್ತಿ ಹೊಂದಲು ಮಂಖೂಸ್ ಮೌಲಿದ್ ಮಜ್ಲಿಸ್ ಕಾರ್ಯಕ್ರಮ


 ಮದನೀಯಂ:
 ಕೊರೋನ ಮಹಾ ಮಾರಿಯಿಂದ ಮುಕ್ತಿ ಹೊಂದಲು ಮಂಖೂಸ್ ಮೌಲಿದ್ ಮಜ್ಲಿಸ್ ಕಾರ್ಯಕ್ರಮ 

ಪ್ರಮುಖ ಆನ್ಲೈನ್ ಭಾಷಣಗಾರ ಮತ್ತು ಸುಪ್ರಸಿದ್ಧ ಮದನೀಯಂ ಆಧ್ಯಾತ್ಮಿಕ ಆನ್ಲೈನ್ ಕಾರ್ಯಕ್ರಮಗಳ ಸಾರಥಿ ಅಬ್ದುಲ್ಲತೀಫ್ ಸಖಾಫಿ ಕಾಂತಪುರಂ ರವರ ನೇತೃತ್ವದಲ್ಲಿ ಸುಪ್ರಸಿದ್ಧ ಮಂಖೂಸ್ ಮೌಲಿದ್ ಕಾರ್ಯಕ್ರಮ. 

ಕೊರೋನ ಮಾಹಾ ಮಾರಿ ಬಹಳ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅದರಿಂದ ರಕ್ಷಣೆ ಹೊಂದಲು ಬೇಕಾಗಿ ಇಂದು ಮಧ್ಯಾಹ್ನ 1:15 ಕ್ಕೆ ಸರಿಯಾಗಿ ಮದನೀಯಂ ಯೂಟೂಬ್ ಚಾನೆಲ್ ಮೂಲಕ ಸುಪ್ರಸಿದ್ಧ "ಮಂಖೂಸ್ ಮೌಲಿದ್ ಮಜ್ಲಿಸ್" ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದು ಬಂದಿದೆ.  ಅಬ್ದುಲ್ಲತೀಫ್ ಸಖಾಫಿ ಕಾಂತಪುರಂ ಉಸ್ತಾದ್ ರವರ ನೇತೃತ್ವದಲ್ಲಿ ಆನ್ಲೈನ್ ಮೂಲಕ ನಡೆಯುವ ಮದನೀಯಂ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಪ್ರತಿ ದಿನವೂ ಲಕ್ಷಾಂತರ ಜನರು ಭಾಗವಹಿಸುತ್ತಾರೆ.

ಇದೇನಿದು "ಮಂಖೂಸ್ ಮೌಲಿದ್" ?

ಕೇರಳದ ಪ್ರಸಿದ್ಧ ವಿದ್ವಾಂಸ ಮತ್ತು ಹಲವಾರು ಗ್ರಂಥಗಳನ್ನು ರಚಿಸಿದ ಸೂಫಿವರ್ಯರೂ ಆಗಿದ್ದ ಝೈನುದ್ದೀನ್ ಮಖ್ದೂಮ್ ರವರು, ಅವರ ಆ ಕಾಲದಲ್ಲಿ ಪ್ಲೇಗ್ ಎಂಬ ಸಾಂಕ್ರಾಮಿಕ ರೋಗ ಬಂದು ಹಲವಾರು ಜನರು ಆ ರೋಗದಿಂದ ಮರಣ ಹೊಂದುತ್ತಿರುವ ಸಂದರ್ಭದಲ್ಲಿ ರಚಿಸಿದ ಪ್ರವಾದಿ ಕೀರ್ತನೆ ಆಗಿದೆ "ಮಂಖೂಸ್ ಮೌಲಿದ್" (ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರ ಮದ್ಹ್'ಗಳಾಗಿವೆ ಮಂಖೂಸ್ ಮೌಲಿದ್) ಅದನ್ನು ರಚಿಸಿದ ಬಳಿಕ ಅವರು ತಮ್ಮ ಅನುಯಾಯಿಗಳಲ್ಲಿ ಹೇಳಿದರು ಪ್ಲೇಗ್ ನಿಂದ ರಕ್ಷಣೆ ಹೊಂದಲು ಈ ಮಂಖೂಸ್ ಮೌಲಿದನ್ನು ಪಠಿಸಿ ದುಆ ಮಾಡಿ. ಅದರಂತೆ ಅವರ ಅನುಯಾಯಿಗಳು ಅದನ್ನು ಎಲ್ಲಾ ಮನೆಗಳಲ್ಲಿ  ಪಠಿಸಿ ದುಆ ಮಾಡಿದಾಗ ಪ್ಲೇಗ್ ಎಂಬ ಆ ದೊಡ್ಡ ಮಹಾ ಮಾರಿ ಇಲ್ಲದಾಯಿತು ಮತ್ತು ಜನರು ಅದರಿಂದ ಮುಕ್ತಿ ಪಡೆದರು.

ಇಂದು ಮಧ್ಯಾಹ್ನ  1:15 ಕ್ಕೆ ಮದನೀಯಂ ಯೂಟೂಬ್ ಚಾನೆಲ್ ನ ಲಿಂಕ್ ಕೆಳಗೆ ಕೊಡಲಾಗಿದೆ 👇

https://youtu.be/GGq0Dthdg9Y


SHARE THIS

Author:

0 التعليقات: