ಅಮೆಜಾನ್ ಸಿಇಒ ಹುದ್ದೆಯಿಂದ ಕೆಳಕ್ಕಿಳಿಯಲಿದ್ದಾರೆ ಜೆಫ್ ಬಿಜೋಸ್.
ಮುಂದಿನ ಸಿಇಒ ಯಾರು ?
ನ್ಯೂಸ್ ಡೆಸ್ಕ್ : ಜಗತ್ತಿನ ಬಹುದೊಡ್ಡ ಇ-ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿಯ ಸಿಇಒ ಹುದ್ದೆಯಿಂದ ಜೆಫ್ ಬೆಜೋಸ್ ಕೆಳಕ್ಕೆ ಇಳಿಯಲಿದ್ದಾರೆ. ಜುಲೈ ತಿಂಗಳಿನಲ್ಲಿ ಬೆಜೋಸ್ ತಮ್ಮ ಅಧಿಕಾರವನ್ನು ತಮ್ಮ ಹಸ್ತಾಂತರ ಮಾಡಲಿದ್ದಾರೆ.
ಜುಲೈ 5 ರಂದು ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಅಮೆಜಾನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆಫ್ ಬೆಜೋಸ್ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ. ಆಂಡಿ ಜಾಸ್ಸಿ ಅವರಿಗೆ ಬೆಜೋಸ್ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.
ವಾಸ್ತವಿಕವಾಗಿ ನಡೆಯುತ್ತಿರುವ ಅಮೆಜಾನ್ನ ವಾರ್ಷಿಕ ಷೇರುದಾರರ ಸಭೆಯಲ್ಲಿ ಬೆಜೋಸ್ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ನಾವು ಆ ದಿನಾಂಕವನ್ನು ಆರಿಸಿಕೊಂಡಿದ್ದೇವೆ. ಏಕೆಂದರೆ ಅದು ನನಗೆ ಭಾವನಾತ್ಮಕವಾಗಿದೆ. 1994 ರಲ್ಲಿ ಅಮೆಜಾನ್ ಅನ್ನು ಹುಟ್ಟು ಹಾಕಿದ ದಿನ, ನಿಖರವಾಗಿ 27 ವರ್ಷಗಳ ಹಿಂದೆ ಎಂದು ಬೆಜೋಸ್ ಸಭೆಯಲ್ಲಿ ಹೇಳಿದರು.
30 ವರ್ಷಗಳ ಕಾಲ ಕಂಪನಿಗೆ ಸೇವೆ ಸಲ್ಲಿಸಿದ ನಂತರ ಫೆಬ್ರವರಿಯಲ್ಲಿ ಜೆಫ್ ಬೆಜೋಸ್ ಅಮೆಜೋನ್ ಉನ್ನತ ಹುದ್ದೆಯಿಂದ ಕೆಳಗಿಳಿಯುವುದಾಗಿ ಇ-ಕಾಮರ್ಸ್ ದೈತ್ಯ ಘೋಷಿಸಿತ್ತು. ಅಮೆಜಾನ್ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಾಹಕ ಅಧ್ಯಕ್ಷರ ಪಾತ್ರವನ್ನು ಜೆಫ್ ಬೆಜೋಸ್ ವಹಿಸಿಕೊಳ್ಳಲಿದ್ದು, ಅವರು ತಮ್ಮ ಇತರ ಯೋಜನೆಗಳತ್ತ ಗಮನ ಹರಿಸಲು ಚಿಂತನೆ ನಡೆಸಿದ್ದಾರೆ.
0 التعليقات: