ಪುತ್ತೂರು: ಲಾಕ್ ಡೌನ್ ಮಧ್ಯೆ ಕೋಳಿ ಅಂಕ: ಐವರು ಆರೋಪಿಗಳ ಬಂಧನ
ಪುತ್ತೂರು, ಮೇ 3: ಕೋವಿಡ್ ಲಾಕ್ ಡೌನ್ ಜಾರಿಯಲ್ಲಿದ್ದರೂ ಅಕ್ರಮವಾಗಿ ನಡೆಸುತ್ತಿದ್ದ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿ, ಕೋಳಿಗಳ ಸಹಿತ ನಗದು ವಶಪಡಿಸಿಕೊಂಡ ಪ್ರಕರಣ ರವಿವಾರ ರಾತ್ರಿ ಪುತ್ತೂರು ತಾಲೂಕಿನ ಬಲ್ನಾಡು ಎಂಬಲ್ಲಿ ನಡೆದಿದೆ.
ನಿಷೇಧಾಜ್ಞೆಯ ನಡುವೆ ಬಲ್ನಾಡುವಿನ ಸರ್ಕಾರಿ ಜಾಗದಲ್ಲಿ ರವಿವಾರ ರಾತ್ರಿ ಕೋಳಿ ಅಂಕ ಆಯೋಜಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಗ್ರಾಮಾಂತರ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ. ಬಲ್ನಾಡು ನಿವಾಸಿಗಳಾದ ಲಿಂಗಪ್ಪ ಮೂಲ್ಯ, ಸಂಜೀವ, ನಾರಾಯಣ ನಾಯ್ಕ, ಚಂದ್ರ ಶೇಖರ ಗೌಡ, ಸುಮಂತ್ ಎಂಬವರನ್ನು ಬಂಧಿಸಿದ್ದಾರೆ. ಅಲ್ಲದೆ
ಅಂಕಕ್ಕೆ ಬಳಸಲಾಗುತ್ತಿದ್ದ ಏಳು ಹುಂಜಗಳು ಹಾಗೂ ರೂ. 7,820 ನಗದು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆ ವೇಳೆಗೆ ಇತರ ಆರೋಪಿಗಳು ಪರಾರಿಯಾಗಿದ್ದಾರೆ.
ಗ್ರಾಮಾಂತರ ಎಸ್ಸೈ ಉದಯರವಿ ನೇತೃತ್ವದಲ್ಲಿ ಪ್ರೊಬೇಷನರಿ ಎಸೈ ಶ್ರೀಕಾಂತ್ ರಾಥೋಡ್ ಮತ್ತು ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿದೆ.
0 التعليقات: