Monday, 31 May 2021

ದೇಶದಲ್ಲಿ ಶೇ.6.62ಕ್ಕೆ ಕುಸಿದ ಕೊರೊನಾ ಪ್ರಕರಣಗಳು!

ದೇಶದಲ್ಲಿ ಶೇ.6.62ಕ್ಕೆ ಕುಸಿದ ಕೊರೊನಾ ಪ್ರಕರಣಗಳು!

ನವದೆಹಲಿ,ಜೂ.1-ದಿನೇ ದಿನೇ ಕೊರೊನಾ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಕೇವಲ 1,27,510 ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಕಳೆದ 54 ದಿನಗಳಲ್ಲಿ ಇದೇ ಮೊದಲ ಭಾರಿಗೆ ಅತಿ ಕಡಿಮೆ ಪ್ರಕರಣಗಳು ಪತ್ತೆಯಾಗುವುದರ ಜತೆಗೆ ಕೊರೊನಾ ಪಾಸಿಟಿವಿಟಿ ರೇಟ್ ಶೇ.6.62ಕ್ಕೆ ಕುಸಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

1,27 ಲಕ್ಷ ಹೊಸ ಪ್ರಕರಣಗಳೊಂದಿಗೆ ದೇಶದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 2,81 ಕೋಟಿ ಗಡಿ ದಾಟಿದೆ.ಇದರ ಜತೆಗೆ ಸಾವಿನ ಪ್ರಮಾಣದಲ್ಲೂ ಗಣನಿಯ ಇಳಿಕೆ ಕಂಡು ಬಂದಿದೆ. ನಿನ್ನೆಯಿಂದ 2795 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 3,31,895ಕ್ಕೆ ಏರಿಕೆಯಾಗಿದೆ.

ಸೋಂಕು ಹಾಗೂ ಸಾವಿನ ಪ್ರಮಾಣ ಇಳಿಕೆಯಾಗುವುದರ ಜತೆಗೆ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆಯೂ 20 ಲಕ್ಷದೊಳಗೆ ದಾಖಲಾಗಿರುವುದು ಆಶಾದಾಯಕ ಬೆಳವಣಿಗೆ ಎಂದೇ ಪರಿಗಣಿಸಲಾಗುತ್ತಿದೆ. ದಿನೇ ದಿನೇ ಕೊರೊನಾ ತಪಾಸಣೆ ನಡೆಸಲಾಗುತ್ತಿದ್ದು ನಿನ್ನೆ ಒಂದೇ ದಿನ 19 ಲಕ್ಷಕ್ಕೂ ಹೆಚ್ಚು ಮಂದಿಗೆ ಪರೀಕ್ಷೆ ನಡೆಸಲಾಗಿದೆ. ಇದುವರೆಗೂ ದೇಶದ 34 ಕೋಟಿಗೂ ಹೆಚ್ಚು ಮಂದಿಯ ರೋಗ ತಪಾಸಣೆ ನಡೆಸಿರುವುದು ಒಂದು ಸಾಧನೆಯೇ ಸರಿ.

ಕಳೆದ ಹಲವಾರು ದಿನಗಳಿಂದ ಪಾಸಿಟಿವಿಟಿ ರೇಟ್ ಶೇ.10ರೊಳಗೆ ದಾಖಲಾಗುತ್ತಿತ್ತು. ಇದೀಗ ಪಾಸಿಟಿವಿಟಿ ದರೆ ಶೇ.6.62 ಕುಸಿದಿರುವುದರಿಂದ ದೇಶದಲ್ಲಿ ಕೊರೊನಾ ಸೋಂಕು ಇಳಿಮುಖದತ್ತ ಸಾಗುತ್ತಿದೆ ಎನ್ನುವುದರ ಧ್ಯೋತಕವಾಗಿದೆ.

ಕಳೆದ 43 ದಿನಗಳಲ್ಲಿ ಇದೇ ಮೊದಲ ಭಾರಿಗೆ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 18,95,520 ಲಕ್ಷಕ್ಕೆ ಇಳಿದಿದೆ. ಇದರ ಜತೆಗೆ ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ.92.02ಕ್ಕೆ ಏರಿಕೆಯಾಗಿದೆ.SHARE THIS

Author:

0 التعليقات: