Wednesday, 19 May 2021

ಗುಜರಾತ್ ನಲ್ಲಿ ತೌಕ್ತೆ ಚಂಡಮಾರುತ ಹಾವಳಿಗೆ 45 ಮಂದಿ ಬಲಿ


ಗುಜರಾತ್ ನಲ್ಲಿ ತೌಕ್ತೆ ಚಂಡಮಾರುತ ಹಾವಳಿಗೆ 45 ಮಂದಿ ಬಲಿ

ಅಹ್ಮದಾಬಾದ್, ಮೇ 19: ಗುಜರಾತ್ನ 12 ಜಿಲ್ಲೆಗಳಲ್ಲಿ ತೌಕ್ತೆ ಚಂಡಮಾರುತ ಎಬ್ಬಿಸಿದ ಹಾವಳಿಯಲ್ಲಿ 45ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ತೀವ್ರ ಸ್ವರೂಪದ ಚಂಡಮಾರುತ ತೌಕ್ತೆ ರಾಜ್ಯದ ಕರಾವಳಿಯಲ್ಲಿ ಸೋಮವಾರ ಹಾದು ಹೋಗಿರುವುದರಿಂದ ಹಾಗೂ ಮಂಗಳವಾರ ಬೆಳಗ್ಗೆ 1.30ಕ್ಕೆ ಸಂಪೂರ್ಣವಾಗಿ ಅಪ್ಪಳಿಸಿರುವುದರಿಂದ ಉಂಟಾದ ಪ್ರತಿಕೂಲ ಪರಿಣಾಮದಿಂದ ಸೌರಾಷ್ಟ್ರ ವಲಯದ ಅಮ್ರೇಲಿ ಜಿಲ್ಲೆಯಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ ಎಂದ ಅಧಿಕಾರಿಗಳು ತಿಳಿಸಿದ್ದಾರೆ.

ಕರಾವಳಿ ಜಿಲ್ಲೆಗಳ ಭಾವನಗರ ಹಾಗೂ ಗಿರ್ ಸೋಮನಾಥ್ನಲ್ಲಿ ತಲಾ 8 ಮಂದಿ ಸಾವನ್ನಪ್ಪಿದ್ದಾರೆ. 

ಅಹ್ಮದಾಬಾದ್ನಲ್ಲಿ ಐವರು, ಖೇಡಾದಲ್ಲಿ ಇಬ್ಬರು, ಆನಂದ್, ವಡೋದರಾ, ಸೂರತ್, ವಲ್ಸದ, ರಾಜಕೋಟ್, ನವಸರಿ ಹಾಗೂ ಪಂಚಮಹಲ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಂಡಮಾರುತದಿಂದ ಗೋಡೆ ಕುಸಿದು 24 ಮಂದಿ, ಮರ ಉರುಳಿ ಆರು ಮಂದಿ, ಮನೆ ಕುಸಿದು ಹಾಗೂ ವಿದ್ಯುತ್ ಆಘಾತದಿಂದ ಐವರು, ಮಾಡು ಕುಸಿದು ನಾಲ್ವರು, ಗೋಪುರ ಕುಸಿದು ಒಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


 SHARE THIS

Author:

0 التعليقات: