Wednesday, 5 May 2021

ಬಹರೈನ್ ನಿಂದ ಮಂಗಳೂರು ತಲುಪಿದ 40 ಮೆಟ್ರಿಕ್ ಟನ್ ಆಮ್ಲಜನಕ


 ಬಹರೈನ್ ನಿಂದ ಮಂಗಳೂರು ತಲುಪಿದ 40 ಮೆಟ್ರಿಕ್ ಟನ್ ಆಮ್ಲಜನಕ

ಮಂಗಳೂರು: ದೇಶದಲ್ಲಿ ಆಕ್ಸಿಜನ್ ಪೂರೈಕೆ ಸಮಸ್ಥಿತಿಗೆ ತರಲು ಭಾರತ ಸರಕಾರ ಹಮ್ಮಿಕೊಂಡಿರುವ ಸಮುದ್ರಸೇತು-2 ಕಾರ್ಯಾಚರಣೆಯನ್ವಯ ಬಹರೈನ್ ನಿಂದ 40 ಮೆಟ್ರಿಕ್ ಟನ್ ಆಮ್ಲಜನಕ ಬುಧವಾರ ಅಪರಾಹ್ನ ಮಂಗಳೂರು ಬಂದರು ತಲುಪಿದೆ.

ಬಹರೈನ್ ನ ಮನಾಮಾದಿಂದ ಎರಡು ಕ್ರಯೋಜೆನಿಕ್ ಐಸೋ ಕಂಟೈನರ್ ಗಳಲ್ಲಿ 40 ಮೆಟ್ರಿಕ್ ಟನ್ ಆಕ್ಸಿಜನ್ ನನ್ನು ಹೊತ್ತ ಭಾರತದ ನೌಕಾಸೇನಾ ಹಡಗು ಐಎನ್ಎಸ್ ತಲ್ವಾರ್ ಇಂದು ಅಪರಾಹ್ನ 2 ಗಂಟೆ ಸುಮಾರಿಗೆ ನವಮಂಗಳೂರು ಬಂದರು ತಲುಪಿದೆ ಎಂದು ತಿಳಿದುಬಂದಿದೆ.

ಆಕ್ಸಿಜನ್ ಮಾತ್ರವಲ್ಲದೆ ಇತರ ಕೋವಿಡ್ ಚಿಕಿತ್ಸೆ ವೇಳೆ ಅಗತ್ಯವಿರುವ ಮೆಡಿಕಲ್ ಉಪಕರಣಗಳೂ ಇವೆ ಎನ್ನಲಾಗಿದೆ. ಈ ಆಮ್ಲಜನಕದ ಟ್ಯಾಂಕ್ ಅನ್ನು ಉಚಿತವಾಗಿ ನಿರ್ವಹಣೆ ಮಾಡುವಂತೆ ಕೇಂದ್ರ ಸರಕಾರವು ನವಮಂಗಳೂರು ಬಂದರಿಗೆ ಈಗಾಗಲೇ ಸೂಚನೆ ನೀಡಿದೆ. ಈ ಆಕ್ಸಿಜನ್ ಕರಾವಳಿಯ ಜಿಲ್ಲೆಗಳ ಆಸ್ಪತ್ರೆಗಳಿಗೆ ವಿತರಣೆಯಾಗುವ ಸಂಭವ ಇದೆ.


SHARE THIS

Author:

0 التعليقات: