Tuesday, 11 May 2021

ಗೋವಾ ಸರಕಾರಿ ಆಸ್ಪತ್ರೆಯಲ್ಲಿ 26 ಕೋವಿಡ್ ರೋಗಿಗಳು ಮೃತ್ಯು


ಗೋವಾ ಸರಕಾರಿ ಆಸ್ಪತ್ರೆಯಲ್ಲಿ 26 ಕೋವಿಡ್ ರೋಗಿಗಳು ಮೃತ್ಯು

ಪಣಜಿ: ಸರಕಾರಿ ಸ್ವಾಮ್ಯದ ಗೋವಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ (ಜಿಎಂಸಿಎಚ್) 26 ಕೋವಿಡ್ -19 ರೋಗಿಗಳು ಮಂಗಳವಾರ ಮುಂಜಾನೆ ಸಾವನ್ನಪ್ಪಿದ್ದಾರೆ ಹಾಗೂ ಈ ಘಟನೆಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಹೈಕೋರ್ಟ್‌ನಿಂದ ತನಿಖೆ ನಡಸಲಾಗುವುದು ಎಂದು  ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ.

ಬೆಳಿಗ್ಗೆ 2 ರಿಂದ 6 ರವರೆಗೆ ಈ ಸಾವುನೋವುಗಳು ಸಂಭವಿಸಿವೆ ಎಂದು ಅವರು ಹೇಳಿದರು, ಆದರೆ ಸಾವಿಗೆ ನಿಖರ ಕಾರಣ ಇನ್ನೂಗೊತ್ತಾಗಿಲ್ಲ.ಆಕ್ಸಿಜನ್ ಸರಬರಾಜಿನಲ್ಲಿನ ವ್ಯತ್ಯಯವು ಈ ಘಟನೆಯ ಹಿಂದಿನ  ಒಂದು ಕಾರಣವಾಗಿದೆ.

ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, "ವೈದ್ಯಕೀಯ ಆಮ್ಲಜನಕದ ಲಭ್ಯತೆ ಹಾಗೂ  ಜಿಎಂಸಿಎಚ್‌ನಲ್ಲಿನ ಕೋವಿಡ್-19 ವಾರ್ಡ್‌ಗಳಿಗೆ ಅದರ ಪೂರೈಕೆಯ ನಡುವಿನ ಅಂತರವು ರೋಗಿಗಳಿಗೆ ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು" ಎಂದು ಅವರು ಒತ್ತಿ ಹೇಳಿದರು.ಸದ್ಯಕ್ಕೆ ರಾಜ್ಯದಲ್ಲಿ ಆಮ್ಲಜನಕದ ಪೂರೈಕೆಯ ಕೊರತೆಯಿಲ್ಲ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ರಾಣೆ, ಸೋಮವಾರದವರೆಗೆ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕದ ಪೂರೈಕೆಯಲ್ಲಿನ ಕೊರತೆಯನ್ನು ಒಪ್ಪಿಕೊಂಡಿದ್ದಾರೆ.

"ಈ ಸಾವುಗಳ ಹಿಂದಿನ ಕಾರಣಗಳನ್ನು ಹೈಕೋರ್ಟ್ ತನಿಖೆ ಮಾಡಬೇಕು. ಹೈಕೋರ್ಟ್ ಕೂಡ ಮಧ್ಯಪ್ರವೇಶಿಸಿ ಜಿಎಂಸಿಎಚ್‌ಗೆ ಆಮ್ಲಜನಕದ ಪೂರೈಕೆಯ ಬಗ್ಗೆ ಶ್ವೇತಪತ್ರವನ್ನು ಸಿದ್ಧಪಡಿಸಬೇಕು''ಎಂದು ಮುಖ್ಯಮಂತ್ರಿಗಳ ಭೇಟಿಯ ನಂತರ ರಾಜ್ಯ ಆರೋಗ್ಯ ಸಚಿವರು ಹೇಳಿದರು 


 



SHARE THIS

Author:

0 التعليقات: