Monday, 31 May 2021

ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 1,52,734 ಮಂದಿಗೆ ಕೊರೊನಾ, 3128 ಬಲಿ..!


ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 1,52,734 ಮಂದಿಗೆ ಕೊರೊನಾ, 3128 ಬಲಿ..!

ನವದೆಹಲಿ,ಮೇ.31-ಕೊರೊನಾ ಸೋಂಕಿತರ ಸಂಖ್ಯೆ ಒಂದೂವರೆ ಲಕ್ಷಕ್ಕೆ ಕುಸಿದಿದೆ. ಕಳೆದ 24 ಗಂಟೆಗಳಲ್ಲಿ 1,52,734 ಮಂದಿಗೆ ಸೋಂಕು ತಗುಲಿದೆ.ಇದರೊಂದಿಗೆ ದೇಶದ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 2,80,47,534 ಕೋಟಿಗೆ ಏರಿಕೆಯಾಗಿದೆ. ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಕುಸಿಯುತ್ತಿರುವುದರಿಂದ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 20,26,092 ಲಕ್ಷಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಲ್ಲಿ ಉಲ್ಲೇಖಿಸಲಾಗಿದೆ.

ನಿನ್ನೆಯಿಂದ 3128 ಮಂದಿ ಮಹಾಮಾರಿಗೆ ಬಲಿಯಾಗಿರುವುದರಿಂದ ಸೋಂಕಿಗೆ ಬಲಿಯಾದವರ ಸಂಖ್ಯೆ 3,29,100 ಲಕ್ಷಕ್ಕೆ ಏರಿಕೆಯಾಗಿದೆ. ಸತತ ಏಳು ದಿನಗಳಿಂದ ಕೊರೊನಾ ಪಾಸಿಟಿವಿಟಿ ದರ ಶೇ.10ರೊಳಗೆ ದಾಖಲಾಗುತ್ತಿದೆ. ದಿನನಿತ್ಯದ ಪಾಸಿಟಿವಿಟಿ ಶೇ.9.07ಕ್ಕೆ ಕುಸಿದಿದ್ದರೆ, ವಾರದ ಪಾಸಿಟಿವಿಟಿ ರೇಟ್ ಶೇ.9.04ಕ್ಕೆ ಇಳಿಕೆಯಾಗಿದೆ.

ಭಾನುವಾರವಾದ ನಿನ್ನೆ ದೇಶದ್ಯಾಂತ 16 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರೊಂದಿಗೆ ಇದುವರೆಗೂ 34 ಕೋಟಿಗೂ ಹೆಚ್ಚು ಮಂದಿಯ ಸ್ವಾಬ್ ಪರೀಕ್ಷೆ ನಡೆಸಿದಂತಾಗಿದೆ. ರಾಷ್ಟ್ರೀಯ ಚೇತರಿಕೆ ಪ್ರಮಾಣ ಸೇ.91.60ಗೆ ಹೆಚ್ಚಳವಾಗಿರುವುದರಿಂದ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 20 ಲಕ್ಷಕ್ಕೆ ಸೀಮಿತವಾಗಿದೆ.

2.80ಕೋಟಿ ಸೋಂಕಿತರ ಪೈಕಿ ಈಗಾಗಲೇ 2.56 ಕೋಟಿ ಮಂದಿ ಚೇತರಿಸಿಕೊಂಡಿದ್ದು ದೇಶದ್ಯಾಂತ ಕೊರೊನಾ ಸೋಂಕಿನ ಪ್ರಮಾಣ ಹಾಗೂ ಸಾವಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗುತ್ತಿದೆ.


SHARE THIS

Author:

0 التعليقات: