ಮೆಟ್ರೋ ಓವರ್ ಪಾಸ್ ಸೇತುವೆ ಕುಸಿದು 23 ಮಂದಿ ಮೃತ್ಯು
ಮೆಕ್ಸಿಕೊ: ಮೆಕ್ಸಿಕೋ ನಗರದ ಜನದಟ್ಟಣೆ ಪ್ರದೇಶದಲ್ಲಿ ಮೆಟ್ರೋ ರೈಲ್ವೆ ಯ ಓವರ್ಪಾಸ್ ಸೇತುವೆ ಕುಸಿದುಬಿದ್ದು ಕನಿಷ್ಠ 23 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಸುಮಾರು 70 ಮಂದಿ ಗಾಯಗೊಂಡಿದ್ದಾರೆ ಎಂದು ನಗರಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ. ಕುಸಿದುಬಿದ್ದ ಓವರ್ಪಾಸ್ನಲ್ಲಿ ಕಾರೊಂದು ನೇತಾಡುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಘಟನೆಯಲ್ಲಿ ಕನಿಷ್ಠ 70 ಮಂದಿ ಗಾಯಗೊಂಡಿದ್ದು, ಅವರಲ್ಲಿ 49 ಮಂದಿಯ ನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಹಾಗೂ 7 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೇಯರ್ ಕ್ಲಾಡಿಯಾ ಶೈನ್ಭೂಮ್ ತಿಳಿಸಿದ್ದಾರೆ.
0 التعليقات: