ಭಾರತೀಯ ವಾಯುಪಡೆಯ ಮಿಗ್-21 ವಿಮಾನ ಪತನ: ಪೈಲಟ್ ಮೃತ್ಯು
ಹೊಸದಿಲ್ಲಿ: ಪಂಜಾಬ್ನಲ್ಲಿ ಗುರುವಾರ ತಡರಾತ್ರಿ ನಡೆದ ಮಿಗ್ -21 ಬಾಯಿಸನ್ ವಿಮಾನ ಅಪಘಾತದಲ್ಲಿ ವಾಯುಪಡೆಯ ಪೈಲಟ್ ಓರ್ವ ಮೃತಪಟ್ಟಿದ್ದಾರೆ.
ಈ ಅಪಘಾತ ಗುರುವಾರ ತಡರಾತ್ರಿ ಮೊಗಾ ಜಿಲ್ಲೆಯ ಬಳಿ ನಡೆದಿದೆ ಎಂದು ಭಾರತೀಯ ವಾಯುಪಡೆ (ಐಎಎಫ್) ಟ್ವೀಟ್ ನಲ್ಲಿ ತಿಳಿಸಿದೆ.
"ಪಶ್ಚಿಮ ವಲಯದಲ್ಲಿ ಗುರುವಾರ ತಡರಾತ್ರಿ ಐಎಎಫ್ನ ಮಿಗ್-21 ಯುದ್ಧ ವಿಮಾನವು ಪತನಗೊಂಡಿದೆ. ಪೈಲಟ್, ಸ್ಕ್ವಾಡ್ರನ್ ಲೀಡರ್ ಅಭಿನವ್ ಚೌಧರಿ ಅವರಿಗೆ ಗಂಭೀರ ಗಾಯವಾಗಿದೆ. ಐಎಎಫ್ ದುರಂತಕ್ಕೆ ಶೋಕ ವ್ಯಕ್ತಪಡಿಸುತ್ತದೆ ಹಾಗೂ ದುಃಖಿತ ಕುಟುಂಬದೊಂದಿಗೆ ಸದಾ ನಮ್ಮ ಬೆಂಬಲ ಇರುತ್ತದೆ " ಎಂದು ಐಎಎಫ್ ಟ್ವೀಟ್ ಮಾಡಿದೆ.
ಘಟನೆಯ ಕಾರಣವನ್ನು ತನಿಖೆ ಮಾಡಲು ನ್ಯಾಯಾಲಯದ ವಿಚಾರಣೆಗೆ (ಸಿಒಐ) ಆದೇಶಿಸಲಾಗಿದೆ ಎಂದು ಅದು ಹೇಳಿದೆ.
ಈ ವರ್ಷ ಮಿಗ್ -21 ಒಳಗೊಂಡ ಮೂರನೇ ಅಪಘಾತ ಇದಾಗಿದೆ. ಮಾರ್ಚ್ ನ ಲ್ಲಿ ಯುದ್ಧ ತರಬೇತಿ ಕಾರ್ಯಾಚರಣೆಗೆ ವಿಮಾನ ಹೊರಟಿದ್ದಾಗ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಮೃತಪಟ್ಟಿದ್ದರು.
0 التعليقات: