ಪ್ರಾಣವಾಯು ಹೊತ್ತ 2 ಮತ್ತು 3ನೇ ರೈಲುಗಳು ನಾಳೆ ಬೆಂಗಳೂರಿಗೆ ಆಗಮನ
ಬೆಂಗಳೂರು: ವೈದ್ಯಕೀಯ ಆಮ್ಲಜನಕ ಹೊತ್ತ 2 ಮತ್ತು 3ನೇ ರೈಲುಗಳು ರಾಜ್ಯಕ್ಕೆ ಆಗಮಿಸುತ್ತಿವೆ. ಅದ್ರಂತೆ, 2ನೇ ರೈಲು ಒಡಿಶಾದ ಕಾಳಿಂಗನಗರ್ನಿಂದ ಬೆಂಗಳೂರಿನ ಐಸಿಡಿ ವೈಟ್ಫೀಲ್ಡ್ಗೆ ಬರುತ್ತಿದೆ. ನಾಳೆ (ಮೇ 15) ಬೆಳಗ್ಗೆ 5 ಗಂಟೆ ವೇಳೆಗೆ ರಾಜಧಾನಿ ತಲುಪಲಿದೆ.
ಇನ್ನು 3ನೇ ರೈಲು ಜಾರ್ಖಂಡ್ನ ಟಾಟಾನಗರ್ನಿಂದ ಹೊರಟಿದ್ದು, ನಾಳೆ (ಮೇ 15) ಸಂಜೆ ಸಂಜೆ 5 ಗಂಟೆ ವೇಳೆಗೆ ವೈಟ್ಫೀಲ್ಡ್ಗೆ ಆಗಮಿಸಲಿದೆ ಎಂದು ಹೇಳಲಾಗ್ತಿದೆ.
ಅಂದ್ಹಾಗೆ, ಕರ್ನಾಟಕದತ್ತ ಆಮ್ಲಜನಕ ಹೊತ್ತು ತರುತ್ತಿರುವ ಈ ಎರಡೂ ರೈಲುಗಳು 6 ಕ್ರೈಯೊಜೆನಿಕ್ ಕಂಟೇನರ್ಗಳನ್ನು ಹೊಂದಿದ್ದು, ಅವುಗಳಲ್ಲಿ 120 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಇವೆ.
0 التعليقات: