Wednesday, 19 May 2021

ಭಾರತದಲ್ಲಿ ಕೋವಿಡ್19 ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಶೇ.13 ಇಳಿಕೆ : ಡಬ್ಲ್ಯು ಎಚ್‌ ಒ


ಭಾರತದಲ್ಲಿ ಕೋವಿಡ್19 ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಶೇ.13 ಇಳಿಕೆ : ಡಬ್ಲ್ಯು ಎಚ್‌ ಒ

ವಾಷಿಂಗ್ಟನ್ : ಕಳೆದ ವಾರದಲ್ಲಿ ಭಾರತವು ಹೊಸ ಕೋವಿಡ್ -19 ಪ್ರಕರಣಗಳಲ್ಲಿ ಸಂಖ್ಯೆಯಲ್ಲಿ ಶೇಕಡಾ 13 ರಷ್ಟು ಇಳಿಕೆ ದಾಖಲಿಸಿದೆ. ಆದರೆ ಅತಿ ಹೆಚ್ಚು ಹೊಸ ಸೋಂಕುಗಳು ಪತ್ತೆಯಾಗುತ್ತಿರುವ ವಿಶ್ವದ ಇತರ ದೇಶಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿಯೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯು ಎಚ್‌ ಒ) ಹೇಳಿದೆ.

ಹೊಸ ಕೋವಿಡ್ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆ ಕೇವಲ 4.8 ಮಿಲಿಯನ್ ಹೊಸ ಪ್ರಕರಣಗಳೊಂದಿಗೆ ಕಡಿಮೆಯಾಗುತ್ತಲೇ ಇದೆ ಮತ್ತು ಕಳೆದ ವಾರದಲ್ಲಿ ಜಾಗತಿಕವಾಗಿ 86,000 ಹೊಸ ಸಾವುಗಳು ವರದಿಯಾಗಿವೆ, ಹಿಂದಿನ ವಾರಕ್ಕೆ ಹೋಲಿಸಿದರೆ ಕ್ರಮವಾಗಿ ಶೇಕಡಾ 12 ಮತ್ತು 5 ರಷ್ಟು ಕಡಿಮೆಯಾಗಿದೆ ಎಂದು ವೀಕ್ಲಿ ಕೋವಿಡ್ 19 ಎಪಿಡೆಮಿಲಾಜಿಕಲ್ ಅಪ್ಡೇಟ್ ತಿಳಿಸಿದೆ.

ಕಳೆದ ಒಂದು ವಾರದಲ್ಲಿ ಭಾರತದಿಂದ ಅತಿ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ (2,387,663 ಹೊಸ ಪ್ರಕರಣಗಳು) ಆದರೇ, ಹಿಂದಿನ ವಾರಕ್ಕಿಂತ ಶೇ 13 ರಷ್ಟು ಕಡಿಮೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಸಾವಿನ ಪ್ರಮಾಣವೂ ಕೂಡ ಕಳೆದ ವಾರದಲ್ಲಿ ಭಾರತದಿಂದ ಅತಿ ಹೆಚ್ಚು ವರದಿಯಾಗಿವೆ. ಕಳೆದ ಒಂದು ವಾರದಲ್ಲಿ 27,922 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದರೇ(100 000 ಕ್ಕೆ 2.0 ಸಾವುಗಳು; ಹಿಂದಿನ ವಾರಕ್ಕಿಂತ 4 ಶೇಕಡಾ ಹೆಚ್ಚಳ) ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.SHARE THIS

Author:

0 التعليقات: