ದ.ಕ. ಜಿಲ್ಲೆಯಲ್ಲಿ 18 ರಿಂದ 44 ವರ್ಷದವರಿಗೆ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ
ಮಂಗಳೂರು : ಲಸಿಕೆ ನೀಡುವ ಅಭಿಯಾನದ ಅಂಗವಾಗಿ ದ.ಕ. ಜಿಲ್ಲೆಯಲ್ಲಿ ಇಂದು 18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡುವ ಕಾರ್ಯ ಆರಂಭಗೊಂಡಿದೆ.
ಪ್ರಥಮ ಹಂತವಾಗಿ ನಗರದ ವೆನ್ಲಾಕ್ ಆಸ್ಪತ್ರೆ ಹಾಗೂ ನಾಲ್ಕು ತಾಲ್ಲೂಕು ಆಸ್ಪತ್ರೆ ಗಳಲ್ಲಿ ಇಂದು ಲಸಿಕೆ ನೀಡಲಾಗುತ್ತಿದೆ.
ಆನ್ ಲೈನ್ ಮೂಲಕ ನೋಂದಣಿಗೊಂಡು, ಇಂದಿನ ದಿನಾಂಕದ ಅಪಾಂಯ್ಟ್ ಮೆಂಟ್, ನಿಗದಿತ ಅವಧಿಯೊಂದಿಗೆ ಸೀಕ್ರೆಟ್ ಕೋಡ್ ಬಂದವರಿಗೆ ಇಂದು ಲಸಿಕೆ ನೀಡಲಾಗುತ್ತಿದೆ.
ವೆನ್ಲಾಕ್ ನಲ್ಲಿ ಇಂದು 250 ಮಂದಿ 18 ರಿಂದ 44 ವರ್ಷದವರಿಗೆ ಆನ್ ಲೈನ್ ಅಪಾಂಯ್ಟ್ ಮೆಂಟ್ ಇಂದಿನ ದಿನಕ್ಕೆ ಪಡೆದವರಿಗೆ ಲಸಿಕೆ ನೀಡಲಾಗುತ್ತಿದ್ದು ಯುವಕರು ಉತ್ಸಾಹದಿಂದ ಕೇಂದ್ರಕ್ಕೆ ಲಸಿಕೆ ಪಡೆಯಲು ಬರುತ್ತಿದ್ದಾರೆ ಎಂದು ಕೋವಿಡ್ ಲಸಿಕೀಕರಣದ ಜಿಲ್ಲಾ ನೋಡಲ್ ಅಧಿಕಾರಿ ಡಾ. ರಾಜೇಶ್ ತಿಳಿಸಿದ್ದಾರೆ.
ಈಗಾಗಲೇ ನೋಂದಾಯಿಸಿಕೊಂಡಿರುವ ದಿನಾಂಕ ನಿಗದಿಯಾಗಿರುವ 18 ರಿಂದ 44 ವರ್ಷ ದವರೆಗೆ ಮುಂದಿನ ಒಂದು ವಾರ ವೆನ್ ಲಾಕ್ ಹಾಗೂ ತಾಲೂಕು ಆಸ್ಪತ್ರೆಯ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
0 التعليقات: