ಬೆಂಗಳೂರು: 16,747 ಜನರಿಗೆ ಕೊರೋನಾ,596 ಜನರು ಬಲಿ
ಬೆಂಗಳೂರು : ರಾಜ್ಯದಲ್ಲಿ ಹಿಂದಿನ ಎಲ್ಲಾ ದಾಖಲೆ ಉಡೀಸ್ ಮಾಡುವಂತೆ ಮತ್ತೆ ಕಿಲ್ಲರ್ ಕೊರೋನಾ ಆರ್ಭಟಿಸಿದೆ. ಇಂದು ಹೊಸದಾಗಿ 39,305 ಜನರಿಗೆ ಕೊರೋನಾ ಸೋಂಕು ತಗುಲಿದ್ದರೇ, ಸೋಂಕಿತರಾದಂತ 596 ಜನರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಹೊಸದಾಗಿ 39,305 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 19,73,683ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 32,188 ಜನರು ಸೇರಿದಂತೆ ಇದುವರೆಗೆ 13,83,285 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ 5,71,006 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.
ಇನ್ನೂ ಇಂದು ರಾಜ್ಯದಲ್ಲಿ ಕಿಲ್ಲರ್ ಕೊರೋನಾ ಆರ್ಭಟಿಸಿದೆ. ಇಂದು ಬೆಂಗಳೂರಿನಲ್ಲಿ 374 ಜನರು ಸೇರಿದಂತೆ ರಾಜ್ಯಾಧ್ಯಂತ 596 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 19,372ಕ್ಕೆ ಏರಿಕೆಯಾಗಿದೆ.
ಇಂದಿನ ಜಿಲ್ಲಾವಾರು ಕೊರೋನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ
ಬಾಗಲಕೋಟೆ - ಸೋಂಕಿತರು 968, ಸಾವು 18
ಬಳ್ಳಾರಿ - ಸೋಂಕಿತರು 973, ಸಾವು 26
ಬೆಳಗಾವಿ - ಸೋಂಕಿತರು 736, ಸಾವು 02
ಬೆಂಗಳೂರು ಗ್ರಾಮಾಂತರ - ಸೋಂಕಿತರು 704, ಸಾವು 07
ಬೆಂಗಳೂರು ನಗರ - ಸೋಂಕಿತರು 16,747, ಸಾವು 374
ಬೀದರ್ - ಸೋಂಕಿತರು 305, ಸಾವು 04
ಚಾಮರಾಜನಗರ - ಸೋಂಕಿತರು 623, ಸಾವು, 07
ಚಿಕ್ಕಬಳ್ಳಾಪುರ - ಸೋಂಕಿತರು - 599, ಸಾವು 05
ಚಿಕ್ಕಮಗಳೂರು - ಸೋಂಕಿತರು 362, ಸಾವು 05
ಚಿತ್ರದುರ್ಗ - ಸೋಂಕಿತರು 172, ಸಾವು 02
ದಕ್ಷಿಣ ಕನ್ನಡ - ಸೋಂಕಿತರು 1175, ಸಾವು 05
ದಾವಣಗೆರೆ - ಸೋಂಕಿತರು 197, ಸಾವು 03
ಧಾರವಾಡ - ಸೋಂಕಿತರು 1006, ಸಾವು 08
ಗದಗ - ಸೋಂಕಿತರು 332, ಸಾವು 02
ಹಾಸನ - ಸೋಂಕಿತರು 1800, ಸಾವು 22
ಹಾವೇರಿ - ಸೋಂಕಿತರು 214, ಸಾವು 12
ಕಲಬುರ್ಗಿ - ಸೋಂಕಿತರು - 988, ಸಾವು 03
ಕೊಡಗು - ಸೋಂಕಿತರು 534, ಸಾವು 09
ಕೋಲಾರ - ಸೋಂಕಿತರು 755, ಸಾವು 08
ಕೊಪ್ಪಳ - ಸೋಂಕಿತರು - 412, ಸಾವು 00
ಮಂಡ್ಯ - ಸೋಂಕಿತರು 1133, ಸಾವು 12
ಮೈಸೂರು - ಸೋಂಕಿತರು 1537, ಸಾವು 07
ರಾಯಚೂರು - ಸೋಂಕಿತರು 587, ಸಾವು 03
ರಾಮನಗರ - ಸೋಂಕಿತರು 337, ಸಾವು 07
ಶಿವಮೊಗ್ಗ - ಸೋಂಕಿತರು 820, ಸಾವು 11
ತುಮಕೂರು - ಸೋಂಕಿತರು 2168, ಸಾವು 15
ಉಡುಪಿ - ಸೋಂಕಿತರು 855, ಸಾವು 02
ಉತ್ತರ ಕನ್ನಡ - ಸೋಂಕಿತರು 885, ಸಾವು 11
ವಿಜಯಪುರ - ಸೋಂಕಿತರು 659, ಸಾವು 06
ಯಾದಗಿರಿ - ಸೋಂಕಿತರು 727, ಸಾವು 03
0 التعليقات: