ಅಫ್ಘಾನಿಸ್ತಾನದ ಕಾಬೂಲ್ ಮಸೀದಿಯಲ್ಲಿ ಬಾಂಬ್ ಸ್ಫೋಟ: 12 ಜನ ಸಾವು, 15 ಮಂದಿಗೆ ಗಾಯ
ಡಿಜಿಟಲ್ ಡೆಸ್ಕ್: ಶುಕ್ರವಾರದ ಪ್ರಾರ್ಥನೆಯ ವೇಳೆ ಉತ್ತರ ಕಾಬೂಲ್ʼನ ಮಸೀದಿಯಲ್ಲಿ ಬಾಂಬ್ ದಾಳಿ ನಡೆದಿದ್ದು, 12 ಆರಾಧಕರು ಮೃತಪಟ್ಟಿದ್ದಾರೆ ಎಂದು ಆಫ್ಘನ್ ಪೊಲೀಸರು ತಿಳಿಸಿದ್ದಾರೆ.
ಮಸೀದಿಯ ಇಮಾಮ್ ಮೊಫ್ತಿ ನೈಮನ್ ಕೂಡ ಮೃತರಲ್ಲಿ ಸೇರಿದ್ದಾರೆ ಎಂದು ವಕ್ತಾರ ಫರ್ಡಾವ್ಸ್ ಫರಾಮರ್ಜ್ ತಿಳಿಸಿದ್ದು, ಇನ್ನು ಈ ಘಟನೆಯಲ್ಲಿ 15 ಜನರು ಗಾಯಗೊಂಡಿದ್ದಾರೆ.
ಮಸೀದಿಯಲ್ಲಿ ಪ್ರಾರ್ಥನೆ ಪ್ರಾರಂಭವಾಗುತ್ತಿದ್ದಂತೆ ಬಾಂಬ್ ಸ್ಫೋಟಗೊಂಡಿತು ಎಂದು ತಿಳಿದು ಬಂದಿದೆ. ಇನ್ನು ಬಾಂಬ್ ಸ್ಫೋಟದ ಹೊಣೆ ಯಾರೂ ಹೊತ್ತುಕೊಂಡಿಲ್ಲ. ಆದ್ರೆ, ಆರಂಭಿಕ ಪೊಲೀಸ್ ತನಿಖೆಗಳು ಇಮಾಮ್ ಗುರಿಯಾಗಿರಬಹುದು ಎಂದು ಸೂಚಿಸುತ್ತವೆ ಎಂದು ಫರಮರ್ಜ್ ಹೇಳಿದರು.
ಮಸೀದಿಯ ಆರಾಧಕ ಮುಹಿಬುಲ್ಲಾ ಸಾಹೇಬ್ಜಾದಾ ಅವರು ಸ್ಫೋಟ ಸಂಭವಿಸಿದಾಗ ಮಸೀದಿಗೆ ಕಾಲಿಟ್ಟಿರುವುದಾಗಿ ಹೇಳಿದರು. ಮಸೀದಿಯಲ್ಲಿ ಹೊಗೆ ತುಂಬುತ್ತಿದ್ದಂತೆ ಮಕ್ಕಳು ಸೇರಿದಂತೆ ಕಿರುಚಾಟದ ಶಬ್ದ ಕೇಳಿಸಿದೆ. ಇನ್ನು ಮಸೀದಿಯ ಮಹಡಿಯಲ್ಲಿ ಹಲವಾರು ಶವಗಳನ್ನ ನೋಡಿದ್ದು, ಗಾಯಗೊಂಡವರಲ್ಲಿ ಕನಿಷ್ಠ ಒಂದು ಮಗು ಸೇರಿದೆ ಎಂದು ಸಾಹೇಬ್ಜಾದಾ ಹೇಳಿದರು.
0 التعليقات: