ರಾಜಸ್ಥಾನ, ಮಧ್ಯಪ್ರದೇಶದಲ್ಲಿ 102 ರೂ.ಗೆ ಏರಿಕೆ ಕಂಡ ಪೆಟ್ರೋಲ್ ದರ
ನವದೆಹಲಿ : ಚುನಾವಣೆ ಬಳಿಕ ದೇಶದಲ್ಲಿ ತೈಲ ಬೆಲೆ ಏರಿಕೆ ಕಂಡಿದ್ದು, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಕೆಲ ಭಾಗಗಳಲ್ಲಿ ಪೆಟ್ರೋಲ್ ದರ ಶುಕ್ರವಾರ ಪ್ರತಿ ಲೀಟರ್ಗೆ 102 ರೂ.ಗೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಪೆಟ್ರೋಲ್ ದರದಲ್ಲಿ 29 ಪೈಸೆ ಏರಿಕೆಯಾಗಿದ್ದು, 94.30 ರೂ.ಗೆ ಆಗಿದೆ. ಡೀಸೆಲ್ ದರ 33 ಪೈಸೆ ಏರಿಕೆಯಾಗಿದ್ದು, 86.64 ರೂ.ಗೆ ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ 91.27 ರೂ, ಡೀಸೆಲ್ ದರ 81.73 ರೂ.ಗೆ ಏರಿಕೆಯಾಗಿದೆ.
ರಾಜಸ್ಥಾನದ ಗಂಗಾನಗರ ಜಿಲ್ಲೆ ಹಾಗೂ ಮಧ್ಯಪ್ರದೇಶದ ಅನೂಪ್ಪುರ್ನಲ್ಲಿ ಪೆಟ್ರೋಲ್ ದರ ಲೀಟರ್ಗೆ 102 ರೂ.ಗೆ ತಲುಪಿದೆ. ಮಹಾರಾಷ್ಟ್ರದ ಪರ್ಭಣಿಯಲ್ಲಿ 99.95 ರೂ.ಗೆ ಏರಿದೆ. ಫೆಬ್ರವರಿ ನಂತರ ಎರಡನೇ ಬಾರಿಗೆ ದೇಶದ ಕೆಲವು ಕಡೆಗಳಲ್ಲಿ ಪೆಟ್ರೋಲ್ ದರ 100 ರೂ.ಗಳ ಗಡಿ ದಾಟಿದಂತಾಗಿದೆ.
.ಕಳೆದ ವರ್ಷ ಮಾರ್ಚ್ನಲ್ಲಿ ಸರಕಾರವು ಅಬಕಾರಿ ಸುಂಕವನ್ನು ಏರಿಸಿದ ನಂತರ ದೇಶದಲ್ಲಿ ಪೆಟ್ರೋಲ್ ದರದಲ್ಲಿ 21 ರೂ. ಹಾಗೂ ಡೀಸೆಲ್ ದರದಲ್ಲಿ 19 ರೂ. ಹೆಚ್ಚಳವಾದಂತಾಗಿದೆ.
ಪೆಟ್ರೋಲ್ ದರ
ಬೆಂಗಳೂರು: 94.30 ರೂ., ಮುಂಬಯಿ: 97.61 ರೂ., ನವದೆಹಲಿ: 91.27 ರೂ., ಚೆನ್ನೈ: 93.15 ರೂ. ಮತ್ತು ಹೈದರಾಬಾದ್: 94.86 ರೂ. ದಾಖಲಾಗಿದೆ.
0 التعليقات: