Friday, 7 May 2021

ಮೇ 10ರಿಂದ 24ರ ತನಕ ಕರ್ನಾಟಕ ಸಂಪೂರ್ಣ ಲಾಕ್‌ಡೌನ್: ಸಿಎಂ ಯಡಿಯೂರಪ್ಪ


ಮೇ 10ರಿಂದ 24ರ ತನಕ ಕರ್ನಾಟಕ ಸಂಪೂರ್ಣ ಲಾಕ್‌ಡೌನ್: ಸಿಎಂ ಯಡಿಯೂರಪ್ಪ

ಬೆಂಗಳೂರು: ಸೋಮವಾರದಿಂದ ಕರ್ನಾಟಕದಾದ್ಯಂತ ಸಂಪೂರ್ಣ ಲಾಕ್ ಡೌನ್ ವಿಧಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಹೇಳಿದ್ದಾರೆ.

ಮೇ 10ರಿಂದ 24ರ ತನಕ ಲಾಕ್ ಡೌನ್ ಇರಲಿದೆ. ಬೆಳಗ್ಗೆ 6ರಿಂದ 10 ರ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಸರಕಾರಿ ಕಚೇರಿ ಭಾಗಶಃ ಕಾರ್ಯನಿರ್ವಹಿಸಲಿವೆ.

ಅಂತರ್ ಜಿಲ್ಲಾ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹೋಟೆಲ್, ಪಬ್, ಬಾರ್ ಬಂದ್ ಆಗಲಿದೆ. ಹಾಲಿನ ಬೂತ್ ಸಂಜೆವರೆಗೂ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.


 


SHARE THIS

Author:

0 التعليقات: