Monday, 31 May 2021

 ಮುಂಬೈ ವಿಮಾನ ನಿಲ್ದಾಣಕ್ಕೆ ಬರುವವರಿಗೆ ಆರ್‌ಟಿಪಿಸಿಆರ್ ವರದಿ ಬೇಡ

ಮುಂಬೈ ವಿಮಾನ ನಿಲ್ದಾಣಕ್ಕೆ ಬರುವವರಿಗೆ ಆರ್‌ಟಿಪಿಸಿಆರ್ ವರದಿ ಬೇಡ

ಮುಂಬೈ ವಿಮಾನ ನಿಲ್ದಾಣಕ್ಕೆ ಬರುವವರಿಗೆ ಆರ್‌ಟಿಪಿಸಿಆರ್ ವರದಿ ಬೇಡ

ಮುಂಬೈ, ಜೂನ್ 01: ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಹಾರಾಷ್ಟ್ರದಿಂದ ಬಂದಿಳಿಯುವ ದೇಶೀಯ ವಿಮಾನ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಿಲ್ಲ ಎಂದು ಬೃಹನ್ ಮುಂಬೈ ಕಾರ್ಪೊರೇಷನ್ ಹೇಳಿದೆ.

ಈ ಕುರಿತು ಬೃಹನ್ ಮುಂಬೈ ಕಾರ್ಪೊರೇಷನ್ ಮಾಹಿತಿ ನೀಡಿದ್ದು, ಮಹಾರಾಷ್ಟ್ರದೊಳಗಿನ ವಿಮಾನ ನಿಲ್ದಾಣಗಳಿಂದ ಮುಂಬೈಗೆ ಬರುವ ಎಲ್ಲಾ ದೇಶೀಯ ವಾಯು ಪ್ರಯಾಣಿಕರಿಗೆ ಮುಂಬೈಗೆ ಬಂದಿಳಿದ ನಂತರ ಆರ್‌ಟಿ-ಪಿಸಿಆರ್ ಪರೀಕ್ಷಾ ಅವಶ್ಯಕತೆಯಿಂದ ವಿನಾಯಿತಿ ನೀಡಲಾಗಿದೆ.

ಮುಂಬೈ ವಿಮಾನ ನಿಲ್ದಾಣದಿಂದ ಮಹಾರಾಷ್ಟ್ರ ವಿಮಾನ ನಿಲ್ದಾಣಗಳಿಗೆ ಪ್ರಯಾಣಿಸುವ ಎಲ್ಲಾ ದೇಶೀಯ ವಿಮಾನ ಪ್ರಯಾಣಿಕರಿಗೆ , ವಿಮಾನ ನಿಲ್ದಾಣ ಆಯೋಜಕರು, ವಿಮಾನ ಸಂಸ್ಥೆಗಳು ಆರ್‌ಟಿಪಿಸಿಆರ್ ಪರೀಕ್ಷೆಗೆ ಒತ್ತಾಯಿಸಬಾರದು ಎಂದು ಹೇಳಲಾಗಿದೆ. ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದೆ.

ಇದಲ್ಲದೆ ಮುಂದಿನ 15 ದಿನಗಳವರೆಗೆ ಸೋಮವಾರದಿಂದ ಶುಕ್ರವಾರದವರೆಗೆ ಪರ್ಯಾಯ ದಿನಗಳಲ್ಲಿ ಬೆಳಗ್ಗೆ 7 ರಿಂದ ಮಧ್ಯಾಹ್ನ 2ರವರೆಗೆ ಅಗತ್ಯವಿಲ್ಲದ ಅಂಗಡಿಗಳಿಗೂ ಕೂಡ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ.'

ಪ್ರಸ್ತುತ ಬೆಳಗ್ಗೆ 7 ರಿಂದ 11ರವರೆಗೆ ಕಾರ್ಯ ನಿರ್ವಹಿಸಲು ಅನುಮತಿ ಹೊಂದಿರುವ ಅಗತ್ಯ ಸವ್ತುಗಳ ಮಾರಾಟ ಮಾಡುವ ಅಂಗಡಿಗಳಿಗೆ ಬೆಳಗ್ಗೆ 7 ರಿಂದ ಮಧ್ಯಾಹ್ನ 2ರವರೆಗೆ ಎಲ್ಲಾ ದಿನಗಳಲ್ಲೂ ತೆರೆಯಲು ಅವಕಾಶ ಮಾಡಿಕೊಡಲಾಗಿದೆ.

ಮುಂದಿನ ವಾರ ರಸ್ತೆಯ ಎಡ ಭಾಗದಲ್ಲಿರುವ ಅಂಗಡಿಗಳು ಸೋಮವಾರ, ಬುಧವಾರ ಮತ್ತು ಶುಕ್ರವಾರ ತೆರೆದಿರುತ್ತದೆ, ಬಲಭಾಗದಲ್ಲಿರುವ ಅಂಗಡಿಗಳು ಮಂಗಳವಾರ, ಗುರುವಾರ ತೆರೆದಿರುತ್ತವೆ ಎಂದು ಮಾಹಿತಿ ನೀಡಿದ್ದಾರೆ.

ಬ್ರೇಕ್‌ ದಿ ಚೈನ್ ಅಡಿಯಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ನಿರ್ದೇಶನಗಳು ಜಾರಿಯಲ್ಲಿರುವವರೆಗೂ ಈ ಆದೇಶಗಳು ಅನ್ವಯವಾಗುತ್ತವೆ ಎಂದು ಬಿಎಂಸಿ ಹೇಳಿದೆ. ಕಾಲಕಾಲಕ್ಕೆ ಸರ್ಕಾರ ಘೋಷಿಸಿದಂತೆ ಎಲ್ಲಾ ವಾಣಿಜ್ಯ ಸಂಸ್ಥೆಗಳು ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮತ್ತು ಇತರೆ ಕ್ರಮವನ್ನು ಅನುಸರಿಸುವುದು ಕಡ್ಡಾಯವಾಗಿದೆ.


 ದೇಶದಲ್ಲಿ ಶೇ.6.62ಕ್ಕೆ ಕುಸಿದ ಕೊರೊನಾ ಪ್ರಕರಣಗಳು!

ದೇಶದಲ್ಲಿ ಶೇ.6.62ಕ್ಕೆ ಕುಸಿದ ಕೊರೊನಾ ಪ್ರಕರಣಗಳು!

ದೇಶದಲ್ಲಿ ಶೇ.6.62ಕ್ಕೆ ಕುಸಿದ ಕೊರೊನಾ ಪ್ರಕರಣಗಳು!

ನವದೆಹಲಿ,ಜೂ.1-ದಿನೇ ದಿನೇ ಕೊರೊನಾ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಕೇವಲ 1,27,510 ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಕಳೆದ 54 ದಿನಗಳಲ್ಲಿ ಇದೇ ಮೊದಲ ಭಾರಿಗೆ ಅತಿ ಕಡಿಮೆ ಪ್ರಕರಣಗಳು ಪತ್ತೆಯಾಗುವುದರ ಜತೆಗೆ ಕೊರೊನಾ ಪಾಸಿಟಿವಿಟಿ ರೇಟ್ ಶೇ.6.62ಕ್ಕೆ ಕುಸಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

1,27 ಲಕ್ಷ ಹೊಸ ಪ್ರಕರಣಗಳೊಂದಿಗೆ ದೇಶದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 2,81 ಕೋಟಿ ಗಡಿ ದಾಟಿದೆ.ಇದರ ಜತೆಗೆ ಸಾವಿನ ಪ್ರಮಾಣದಲ್ಲೂ ಗಣನಿಯ ಇಳಿಕೆ ಕಂಡು ಬಂದಿದೆ. ನಿನ್ನೆಯಿಂದ 2795 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 3,31,895ಕ್ಕೆ ಏರಿಕೆಯಾಗಿದೆ.

ಸೋಂಕು ಹಾಗೂ ಸಾವಿನ ಪ್ರಮಾಣ ಇಳಿಕೆಯಾಗುವುದರ ಜತೆಗೆ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆಯೂ 20 ಲಕ್ಷದೊಳಗೆ ದಾಖಲಾಗಿರುವುದು ಆಶಾದಾಯಕ ಬೆಳವಣಿಗೆ ಎಂದೇ ಪರಿಗಣಿಸಲಾಗುತ್ತಿದೆ. ದಿನೇ ದಿನೇ ಕೊರೊನಾ ತಪಾಸಣೆ ನಡೆಸಲಾಗುತ್ತಿದ್ದು ನಿನ್ನೆ ಒಂದೇ ದಿನ 19 ಲಕ್ಷಕ್ಕೂ ಹೆಚ್ಚು ಮಂದಿಗೆ ಪರೀಕ್ಷೆ ನಡೆಸಲಾಗಿದೆ. ಇದುವರೆಗೂ ದೇಶದ 34 ಕೋಟಿಗೂ ಹೆಚ್ಚು ಮಂದಿಯ ರೋಗ ತಪಾಸಣೆ ನಡೆಸಿರುವುದು ಒಂದು ಸಾಧನೆಯೇ ಸರಿ.

ಕಳೆದ ಹಲವಾರು ದಿನಗಳಿಂದ ಪಾಸಿಟಿವಿಟಿ ರೇಟ್ ಶೇ.10ರೊಳಗೆ ದಾಖಲಾಗುತ್ತಿತ್ತು. ಇದೀಗ ಪಾಸಿಟಿವಿಟಿ ದರೆ ಶೇ.6.62 ಕುಸಿದಿರುವುದರಿಂದ ದೇಶದಲ್ಲಿ ಕೊರೊನಾ ಸೋಂಕು ಇಳಿಮುಖದತ್ತ ಸಾಗುತ್ತಿದೆ ಎನ್ನುವುದರ ಧ್ಯೋತಕವಾಗಿದೆ.

ಕಳೆದ 43 ದಿನಗಳಲ್ಲಿ ಇದೇ ಮೊದಲ ಭಾರಿಗೆ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 18,95,520 ಲಕ್ಷಕ್ಕೆ ಇಳಿದಿದೆ. ಇದರ ಜತೆಗೆ ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ.92.02ಕ್ಕೆ ಏರಿಕೆಯಾಗಿದೆ.


 ಒಂದೇ ದಿನ 110 ರೂ. ಏರಿಕೆ ಕಂಡ   ಚಿನ್ನದ ಬೆಲೆ!

ಒಂದೇ ದಿನ 110 ರೂ. ಏರಿಕೆ ಕಂಡ ಚಿನ್ನದ ಬೆಲೆ!


ಒಂದೇ ದಿನ 110 ರೂ. ಏರಿಕೆ ಕಂಡ   ಚಿನ್ನದ ಬೆಲೆ!


ಕಳೆದ ಮೂರ್ನಾಲ್ಕು ದಿನಗಳಿಂದ ಕಡಿಮೆಯಾಗಿದ್ದ ಬಂಗಾರದ ಬೆಲೆ ಇಂದು ಮತ್ತೆ ಹೆಚ್ಚಳವಾಗಿದ್ದು, ನಿನ್ನೆಗಿಂತ ಇಂದು 110 ರೂ. ಏರಿಕೆಯಾಗುವ ಮೂಲಕ ಚಿನ್ನ ಖರೀದಿಸುವವರಿಗೆ ಶಾಕ್ ನೀಡಿದೆ. ನಿನ್ನೆಗಿಂತ ಇಂದು ಚಿನ್ನದ ಬೆಲೆ 10 ರೂ. ಹೆಚ್ಚಾಗಿದೆ. ನೀವೇನಾದರೂ ಚಿನ್ನ ಖರೀದಿಸಲು ಯೋಚಿಸುತ್ತಿದ್ದರೆ ಇಂದು ಯಾವ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ Gold Price ನಿನ್ನೆ 49,960 ಇದ್ದುದು, ಇಂದು 50,070 ರೂ.ಗೆ ಏರಿಕೆಯಾಗಿದೆ. 22 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ ಬೆಂಗಳೂರಿನಲ್ಲಿ 45,810 ರೂ. ಇದ್ದುದು ಇಂದು 45,900 ರೂ.ಗೆ ಹೆಚ್ಚಳವಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ 50 ಸಾವಿರದ ಗಡಿ ದಾಟಿದೆ. ನಿನ್ನೆ 71,600 ರೂ. ಇದ್ದ Silver Price ಇಂದು 400 ರೂ. ಹೆಚ್ಚಳವಾಗಿದ್ದು, 72,000ಕ್ಕೆ ಏರಿಕೆಯಾಗಿದೆ.

ಭಾರತದಲ್ಲಿ ಚಿನ್ನದ ದರ ಮತ್ತೆ ಭಾರೀ ಏರಿಕೆಯಾಗಿದ್ದು, ಒಂದೇ ದಿನದಲ್ಲಿ 110 ರೂ. ಹೆಚ್ಚಳವಾಗಿದೆ. ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,590 ರೂ. ಇದ್ದುದು ಒಂದೇ ದಿನದಲ್ಲಿ 46,700 ರೂ.ಗೆ ಏರಿಕೆಯಾಗಿದೆ. ನಿನ್ನೆ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 47,590 ರೂ. ಇದ್ದುದು ಇಂದು 47,700 ರೂ. ಆಗಿದೆ. ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗಲಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 50,070 ರೂ. ಆಗಿದೆ. ಹಾಗೆಯೇ, 22 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ ಇಂದು 45,900 ರೂ. ಆಗಿದೆ. ಮೈಸೂರು, ವಿಶಾಖಪಟ್ಟಣಂ, ಮಂಗಳೂರು, ವಿಜಯವಾಡ, ಮುಂಬೈ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಹೆಚ್ಚೂ ಕಡಿಮೆ ಇದೇ ಬೆಲೆಯಿದೆ.

ಬೇರೆಲ್ಲ ನಗರಗಳಿಗೆ ಹೋಲಿಸಿದರೆ ಚೆನ್ನೈ, ದೆಹಲಿ, ಕೊಲ್ಕತ್ತಾ, ಲಕ್ನೋ, ಕೊಯಮತ್ತೂರು, ಮಧುರೈ, ಜೈಪುರ, ಅಹಮದಾಬಾದ್, ಚಂಡೀಗಢದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆಯಾಗಿದೆ. ಈ ನಗರಗಳಲ್ಲಿ ಚಿನ್ನದ ಬೆಲೆ 50,000 ರೂ. ದಾಟಿದೆ. ಭಾರತದಲ್ಲಿ ಬೆಳ್ಳಿ ಬೆಲೆ ಭಾರೀ ಏರಿಕೆಯಾಗಿದ್ದು, ನಿನ್ನೆ 71,600 ರೂ. ಇದ್ದುದು ಇಂದು 72 ಸಾವಿರ ರೂ. ಆಗಿದೆ. ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ 1 ಕೆಜಿ ಬೆಳ್ಳಿಯ ಬೆಲೆ ಇಂದು 72,000 ರೂ. ಆಗಿದೆ. ಉಳಿದಂತೆ ಚೆನ್ನೈ, ಹೈದರಾಬಾದ್, ಕೊಯಮತ್ತೂರು, ಭುವನೇಶ್ವರ, ಮಧುರೈ, ವಿಜಯವಾಡ, ವಿಶಾಖಪಟ್ಟಣಂನಲ್ಲಿ ಬೆಳ್ಳಿಯ ಬೆಲೆ 76,800 ರೂ. ಆಸುಪಾಸಿನಲ್ಲಿದೆ.

ಕಷ್ಟಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವುದು ಈಗಿನ ಪದ್ಧತಿಯಲ್ಲ. ಬಂಗಾರವನ್ನು ಖರೀದಿಸಿಟ್ಟರೆ ನಮ್ಮ ಆಪತ್ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ ಎಂಬುದು ಬಹುತೇಕ ಎಲ್ಲ ಭಾರತೀಯರ ಲೆಕ್ಕಾಚಾರ. ಹೀಗಾಗಿ, ಕೈಯಲ್ಲಿ ಹಣವಿದ್ದಾಗ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಇಂದಿಗೂ ಕಡಿಮೆಯಾಗಿಲ್ಲ. ಆದರೆ, ಕೊರೋನಾದಿಂದಾಗಿ ಚಿನ್ನವನ್ನು ಕೊಳ್ಳುವವರ ಸಂಖ್ಯೆ ಹೇಗೆ ಕಡಿಮೆಯಾಯಿತೋ ಅದೇ ರೀತಿ ಚಿನ್ನದ ಪೂರೈಕೆಯಲ್ಲಿಯೂ ವ್ಯತ್ಯಯವಾಯಿತು. ಇದರಿಂದ ಬಂಗಾರದ ಬೆಲೆ ಗಗನಕ್ಕೇರಿತ್ತು.ಕೊರೋನಾ ವೈರಸ್​ ಹರಡುವಿಕೆ ಹೆಚ್ಚಾದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್​ ಎಸ್ಟೇಟ್​ ಸೇರಿ ಸಾಕಷ್ಟು ಉದ್ಯಮಗಳು ನೆಲ ಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಲಾಕ್​ಡೌನ್​ ತೆರವಾಗುತ್ತಿದ್ದಂತೆ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಚಿನ್ನ ಖರೀದಿಯ ವಿಚಾರದಲ್ಲಿ ಜಿಎಸ್​ಟಿ ಅಥವಾ ಸೇವಾ ತೆರಿಗೆ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ.

 ವಾರಾಣಸಿಯಲ್ಲಿ ಕಟ್ಟಡ ಕುಸಿದು ಇಬ್ಬರು ಸಾವು : ಆರು ಜನರಿಗೆ ಗಾಯ

ವಾರಾಣಸಿಯಲ್ಲಿ ಕಟ್ಟಡ ಕುಸಿದು ಇಬ್ಬರು ಸಾವು : ಆರು ಜನರಿಗೆ ಗಾಯ


ವಾರಾಣಸಿಯಲ್ಲಿ ಕಟ್ಟಡ ಕುಸಿದು ಇಬ್ಬರು ಸಾವು : ಆರು ಜನರಿಗೆ ಗಾಯ

ವಾರಣಾಸಿ : ಉತ್ತರ ಪ್ರದೇಶದ ವಾರಾಣಸಿಯಲ್ಲಿ ಮಂಗಳವಾರ ಮುಂಜಾನೆ ಹಳೆಯ ಕಟ್ಟಡ ಕುಸಿದು ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಆರು ಜನರು ಗಾಯಗೊಂಡಿದ್ದಾರ ಎಂದು ತಿಳಿದು ಬಂದಿದೆ.

ಈ ಕಟ್ಟಡವು ಕಾಶಿ ವಿಶ್ವನಾಥ ಧಾಮದ ಆಸುಪಾಸಿನಲ್ಲಿತ್ತು. ಶಿಥಿಲಗೊಂಡ ಕಟ್ಟಡದಲ್ಲಿ ಪಶ್ಚಿಮ ಬಂಗಾಳದ ಮಾಲ್ಡಾದಿಂದ ವಲಸೆ ಬಂದ ಲಾಬೌರ್ ಗಳು ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ ಎಂದು ವರದಿಯಾಗಿದೆ. ಸಹಾಯ್ ಉಪ್ಪಿನಂಗಡಿ ಸರ್ಕಲ್ ವತಿಯಿಂದ ಕೊಯಿಲ - ಆತೂರು ಪರಿಸರದಲ್ಲಿ ಸ್ಯಾನಿಟೈಝರ್ ಸಿಂಪಡಣೆ

ಸಹಾಯ್ ಉಪ್ಪಿನಂಗಡಿ ಸರ್ಕಲ್ ವತಿಯಿಂದ ಕೊಯಿಲ - ಆತೂರು ಪರಿಸರದಲ್ಲಿ ಸ್ಯಾನಿಟೈಝರ್ ಸಿಂಪಡಣೆ


ಸಹಾಯ್ ಉಪ್ಪಿನಂಗಡಿ ಸರ್ಕಲ್ ವತಿಯಿಂದ ಕೊಯಿಲ - ಆತೂರು ಪರಿಸರದಲ್ಲಿ ಸ್ಯಾನಿಟೈಝರ್ ಸಿಂಪಡಣೆ

ಆತೂರು : ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್ ಮತ್ತು ಎಸ್ಸೆಸ್ಸೆಫ್ ಉಪ್ಪಿನಂಗಡಿ ಸರ್ಕಲ್ ವತಿಯಿಂದ ಕೆಮ್ಮಾರ, ಕೋಯಿಲ,ಆತೂರು, ರಾಮಕುಂಜ ಸಾರ್ವಜನಿಕ ಸ್ಥಳಗಳಲ್ಲಿ ಕೋರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ (ಮೇ 28, 2021)  ಸ್ಯಾನಿಟೈಝರ್ ಸಿಂಪಡಣೆ ಮಾಡಲಾಯಿತು.

ಕೋಯಿಲ ಮತ್ತು ಆತೂರು ಪೇಟೆಯ ಪರಿಸರದಲ್ಲಿ,ಆರೋಗ್ಯ ಕೇಂದ್ರ ಬ್ಯಾಂಕ್, ಪಂಚಾಯತ್ ಕಛೇರಿ ಪರಿಸರ, ಸಾರ್ವಜನಿಕ ಗ್ರಂಥಾಲಯ ಪರಿಸರ, ಬಸ್ ತಂಗುದಾಣ ಬದ್ರಿಯಾ ಮಸೀದಿ ಹಾಗೂ ಮದರಸ ಪರಿಸರ ಅಂಗಡಿ ಮುಂಗಟ್ಟು ಮೊದಲಾದ ಸ್ಥಳಗಳಲ್ಲಿ ತುರ್ತು ಸ್ಯಾನಿಟರೈಸನ್ ಸಿಂಪಡಣೆ ಮಾಡಲಾಯಿತು.

ಉಪ್ಪಿನಂಗಡಿ ಸಹಾಯ್ ಉಸ್ತುವಾರಿ ಆದಂ ಮದನಿ ಆತೂರು  KKನಝೀರ್ ಸದಸ್ಯರು ಕೊಯಿಲ ಗ್ರಾಮ ಪಂಚಾಯತು ,ಸಂಶೀರ್ ಆತೂರು,ಆಸಿಫ್ ಆತೂರು.ಮುಝಮ್ಮಿಲ್ ಆತೂರ್ ನವಾಝ್ ಆತೂರ್ ಸಾಬಿತ್ ಆತೂರ್  ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.

 ಕೊರೋನಾ ಸೋಂಕಿನಿಂದ ದಾಖಲಾದ ಶೇ 15 ರಷ್ಟು ರೋಗಿಗಳ ಮೆದುಳಿನಲ್ಲಿ ಬ್ಲ್ಯಾಕ್ ಫಂಗಸ್

ಕೊರೋನಾ ಸೋಂಕಿನಿಂದ ದಾಖಲಾದ ಶೇ 15 ರಷ್ಟು ರೋಗಿಗಳ ಮೆದುಳಿನಲ್ಲಿ ಬ್ಲ್ಯಾಕ್ ಫಂಗಸ್


ಕೊರೋನಾ ಸೋಂಕಿನಿಂದ ದಾಖಲಾದ ಶೇ 15 ರಷ್ಟು ರೋಗಿಗಳ ಮೆದುಳಿನಲ್ಲಿ ಬ್ಲ್ಯಾಕ್ ಫಂಗಸ್

ಇಂಧೋರ್ :ಮಧ್ಯಪ್ರದೇಶದ ಇಂದೋರ್ ನ ಸರ್ಕಾರಿ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನಿಂದ ದಾಖಲಾದ ರೋಗಿಗಳಲ್ಲಿ ಕನಿಷ್ಠ ಶೇಕಡಾ ೧೫ ರಷ್ಟು ರೋಗಿಗಳ ಮಿದುಳಿನಲ್ಲಿ ಮುಕಾರ್ಮಿಕೋಸಿಸ್ ಅಥವಾ ಕಪ್ಪು ಶಿಲೀಂಧ್ರವನ್ನು ಪತ್ತೆ ಹಚ್ಚಲಾಗಿದೆ ಎಂದು ಹಿರಿಯ ವೈದ್ಯರು ಸೋಮವಾರ ತಿಳಿಸಿದ್ದಾರೆ.

ಎಂವೈಎಚ್ ನಲ್ಲಿ ದಾಖಲಾದ 368 ಮ್ಯೂಕಾರ್ಮೈಕೋಸಿಸ್ ರೋಗಿಗಳಲ್ಲಿ, ಅವರಲ್ಲಿ 55 ಜನರ ಮಿದುಳಿನಲ್ಲಿ ಸೋಂಕು ಇದೆ ಎಂದು ಆರಂಭಿಕ ಅಧ್ಯಯನವು ತೋರಿಸಿದೆ, ಮತ್ತು ಇದನ್ನು ಸಿಟಿ (ಕಂಪ್ಯೂಟರೀಕೃತ ಟೋಮೋಗ್ರಫಿ) ಮತ್ತು ಎಂಆರ್ ಐ (ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್) ಸ್ಕ್ಯಾನ್ ಗಳು ದೃಢಪಡಿಸಿವೆ ಎಂದು ಎಂವೈಎಚ್ ನ ನರಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ರಾಕೇಶ್ ಗುಪ್ತಾ ಹೇಳಿದರು

ಈ ರೋಗಿಗಳಲ್ಲಿ ಹೆಚ್ಚಿನವರು ತಮ್ಮ ಮಿದುಳಿನಲ್ಲಿ 'ಸಣ್ಣ ಗಾತ್ರದ ಸೋಂಕು' ಹೊಂದಿದ್ದರೆ, ನಾಲ್ವರು ಸೋಂಕಿನ ಹರಡುವಿಕೆಯನ್ನು ತಡೆಯಲು ಪ್ರಮುಖ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು ಎಂದು ಡಾ. ಗುಪ್ತಾ ಹೇಳಿದರು.

ಆಸ್ಪತ್ರೆಗೆ ದಾಖಲಾಗುವ ಮೊದಲು ಸೋಂಕು ಈ ರೋಗಿಗಳ ಮಿದುಳುಗಳನ್ನು ಅವರ ಸೈನಸ್ ಮೂಲಕ ತಲುಪಿದೆ ಎಂದು ಅವರು ಹೇಳಿದರು.

ಮೆದುಳಿನಲ್ಲಿ ಕಪ್ಪು ಶಿಲೀಂಧ್ರಸೋಂಕಿನ ಆರಂಭಿಕ ಲಕ್ಷಣಗಳಲ್ಲಿ ತಲೆನೋವು ಮತ್ತು ವಾಂತಿ ಸೇರಿದೆ ಎಂದು ಇತರ ಕೆಲವು ತಜ್ಞರು ಹೇಳಿದರು, ಸೋಂಕು ಹರಡುತ್ತಿದ್ದಂತೆ ರೋಗಿಯು ನಂತರ ಪ್ರಜ್ಞೆ ಕಳೆದುಕೊಳ್ಳುತ್ತಾನೆ.

ಏತನ್ಮಧ್ಯೆ, ಆಂಫೋಟೆರಿಕಿನ್-ಬಿ ಚುಚ್ಚುಮದ್ದುಗಳ ಕೊರತೆಯು ಕಪ್ಪು ಶಿಲೀಂಧ್ರ ಸೋಂಕನ್ನು ನಿಭಾಯಿಸುವ ಪ್ರಯತ್ನಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಇನ್ನೊಬ್ಬ ಅಧಿಕಾರಿ ಹೇಳಿದರು.

ಕಪ್ಪು ಶಿಲೀಂಧ್ರದ ಸೋಂಕು ಹೆಚ್ಚಾಗಿ ಕೋವಿಡ್-19 ರೋಗಿಗಳಲ್ಲಿ ಮತ್ತು ಅದರಿಂದ ಚೇತರಿಸಿಕೊಂಡವರಲ್ಲಿ ಕಂಡುಬಂದಿದ್ದರೂ, ಕೊರೊನಾ ವೈರಸ್ ಗೆ ತುತ್ತಾಗದವರಿಗೂ ಬ್ಲಾಕ್ ಫಂಗಸ್ ಸೋಂಕು ತಗುಲಿರುವ ವರದಿಯಾಗಿದೆ.


 ಮಾಧ್ಯಮದಿಂದ ಸರಕಾರದ ಟೀಕೆ ದೇಶದ್ರೋಹ ಅಲ್ಲ: ಸುಪ್ರೀಂ ಕೋರ್ಟ್

ಮಾಧ್ಯಮದಿಂದ ಸರಕಾರದ ಟೀಕೆ ದೇಶದ್ರೋಹ ಅಲ್ಲ: ಸುಪ್ರೀಂ ಕೋರ್ಟ್


ಮಾಧ್ಯಮದಿಂದ ಸರಕಾರದ ಟೀಕೆ ದೇಶದ್ರೋಹ ಅಲ್ಲ: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಮೇ 31: ಸರಕಾರವನ್ನು ಟೀಕಿಸಿ ಟಿವಿ ವಾಹಿನಿಗಳಲ್ಲಿ ಕಾರ್ಯಕ್ರಮ ಪ್ರಸಾರ ಮಾಡುವುದು ಹಾಗೂ ಮುದ್ರಣ ಮಾಧ್ಯಮದಲ್ಲಿ ನಿಲುವುಗಳನ್ನು ಪ್ರಕಟ ಮಾಡುವುದು ದೇಶದ್ರೋಹ ಅಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. 

ಆಂಧ್ರಪ್ರದೇಶದಲ್ಲಿ ಕೊರೋನ ಪರಿಸ್ಥಿತಿಯನ್ನು ಜಗನ್ ರೆಡ್ಡಿ ಸರಕಾರ ನಿರ್ವಹಿಸಿದ ರೀತಿಯ ಬಗ್ಗೆ ವೈಎಸ್ಆರ್ಸಿಪಿಯ ಬಂಡಾಯ ಸಂಸದ ಕೃಷ್ಣಂ ರಾಜು ಅವರ ವಿಮರ್ಶಾತ್ಮಕ ನಿಲುವನ್ನು ಪ್ರಸಾರ ಮಾಡಿರುವುದಕ್ಕೆ ದೇಶದ್ರೋಹದ ಆರೋಪ ಎದುರಿಸುತ್ತಿರುವ ಟಿವಿ ವಾಹಿನಿಗಳ ವಿರುದ್ಧ ಪೊಲೀಸರು ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. 

ವೈಎಸ್ಆರ್ನ ಬಂಡಾಯ ಸಂಸದ ಕೆ. ರಘು ರಾಮ ಕೃಷ್ಣ ರಾಜು ಅವರ ನಿಂದನಾತ್ಮಕ ಭಾಷಣವನ್ನು ಪ್ರಸಾರ ಮಾಡಿರುವುದಕ್ಕೆ ದೇಶದ್ರೋಹದ ಆರೋಪ ಎದುರಿಸುತ್ತಿರುವ ಎರಡು ತೆಲುಗು ಸುದ್ದಿ ವಾಹಿನಿಗಳಾದ ಟಿವಿ5 ಹಾಗೂ ಎಬಿಎನ್ ಆಂಧ್ರಜ್ಯೋತಿ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ಸುಪ್ರೀಂ ಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ. ಇದು ದೇಶದ್ರೋಹದ ಮಿತಿಯನ್ನು ವ್ಯಾಖ್ಯಾನಿಸುವ ಸಮಯ ಎಂದು ಕೂಡ ಸುಪ್ರೀಂ ಕೋರ್ಟ್ ತಿಳಿಸಿದೆ. 

ದೇಶದ್ರೋಹ ಸೇರಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿರುವ ಟಿವಿ ವಾಹಿನಿಗಳ ಮನವಿಗೆ ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಪೀಠ ಹೇಳಿದೆ. ಪ್ರಸಾರ ಕುರಿತ ಎಫ್ಐಆರ್ಗೆ ಸಂಬಂಧಿಸಿ ಸುದ್ದಿ ವಾಹಿನಿಗಳ ಉದ್ಯೋಗಿಗಳು ಅಥವಾ ಸಿಬ್ಬಂದಿಗಳ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಹಾಗೂ ಎಸ್. ರವೀಂದ್ರ ಭಟ್ ಅವರನ್ನು ಕೂಡ ಒಳಗೊಂಡ ನ್ಯಾಯಪೀಠ ಹೇಳಿದೆ. 

‘‘124ಎ (ದೇಶದ್ರೋಹ) ಹಾಗೂ 153 (ವರ್ಗಗಳ ನಡುವೆ ದ್ವೇಷದ ಉತ್ತೇಜನ)ದ ನಿಯಮಗಳನ್ನು, ಮುಖ್ಯವಾಗಿ ಮಾಧ್ಯಮ ಹಕ್ಕು ಹಾಗೂ ಅಭಿವ್ಯಕ್ತಿ ಸ್ವಾತಂತ್ರವನ್ನು ವ್ಯಾಖ್ಯಾನಿಸುವ ಅಗತ್ಯತೆ ಇದೆ ಎಂಬ ನಿಲುವನ್ನು ನಾವು ಹೊಂದಿದ್ದೇವೆ’’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.‌


 ಬಂದೂಕಿನಿಂದ ಹೊಡೆದು ಕಾಡೆಮ್ಮೆ ಸಾವು : ಆರೋಪಿಗಳ ಪತ್ತೆಗೆ ಬಲೆ ಬೀಸಿದ ಅರಣ್ಯ ಅಧಿಕಾರಿಗಳು

ಬಂದೂಕಿನಿಂದ ಹೊಡೆದು ಕಾಡೆಮ್ಮೆ ಸಾವು : ಆರೋಪಿಗಳ ಪತ್ತೆಗೆ ಬಲೆ ಬೀಸಿದ ಅರಣ್ಯ ಅಧಿಕಾರಿಗಳು


ಬಂದೂಕಿನಿಂದ ಹೊಡೆದು ಕಾಡೆಮ್ಮೆ ಸಾವು : ಆರೋಪಿಗಳ ಪತ್ತೆಗೆ ಬಲೆ ಬೀಸಿದ ಅರಣ್ಯ ಅಧಿಕಾರಿಗಳು

ಶಂಕರನಾರಾಯಣ : ಬಂದೂಕಿನಿಂದ ಹೊಡೆದು ನಾಲ್ಕು ವರ್ಷದ ಕಾಡೆಮ್ಮೆಯನ್ನು ಕೊಂದಿರುವ ಘಟನೆ ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ.

ಕುಂದಾಪುರ ತಾಲೂಕು ಹೆಂಗವಳ್ಳಿ ಗ್ರಾಮದ ದೊಡ್ಡಬೆಳ್ಳಾರ್ ಎಂಬಲ್ಲಿ ರವಿವಾರ ರಾತ್ರಿ ಘಟನೆ ನಡೆದಿದ್ದು ಸೋಮವಾರ ಮುಂಜಾನೆ ಸ್ಥಳೀಯರ ಗಮನಕ್ಕೆ ಬಂದಿದೆ, ಸ್ಥಳೀಯರು ಶಂಕರನಾರಾಯಣ ಅರಣ್ಯ ಇಲಾಖೆಗೆ ಹಾಗೂ ಹೆಂಗವಳ್ಳಿ ಗ್ರಾಮ ಪಂಚಾಯತಿಗೆ ಮಾಹಿತಿಯನ್ನು ನೀಡಿದ್ದಾರೆ.

ಮಾಹಿತಿ ತಿಳಿದ ಕೂಡಲೆ ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಕಾಡೆಮ್ಮೆಯನ್ನು ಪೋಸ್ಟ್ ಮಾರ್ಟಂ ಮಾಡಿ ದಪ್ಪನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್, ಶಂಕರನಾರಾಯಣ ವಲಯ ಅರಣ್ಯಧಿಕಾರಿ ಚಿದಾನಂದಪ್ಪ, ಹೆಂಗವಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ರಘುರಾಮ್ ಶೆಟ್ಟಿ ತೊoಬತ್ತು ಹಾಗೂ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.


 ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 1,52,734 ಮಂದಿಗೆ ಕೊರೊನಾ, 3128 ಬಲಿ..!

ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 1,52,734 ಮಂದಿಗೆ ಕೊರೊನಾ, 3128 ಬಲಿ..!


ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 1,52,734 ಮಂದಿಗೆ ಕೊರೊನಾ, 3128 ಬಲಿ..!

ನವದೆಹಲಿ,ಮೇ.31-ಕೊರೊನಾ ಸೋಂಕಿತರ ಸಂಖ್ಯೆ ಒಂದೂವರೆ ಲಕ್ಷಕ್ಕೆ ಕುಸಿದಿದೆ. ಕಳೆದ 24 ಗಂಟೆಗಳಲ್ಲಿ 1,52,734 ಮಂದಿಗೆ ಸೋಂಕು ತಗುಲಿದೆ.ಇದರೊಂದಿಗೆ ದೇಶದ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 2,80,47,534 ಕೋಟಿಗೆ ಏರಿಕೆಯಾಗಿದೆ. ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಕುಸಿಯುತ್ತಿರುವುದರಿಂದ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 20,26,092 ಲಕ್ಷಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಲ್ಲಿ ಉಲ್ಲೇಖಿಸಲಾಗಿದೆ.

ನಿನ್ನೆಯಿಂದ 3128 ಮಂದಿ ಮಹಾಮಾರಿಗೆ ಬಲಿಯಾಗಿರುವುದರಿಂದ ಸೋಂಕಿಗೆ ಬಲಿಯಾದವರ ಸಂಖ್ಯೆ 3,29,100 ಲಕ್ಷಕ್ಕೆ ಏರಿಕೆಯಾಗಿದೆ. ಸತತ ಏಳು ದಿನಗಳಿಂದ ಕೊರೊನಾ ಪಾಸಿಟಿವಿಟಿ ದರ ಶೇ.10ರೊಳಗೆ ದಾಖಲಾಗುತ್ತಿದೆ. ದಿನನಿತ್ಯದ ಪಾಸಿಟಿವಿಟಿ ಶೇ.9.07ಕ್ಕೆ ಕುಸಿದಿದ್ದರೆ, ವಾರದ ಪಾಸಿಟಿವಿಟಿ ರೇಟ್ ಶೇ.9.04ಕ್ಕೆ ಇಳಿಕೆಯಾಗಿದೆ.

ಭಾನುವಾರವಾದ ನಿನ್ನೆ ದೇಶದ್ಯಾಂತ 16 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರೊಂದಿಗೆ ಇದುವರೆಗೂ 34 ಕೋಟಿಗೂ ಹೆಚ್ಚು ಮಂದಿಯ ಸ್ವಾಬ್ ಪರೀಕ್ಷೆ ನಡೆಸಿದಂತಾಗಿದೆ. ರಾಷ್ಟ್ರೀಯ ಚೇತರಿಕೆ ಪ್ರಮಾಣ ಸೇ.91.60ಗೆ ಹೆಚ್ಚಳವಾಗಿರುವುದರಿಂದ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 20 ಲಕ್ಷಕ್ಕೆ ಸೀಮಿತವಾಗಿದೆ.

2.80ಕೋಟಿ ಸೋಂಕಿತರ ಪೈಕಿ ಈಗಾಗಲೇ 2.56 ಕೋಟಿ ಮಂದಿ ಚೇತರಿಸಿಕೊಂಡಿದ್ದು ದೇಶದ್ಯಾಂತ ಕೊರೊನಾ ಸೋಂಕಿನ ಪ್ರಮಾಣ ಹಾಗೂ ಸಾವಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗುತ್ತಿದೆ.

 ಲಕ್ಷದ್ವೀಪದ ಜನರಿಗೆ ಬೆಂಬಲ: ಕೇರಳ ವಿಧಾನಸಭೆಯಲ್ಲಿ ವಿಜಯನ್ ನಿರ್ಣಯ ಮಂಡನೆ

ಲಕ್ಷದ್ವೀಪದ ಜನರಿಗೆ ಬೆಂಬಲ: ಕೇರಳ ವಿಧಾನಸಭೆಯಲ್ಲಿ ವಿಜಯನ್ ನಿರ್ಣಯ ಮಂಡನೆ


ಲಕ್ಷದ್ವೀಪದ ಜನರಿಗೆ ಬೆಂಬಲ: ಕೇರಳ ವಿಧಾನಸಭೆಯಲ್ಲಿ ವಿಜಯನ್ ನಿರ್ಣಯ ಮಂಡನೆ

ತಿರುವನಂತಪುರ: ಲಕ್ಷದ್ವೀಪದ ಆಡಳಿತಾಧಿಕಾರಿ ಕೈಗೊಂಡಿರುವ ಕ್ರಮಗಳ ವಿರುದ್ಧ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದು, ಆ ನಿವಾಸಿಗಳಿಗೆ ಬೆಂಬಲ ನೀಡುವ ಸಂಬಂಧ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸೋಮವಾರ ವಿಧಾನಸಭೆಯಲ್ಲಿ ನಿರ್ಣಯವೊಂದನ್ನು ಮಂಡಿಸಿದರು.

ದ್ವೀಪಸಮೂಹದ ಸ್ಥಳೀಯ ನಿವಾಸಿಗಳ ಜೀವನಶೈಲಿ ಮತ್ತು ಪರಿಸರ ವ್ಯವಸ್ಥೆಯನ್ನು ನಾಶಮಾಡುವ ಮತ್ತು ಹಿಂಬಾಗಿಲಿನ ಮೂಲಕ 'ಕೇಸರಿ ಪಡೆಯ ಕಾರ್ಯಸೂಚಿಯನ್ನು' ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ಣಯ ಮಂಡಿಸುವ ಸಂದರ್ಭದಲ್ಲಿ ಅವರು ಹೇಳಿದರು.

'ತಮ್ಮ ಅಜೆಂಡಾದ ಭಾಗವಾಗಿ ತೆಂಗಿನ ಮರಗಳನ್ನು ಕೇಸರಿ ಬಣ್ಣದಿಂದ ಚಿತ್ರಿಸಲಾಗಿದೆ. ಈ ಪ್ರಯತ್ನಗಳು ಲಕ್ಷದ್ವೀಪದಲ್ಲಿ ತಮ್ಮ ಕೇಸರಿ ಅಜೆಂಡ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳನ್ನು ಒತ್ತಾಯಪೂರ್ವಕವಾಗಿ ಹೇರುವುದಾಗಿದೆ' ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

Sunday, 30 May 2021

ಲಕ್ಷದ್ವೀಪ ಆಡಳಿತಾಧಿಕಾರಿ ನಿರ್ಧಾರಗಳನ್ನು ವಾಪಸ್ ಪಡೆಯಲು ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ

ಲಕ್ಷದ್ವೀಪ ಆಡಳಿತಾಧಿಕಾರಿ ನಿರ್ಧಾರಗಳನ್ನು ವಾಪಸ್ ಪಡೆಯಲು ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ


ಲಕ್ಷದ್ವೀಪ ಆಡಳಿತಾಧಿಕಾರಿ ನಿರ್ಧಾರಗಳನ್ನು ವಾಪಸ್ ಪಡೆಯಲು ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ

ತಿರುವನಂತಪುರಂ: ಲಕ್ಷದ್ವೀಪ ಆಡಳಿತಾಧಿಕಾರಿ ಜಾರಿಗೆ ತಂದಿರುವ ಹಲವಾರು ವಿವಾದಾತ್ಮಕ ಆದೇಶಗಳಿಂದ ಗೊಂದಲದಲ್ಲಿರುವ ದ್ವೀಪದ ನಿವಾಸಿಗಳಿಗೆ ಬೆಂಬಲ ಸೂಚಿಸಿ ಕೇರಳ ವಿಧಾನಸಭೆ ಇಂದು ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ ಎಂದು ತಿಳಿದು ಬಂದಿದೆ.

ಇಂದು ಬೆಳಗ್ಗಿನ ಅಧಿವೇಶನದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್  ಅವರು ನಿರ್ಣಯ ಮಂಡಲಿಸಿದ್ದು, ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರು ಜಾರಿಗೆ ತಂದಿರುವ ವಿವಾದಾತ್ಮಕ ಆದೇಶಗಳನ್ನು ವಾಪಸ್ ಪಡೆಯಬೇಕೆಂಬ ಆಗ್ರಹದೊಂದಿಗೆ ವಿಧಾನಸಭೆ ನಿರ್ಣಯ ಅಂಗೀಕರಿಸಿದೆ.

ಈ ಕುರಿತು ಮಾಹಿತಿ ನೀಡಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿಪಕ್ಷಗಳೂ ಸರಕಾರದ ಜತೆ ಈ ನಿಟ್ಟಿನಲ್ಲಿ ಕೈಜೋಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು.

“ಲಕ್ಷದ್ವೀಪದ ಜನರು ಕಠಿಣ ಪರಿಸ್ಥಿತಿಗೆ ಒಳಗಾಗುತ್ತಿದ್ದಾರೆ. ಸ್ಥಳೀಯ ಪ್ರತಿಭಟನೆಗಳನ್ನು ನಿರ್ಲಕ್ಷಿಸಿ ಆಡಳಿತವು ಕೈಕೊಳ್ಳುತ್ತಿರುವ ಸರ್ವಾಧಿಕಾರಿ ಕ್ರಮಗಳ ನಂತರ ಅವರ ಸಂಸ್ಕೃತಿ ಮತ್ತು ಸಂಪ್ರದಾಯವು ಅಪಾಯದಲ್ಲಿದೆ. ಅವರ ಆಹಾರ ಪದ್ಧತಿ ಮತ್ತು ಜೀವನೋಪಾಯಕ್ಕೂ ಅಪಾಯವಿದೆ ”ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಲಕ್ಷದ್ವೀಪದಲ್ಲಿ  ಸಮಾಜ ವಿರೋಧಿ ಚಟುವಟಿಕೆ ನಿಯಂತ್ರಣ ಮಸೂದೆ 2021 ಅಥವಾ ಗೂಂಡಾ ಕಾಯಿದೆ ಜಾರಿಗೆ ಮುಂದಾಗಿರುವ ಅಲ್ಲಿನ ಆಡಳಿತದ ಕ್ರಮ ಈಗಾಗಲೇ ವಿಪಕ್ಷಗಳಿಂದ ಮಾತ್ರವಲ್ಲದೆ ಆಡಳಿತ ಬಿಜೆಪಿಯ ಸದಸ್ಯರಿಂದಲೂ ಟೀಕೆಗೆ ಗುರಿಯಾಗಿವೆ. ಮದ್ಯ ಮಾರಾಟಕ್ಕೆ ಅನುಮತಿ, ಬೀಫ್ ಗೆ ನಿಷೇಧ ನಿರ್ಧಾರ ಕುರಿತೂ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.

ಆಡಳಿತಾಧಿಕಾರಿಯ ನಿರ್ಧಾರಗಳ ವಿರುದ್ಧ ಸಿಪಿಎಂ ಇಂದು  ಬೇಪೋರ್ ಹಾಗೂ ಕೊಚ್ಚಿಯಲ್ಲಿರುವ ಲಕ್ಷದ್ವೀಪ ಕಚೇರಿಗಳೆದುರು ಪ್ರತಿಭಟನೆಯನ್ನೂ ನಡೆಸಲಿದೆ.

 ತಣಲ್ ಕೂಟ್ ವಾಟ್ಸ್ಆಪ್ ಗ್ರೂಪ್ ಪಂಚೋಡಿ ವತಿಯಿಂದ  ಸೇವ್ ಲಕ್ಷದೀಪ್ ಕಾರ್ಯಕ್ರಮ

ತಣಲ್ ಕೂಟ್ ವಾಟ್ಸ್ಆಪ್ ಗ್ರೂಪ್ ಪಂಚೋಡಿ ವತಿಯಿಂದ ಸೇವ್ ಲಕ್ಷದೀಪ್ ಕಾರ್ಯಕ್ರಮ


ತಣಲ್ ಕೂಟ್ ವಾಟ್ಸ್ಆಪ್ ಗ್ರೂಪ್ ಪಂಚೋಡಿ ವತಿಯಿಂದ  ಸೇವ್ ಲಕ್ಷದೀಪ್ ಕಾರ್ಯಕ್ರಮ 

ದೇಲಂಪಾಡಿ: ಕೇರಳ-ಕರ್ನಾಟಕದ ಗಡಿ ಪ್ರದೇಶವಾದ ಪಂಚೋಡಿಯಲ್ಲಿ ಕಾರ್ಯಾಚರಿಸುತ್ತಿರುವ ತಣಲ್ ಕೂಟ್ ವಾಟ್ಸಪ್ ಗ್ರೂಪ್ ವತಿಯಿಂದ #SAVE LAKSHADEEP# (ಸೇವ್ ಲಕ್ಷ ದ್ವೀಪ್) ಕಾರ್ಯಕ್ರಮ ನಡೆಯಿತು.  ಲಕ್ಷದ್ವೀಪದಲ್ಲಿ ನಡೆಯುವ ಜನವಿರೋಧಿ ನೀತಿ ಮತ್ತು ದಬ್ಬಾಳಿಕೆಯ ವಿರುದ್ದ ಪ್ರತಿಭಟಣೆ ನಡೆಸುತ್ತಾ ಈ ಲಾಕ್'ಡೌನ್ ಸಮಯದಲ್ಲಿ ಕೂಡ ಹಲವು ಜನರು ತಮ್ಮ ತಮ್ಮ ಮನೆಗಳಲ್ಲಿದ್ದುಕೊಂಡೇ ಪೋಸ್ಟರ್ ಪ್ರದರ್ಶನ ಮಾಡಿದರು.

#SAVE LAKSHADEEP#

ಎಂಬ ಹ್ಯಾಷ್ ಟೇಗ್ ಹೊಂದಿದ ಹಲವಾರು ಬಿತ್ತಿಪತ್ರಗಳನ್ನು ಗ್ರೂಪಿನ ಸದಸ್ಯರು ತಮ್ಮ ಮನೆಗಳಲ್ಲಿ ಪ್ರದರ್ಶಿಸಿ ಲಕ್ಷದೀಪದ ಜನರೊಂದಿಗೆ ತಮ್ಮ ಬೆಂಬಲವನ್ನು ಸೂಚಿಸಿದರು.

ಈ ಮೂಲಕ ಇಂತಹಾ ಜನವಿರೋಧಿ ನೀತಿಯ ವಿರುದ್ದ ನಾವೆಲ್ಲರೂ ಜಾತಿ ಮತ ಭೇದವಿಲ್ಲದೆ ಹೆಗಲಿಗೆ ಹೆಗಲನ್ನು ಕೊಟ್ಟು ಫ್ಯಾಸಿಸ್ಟ್ ಶಕ್ತಿಗಳನ್ನು ಹೊಡೆದೋಡಿಸುವ ಬಗ್ಗೆ ತಣಲ್ ಕೂಟ್ ಪಂಚೋಡಿ ವಾಟ್ಸಪ್ ಗ್ರೂಪ್, ಉತ್ತಮ ಸಂದೇಶವನ್ನು ನೀಡಿದೆ.

 ಸಂಸದೆ ಸುಮಲತಾ ಅಂಬರೀಶ್ ಕೊರೊನಾ ಮಾರ್ಗಸೂಚಿ ಉಲ್ಲಂಘನೆ

ಸಂಸದೆ ಸುಮಲತಾ ಅಂಬರೀಶ್ ಕೊರೊನಾ ಮಾರ್ಗಸೂಚಿ ಉಲ್ಲಂಘನೆ

 ಸಂಸದೆ ಸುಮಲತಾ ಅಂಬರೀಶ್ ಕೊರೊನಾ ಮಾರ್ಗಸೂಚಿ ಉಲ್ಲಂಘನೆ

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಅವರು ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡಿ ಮತ್ತೆ ಸುದ್ದಿಯಾಗಿದ್ದಾರೆ‌. ನಿನ್ನೆ ಶನಿವಾರ ಮಂಡ್ಯದ ಗಂಡು, ರೆಬೆಲ್ ಸ್ಟಾರ್ ದಿವಂಗತ ಅಂಬರೀಶ್ ಅವರ ಹುಟ್ಟುಹಬ್ಬದ ಸಂಭ್ರಮ. ಮಂಡ್ಯ ಜಿಲ್ಲೆಯ ಅಂಬಿ ಹುಟ್ಟೂರಿಗೆ ಪುತ್ರನೊಂದಿಗೆ ತೆರಳಿದ ಸಂಸದೆ ಸುಮಲತಾ ಅಲ್ಲಿ ಸುಮಾರು 30 ಜನರನ್ನು ಒಂದೇ ಕಡೆ ಸೇರಿಸಿ ಅಂಬಿಯ ಬರ್ತಡೇ ಆಚರಿಸಿದ್ದಾರೆ. ಈ ವೇಳೆ ಸಾಮಾಜಿಕ ಅಂತರ ಕಾದುಕೊಳ್ಳೋದನ್ನ ಮರೆತೇಬಿಟ್ಟಿದ್ದಾರೆ‌.

ಅಲ್ಲಿನ ಜನರೆಲ್ಲ ಮಾಸ್ಕ್ ಹಾಕಿದ್ರು ನಿಜ. ಆದ್ರೆ ಲಾಕ್ ಡೌನ್ ಸಂದರ್ಭದಲ್ಲಿ ಒಂದು ಕಡೆ ಗುಂಪು ಸೇರಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದು ಎಷ್ಟು ಸರಿ? ಅದ್ರಲ್ಲೂ ಒಬ್ಬ ಜನಪ್ರತಿನಿಧಿಯಾಗಿರುವ ಸುಮಲತಾ ಮೇಡಂ ಮಾಡಿದ್ದು ಸರಿಯಲ್ಲ ಅಂತಾ ಮಂಡ್ಯ ಮಂದಿ ಮಾತಾಡಿಕೊಳ್ತಿದ್ದಾರೆ. ಬಾಲಕರಿಬ್ಬರ ಮೆದುಳಿಗೆ ಬ್ಲಾಕ್ ಫಂಗಸ್ ಅಟ್ಯಾಕ್, ಕಣ್ಣು ಕಳೆದುಕೊಂಡ ಬಾಲಕ

ಬಾಲಕರಿಬ್ಬರ ಮೆದುಳಿಗೆ ಬ್ಲಾಕ್ ಫಂಗಸ್ ಅಟ್ಯಾಕ್, ಕಣ್ಣು ಕಳೆದುಕೊಂಡ ಬಾಲಕ

ಬಾಲಕರಿಬ್ಬರ ಮೆದುಳಿಗೆ ಬ್ಲಾಕ್ ಫಂಗಸ್ ಅಟ್ಯಾಕ್, ಕಣ್ಣು ಕಳೆದುಕೊಂಡ ಬಾಲಕ

ಬೆಂಗಳೂರು: ಮಕ್ಕಳಿಗೂ ಬ್ಲಾಕ್ ಫಂಗಸ್ ವಕ್ಕರಿಸಿದ್ದು, 14 ವರ್ಷ ಮತ್ತು 11 ವರ್ಷದ ಬಾಲಕರಿಗೆ ಬ್ಲಾಕ್ ಫಂಗಸ್ ತಗುಲಿದ್ದು, ಇಬ್ಬರಿಗೂ ಮೆದುಳಿಗೆ ಬ್ಲಾಕ್ ಫಂಗಸ್ ಅಟ್ಯಾಕ್ ಮಾಡಿದೆ.

ಚಿತ್ರದುರ್ಗದ 11 ವರ್ಷದ ಬಾಲಕ ಬ್ಲಾಕ್ ಫಂಗಸ್ ನಿಂದ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಾಲಕ ಕಣ್ಣು ಕಳೆದುಕೊಂಡಿದ್ದಾನೆ. ಬಳ್ಳಾರಿ ಮೂಲದ 14 ವರ್ಷದ ಬಾಲಕನಿಗೂ ಬ್ಲಾಕ್ ಫಂಗಸ್ ದೃಢವಾಗಿದೆ. ಮಿಂಟೋ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ.

 ರಾಜ್ಯದಲ್ಲಿ 1250 ಮಂದಿಗೆ ಮಾರಕ ಬ್ಲಾಕ್ ಫಂಗಸ್: 35 ಮಂದಿ ಸಾವು

ರಾಜ್ಯದಲ್ಲಿ 1250 ಮಂದಿಗೆ ಮಾರಕ ಬ್ಲಾಕ್ ಫಂಗಸ್: 35 ಮಂದಿ ಸಾವು


ರಾಜ್ಯದಲ್ಲಿ 1250 ಮಂದಿಗೆ ಮಾರಕ ಬ್ಲಾಕ್ ಫಂಗಸ್: 35 ಮಂದಿ ಸಾವು

ಬೆಂಗಳೂರು: ಬ್ಲಾಕ್ ಫಂಗಸ್ ಗೆ ರಾಜ್ಯಕ್ಕೆ ಔಷಧ ಕೊಡಿಸಲು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಪ್ರಯತ್ನ ನಡೆಸಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

8 ಕ್ಕೂ ಹೆಚ್ಚು ಕಂಪನಿಗಳ ಜೊತೆ ಚರ್ಚೆ ನಡೆಸಿ ಸಿದ್ಧತೆ ಮಾಡಿಕೊಂಡಿದ್ದಾರೆ. ದೇಶಾದ್ಯಂತ 80,000 ವಯಲ್ಸ್ ಮಾರುಕಟ್ಟೆಗೆ ಬಂದಿದೆ. ರಾಜ್ಯಕ್ಕೆ 8 -10 ಸಾವಿರ ವಯಲ್ಸ್ ಪೂರೈಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ 1250 ಬ್ಲಾಕ್ ಫಂಗಸ್ ಪ್ರಕರಣಗಳಿದ್ದು, ಸುಮಾರು 30ರಿಂದ 35 ಮಂದಿ ಮೃತಪಟ್ಟಿರುವ ಮಾಹಿತಿ ಇದೆ. ಡೆತ್ ಆಡಿಟ್ ನಿಖರವಾದ ಮಾಹಿತಿಗೆ ಸೂಚನೆ ನೀಡಿದ್ದೇನೆ. ಬ್ಲಾಕ್ ಫಂಗಸ್ ಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ದರ ನಿಗದಿಯಾಗಿಲ್ಲ ಎಂದು ಹೇಳಿದ್ದಾರೆ.

Saturday, 29 May 2021

 ಮೆಹುಲ್ ಚೋಕ್ಸಿ ಗಡಿಪಾರು: ಡೊಮಿನಿಕಾಗೆ ವಿಮಾನ ಕಳುಹಿಸಿದ ಭಾರತ!

ಮೆಹುಲ್ ಚೋಕ್ಸಿ ಗಡಿಪಾರು: ಡೊಮಿನಿಕಾಗೆ ವಿಮಾನ ಕಳುಹಿಸಿದ ಭಾರತ!


ಮೆಹುಲ್ ಚೋಕ್ಸಿ ಗಡಿಪಾರು: ಡೊಮಿನಿಕಾಗೆ ವಿಮಾನ ಕಳುಹಿಸಿದ ಭಾರತ!

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,500 ಕೋಟಿ ರೂ. ವಂಚಿಸಿ ಭಾರತದಿಂದ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಗಡಿಪಾರಿಗೆ ಸಂಬಂಧಿಸಿದ ದಾಖಲಾತಿ ಇರುವ ಖಾಸಗಿ ವಿಮಾನವೊಂದನ್ನು ಭಾರತ ಕಳುಹಿಸಿದೆ ಎಂದು ಅಂಟಿಗುವಾ ಮತ್ತು ಬರ್ಬುಡಾ ಪ್ರಧಾನ ಮಂತ್ರಿ ಗಾಸ್ಟನ್ ಬ್ರೌನ್ ಆ ದೇಶದ ರೆಡಿಯೋವೊಂದಕ್ಕೆ ಹೇಳಿದ್ದಾರೆ.

ಆದಾಗ್ಯೂ, ಈ ಬಗ್ಗೆ ಭಾರತದ ಆಡಳಿತದಿಂದ ಅಧಿಕೃತ ಮಾಹಿತಿ ಹೊರಬಿದಿಲ್ಲ. ಕತಾರ್ ಏರ್ ವೆಸ್ ನ ಖಾಸಗಿ ವಿಮಾನವೊಂದು ಡೊಮಿನಿಕಾದ ಡೌಗ್ಲಾಸ್-ಚಾರ್ಲ್ಸ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿರುವುದಾಗಿ ಅಂಟಿಗುವಾ ನ್ಯೂಸ್ ರೂಮ್ ವರದಿ ಮಾಡಿದೆ. ನೆರೆಯ ಅಂಟಿಗುವಾ ಮತ್ತು ಬರ್ಬುಡಾದಿಂದ ನಿಗೂಢ ರೀತಿಯಲ್ಲಿ ಕಾಣೆಯಾದ ನಂತರ ಕೆರಿಬಿಯನ್ ರಾಷ್ಟ್ರದಲ್ಲಿ ಬಂಧಿಸಲಾಗಿದ್ದ ಚೋಕ್ಸಿ ಗಡಿಪಾರು ಬಗ್ಗೆ ಊಹಾಪೋಹಾಕ್ಕೆ ಇದು ಕಾರಣವಾಗಿದೆ.

ಚೋಕ್ಸಿ ಗಡಿಪಾರಿಗೆ ಅಗತ್ಯವಾದ ದಾಖಲಾತಿಗಳನ್ನು ಹೊತ್ತ ವಿಮಾನ ಭಾರತದಿಂದ ಬಂದಿದೆ ಎಂದು ಬ್ರೌನ್ ರೆಡಿಯೋ ಶೋವೊಂದರಲ್ಲಿ ಹೇಳಿದ್ದಾರೆ. ಕತಾರ್ ಏರ್ ವೇಸ್ ನ ಎ7ಸಿಇಇ ವಿಮಾನ ಮೇ 28 ರಂದ ಮಧ್ಯಾಹ್ನ 3.44ಕ್ಕೆ ದೆಹಲಿಯಿಂದ ನಿರ್ಗಮಿಸಿದ್ದು, ಅದೇ ದಿನ ಸ್ಥಳೀಯ ಕಾಲಮಾನ 13.16ಕ್ಕೆ ಮ್ಯಾಡ್ರಿಡ್ ಮಾರ್ಗವಾಗಿ ಡೊಮಿನಿಕಾ ತಲುಪಿದೆ ಎಂದು ಸಾರ್ವಜನಿ ಮಾಹಿತಿ ಲಭ್ಯವಾಗಿದೆ.

 ಜನಪ್ರಿಯ ಜಾಲತಾಣ ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್

ಜನಪ್ರಿಯ ಜಾಲತಾಣ ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್


ಜನಪ್ರಿಯ ಜಾಲತಾಣ ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್

ನವದೆಹಲಿ: ಜನಪ್ರಿಯ ಜಾಲತಾಣ ವಾಟ್ಸಾಪ್ ಬಳಕೆದಾರರಿಗೆ ಖಾಸಗಿ ನೀತಿ ಕಡ್ಡಾಯವಲ್ಲ. ಹೊಸ ಖಾಸಗಿ ನೀತಿಯನ್ನು ಒಪ್ಪಿಕೊಳ್ಳದ ಯಾವುದೇ ಬಳಕೆದಾರರ ಅಪ್ಲಿಕೇಶನಲ್ಲಿ ಯಾವುದೇ ಫೀಚರ್ ಕಡಿತಗೊಳಿಸಿದೇ ಸೇವೆ ಮುಂದುವರಿಸಲಾಗುವುದು ಎಂದು ಹೇಳಲಾಗಿದೆ.

ಫೇಸ್ಬುಕ್ ಒಡೆತನದ ವಾಟ್ಸಾಪ್ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಸಂಸ್ಥೆಯ ನೀತಿ ನಿಯಮಗಳನ್ನು ಒಪ್ಪಿಕೊಳ್ಳದ ಗ್ರಾಹಕರಿಗೆ ಅಪ್ಲಿಕೇಶನ್ ಫೀಚರ್ ಗಳನ್ನು ಕ್ರಮೇಣ ನಿರ್ಬಂಧಿಸಲಾಗುವುದು ಎನ್ನುವ ವದಂತಿ ಹಿನ್ನೆಲೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಲಾಗಿದ್ದು, ವಾಟ್ಸಾಪ್ ಕಾರ್ಯನಿರ್ವಹಿಸುತ್ತಿರುವ ರೀತಿಯಲ್ಲೇ ಬಳಕೆ ಮಾಡುವ ಅವಕಾಶವನ್ನು ಮುಂದುವರಿಸುವ ನಿರ್ಧಾರ ಕೈಗೊಂಡಿರುವುದಾಗಿ ಸಂಸ್ಥೆಯ ವಕ್ತಾರರು ಹೇಳಿದ್ದಾರೆ.


 ಅತ್ಯಾಚಾರ ಆರೋಪ: ಕಂಗನಾ ರಣಾವತ್ ಬಾಡಿಗಾರ್ಡ್ ಮಂಡ್ಯದಲ್ಲಿ ಬಂಧನ

ಅತ್ಯಾಚಾರ ಆರೋಪ: ಕಂಗನಾ ರಣಾವತ್ ಬಾಡಿಗಾರ್ಡ್ ಮಂಡ್ಯದಲ್ಲಿ ಬಂಧನ

ಅತ್ಯಾಚಾರ ಆರೋಪ: ಕಂಗನಾ ರಣಾವತ್ ಬಾಡಿಗಾರ್ಡ್ ಮಂಡ್ಯದಲ್ಲಿ ಬಂಧನ

ಬೆಂಗಳೂರು: ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಬಾಲಿವುಡ್ ಚಿತ್ರನಟಿ ಕಂಗನಾ ರಣಾವತ್ ಬಾಡಿ ಗಾರ್ಡ್  ಕುಮಾರ  ಹೆಗಡೆಯನ್ನು ಮುಂಬೈ ಪೊಲೀಸರು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೆಗ್ಗಡಹಳ್ಳಿಯಲ್ಲಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಸಂತ್ರಸ್ತ ಯುವತಿಯ ಜೊತೆಗೆ ಕುಮಾರ್ ಹೆಗಡೆಗೆ ಕಳೆದ 8 ವರ್ಷಗಳ ಹಿಂದೆ ಪರಿಚಯವಾಗಿತ್ತು. ಕಳೆದ ವರ್ಷ ಜೂನ್ ನಲ್ಲಿ ಆತ ಮದುವೆ ಪ್ರಸ್ತಾವ ಕೂಡ ಮಾಡಿದ್ದ. ಅದಕ್ಕೆ ಯುವತಿ ಸಮ್ಮತಿ ಸಿಕ್ಕಿತ್ತು. ಬಳಿಕ ಆತ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದ ಎನ್ನಲಾಗಿದೆ.

ಎ.27ರಂದು ತನ್ನ ತಾಯಿ ನಿಧನರಾಗಿದ್ದಾರೆ ಎಂದು ಹೇಳಿ ತನ್ನಿಂದ 50,000 ರೂ. ಹಣ ಪಡೆದು ಅಪಾರ್ಟ್ ಮೆಂಟ್ ನಿಂದ ಪರಾರಿ ಆಗಿದ್ದ ಕುಮಾರ್ ತನ್ನ ಊರು ತಲುಪಿದ ಬಳಿಕ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ ಎಂದು ಯುವತಿ ಮುಂಬೈನ ಅಂಧೇರಿ ಉಪನಗರದ ಡಿ. ಎನ್.  ನಗರ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.

ಬ್ಯೂಟಿಶಿಯನ್ ಆಗಿರುವ ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಕಂಗನಾ ಬಾಡಿಗಾರ್ಡ್ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ ಪ್ರಕರಣ) ಹಾಗೂ 420 (ವಂಚನೆ)ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು ಎಂದು ಮೇ 22ರಂದು ಎಎನ್ ಐ ಟ್ವೀಟ್ ಮಾಡಿತ್ತು.

ಯುವತಿಯ ದೂರನ್ನು ಆಧರಿಸಿ ಮುಂಬೈ ಪೊಲೀಸರು ಕುಮಾರ್ ಹೆಗಡೆಗಾಗಿ ಹುಡುಕಾಟ ನಡೆಸಿದ್ದರು. ಹೆಗ್ಗಡಹಳ್ಳಿಯಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ಬಂದು ಬಂಧಿಸಿದ್ದಾರೆ. ಸದ್ಯ ಕೆ.ಆರ್.ಪೇಟೆಯ ಜಿಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂಬೈಗೆ ಕರೆದೊಯ್ದಿದ್ದಾರೆ.


 

ನೆತನ್ಯಾಹು ಆಡಳಿತಕ್ಕೆ ಕುತ್ತು ?   ಲ್ಯಾಪಿಡ್ ಜೊತೆಗೂಡಿ ಇಸ್ರೇಲ್ ನಲ್ಲಿ ನೂತನ ಸರಕಾರ ರಚಿಸಲು ಒಪ್ಪಿದ ಬೆನ್ನೆಟ್

ನೆತನ್ಯಾಹು ಆಡಳಿತಕ್ಕೆ ಕುತ್ತು ? ಲ್ಯಾಪಿಡ್ ಜೊತೆಗೂಡಿ ಇಸ್ರೇಲ್ ನಲ್ಲಿ ನೂತನ ಸರಕಾರ ರಚಿಸಲು ಒಪ್ಪಿದ ಬೆನ್ನೆಟ್


ನೆತನ್ಯಾಹು ಆಡಳಿತಕ್ಕೆ ಕುತ್ತು ?   ಲ್ಯಾಪಿಡ್ ಜೊತೆಗೂಡಿ ಇಸ್ರೇಲ್ ನಲ್ಲಿ ನೂತನ ಸರಕಾರ ರಚಿಸಲು ಒಪ್ಪಿದ ಬೆನ್ನೆಟ್ 

ಜೆರುಸಲೆಂ: ಯಮಿನ ನಾಯಕ ನಫ್ತಾಲಿ ಬೆನ್ನೆಟ್ಟ್ ಅವರು ಯೆಶ್ ಅತಿದ್ ಮುಖ್ಯಸ್ಥ ಯಾಯಿರ್ ಲ್ಯಾಪಿಡ್ ಅವರ ಜತೆಗೂಡಿ ಇಸ್ರೇಲ್‍ನಲ್ಲಿ ಮೈತ್ರಿ ಸರಕಾರ ರಚಿಸಲು ಒಪ್ಪಿದ್ದಾರೆ ಎಂದು The Jerusalem Post ವರದಿ ಮಾಡಿದೆ.

ಒಪ್ಪಂದದಂತೆ ಬೆನ್ನೆಟ್ಟ್ ಅವರು ಮೊದಲು ಪ್ರಧಾನಿಯಾಗಿ ಸೆಪ್ಟೆಂಬರ್ 2023ರ ತನಕ ಸೇವೆ ಸಲ್ಲಿಸಲಿದ್ದು, ನಂತರ ಲ್ಯಾಪಿಡ್ ಅವರು ನವೆಂಬರ್ 2025ರ ತನಕ ಪ್ರಧಾನಿಯಾಗಲಿದ್ದಾರೆ.

ಪ್ರತಿಜ್ಞಾವಿಧಿ ಸಮಾರಂಭ ಜೂನ್ 7ರಂದು ನಡೆಯುವ ನಿರೀಕ್ಷೆಯಿದ್ದು ಶನಿವಾರ ರಾತ್ರಿ ಅಥವಾ ರವಿವಾರ ಹೊಸ ಸರಕಾರ ರಚನೆ ಕುರಿತು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಬೆನ್ನೆಟ್ಟ್ ಅವರು ಬಲಪಂಥೀಯ ಸರಕಾರವನ್ನು ತಿರಸ್ಕರಿಸಿ ಎಡರಂಗದ ಸರಕಾರದ ಪ್ರಧಾನಿಯಾಗಲು ಬಯಸುತ್ತಿದ್ದಾರೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಆರೋಪದ ಬೆನ್ನಲ್ಲೇ ಮೇಲಿನ ಬೆಳವಣಿಗೆ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ನೆತನ್ಯಾಹು ಅವರು ಮೂರು ನಿಮಿಷ ಅವಧಿಯ ವೀಡಿಯೋವೊಂದನ್ನು ಬಿಡುಗಡೆಗೊಳಿಸಿದ್ದು, ಅದರಲ್ಲಿ ಅವರು ಲಿಕುಡ್ ಹಾಗೂ ಯಮೀನಾ ಸಂಧಾನಕಾರರು ಮಹತ್ವದ ಒಪ್ಪಂದಕ್ಕೆ ಮುಂದಾಗಿದ್ದಾರೆ ಆದರೆ ಬೆನ್ನೆಟ್ಟ್ ಸಹಿ ಹಾಕಲು ನಿರಾಕರಿಸಿದ್ದಾರೆ ಎಂದಿದ್ದರು.

ಈ ಒಪ್ಪಂದದಂತೆ  ಬಹುಮತಕ್ಕೆ ಅಗತ್ಯವಿರುವ ಎರಡು ಸದಸ್ಯರ ಕೊರತೆಯೊಂದಿಗೆ ಮೈತ್ರಿ ಸರಕಾರ 59 ಸದಸ್ಯರ ಬೆಂಬಲ ಹೊಂದಲಿದೆ. ಬೆನ್ನೆಟ್ಟ್ ಅವರು ಅಲ್ಪಮತದ ಸರಕಾರ ರಚಿಸಲು ನಿರಾಕರಿಸಿದ್ದರಲ್ಲದೆ ಇಬ್ಬರು ಪಕ್ಷಾಂತರಿಗಳನ್ನು ಹುಡುಕುವಂತೆ ನೆತನ್ಯಾಹು ಅವರನ್ನು ಆಗ್ರಹಿಸಿದ್ದರು.


 ಕೇರಳದಲ್ಲಿ ಜೂ.9ರ ತನಕ ಲಾಕ್ ಡೌನ್ ವಿಸ್ತರಣೆ

ಕೇರಳದಲ್ಲಿ ಜೂ.9ರ ತನಕ ಲಾಕ್ ಡೌನ್ ವಿಸ್ತರಣೆ


ಕೇರಳದಲ್ಲಿ ಜೂ.9ರ ತನಕ ಲಾಕ್ ಡೌನ್ ವಿಸ್ತರಣೆ

ತಿರುವನಂತಪುರ: ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಲು ಕೇರಳ ಸರಕಾರ ಜೂನ್ 9 ರ ತನಕ ರಾಜ್ಯಾದ್ಯಂತ ಲಾಕ್ ಡೌನ್ ವಿಸ್ತರಿಸಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಲಾಕ್ ಡೌನ್ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.

ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮೇ 8 ರಿಂದ 2 ಬಾರಿ ಲಾಕ್ ಡೌನ್ ಘೋಷಿಸಲಾಗಿದೆ.

ಮಲಪ್ಪುರಂ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಅಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಉಳಿದಂತೆ ಇತರೆ ಜಿಲ್ಲೆಗಳಲ್ಲಿ ಸಾಮಾನ್ಯ ಲಾಕ್ ಡೌನ್ ಮುಂದುವರಿಯಲಿದೆ ಎಂದು ವಿಜಯನ್ ತಿಳಿಸಿದ್ದಾರೆ.


 

 ಕೊರೋನಾದಿಂದ ಅನಾಥವಾದ ಮಕ್ಕಳಿಗೆ ಸರ್ಕಾರದ ನೆರವು: 3,500 ರೂ. ಮಾಸಾಶನ ಘೋಷಣೆ

ಕೊರೋನಾದಿಂದ ಅನಾಥವಾದ ಮಕ್ಕಳಿಗೆ ಸರ್ಕಾರದ ನೆರವು: 3,500 ರೂ. ಮಾಸಾಶನ ಘೋಷಣೆ

ಕೊರೋನಾದಿಂದ ಅನಾಥವಾದ ಮಕ್ಕಳಿಗೆ ಸರ್ಕಾರದ ನೆರವು: 3,500 ರೂ. ಮಾಸಾಶನ ಘೋಷಣೆ

ಬೆಂಗಳೂರು: ಕೋವಿಡ್ ನಿಂದಾಗಿ ಹೆತ್ತವರನ್ನು ಕಳೆದುಕೊಂಡ ಮಕ್ಕಳ ನೆರವಿಗೆ ರಾಜ್ಯ ಸರ್ಕಾರ ಧಾವಿಸಿದ್ದು ತಿಂಗಳಿಗೆ 3,500 ರೂ. ಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ"ಕೋವಿಡ್ ನಿಂದಾಗಿ ಹೆತ್ತವರನ್ನು ಕಳೆದುಕೊಂಡ ಮಕ್ಕಳ ನೆರವಿಗಾಗಿ ರಾಜ್ಯ ಸರ್ಕಾರ 'ಮುಖ್ಯಮಂತ್ರಿ ಬಾಲಸೇವಾ ಯೋಜನೆ'ಯನ್ನು ಜಾರಿಗೆ ತರಲಿದೆ; ಕೇಂದ್ರ ಸರ್ಕಾರದ ಸಲಹೆ ಮೇರೆಗೆ, ಕೊರೋನಾದಿಂದ ಅನಾಥರಾಗಿ, ವಿಸ್ತೃತ ಕುಟುಂಬದ ಆಶ್ರಯದಲ್ಲಿರುವ, ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ದೃಷ್ಟಿಯಿಂದ, ತಿಂಗಳಿಗೆ 3,500 ರೂ. ಗಳನ್ನು ನೀಡಲಾಗುವುದು.

"ವಿಸ್ತೃತ ಕುಟುಂಬದ ಆಸರೆಯಿಲ್ಲದ, 10 ವರ್ಷದೊಳಗಿನ ಕೋವಿಡ್ ನಿಂದಾಗಿ ಅನಾಥರಾಗಿರುವ ಮಕ್ಕಳ ಪೋಷಣೆ ಮತ್ತು ಉತ್ತಮ ಶಿಕ್ಷಣ ಒದಗಿಸುವ ದೃಷ್ಟಿಯಿಂದ ಅಂತಹ ಮಕ್ಕಳನ್ನು ಸರ್ಕಾರಿ ಸ್ವಾಮ್ಯದ ಮಾದರಿ ವಸತಿ ಶಾಲೆಗಳಲ್ಲಿ ದಾಖಲು ಮಾಡಿಕೊಳ್ಳಲಾಗುವುದು. 10ನೇ ತರಗತಿ ಪೂರೈಸಿದ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್ ನೀಡಲಾಗುವುದು.

"21 ವರ್ಷ ತುಂಬಿರುವ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಸೇರಿದಂತೆ ಮುಂದಿನ ಜೀವನಕ್ಕೆ ಅನುಕೂಲ ಕಲ್ಪಿಸಲು 1 ಲಕ್ಷ ರೂ. ನೆರವು ನೀಡಲಾಗುವುದು. ರಕ್ಷಣೆಗೆ ಯಾರೂ ಇಲ್ಲದಂತಹ ಅನಾಥ ಮಕ್ಕಳನ್ನು ನೋಡಿಕೊಳ್ಳಲು ಸರ್ಕಾರದಿಂದ ಮಾರ್ಗದರ್ಶಿ/ಹಿತೈಷಿಗಳನ್ನು ನೇಮಿಸಲಾಗುವುದು. ಯೋಜನೆಯ ಸಮಗ್ರ ವಿವರಗಳನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು." ಎಂದಿದ್ದಾರೆ.


 ಮುಸ್ಲಿಮೇತರ ಅಲ್ಪಸಂಖ್ಯಾತರ ಪೌರತ್ವ ಅರ್ಜಿ ಸ್ವೀಕರಿಸಲು ಗಝೆಟ್‌ ಅಧಿಸೂಚನೆ ನೀಡಿದ ಕೇಂದ್ರ ಸರಕಾರ

ಮುಸ್ಲಿಮೇತರ ಅಲ್ಪಸಂಖ್ಯಾತರ ಪೌರತ್ವ ಅರ್ಜಿ ಸ್ವೀಕರಿಸಲು ಗಝೆಟ್‌ ಅಧಿಸೂಚನೆ ನೀಡಿದ ಕೇಂದ್ರ ಸರಕಾರ


ಮುಸ್ಲಿಮೇತರ ಅಲ್ಪಸಂಖ್ಯಾತರ ಪೌರತ್ವ ಅರ್ಜಿ ಸ್ವೀಕರಿಸಲು ಗಝೆಟ್‌ ಅಧಿಸೂಚನೆ ನೀಡಿದ ಕೇಂದ್ರ ಸರಕಾರ

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) 2019 ರ ಅಡಿಯಲ್ಲಿ ಕೇಂದ್ರವು ಇನ್ನೂ  ನಿಯಮಗಳನ್ನು ರೂಪಿಸದ ಕಾರಣ, ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ  ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರಿಂದ ಪೌರತ್ವ ಅರ್ಜಿಯನ್ನು ಸ್ವೀಕರಿಸಲು, ಪರಿಶೀಲಿಸಲು ಹಾಗೂ  ಅನುಮೋದಿಸಲು ಗುಜರಾತ್, ಛತ್ತೀಸ್‌ಗಢ, ರಾಜಸ್ಥಾನ, ಹರ್ಯಾಣ ಹಾಗೂ  ಪಂಜಾಬ್‌ನ 13 ಜಿಲ್ಲೆಗಳಲ್ಲಿನ  ಅಧಿಕಾರಿಗಳಿಗೆ ಅಸ್ತಿತ್ವದಲ್ಲಿರುವ ನಿಯಮಗಳ ಅಡಿಯಲ್ಲಿ ಅಧಿಕಾರವನ್ನು ನೀಡುವ ಗೆಝೆಟ್ ಅಧಿಸೂಚನೆಯನ್ನು ಕೇಂದ್ರ ಸರಕಾರ ಶುಕ್ರವಾರ ಬಿಡುಗಡೆ ಮಾಡಿದೆ.

ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಹಾಗೂ  ಕ್ರಿಶ್ಚಿಯನ್ನರನ್ನು ಒಳಗೊಳ್ಳುವ ಸಮುದಾಯಗಳೆಂದು ಅಧಿಸೂಚನೆಯು ಪಟ್ಟಿ ಮಾಡಿದೆ ಹಾಗೂ  ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕಾಗುತ್ತದೆ ಎಂದು ಹೇಳಿದೆ.

ಈ ಆದೇಶವನ್ನು ಪೌರತ್ವ ಕಾಯ್ದೆ 1955 ಹಾಗೂ  ಪೌರತ್ವ ನಿಯಮಗಳು, 2009 ರ ಅಡಿಯಲ್ಲಿ ನೀಡಲಾಗಿದೆ , 2019ರ ಪೌರತ್ವ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ನೀಡಲಾಗಿಲ್ಲ.

2019 ರ ತಿದ್ದುಪಡಿ ಕಾಯ್ದೆ ಅದರ ನಿಯಮಗಳನ್ನು ಇನ್ನೂ ರೂಪಿಸಲಾಗಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ. ಹಲವಾರು ರಾಜ್ಯಗಳ ಇತರ ಜಿಲ್ಲೆಗಳಿಗೂ ಇದೇ ರೀತಿಯ ಅಧಿಸೂಚನೆಯನ್ನು 2018 ರಲ್ಲಿ ನೀಡಲಾಗಿತ್ತು..

ಅಧಿಸೂಚನೆಯಲ್ಲಿ ಪಟ್ಟಿ ಮಾಡಲಾದ ಜಿಲ್ಲೆಗಳೆಂದರೆ: ಮೊರ್ಬಿ, ರಾಜ್‌ಕೋಟ್, ಪಟಾನ್ ಮತ್ತು ವಡೋದರ (ಗುಜರಾತ್); ದುರ್ಗ್ ಹಾಗೂ  ಬಲೋದಬಝಾರ್ (ಛತ್ತೀಸ್‌ಗಢ); ಜಲೋರ್, ಉದಯಪುರ, ಪಾಲಿ, ಬಾರ್ಮರ್ ಹಾಗೂ  ಸಿರೋಹಿ (ರಾಜಸ್ಥಾನ); ಫರಿದಾಬಾದ್ (ಹರ್ಯಾಣ); ಹಾಗೂ  ಜಲಂಧರ್ (ಪಂಜಾಬ್).

ಫರಿದಾಬಾದ್ ಹಾಗೂ  ಜಲಂಧರ್ ಹೊರತುಪಡಿಸಿ ಹರ್ಯಾಣ ಹಾಗೂ  ಪಂಜಾಬ್‌ನ ಗೃಹ ಕಾರ್ಯದರ್ಶಿಗಳಿಗೆ ಅಧಿಸೂಚನೆ ಇದೇ ರೀತಿಯ ಅಧಿಕಾರವನ್ನು ನೀಡಿದೆ.

"ಅರ್ಜಿಯ ಪರಿಶೀಲನೆಯನ್ನು ಜಿಲ್ಲಾಧಿಕಾರಿ ಅಥವಾ ಕಾರ್ಯದರ್ಶಿ ಏಕಕಾಲದಲ್ಲಿ ಮಾಡುತ್ತಾರೆ, ಜಿಲ್ಲಾಧಿಕಾರಿ ಅಥವಾ ಕಾರ್ಯದರ್ಶಿ, ಅರ್ಜಿದಾರರ ಸೂಕ್ತತೆಯಿಂದ ತೃಪ್ತಿ ಹೊಂದಿದ ನಂತರ, ನೋಂದಣಿ ಮೂಲಕ ಆತನಿಗೆ ಭಾರತದ ಪೌರತ್ವವನ್ನು ನೀಡುತ್ತಾರೆ ಹಾಗೂ  ನೋಂದಣಿ ಪ್ರಮಾಣಪತ್ರವನ್ನು ನೀಡುತ್ತಾರೆ”ಎಂದು ಅಧಿಸೂಚನೆ ತಿಳಿಸಿದೆ.

2018ರಲ್ಲಿ ಕೂಡ ಸರಕಾರವು ಛತ್ತೀಸ್ ಗಢ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ದಿಲ್ಲಿಯಂತಹ ರಾಜ್ಯಗಳ ನಿರ್ದಿಷ್ಟ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ  ಗೃಹ ಕಾರ್ಯದರ್ಶಿಗಳಿಗೆ ಇದೇ ರೀತಿಯ ಅಧಿಕಾರವನ್ನು ನೀಡಿತ್ತು.

2019 ರ ಡಿಸೆಂಬರ್‌ನಲ್ಲಿ ಸಂಸತ್ತು ಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದು, ಈ ಕಾಯ್ದೆಯು ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ  ಅಫ್ಘಾನಿಸ್ತಾನದ ಹಿಂದೂ, ಜೈನ, ಸಿಖ್, ಪಾರ್ಸಿ, ಕ್ರಿಶ್ಚಿಯನ್ ಹಾಗೂ  ಬೌದ್ಧ ಸಮುದಾಯಗಳಿಗೆ ಸೇರಿದ ಅಕ್ರಮ ವಲಸಿಗರಿಗೆ ಪೌರತ್ವ ನೀಡಿತ್ತು. ಆದರೆ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮ್ ಸಮುದಾಯವನ್ನು ಹೊರಗಿಡಲಾಗಿತ್ತು. ಪ್ರತಿಪಕ್ಷಗಳ ತೀವ್ರ ಟೀಕೆಗಳ ಮಧ್ಯೆ ಈ ಕಾಯ್ದೆಯನ್ನುಸಂಸತ್ತಿನಲ್ಲಿ ಅಂಗೀಕರಿಸಲಾಯಿತು, ಕೇಂದ್ರ ಸರಕಾರದ ಈ ಕಾಯ್ದೆ ತಾರತಮ್ಯದಿಂದ ಕೂಡಿದೆ ಎಂಬ ಕಾರಣಕ್ಕೆ ರಾಷ್ಟ್ರವ್ಯಾಪಿ ಬೃಹತ್ ಪ್ರತಿಭಟನೆಗಳು ನಡೆದಿದ್ದವು.


 

 ದೇಶದಲ್ಲಿಂದು 1.73 ಲಕ್ಷ ಜನರಿಗೆ ಕೊರೋನಾ. 3,617 ಜನ ಸಾವು!

ದೇಶದಲ್ಲಿಂದು 1.73 ಲಕ್ಷ ಜನರಿಗೆ ಕೊರೋನಾ. 3,617 ಜನ ಸಾವು!

ದೇಶದಲ್ಲಿಂದು 1.73 ಲಕ್ಷ ಜನರಿಗೆ ಕೊರೋನಾ. 3,617 ಜನ ಸಾವು!

ಇನ್ನು ದೇಶದ ವಿಚಾರಕ್ಕೆ ಬಂದ್ರೆ ಕಳೆದ 24 ಗಂಟೆಗಳಲ್ಲಿ 1,73,790 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದ್ದು, 3,617 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2 ಕೋಟಿ 77ಲಕ್ಷದ 29 ಸಾವಿರ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 3,22,512 ಆಗಿದೆ.

ಕಳೆದ 24 ಗಂಟೆಗಳಲ್ಲಿ 2 ಲಕ್ಷದ 84 ಸಾವಿರಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 2 ಕೋಟಿ 51 ಲಕ್ಷದ 78 ಸಾವಿರ ದಾಟಿದೆ. ದೇಶದಲ್ಲಿ ಇನ್ನೂ ಕೂಡ 20 ಲಕ್ಷದ 28 ಸಾವಿರಕ್ಕೂ ಹೆಚ್ಚು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತದಲ್ಲಿ ಗುಣಮುಖ ಪ್ರಮಾಣ 90.80 ಪರ್ಸೆಂಟ್ ಇದ್ದು, ಸಾವಿನ ಪ್ರಮಾಣ 1.16 ಪರ್ಸೆಂಟ್ ಇದೆ. ದೇಶದಲ್ಲಿ ನಿನ್ನೆ 20.80 ಲಕ್ಷ ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 34.11 ಕೋಟಿ ಟೆಸ್ಟ್​ಗಳನ್ನ ನಡೆಸಿದಂತಾಗಿದೆ.

ದೇಶದಲ್ಲಿ ನಿನ್ನೆ 30.62 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದ್ದು, ಇದುವರೆಗೆ ಒಟ್ಟು 20.89 ಕೋಟಿಗೂ ಅಧಿಕ ಜನರಿಗೆ ಲಸಿಕೆ ಹಾಕಿದಂತಾಗಿದೆ.

Friday, 28 May 2021

 1.73 ಲಕ್ಷಕ್ಕೆ ಕುಸಿದ ಪ್ರತಿದಿನದ ಸೋಂಕಿತರ ಸಂಖ್ಯೆ

1.73 ಲಕ್ಷಕ್ಕೆ ಕುಸಿದ ಪ್ರತಿದಿನದ ಸೋಂಕಿತರ ಸಂಖ್ಯೆ


1.73 ಲಕ್ಷಕ್ಕೆ ಕುಸಿದ ಪ್ರತಿದಿನದ ಸೋಂಕಿತರ ಸಂಖ್ಯೆ

ನವದೆಹಲಿ,ಮೇ.29-ದಿನೇ ದಿನೇ ಕೊರೊನಾ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿಕೇವಲ 1,73 ಲಕ್ಷ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಕಳೆದ 45 ದಿನಗಳಲ್ಲಿ ಅತ್ಯಂತ ಕಡಿಮೆ ಸೋಂಕು ಪ್ರಕರಣ ಇದಾಗಿದೆ. ನಿನ್ನೆಯಿಂದ 1,73,790 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ದೇಶದ ಒಟ್ಟು ಸೋಂಕಿತರ ಸಂಖ್ಯೆ 2,77 ಕೋಟಿ ಗಡಿ ದಾಟಿದೆ.

ಸತತ ಐದು ದಿನಗಳಿಂದ ಕೊರೊನಾ ಪಾಸಿಟಿವಿಟಿ ರೇಟ್ ಶೇ.10ಕ್ಕಿಂತ ಕಡಿಮೆಯಾಗುತ್ತಿದೆ. ಇಂದಿನ ಪಾಸಿಟಿವಿಟಿ ದರ ಶೇ.8.36 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಉಲ್ಲೇಖಿಸಿವೆ. ನಿನ್ನೆಯಿಂದ 3617 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಮಹಾಮಾರಿಗೆ ಬಲಿಯಾದವರ ಒಟ್ಟು ಸಂಖ್ಯೆ 3,22,512ಲಕ್ಕಕ್ಕೆ ಏರಿಕೆಯಾಗಿದೆ.

ನಿನ್ನೆ ಒಂದೇ ದಿನ ದೇಶದ್ಯಾಂತ 20 ಲಕ್ಷಕ್ಕೂ ಹೆಚ್ಚು ಕೊರೊನಾ ತಪಾಸಣೆ ನಡೆಸಲಾಗಿದೆ. ಇದರೊಂದಿಗೆ ದೇಶದ 34 ಕೋಟಿಗೂ ಹೆಚ್ಚು ಮಂದಿಯ ರೋಗ ಪರೀಕ್ಷೆ ನಡೆಸಿದಂತಾಗಿದೆ.

ರಾಷ್ಟ್ರೀಯ ಕೊರೊನಾ ಚೇತರಿಕೆ ಪ್ರಮಾಣ ಶೇ.90.80 ರಷ್ಟಕ್ಕೆ ಏರಿಕೆಯಾಗಿರುವುದರಿಂದ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 22,28,724 ಲಕ್ಷಕ್ಕೆ ಕುಸಿದಿದೆ. 2.77 ಕೋಟಿ ಸೋಂಕಿತರ ಪೈಕಿ ಈಗಾಗಲೇ 2.51 ಕೋಟಿ ಮಂದಿ ಕೊರೊನಾ ಸೋಂಕಿನಿಂದ ಮುಕ್ತರಾಗಿದ್ದಾರೆ.

 ಯಾಸ್ ಚಂಡಮಾರುತ : ಮೂರು ರಾಜ್ಯಗಳಿಗೆ ಸಾವಿರ ಕೋಟಿ ರೂ. ಕೇಂದ್ರ ನೆರವು

ಯಾಸ್ ಚಂಡಮಾರುತ : ಮೂರು ರಾಜ್ಯಗಳಿಗೆ ಸಾವಿರ ಕೋಟಿ ರೂ. ಕೇಂದ್ರ ನೆರವು


ಯಾಸ್ ಚಂಡಮಾರುತ : ಮೂರು ರಾಜ್ಯಗಳಿಗೆ ಸಾವಿರ ಕೋಟಿ ರೂ. ಕೇಂದ್ರ ನೆರವು

ಭುವನೇಶ್ವರ : ಯಾಸ್ ಚಂಡಮಾರುತದಿಂದ ತತ್ತರಿಸಿದ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳಿಗೆ ಒಂದು ಸಾವಿರ ಕೋಟಿ ರೂ. ನೆರವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ.

ಒಡಿಶಾದ ಭದ್ರಕ್ ಮತ್ತು ಬಲಸೋರ್ ಜಿಲ್ಲೆಗಳಲ್ಲಿ ಮತ್ತು ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಪ್ರಧಾನಿ ಈ ನೆರವು ಘೋಷಿಸಿದರು. ಒಡಿಶಾಗೆ ತಕ್ಷಣವೇ 500 ಕೋಟಿ ರೂಪಾಯಿ ಲಭ್ಯವಾಗಲಿದ್ದು, ಉಳಿದ 500 ಕೋಟಿಯನ್ನು ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ಹಂಚಿಕೊಳ್ಳಲಿವೆ. ಆಯಾ ರಾಜ್ಯಗಳಲ್ಲಿ ಆಗಿರುವ ಹಾನಿಯ ವರದಿ ಆಧರಿಸಿ ಈ ನೆರವು ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಕೋಪದಿಂದ ಜೀವ ಕಳೆದುಕೊಂಡವರ ಕುಟುಂಬಕ್ಕೆ 2 ಲಕ್ಷ ರೂ. ಮತ್ತು ತೀವ್ರವಾಗಿ ಗಾಯಗೊಂಡವರಿಗೆ 50 ಸಾವಿರ ರೂ. ನೆರವನ್ನೂ ಪ್ರಧಾನಿ ಘೋಷಿಸಿದರು.

ಒಡಿಶಾ ಸರ್ಕಾರದ ಸರ್ವಸನ್ನದ್ಧತೆ ಮತ್ತು ವಿಕೋಪ ನಿರ್ವಹಣೆಯನ್ನು ಶ್ಲಾಘಿಸಿದ ಮೋದಿ, ಇದರಿಂದಾಗಿ ಕನಿಷ್ಠ ಜೀವಹಾನಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಹಣಕಾಸು ಆಯೋಗ ಸುಮಾರು 30 ಸಾವಿರ ಕೋಟಿ ರೂ. ವಿಕೋಪ ತಡೆಗಾಗಿ ನೀಡಿರುವುದನ್ನು ಮೋದಿ ಶ್ಲಾಘಿಸಿದರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಕಲೈಕುಂಡ ವಾಯುನೆಲೆಯಲ್ಲಿ ಪ್ರಧಾನಿಯನ್ನು ಭೇಟಿ ಮಾಡಿ, ಚಂಡಮಾರುತದಿಂದ ರಾಜ್ಯದಲ್ಲಿ ಆಗಿರುವ ಹಾನಿಯ ಬಗ್ಗೆ ವಿವರ ಸಲ್ಲಿಸಿದರು. ಆದರೆ ಪ್ರಧಾನಿ ಇದ್ದ ಪರಾಮರ್ಶನಾ ಸಭೆಗೆ ಮಮತಾ ಗೈರುಹಾಜರಾಗಿದ್ದರು. ರಾಜ್ಯಪಾಲ ಜಗದೀಪ್ ಧನ್‌ಕರ್, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರು ಭಾಗವಹಿಸಿದ್ದರು.


ಹಗಲಲ್ಲೇ ಕಾರು ಅಡ್ಡಗಟ್ಟಿ ವೈದ್ಯ ದಂಪತಿಯ ಹತ್ಯೆ: 2 ವರ್ಷಗಳ ಹಿಂದಿನ ಅಕ್ರಮ ಸಂಬಂಧದ ಸೇಡು?!​

ಹಗಲಲ್ಲೇ ಕಾರು ಅಡ್ಡಗಟ್ಟಿ ವೈದ್ಯ ದಂಪತಿಯ ಹತ್ಯೆ: 2 ವರ್ಷಗಳ ಹಿಂದಿನ ಅಕ್ರಮ ಸಂಬಂಧದ ಸೇಡು?!​

ಹಗಲಲ್ಲೇ ಕಾರು ಅಡ್ಡಗಟ್ಟಿ ವೈದ್ಯ ದಂಪತಿಯ ಹತ್ಯೆ: 2 ವರ್ಷಗಳ ಹಿಂದಿನ ಅಕ್ರಮ ಸಂಬಂಧದ ಸೇಡು?!​

ಭರತ್​ಪುರ್​: ಹಾಡಹಗಲಲ್ಲೇ ವಾಹನನಿಬಿಡ ರಸ್ತೆಯಲ್ಲಿ ಕಾರೊಂದನ್ನು ಅಡ್ಡಗಟ್ಟಿ ಅದರಲ್ಲಿ ವೈದ್ಯ ದಂಪತಿಯನ್ನು ಬೈಕ್​ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವ ಘಟನೆ ರಾಜಸ್ಥಾನದ ಭರತ್​ಪುರ್​ನಲ್ಲಿ ನಡೆದಿದೆ.

ಸ್ಥಳೀಯರನ್ನು ತೀವ್ರ ಆತಂಕಕ್ಕೆ ದೂಡಿರುವ ಈ ಘಟನೆ ಶುಕ್ರವಾರ ಸಂಜೆ 4.45ರ ಸುಮಾರಿಗೆ ನಡೆದಿದೆ. ವೈದ್ಯ ದಂಪತಿ ತೆರಳುತ್ತಿದ್ದ ಕಾರನ್ನು ಓವರ್​ಟೇಕ್​ ಮಾಡಿ ಅಡ್ಡಗಟ್ಟಿ ಕೊಲೆ ಮಾಡಿ ಪರಾರಿ ಆಗಿದ್ದಾರೆ.

ಕಾರನ್ನು ಅಡ್ಡಗಟ್ಟಿದ ಬಳಿಕ ದುಷ್ಕರ್ಮಿಗಳಿಬ್ಬರು ಕಾರಿನತ್ತ ನಡೆದಿದ್ದಾರೆ. ಅದನ್ನು ನೋಡಿದ ವೈದ್ಯ ಏನೆಂದು ತಿಳಿದುಕೊಳ್ಳಲು ಕಿಟಕಿ ಗ್ಲಾಸ್​ ಅನ್ನು ಕೆಳಗೆ ಇಳಿಸುತ್ತಿದ್ದಂತೆ ಓರ್ವ ಗುಂಡಿನ ಮಳೆಗರೆದಿದ್ದಾನೆ. ಇದಾದ ಬಳಿಕ ಇಬ್ಬರು ಅಲ್ಲಿಂದ ಬೈಕ್​ನಲ್ಲಿ ಪರಾರಿಯಾಗಿದ್ದಾರೆ.

ಈ ಭಯಾನಕ ಘಟನೆಯು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಮೇಲ್ನೋಟಕ್ಕೆ ಕೊಲೆಯ ಹಿಂದೆ ಸೇಡಿನ ಕಾರಣ ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ವೈದ್ಯ ದಂಪತಿ ಯುವತಿಯೊಬ್ಬಳ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವಿದ್ದು, ಕೊಲೆಯಾದ ಯುವತಿ ವೈದ್ಯರೊಂದಿಗೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.

ವೈದ್ಯ ದಂಪತಿಗೆ ಗುಂಡಿನ ದಾಳಿ ಮಾಡಿರುವ ವ್ಯಕ್ತಿಯನ್ನು ಕೊಲೆಯಾದ ಯುವತಿಯ ಸಹೋದರ ಎಂದು ಗುರುತಿಸಲಾಗಿದೆ. ಎರಡು ವರ್ಷಗಳ ಹಿಂದೆ ಯುವತಿಯ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ವೈದ್ಯನ ಪತ್ನಿ ಮತ್ತು ತಾಯಿಯೇ ಆರೋಪಿಗಳಾಗಿದ್ದರು.

 ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ₹ 10 ಕೋಟಿ ದಂಡ ವಿಧಿಸಿದ ರಿಸರ್ವ್‌ ಬ್ಯಾಂಕ್‌

ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ₹ 10 ಕೋಟಿ ದಂಡ ವಿಧಿಸಿದ ರಿಸರ್ವ್‌ ಬ್ಯಾಂಕ್‌


ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ₹ 10 ಕೋಟಿ ದಂಡ ವಿಧಿಸಿದ ರಿಸರ್ವ್‌ ಬ್ಯಾಂಕ್‌

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ₹ 10 ಕೋಟಿ ದಂಡ ವಿಧಿಸಿದೆ. ವಾಹನ ಸಾಲಕ್ಕೆ ಸಂಬಂಧಿಸಿದ ವಿಚಾರದಲ್ಲಿ ಶಾಸನಬದ್ಧವಾಗಿ ಮಾಡಬೇಕಿದ್ದ ಕೆಲವು ಕೆಲಸಗಳಲ್ಲಿ ಆಗಿರುವ ಲೋಪಕ್ಕಾಗಿ ಈ ದಂಡ ವಿಧಿಸಲಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ನ ವಾಹನ ಸಾಲ ವಿಭಾಗದಲ್ಲಿ ಕೆಲವು ಲೋಪಗಳು ಇರುವ ಬಗ್ಗೆ ದೂರು ಬಂದಿತ್ತು. ಅದನ್ನು ಆರ್‌ಬಿಐ ಪರಿಶೀಲಿಸಿತ್ತು. ದಂಡ ವಿಧಿಸುವ ಆದೇಶವನ್ನು ಗುರುವಾರವೇ ಹೊರಡಿಸಲಾಗಿದೆ.

ದೂರಿಗೆ ಪ್ರತಿಕ್ರಿಯೆ ನೀಡುವಂತೆ ಆರ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ನೋಟಿಸ್ ನೀಡಿತ್ತು. ಇದಕ್ಕೆ ಬ್ಯಾಂಕ್‌ ನೀಡಿದ ವಿವರಣೆಯನ್ನು ಪರಿಶೀಲಿಸಿದ ಆರ್‌ಬಿಐ, ದಂಡ ವಿಧಿಸಬೇಕಾದಂತಹ ಲೋಪ ಆಗಿದೆ ಎಂದು ತೀರ್ಮಾನಿಸಿತು ಎಂದು ಪ್ರಕಟಣೆ ತಿಳಿಸಿದೆ.

Thursday, 27 May 2021

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ : ಯುವತಿ ಮೇಲೆ ಗ್ಯಾಂಗ್ ರೇಪ್ ನಡೆಸಿ ವಿಕೃತಿ ಮೆರೆದ ದುರುಳರು

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ : ಯುವತಿ ಮೇಲೆ ಗ್ಯಾಂಗ್ ರೇಪ್ ನಡೆಸಿ ವಿಕೃತಿ ಮೆರೆದ ದುರುಳರು

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ : ಯುವತಿ ಮೇಲೆ ಗ್ಯಾಂಗ್ ರೇಪ್ ನಡೆಸಿ ವಿಕೃತಿ ಮೆರೆದ ದುರುಳರು

ಬೆಂಗಳೂರು : ಯುವತಿ ಮೇಲೆ ಗ್ಯಾಂಗ್ ರೇಪ್ ನಡೆಸಿದ ದುರುಳರು ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ನಡೆಸಿ ಮರ್ಮಾಂಗಕ್ಕೆ ಮದ್ಯದ ಬಾಟಲ್ ತೂರಿದ ಅಮಾನವೀಯ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ್, ಮೊಹಮ್ಮದ್ ಬಾಬಾ ಶೇಕ್, ರಿದಾಯ್ ಬಾಬು ಬಾಂಗ್ಲಾ ಮೂಲದ ಆರೋಪಿಗಳು ಹಾಗೂ ಹಕೀಲ್ ಹೆಸರಿನ ಹೈದರಾಬಾದ್ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮತ್ತಿಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆ ವಿವರ

ರಾಮಮೂರ್ತಿ ನಗರದ ಎನ್ ಐ ಆರ್ ಲೇಔಟ್ ನಲ್ಲಿ ಕಳೆದ 10 ದಿನಗಳ ಹಿಂದೆ ಈ ಘಟನೆ ನಡೆದಿದ್ದು. ದುರುಳರು ಚಿತ್ರೀಕರಿಸಿದ ವಿಡಿಯೋ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಆವಲಹಳ್ಳು ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ ನಾಲ್ವರು ಯುವಕರು ಈ ಕೃತ್ಯ ಎಸಗಿದ್ದಾರೆ. ಸದ್ಯ, ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನೂ ಈ ವಿಡಿಯೋ ಕೆಲವು ದಿನಗಳ ಹಿಂದೆ ಬಾಂಗ್ಲಾದೇಶದಲ್ಲಿ ವೈರಲ್ ಆಗಿದ್ದು, ಅಲ್ಲಿ ಭಾರೀ ಚರ್ಚೆಗೊಳಗಾದ ನಂತರ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ. ಬಳಿಕ ಎಲ್ಲ ವಿಡಿಯೋ ಮೂಲವನ್ನು ಜಾಲಾಡಿದಾಗ ವಿಡಿಯೋ ಅಲ್ ಲೋಡ್ ಆಗಿರುವುದು ಇಂಡಿಯಾದಿಂದ ಎಂಬ ಮಾಹಿತಿ ಗೊತ್ತಾಗಿದೆ. ಬಳಿಕ ಅವರಿಂದ ಅಸ್ಸಾಂ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿದ್ದು, ಅಸ್ಸಾಂ ಪೊಲೀಸರು ಟವರ್ ಡಂಪ್ ಪತ್ತೆ ಮಾಡಿದ ಬೆಂಗಳೂರು ಎಂಬುದು ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಳಿಕ ಅಸ್ಸಾಂ ಪೊಲೀಸರು ಬೆಂಗಳೂರು ಕಮೀಷನರ್ ಕಮಲ್ ಪಂತ್ ಗೆ ಈ ಕುರಿತು ಮಾಹಿತಿ ನೀಡಿದ್ದು, ಬಳಿಕ ಪ್ರಕರಣವನ್ನು ಸಂದೀಪ್ ಪಾಟೀಲ್ ಗೆ ವರ್ಗಾವಣೆ ಮಾಡಿದ್ದಾರೆ. ಕೂಡಲೇ ಅಲರ್ಟ್ ಆದ ಸಂದೀಪ್ ಪಾಟೀಲ್ ಪಡೆ ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ. ಒಟ್ಟಿನಲ್ಲಿ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ ಈ ಘಟನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.

 ರಾಜ್ಯದಲ್ಲಿಂದು ಕಿಲ್ಲರ್ ಕೊರೋನಾಗೆ 476 ಮಂದಿ ಬಲಿ, 24214 ಹೊಸ ಕೇಸ್..!

ರಾಜ್ಯದಲ್ಲಿಂದು ಕಿಲ್ಲರ್ ಕೊರೋನಾಗೆ 476 ಮಂದಿ ಬಲಿ, 24214 ಹೊಸ ಕೇಸ್..!


ರಾಜ್ಯದಲ್ಲಿಂದು ಕಿಲ್ಲರ್ ಕೊರೋನಾಗೆ 476 ಮಂದಿ ಬಲಿ, 24214 ಹೊಸ ಕೇಸ್..!

ಬೆಂಗಳೂರು : ರಾಜ್ಯದಲ್ಲಿ ಕೊರೋನಾ 2ನೇ ಅಲೆ ಆರ್ಭಟ ಮುಂದುವರೆದಿದ್ದು ಇಂದು ಕಿಲ್ಲರ್ ಕೊರೋನಾ ಮರಣಮೃದಂಗ ಬಾರಿಸಿದೆ. ರಾಜ್ಯದಾದ್ಯಂತ ಕಳೆದ 24 ಗಂಟೆಯಲ್ಲಿ 476 ಪ್ರಾಣ ಕಳೆದುಕೊಂಡಿದ್ದಾರೆ, ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 24214 ಹೊಸ ಕೇಸ್ ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2523998 ಕ್ಕೇರಿಕೆಯಾದರೆ, ಒಟ್ಟು ಸಾವಿನ ಸಂಖ್ಯೆ 27405ಕ್ಕೆ ಏರಿಕೆಯಾಗಿದೆ.

ಇಂದು ಬೆಂಗಳೂರಿನಲ್ಲಿ 5949 ಜನರಿಗೆ ಕೊರೋನಾ ತಗುಲಿದೆ, ನಗರದಲ್ಲಿ ಇಂದು 273 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಮಹಾನಗಿರಿಯೊಂದರಲ್ಲೇ ಈವರೆಗೆ 1143878 ಮಂದಿಗೆ ಕೊರೋನಾ ತಗುಲಿದೆ. ಬೆಂಗಳೂರಲ್ಲಿ ಈವರೆಗೆ ಒಟ್ಟು 12421 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ.

ಇಂದು ರಾಜ್ಯಾದ್ಯಂತ 31459 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದು, ಈವರೆಗೆ ಒಟ್ಟು 2094369 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ.

 ಅಪಾಯಕಾರಿ ರಾಸಾಯನಿಕ ಹೊಂದಿದ್ದ ಹಡಗು ಪಾಕಿಸ್ತಾನದಲ್ಲಿ ಲಂಗರು: ತನಿಖೆಗೆ ಆದೇಶ

ಅಪಾಯಕಾರಿ ರಾಸಾಯನಿಕ ಹೊಂದಿದ್ದ ಹಡಗು ಪಾಕಿಸ್ತಾನದಲ್ಲಿ ಲಂಗರು: ತನಿಖೆಗೆ ಆದೇಶ


ಅಪಾಯಕಾರಿ ರಾಸಾಯನಿಕ ಹೊಂದಿದ್ದ ಹಡಗು ಪಾಕಿಸ್ತಾನದಲ್ಲಿ ಲಂಗರು: ತನಿಖೆಗೆ ಆದೇಶ

ಕರಾಚಿ: ಅಪಾಯಕಾರಿ ರಾಸಾಯನಿಕ ಹೊಂದಿದೆ ಎಂದು ಶಂಕಿಸಲಾದ ಹಡಗೊಂದನ್ನು ಇಂಟರ್‌ಪೋಲ್‌ನ ಎಚ್ಚರಿಕೆಯ ನಡುವೆಯೂ ಪಾಕಿಸ್ತಾನದ ಗಡಾನಿ ಹಡಗುಕಟ್ಟೆಗೆ ತರಲಾಗಿದೆ. ಹಡಗಿಗೆ ಲಂಗರು ಹಾಕಲು ಅನುಮತಿಸಿದ್ದರ ವಿಚಾರವಾಗಿ ಬಲೂಚಿಸ್ತಾನ್‌ ಸರ್ಕಾರವು ಸದ್ಯ ತನಿಖೆ ಆರಂಭಿಸಿದೆ.

'ಪಾಕಿಸ್ತಾನದ ಪ್ರಜೆಯೊಬ್ಬರು ಈ ಹಡಗನ್ನು ಮುಂಬೈನಲ್ಲಿರುವ ತಮ್ಮ ಏಜೆಂಟರ ಮೂಲಕ ಖರೀದಿಸಿದ್ದಾರೆ. ಗಡಾನಿ ಹಡಗುಕಟ್ಟೆಯ ಅಂಗಳಕ್ಕೆ ಅದನ್ನು ತಂದಿದ್ದಾರೆ,' ಎಂದು ಬಲೂಚಿಸ್ತಾನ್ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಹಡಗಿನಲ್ಲಿ ಅಪಾಯಕಾರಿ ರಾಸಾಯನಿಕಗಳು ಮತ್ತು ಸಾಮಗ್ರಿಗಳಿವೆ ಎಂದು ಇಂಟರ್ಪೋಲ್ ಎಚ್ಚರಿಸಿತ್ತು. ಗಡಾನಿ ಹಡಗುಕಟ್ಟೆಯಲ್ಲಿ ಲಂಗರು ಹಾಕಲು ಹೇಗೆ ಅನುಮತಿ ನೀಡಲಾಯಿತು ಎಂಬುದರ ಬಗ್ಗೆ ತನಿಖೆ ಆರಂಭಿಸಲಾಗಿದೆ,' ಎಂದು ಬಲೂಚಿಸ್ತಾನ ಸರ್ಕಾರದ ಪರಿಸರ ವಿಭಾಗದ ಉಪನಿರ್ದೇಶಕ ಇಮ್ರಾನ್ ಸಯೀದ್ ಕಾಕರ್ ತಿಳಿಸಿದ್ದಾರೆ.

'ಹಡಗನ್ನು ಮೊದಲು ಬಾಂಗ್ಲಾದೇಶಕ್ಕೆ, ನಂತರ ಭಾರತಕ್ಕೆ ತರಲಾಗಿತ್ತು. ಅಪಾಯಕಾರಿ ರಾಸಾಯನಿಕಗಳಿದ್ದ ಕಾರಣಕ್ಕೆ ಅದನ್ನು ಒಡೆಯಲು ಅಲ್ಲಿನ ಸರ್ಕಾರಗಳು ಅನುಮತಿ ನೀಡಿರಲಿಲ್ಲ. ಈಗ ಇಲ್ಲಿಗೆ ತರಲಾಗಿದೆ,' ಎಂದು ಅವರು ಮಾಹಿತಿ ನೀಡಿದ್ದಾರೆ.

'ಹಡಗಿನಲ್ಲಿ ಮಾರಕ ರಾಸಾಯನಿಕಗಳಿವೆಯೇ ಎಂಬುದನ್ನು ತಿಳಿದುಕೊಳ್ಳಲು ಅದರಲ್ಲಿರುವ ವಸ್ತುಗಳ ಮಾದರಿಯನ್ನು ಮೂರು ಪ್ರಯೋಗಶಾಲೆಗಳಿಗೆ ರವಾನಿಸಲಾಗಿದೆ. ಆದರೆ, ಈ ಹಡುಗು ಎಲ್ಲ ಎಚ್ಚರಿಕೆಗಳನ್ನು ಮೀರಿ ಇಲ್ಲಿಗೆ ಹೇಗೆ ಬಂತು ಎಂಬುದೇ ಅಚ್ಚರಿಯ ವಿಷಯ,' ಎಂದು ಕಾಕರ್‌ ಹೇಳಿದ್ದಾರೆ.

'ಈ ಹಡಗಿನಲ್ಲಿ ಪಾದರಸ ಅಗತ್ಯಕ್ಕಿಂತಲೂ ಹೆಚ್ಚಿಗೆ ಇದೆ. ಹಡಗಿನ ಮಾಲೀಕನಿಗೆ ಇದನ್ನು ಇಲ್ಲಿ ಒಡೆಯಲು ಅವಕಾಶ ನೀಡಿಲ್ಲ. ಒಂದು ವೇಳೆ ಹಡಗಿನಲ್ಲಿ ಪಾದರಸ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ವರದಿಗಳು ಹೇಳಿದರೆ ಕ್ರಮ ಕೈಗೊಳ್ಳಲಾಗುತ್ತದೆ,' ಎಂದು ಅವರು ಮಾಹಿತಿ ನೀಡಿದರು.


 ಮಂಗಳೂರಿನಲ್ಲಿ ಸಮುದ್ರದ ಮಧ್ಯೆ ಸಿಲುಕಿದ್ದ ದೋಣಿ ; ಹತ್ತು ಮೀನುಗಾರರ ರಕ್ಷಣೆ

ಮಂಗಳೂರಿನಲ್ಲಿ ಸಮುದ್ರದ ಮಧ್ಯೆ ಸಿಲುಕಿದ್ದ ದೋಣಿ ; ಹತ್ತು ಮೀನುಗಾರರ ರಕ್ಷಣೆ

ಮಂಗಳೂರಿನಲ್ಲಿ ಸಮುದ್ರದ ಮಧ್ಯೆ ಸಿಲುಕಿದ್ದ ದೋಣಿ ; ಹತ್ತು ಮೀನುಗಾರರ ರಕ್ಷಣೆ

ಮಂಗಳೂರು:ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ನ್ಯೂ ಮಂಗಳೂರು ಬಂದರಿನ ಕರಾವಳಿಯಿಂದ 20 ನಾಟಿಕಲ್ ಮೈಲಿ ದೂರದಲ್ಲಿರುವ ಸಮುದ್ರದಲ್ಲಿ ಸಿಲುಕಿದ್ದ ದೋಣಿಯಿಂದ 10 ಮೀನುಗಾರರನ್ನು ರಕ್ಷಿಸಿದೆ ಎಂದು ಕೋಸ್ಟ್ ಗಾರ್ಡ್ ಪತ್ರಿಕಾ ಪ್ರಕಟಣೆ ಗುರುವಾರ ತಿಳಿಸಿದೆ.

ಮೀನುಗಾರರನ್ನು ತಮಿಳುನಾಡಿನ ಏಳು ಮತ್ತು ಕೇರಳದ ಮೂವರನ್ನು ಸ್ಟೆಫೆನ್ (45), ನೆಪೋಲಿಯನ್ (60), ಪ್ರಭು (38), ಸಾಜಿ (41), ರಾಜಿ (38), ಸಾಗರಾಜಿ (50), ಜಾರ್ಜ್ ಬುಷ್ (50) ಎಂದು ಗುರುತಿಸಲಾಗಿದೆ. , ಕ್ರಿಸ್ಪಿನ್ (38), ಸಜನ್ (26) ಮತ್ತು ಡೊನಿಯೊ (38). 'ಲಾರ್ಡ್ ಆಫ್ ದಿ ಓಷನ್' ಹೆಸರಿನ ಈ ದೋಣಿ ಎಂಜಿನ್ ವೈಫಲ್ಯದಿಂದಾಗಿ ಸಮುದ್ರದಲ್ಲಿ ಅಲೆಯುತ್ತಿತ್ತು.

ದೋಣಿಯಿಂದ ತೊಂದರೆಯ ಸಂದೇಶವನ್ನು ವಿಎಚ್‌ಎಫ್ ಮೂಲಕ ಐಸಿಜಿಯ ಕಡಲ ಪಾರುಗಾಣಿಕಾ ಉಪ ಸಮನ್ವಯ ಕೇಂದ್ರಕ್ಕೆ (ಎಂಆರ್‌ಎಸ್‌ಸಿ) ರವಾನಿಸಲಾಗಿದೆ.ಕೋಸ್ಟ್ ಗಾರ್ಡ್ ತಕ್ಷಣದ ಸಹಾಯಕ್ಕಾಗಿ ಸಿ -448 ಅನ್ನು ಗಸ್ತು ತಿರುಗಿಸಿತು ಮತ್ತು ಐಸಿಜಿಎಸ್ ರಾಜ್‌ದೂತ್ ಅವರು ಮಂಗಳೂರು ಬಂದರಿನಿಂದ ರಕ್ಷಣಾ ಕಾರ್ಯಾಚರಣೆಗಾಗಿ ಪ್ರಯಾಣ ಬೆಳೆಸಿದರು.ಯಾಂತ್ರಿಕೃತ ಮೀನುಗಾರಿಕೆ ದೋಣಿ ಅದೃಷ್ಟವಶಾತ್ ಪೊಕ್ಬಂದರ್ನಲ್ಲಿ ಮೇ 14 ರಂದು ಟೌಕ್ಟೇ ಚಂಡಮಾರುತದಿಂದಾಗಿ ಆಶ್ರಯ ಪಡೆದಿದೆ.


ಮೇ 19 ರಂದು ದೋಣಿ ಪೋರ್ಬಂದರ್‌ನಿಂದ ಪ್ರಯಾಣ ಬೆಳೆಸಿತು ಮತ್ತು ಮಾರ್ಗದಲ್ಲಿ ಸಮುದ್ರಗಳನ್ನು ಎದುರಿಸುತ್ತಿರುವಾಗ, ಅದು ಎಂಜಿನ್ ವೈಫಲ್ಯವನ್ನು ಎದುರಿಸಿತು ಮತ್ತು ಮಂಗಳೂರು ಬಂದರಿನಿಂದ ಮುಂದೂಡುವಿಕೆಯನ್ನು ಕಳೆದುಕೊಂಡಿತು.ಎಂಜಿನ್‌ಗಳು ಪ್ರಾರಂಭಿಸಲು ಸಾಧ್ಯವಾಗಲಿಲ್ಲ ಮತ್ತು ಹೊಸ ಮಂಗಳೂರು ಬಂದರಿನಲ್ಲಿ ಹೆಚ್ಚಿನ ನೆರವು ಅಗತ್ಯವಾಗಿತ್ತು.ಏತನ್ಮಧ್ಯೆ, ಐಸಿಜಿಎಸ್ ರಾಜ್‌ದೂತ್ ಸ್ಥಳಕ್ಕೆ ಬರುವವರೆಗೂ ಬೆಂಬಲ ಹಡಗು ಎಂಎಸ್‌ವಿ ಅಲ್-ಬದ್ರಿಯಾ ಎಂಎನ್‌ಜಿ -471 ಅನ್ನು ಕೋಸ್ಟ್ ಗಾರ್ಡ್ ಕೋರಿದೆ.ಐಸಿಜಿಎಸ್ ರಾಜ್‌ದೂತ್ ಅವರು ಇಲ್ಲಿರುವ ಹಳೆಯ ಬಂದರು ಬಂದರಿನವರೆಗೆ ದೋಣಿಯನ್ನು ಸುರಕ್ಷತೆಗಾಗಿ ಮೀನುಗಾರಿಕಾ ಇಲಾಖೆಗೆ ಹಸ್ತಾಂತರಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ


ಅಮೆಜಾನ್ ಸಿಇಒ ಹುದ್ದೆಯಿಂದ ಕೆಳಕ್ಕಿಳಿಯಲಿದ್ದಾರೆ ಜೆಫ್ ಬಿಜೋಸ್.  ಮುಂದಿನ ಸಿಇಒ ಯಾರು ?

ಅಮೆಜಾನ್ ಸಿಇಒ ಹುದ್ದೆಯಿಂದ ಕೆಳಕ್ಕಿಳಿಯಲಿದ್ದಾರೆ ಜೆಫ್ ಬಿಜೋಸ್. ಮುಂದಿನ ಸಿಇಒ ಯಾರು ?

ಅಮೆಜಾನ್ ಸಿಇಒ ಹುದ್ದೆಯಿಂದ ಕೆಳಕ್ಕಿಳಿಯಲಿದ್ದಾರೆ ಜೆಫ್ ಬಿಜೋಸ್. 
ಮುಂದಿನ ಸಿಇಒ ಯಾರು ?

ನ್ಯೂಸ್ ಡೆಸ್ಕ್ : ಜಗತ್ತಿನ ಬಹುದೊಡ್ಡ ಇ-ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿಯ ಸಿಇಒ ಹುದ್ದೆಯಿಂದ ಜೆಫ್ ಬೆಜೋಸ್ ಕೆಳಕ್ಕೆ ಇಳಿಯಲಿದ್ದಾರೆ. ಜುಲೈ ತಿಂಗಳಿನಲ್ಲಿ ಬೆಜೋಸ್ ತಮ್ಮ ಅಧಿಕಾರವನ್ನು ತಮ್ಮ ಹಸ್ತಾಂತರ ಮಾಡಲಿದ್ದಾರೆ.

ಜುಲೈ 5 ರಂದು ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಅಮೆಜಾನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆಫ್ ಬೆಜೋಸ್ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ. ಆಂಡಿ ಜಾಸ್ಸಿ ಅವರಿಗೆ ಬೆಜೋಸ್ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.

ವಾಸ್ತವಿಕವಾಗಿ ನಡೆಯುತ್ತಿರುವ ಅಮೆಜಾನ್‌ನ ವಾರ್ಷಿಕ ಷೇರುದಾರರ ಸಭೆಯಲ್ಲಿ ಬೆಜೋಸ್ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ನಾವು ಆ ದಿನಾಂಕವನ್ನು ಆರಿಸಿಕೊಂಡಿದ್ದೇವೆ. ಏಕೆಂದರೆ ಅದು ನನಗೆ ಭಾವನಾತ್ಮಕವಾಗಿದೆ. 1994 ರಲ್ಲಿ ಅಮೆಜಾನ್ ಅನ್ನು ಹುಟ್ಟು ಹಾಕಿದ ದಿನ, ನಿಖರವಾಗಿ 27 ವರ್ಷಗಳ ಹಿಂದೆ ಎಂದು ಬೆಜೋಸ್ ಸಭೆಯಲ್ಲಿ ಹೇಳಿದರು.

30 ವರ್ಷಗಳ ಕಾಲ ಕಂಪನಿಗೆ ಸೇವೆ ಸಲ್ಲಿಸಿದ ನಂತರ ಫೆಬ್ರವರಿಯಲ್ಲಿ ಜೆಫ್ ಬೆಜೋಸ್ ಅಮೆಜೋನ್ ಉನ್ನತ ಹುದ್ದೆಯಿಂದ ಕೆಳಗಿಳಿಯುವುದಾಗಿ ಇ-ಕಾಮರ್ಸ್ ದೈತ್ಯ ಘೋಷಿಸಿತ್ತು. ಅಮೆಜಾನ್ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಾಹಕ ಅಧ್ಯಕ್ಷರ ಪಾತ್ರವನ್ನು ಜೆಫ್ ಬೆಜೋಸ್ ವಹಿಸಿಕೊಳ್ಳಲಿದ್ದು, ಅವರು ತಮ್ಮ ಇತರ ಯೋಜನೆಗಳತ್ತ ಗಮನ ಹರಿಸಲು ಚಿಂತನೆ ನಡೆಸಿದ್ದಾರೆ.


 

 ಪೆಟ್ರೋಲ್‌, ಡೀಸೆಲ್‌ ದರ ಮತ್ತೆ ಏರಿಕೆ

ಪೆಟ್ರೋಲ್‌, ಡೀಸೆಲ್‌ ದರ ಮತ್ತೆ ಏರಿಕೆ


ಪೆಟ್ರೋಲ್‌, ಡೀಸೆಲ್‌ ದರ ಮತ್ತೆ ಏರಿಕೆ

ನವದೆಹಲಿ (ಪಿಟಿಐ): ಈ ತಿಂಗಳಲ್ಲಿ 14 ಬಾರಿ ತೈಲ ಬೆಲೆ ಏರಿಕೆಯಾಗಿದ್ದು, ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ₹100 ಗಡಿ ದಾಟಿದೆ. ಸದ್ಯ ಠಾಣೆಯಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ₹100.06 ಮತ್ತು ಡೀಸೆಲ್‌ ದರ ಲೀಟರ್‌ಗೆ ₹ 91.99ಕ್ಕೆ ಏರಿಕೆಯಾಗಿದೆ.

ಗುರುವಾರ ಪೆಟ್ರೋಲ್ ಬೆಲೆ ಲೀಟರ್‌ಗೆ 24 ಪೈಸೆ ಮತ್ತು ಡೀಸೆಲ್‌ ಬೆಲೆ ಲೀಟರ್‌ಗೆ 29 ಪೈಸೆ ಹೆಚ್ಚಾಗಿದೆ.

ಮುಂಬೈನಲ್ಲೂ ಇಂಧನ ದರ ಹೆಚ್ಚಾಗಿದ್ದು, ನೂರರ ಗಡಿಯ ಹತ್ತಿರದಲ್ಲಿದೆ. ಮುಂಬೈನಲ್ಲಿ ಪೆಟ್ರೋಲ್ ಲೀಟರ್‌ಗೆ ₹99.94 ಹಾಗೂ ಡೀಸೆಲ್‌ ದರ ಲೀಟರ್‌ಗೆ ₹91.87ಕ್ಕೆ ತಲುಪಿದೆ.

ಮೇ 4ರಿಂದ ಇಲ್ಲಿಯವರೆಗೂ ದೇಶದಲ್ಲಿ ಇಂಧನ ದರ 14 ಬಾರಿ ಏರಿಕೆ ಕಂಡಿದೆ. ಇದರಿಂದ ದೇಶದಾದ್ಯಂತ ಇಂಧನ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ಈಗಾಗಲೇ ನೂರರ ಗಡಿ ದಾಟಿದ್ದ ರಾಜಸ್ಥಾನದಲ್ಲಿ ಇಂಧನ ಇನ್ನಷ್ಟು ದುಬಾರಿಯಾಗಿದೆ. ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ₹104.67 ಮತ್ತು ಡೀಸೆಲ್‌ ₹97.49ಕ್ಕೆ ತಲುಪಿದೆ.


 ಸುಲ್ತಾನುಲ್ ಉಲಮಾರ ನೇತೃತ್ವದಲ್ಲಿ ಕೋವಿಡ್ ಆಸ್ಪತ್ರೆ ಸಜ್ಜು

ಸುಲ್ತಾನುಲ್ ಉಲಮಾರ ನೇತೃತ್ವದಲ್ಲಿ ಕೋವಿಡ್ ಆಸ್ಪತ್ರೆ ಸಜ್ಜು


ಸುಲ್ತಾನುಲ್ ಉಲಮಾರ ನೇತೃತ್ವದಲ್ಲಿ ಕೋವಿಡ್ ಆಸ್ಪತ್ರೆ ಸಜ್ಜು

ದಿನದಿಂದ ದಿನಕ್ಕೆ ಕೊರೊನಾ ಅರ್ಭಟ ಹೆಚ್ಚಾಗುತ್ತಿದೆ.ಬೆಡ್ ಇಲ್ಲ, ಆಕ್ಸಿಜನ್ ಇಲ್ಲ, ಸೂಕ್ತ ಸೌಲಭ್ಯಗಳ ಕೊರತೆ..ಸರಕಾರಕ್ಕೆ ಏನು ಮಾಡಲು ತೋಚುತ್ತಿಲ್ಲ.ಬಡವರ ಗೋಳು ಕೇಳುವವರಿಲ್ಲ.

ಇದೆಲ್ಲವನ್ನೂ ಗಮನಿಸಿದ ಕೇರಳದ SYS – SSF ಸಾಂತ್ವನ ಕೇಂದ್ರ ಕೊರೊನಾ ಆಸ್ಪತ್ರೆ ಸಜ್ಜುಗೊಳಿಸಿದೆ.ಕೋವಿಡ್ ವಿರುದ್ದ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿರುವ,ಲಾಕ್ ಡೌನ್‌ನಲ್ಲಿ ಸಂಕಷ್ಟದ ಪೀಡಿತ ಜನರಿಗೆ ಭರವಸೆ ಮೂಡಿಸಿದ ಕೇರಳದ SYS – SSF ಸಾಂತ್ವನ ಕೇಂದ್ರವು ಈ ಮಹತ್ತರ ಯೋಜನೆಗೆ ಕೈ ಹಾಕಿದೆ.

ಕಳೆದ ಬಾರಿಯಂತೆ ಈ ಬಾರಿ ಕೂಡಾ SYS – SSF ಸಾಂತ್ವನ ವಿಂಗ್ ರೋಗಿಗಳಿಗೆ ಅಗತ್ಯ ಔಷಧಿ, ಅಂಬುಲೆನ್ಸ್, ಆಕ್ಸಿಜನ್,ಲಾಕ್ ಡೌನ್‌ನಿಂದ ಸಂಕಷ್ಟಕ್ಕೀಡಾದವರ ಸಂರಕ್ಷಣೆಗೆ ಆಹಾರ, ಔಷಧಿ ವಿತರಿಸುವ ಹಾಗೂ ಲಸಿಕೆಗಾಗಿ ಲಕ್ಷಾಂತರ ರೂಪಾಯಿಯನ್ನು ದೇಣಿಗೆ ನೀಡುವ ಮೂಲಕ ಗಮನ ಸೆಳೆದಿತ್ತು.ಇದೀಗ ಆಸ್ಪತ್ರೆ ಸಜ್ಜೀಕರಿಸುವ ಮೂಲಕ ಬಡ ರೋಗಿಗಳ ಹೊಸ ಭರವಸೆ ಮೂಡಿಸಿದೆ.

ಇತ್ತೀಚಿಗೆ ಸುಲ್ತಾನುಲ್ ಉಲಮಾರ ನೇತೃತ್ವದಲ್ಲಿ ನಡೆದ ಕಲ್ಲಿಕೋಟೆ ಜಿಲ್ಲಾ ಸುನ್ನೀ ಪರಿವಾರ ನಾಯಕರ ಸಭೆಯಲ್ಲಿ ಈ ದಿಟ್ಟ ನಿರ್ಧಾರ ಕೈಗೊಳ್ಳಲಾಯಿತು.

ಮೊದಲ ಹಂತದಲ್ಲಿ ಉದ್ಯೋಗ ನಷ್ಟ, ವ್ಯಾಪಾರ ಮಂದಗತಿಯಿಂದ ಕಂಗೆಟ್ಟ ಬಡ, ನಿರ್ಗತಿಕ ಕುಟುಂಬದ ಸುಮಾರು 28 ಕೋವಿಡ್ ರೋಗಿಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುವುದು.ಪ್ರಥಮ ಘಟ್ಟದಲ್ಲಿ 72 ಬೆಡ್‌ಗಳನ್ನು ಆಕ್ಸಿಜನ್ ಸಹಿತ ಆಸ್ಪತ್ರೆಯಲ್ಲಿ ಸಜ್ಜೀಕರಿಸಲಾಗಿದೆ.ಮರ್ಕಝ್ ಪೂನೂರ್ ಆಸ್ಪತ್ರೆ ಕಟ್ಟಡದಲ್ಲಿ ಈ ಸಾಂತ್ವನ ಕೋವಿಡ್ ಆಸ್ಪತ್ರೆ ಕಾರ್ಯಚರಿಸಲಿದೆ.

ಮೇ 24 ಸೋಮವಾರ ಸಂಜೆ ಕೇರಳ ಲೋಕೋಪಯೋಗಿ ಸಚಿವ ‌‌‌‌‌ಅಡ್ವ ಪಿ ಎ ಮುಹಮ್ಮದ್ ರಿಯಾಝ್ ಆಸ್ಪತ್ರೆ ಉದ್ಘಾಟಿಸಲಿದ್ದು,ಇಂಡಿಯನ್ ಗ್ರಾಂಡ್ ಮುಫ್ತಿ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ರವರು ಅಧ್ಯಕ್ಷತೆ ವಹಿಸಲಿದ್ದಾರೆ.SYS ರಾಜ್ಯ ಕಾರ್ಯದರ್ಶಿ ಡಾ ಎಂ ಎ ಹಕೀಂ ಅಝ್ಹರಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.ಬಾಲುಶ್ಶೇರಿ ಶಾಸಕ ಸಚಿನ್ ದೇವ್, ಕಲ್ಲಿಕೋಟೆ ಸರಕಾರಿ ಮೆಡಿಕಲ್ ಕಾಲೇಜು ಮುಖ್ಯಸ್ಥ ಎ ಪಿ ಶಶಿ ಮುಂತಾದವರು ಭಾಗವಹಿಸಲಿದ್ದಾರೆ.

 2023ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ, ಯಾವ ಕ್ಷೇತ್ರದಲ್ಲಿ ಎಂಬುದನ್ನು ನಿರ್ಧರಿಸಿಲ್ಲ: ಸಿದ್ದರಾಮಯ್ಯ

2023ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ, ಯಾವ ಕ್ಷೇತ್ರದಲ್ಲಿ ಎಂಬುದನ್ನು ನಿರ್ಧರಿಸಿಲ್ಲ: ಸಿದ್ದರಾಮಯ್ಯ


 2023ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ, ಯಾವ ಕ್ಷೇತ್ರದಲ್ಲಿ ಎಂಬುದನ್ನು ನಿರ್ಧರಿಸಿಲ್ಲ: ಸಿದ್ದರಾಮಯ್ಯ

ಬೆಂಗಳೂರು: 2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ, ಆದರೆ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬುದು ಇನ್ನೂ ನಿರ್ಧರಿಸಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕದ ಬಾದಾಮಿಯ ಶಾಸಕರಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ತಮ್ಮ ತವರು ಜಿಲ್ಲೆ ಮೈಸೂರು ಅಥವಾ ಬೆಂಗಳೂರಿನಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿದ್ದರಾಮಯ್ಯ ನಿಷ್ಠ ಶಾಸಕ ಜಮೀರ್ ಅಹಮದ್ ತಮ್ಮ ಕ್ಷೇತ್ರವನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಿಗೆ ಬಿಟ್ಟುಕೊಡಲು ಮುಂದಾಗಿದ್ದಾರೆ.

ಸದ್ಯ ನಾನು ಬಾದಾಮಿ ಕ್ಷೇತ್ರದ ಶಾಸಕ. ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಚಾಮರಾಜಪೇಟೆಯಿಂದ ಸ್ಪರ್ಧಿಸಲಿದ್ದೇನೆ ಎಂದು ನಾನೂ ಎಲ್ಲಿಯೂ ಹೇಳಿಲ್ಲ. ಆದರೆ, ಇಲ್ಲಿಂದ (ಚಾಮರಾಜಪೇಟೆ) ಸ್ಪರ್ಧಿಸುವಂತೆ ಕ್ಷೇತ್ರದ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಹೇಳುತ್ತಿದ್ದಾರೆ' ಎಂದರು.

ಚಾಮರಾಜಪೇಟೆಯಿಂದ ಸ್ಪರ್ಧಿಸಬಹುದೇ ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರಿಸುತ್ತಿದ್ದಾಗ, ಮಧ್ಯಪ್ರವೇಶಿಸಿದ ಜಮೀರ್ ಅಹ್ಮದ್ ಖಾನ್, ಅವರು ಸ್ಪರ್ಧಿಸಬೇಕು ಎಂಬುದು ನನ್ನ ಆಸೆ ಎಂದು ಹೇಳಿದರು. ಚಾಮರಾಜಪೇಟೆ ಕ್ಷೇತ್ರವು ಅಲ್ಪಸಂಖ್ಯಾತ ಸಮುದಾಯದ ಮತಗಳು ಅಧಿಕ ಸಂಖ್ಯೆಯಲ್ಲಿದೆ.

ಮೇ 2018 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸೋಲಿನ ರುಚಿ ಕಂಡಿದ್ದ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಸಿದ್ದರಾಮಯ್ಯ ಈಗಾಗಲೇ ಘೋಷಿಸಿದ್ದಾರೆ.

ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿ (ಎಸ್) ನ ಜಿ ಟಿ ದೇವೇಗೌಡರ ವಿರುದ್ಧ 36,042 ಮತಗಳ ಅಂತರದಿಂದ ಸೋತಿದ್ದರು.


Monday, 24 May 2021

 ಸೌದಿ ಅರೇಬಿಯಾ: ಇಕಾಮಾ, ವೀಸಾ, ವಿಸಿಟ್‌ ವೀಸಾಗಳ ಮಾನ್ಯತೆ ಮುಂದುವರಿಕೆ

ಸೌದಿ ಅರೇಬಿಯಾ: ಇಕಾಮಾ, ವೀಸಾ, ವಿಸಿಟ್‌ ವೀಸಾಗಳ ಮಾನ್ಯತೆ ಮುಂದುವರಿಕೆ


ಸೌದಿ ಅರೇಬಿಯಾ: ಇಕಾಮಾ, ವೀಸಾ, ವಿಸಿಟ್‌ ವೀಸಾಗಳ ಮಾನ್ಯತೆ ಮುಂದುವರಿಕೆ

ರಿಯಾದ್:‌ ಇಕಾಮಾಗಳು (ವಾಸ್ತವ್ಯ ಪರವಾನಿಗೆ), ನಿರ್ಗಮನ ಮತ್ತು ಮರುಪ್ರವೇಶ ವಿಸಾಗಳು ಹಾಗೂ ಸದ್ಯ ಸೌದಿ ಅರೇಬಿಯಾದಲ್ಲಿ ಪ್ರಯಾಣ ನಿಷೇಧ ಭೀತಿಯನ್ನು ಎದುರಿಸುತ್ತಿರುವ ವಿಸಿಟ್‌ ವೀಸಾ ಹೊಂದಿರುವವರ ಮಾನ್ಯತೆಗಳನ್ನು 2021ರ ಜೂನ್‌ 2ರವರೆಗೆ ಉಚಿತವಾಗಿ ವಿಸ್ತರಣೆ ನಡೆಸಲಾಗುವುದು ಎಂದು ಸೌದಿ ರಾಜ ಮನೆತನ ಹೇಳಿಕೆ ನೀಡಿದ್ದಾಗಿ ssaudigazette ವರದಿ ಮಾಡಿದೆ.

ಕಿಂಗ್‌ ಸಲ್ಮಾನ್‌ ರವರ ನಿರ್ದೇಶನದ ಮೇರೆಗೆ ಹಣಕಾಸು ಸಚಿವಾಲಯ ನೀಡಿದ್ದ ಇಕಾಮಾ ಮತ್ತು ವೀಸಾಗಳ ಮಾನ್ಯತೆಯ ಅವಧಿಯನ್ನು ಉಚಿತವಾಗಿ ವಿಸ್ತರಿಸುವುದು. ಇದು ಇಲ್ಲಿನ ನಾಗರಿಕರು ಮತ್ತು ನಿವಾಸಿಗಳ ಸುರಕ್ಷತೆಯನ್ನು ಖಚಿತಪಡಿಸುವ ಸಲುವಾಗಿ ಹಾಗೂ ಅವರ ಮೇಲಿನ ಆರ್ಥಿಕ ಪರಿಣಾಮಗಳನ್ನು ತಗ್ಗಿಸುವ ಪ್ರಯತ್ನದ ಒಂದು ಭಾಗವಾಗಿದೆ ಎಂದು ಅವರು ತಿಳಿಸಿದ್ದಾಗಿ ವರದಿ ಉಲ್ಲೇಖಿಸಿದೆ.


 ಅಮೆರಿಕದಲ್ಲಿ ಶೂಟೌಟ್: 12 ಮಂದಿ ಬಲಿ

ಅಮೆರಿಕದಲ್ಲಿ ಶೂಟೌಟ್: 12 ಮಂದಿ ಬಲಿ


ಅಮೆರಿಕದಲ್ಲಿ ಶೂಟೌಟ್: 12 ಮಂದಿ ಬಲಿ

ವಾಷಿಂಗ್ಟನ್: ಅಮೆರಿಕದಲ್ಲಿ ಬಂದೂಕು ಹಿಂಸಾಚಾರ ಸಾಂಕ್ರಾಮಿಕವಾಗುತ್ತಿದೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿಕೆ ನೀಡಿದ ಬೆನ್ನಲ್ಲೇ ವಾರಾಂತ್ಯದಲ್ಲಿ ಅಮೆರಿಕದ ವಿವಿಧೆಡೆ ನಡೆದ ಶೂಟೌಟ್ ಪ್ರಕರಣಗಳಲ್ಲಿ 12 ಮಂದಿ ಮೃತಪಟ್ಟು ಕನಿಷ್ಠ 50 ಮಂದಿ ಗಾಯಗೊಂಡಿದ್ದಾರೆ.

ನ್ಯೂಜೆರ್ಸಿ, ದಕ್ಷಿಣ ಕರೊಲಿನಾ, ಜಾರ್ಜಿಯಾ, ಓಹಿಯೊ ಮತ್ತು ಮಿನ್ನೆಸ್ಟಾದಲ್ಲಿ ಶೂಟಿಂಗ್‌ನಿಂದ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ ಹಾಗೂ ಕನಿಷ್ಠ 50 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನ್ಯೂಜೆರ್ಸಿಯ ಕಮಡೆನ್‌ನಲ್ಲಿ ಮೋಜಿನ ಪಾರ್ಟಿಯಲ್ಲಿ ಗುಂಡು ಹಾರಿಸಿದಾಗ ಇಬ್ಬರು ಮೃತಪಟ್ಟು 12 ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ಕರೊಲಿನಾದಲ್ಲಿ ಸಂಗೀತ ಕಾರ್ಯಕ್ರಮದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 14 ವರ್ಷದ ಬಾಲಕಿ ಮೃತಪಟ್ಟು ಇತರ 14 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾರ್ಜಿಯಾದ ಅಟ್ಲಾಂಟಾದಲ್ಲಿ ಗುಂಡಿನ ದಾಳಿ ನಡೆದಿದೆ ಎಂಬ ಮಾಹಿತಿಯ ಮೇರೆಗೆ ಸ್ಥಳಕ್ಕೆ ಹೋದಾಗ ಮೂವರ ಶವ ಪತ್ತೆಯಾಗಿದೆ ಎಂದು ಅಟ್ಲಾಂಟಾ ಪೊಲೀಸರು ಹೇಳಿದ್ದಾರೆ. ಓಹಿಯೋದ ಯಂಗ್ಸ್‌ಟೌನ್‌ನಲ್ಲಿ ಬಾರೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟು ಕನಿಷ್ಠ ಎಂಟು ಮಂದಿ ಗಾಯಗೊಂಡಿದ್ದಾರೆ. ಕೊಲಂಬಸ್ ಪಾರ್ಕ್‌ನಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ 16 ವರ್ಷದ ಬಾಲಕಿ ಮೃತಪಟ್ಟಿದ್ದರೆ, ಇತರ ಏಳು ಮಂದಿ ಗಾಯಗೊಂಡಿದ್ದಾರೆ.

ಕಳೆದ ವರ್ಷ ಪೊಲೀಸ್ ಅಧಿಕಾರಿಯ ದೌರ್ಜನ್ಯದಿಂದ ಹತ್ಯೆಯಾದ ಜಾರ್ಜ್ ಫ್ಲಾಯ್ಡಾ ಅವರ ಪ್ರಥಮ ಪುಣ್ಯತಿಥಿ ಅಂಗವಾಗಿ ಬೆಂಬಲಿಗರು ಮತ್ತು ಸಂಬಂಧಿಕರು ನಡೆಸಿದ ಪಾದಯಾತ್ರೆ ವೇಳೆಯೂ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಒಬ್ಬ ಮೃತಪಟ್ಟಿದ್ದು, ಇತರ ಎಂಟು ಮಂದಿ ಗಾಯಗೊಂಡಿದ್ದಾರೆ.


 ಸಿಡಿ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ರಮೇಶ್ ಜಾರಕಿಹೊಳಿ

ಸಿಡಿ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ರಮೇಶ್ ಜಾರಕಿಹೊಳಿ


ಸಿಡಿ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ರಮೇಶ್ ಜಾರಕಿಹೊಳಿ

ಬೆಂಗಳೂರು, ಮೇ 24: ಕರ್ನಾಟಕದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಸಿಡಿಯಲ್ಲಿ ಯುವತಿ ಜೊತೆಗೆ ಇರುವುದು ತಾವೇ ಎಂದು ಒಪ್ಪಿಕೊಂಡಿರುವ ರಮೇಶ್ ಜಾರಕಿಹೊಳಿ, ಯುವತಿಯ ಪರಿಚಯವಿದೆ ಎಂದು ತನಿಖಾಧಿಕಾರಿಗಳ ಎದುರಿಗೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ವಿಶೇಷ ತನಿಖಾ ತಂಡ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಈ ಮೊದಲು ಯುವತಿ ಬಗ್ಗೆ ಗೊತ್ತಿಲ್ಲ, ಯುವತಿ ಪರಿಚಯವೇ ಇಲ್ಲ ಎಂದು ಹೇಳಿಕೆ ನೀಡುತ್ತಿದ್ದ ಮಾಜಿ ಸಚಿವರು, ಇದೀಗ ಉಲ್ಟಾ ಹೊಡೆದಿದ್ದಾರೆ.

ಯುವತಿ ಜೊತೆಗೆ ಸಹಮತದೊೆಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದು, ತಮ್ಮ ಅರಿವಿಗೆ ಬಾರದ ರೀತಿಯಲ್ಲಿ ಅದನ್ನು ವಿಡಿಯೋ ಮಾಡಿಕೊಳ್ಳಲಾಗಿದೆ ಎಂದು ಎಸ್‌ಐಟಿ ಎದುರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

ಪ್ರಾಜೆಕ್ಟ್ ವಿಚಾರವಾಗಿ ಯುವತಿ ಭೇಟಿ:

ಯುವತಿಯು ಯಾವುದೋ ಒಂದು ಪ್ರಾಜೆಕ್ಟ್ ವಿಚಾರವಾಗಿ ತಮ್ಮನ್ನು ಭೇಟಿ ಮಾಡಲು ಬಂದಿದ್ದರು ಎಂದು ಸಚಿವರು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.


 ಬೆಡ್ ಬ್ಲಾಕಿಂಗ್ ಪ್ರಕರಣ: ಆರೋಪ ಮುಕ್ತರಾದರೂ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ 17 ನೌಕರರು

ಬೆಡ್ ಬ್ಲಾಕಿಂಗ್ ಪ್ರಕರಣ: ಆರೋಪ ಮುಕ್ತರಾದರೂ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ 17 ನೌಕರರು


ಬೆಡ್ ಬ್ಲಾಕಿಂಗ್ ಪ್ರಕರಣ: ಆರೋಪ ಮುಕ್ತರಾದರೂ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ 17 ನೌಕರರು 

ಬೆಂಗಳೂರು, ಮೇ 25: ಬಿಬಿಎಂಪಿ ಬೆಂಗಳೂರು ದಕ್ಷಿಣ ವಲಯ ವಾರ್ ರೂಂನಲ್ಲಿ ನಡೆದ 'ಬೆಡ್ ಬ್ಲಾಕಿಂಗ್' ಪ್ರಕರಣ ಸಂಬಂಧ ಸಂಸದ ತೇಜಸ್ವಿ ಸೂರ್ಯ ನೇತೃತ್ವದ ಬಿಜೆಪಿ ಶಾಸಕರ ತಂಡದಿಂದ ಆರೋಪಕ್ಕೆ ಗುರಿಯಾಗಿ ಅಮಾನತುಗೊಂಡಿದ್ದ 17 ಮಂದಿ ನೌಕರರು, ಪೊಲೀಸರ ತನಿಖೆಯಲ್ಲಿ ಆರೋಪ ಮುಕ್ತರಾದರೂ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಮಾನತುಗೊಂಡಿದ್ದ 17 ಮಂದಿ ಸಿಬ್ಬಂದಿ ಪೈಕಿ 5 ಮಂದಿ ಆರೋಪದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತರಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ. ಉಳಿದ 12 ಮಂದಿ ಕರ್ತವ್ಯಕ್ಕೆ ಹಾಜರಾಗಲು ಉತ್ಸುಕರಾಗಿದ್ದರೂ ಕ್ರಿಸ್ಟೆಲ್ ಇನ್ಫೋಟೆಕ್ ಸಂಸ್ಥೆಯ ಮುಖ್ಯಸ್ಥರು ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ 12 ಮಂದಿ ಕೆಲಸವಿಲ್ಲದೆ, ಲಾಕ್‍ಡೌನ್ ವೇಳೆ ಹೊಸ ಕೆಲಸದ ಹುಡುಕಾಟದಲ್ಲಿ ತೊಡಗಿದ್ದಾರೆ. ಅಲ್ಲದೆ, 17 ಮಂದಿ ಸಿಬ್ಬಂದಿಗೆ ಹಿಂದಿನ ತಿಂಗಳ ವೇತನವನ್ನು ನೀಡದ ಹಿನ್ನೆಲೆಯಲ್ಲಿ ಬದುಕು ಸಾಗಿಸಲು ಕಷ್ಟ ಪಡುತ್ತಿದ್ದಾರೆ ಎನ್ನಲಾಗಿದೆ.

ಮೇ 4ರಂದು ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ ಹಾಗೂ ಉದಯ್ ಗರುಡಾಚಾರ್ ನೇತೃತ್ವದ ತಂಡ 'ಬೆಡ್ ಬ್ಲಾಕಿಂಗ್' ಪ್ರಕರಣ ಸಂಬಂಧ 17 ಮಂದಿ ಸಿಬ್ಬಂದಿಯ ವಿರುದ್ಧ ಆರೋಪ ಮಾಡಿತ್ತು. ಇವರನ್ನೆಲ್ಲ ಯಾರು ಮತ್ತು ಏಕೆ ನೇಮಕ ಮಾಡಿಕೊಂಡಿದ್ದು, ಇದು `ಮದರಸವೋ ಅಥವಾ ಕಾರ್ಪೋರೇಷನ್ ಕೋವಿಡ್ ವಾರ್ ರೂಮೋ' ಎಂದು ಪ್ರಶ್ನಿಸಲಾಗಿತ್ತು.

ಕೆಲಸ ಕಳೆದುಕೊಂಡು ಮನೆಯಲ್ಲಿರುವ ಅಕ್ರಮ್(ಹೆಸರು ಬದಲಾಯಿಸಲಾಗಿದೆ) 'ವಾರ್ತಾಭಾರತಿ' ಪತ್ರಿಕೆಯೊಂದಿಗೆ ಮಾತನಾಡಿ, `ನಾವು ಮುಸ್ಲಿಮ್ ಆಗಿ ಹುಟ್ಟಿದ್ದೇ ತಪ್ಪಾಗಿದೆ. ನಮ್ಮ ವಿರುದ್ಧ ಬಿಜೆಪಿಯ ಸಂಸದರು ಹಾಗೂ ಶಾಸಕರು ಆರೋಪ ಮಾಡಿದ ಬಳಿಕ ನಮ್ಮ ಉದ್ಯೋಗ ಹೋಯಿತು. ಪೊಲೀಸರ ತನಿಖೆಯಲ್ಲಿ ನಾವು ಆರೋಪ ಮುಕ್ತರಾದಾಗ ಮರಳಿ ಕೆಲಸಕ್ಕೆ ತೆಗೆದುಕೊಳ್ಳುವ ಭರವಸೆ ಇತ್ತು. ಆದರೆ, ಈವರೆಗೂ ನಮಗೆ ಕೆಲಸಕ್ಕೆ ಕರೆ ಬಂದಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.

'ಕೋವಿಡ್ ಸಂಕಷ್ಟದ ಸಮಯದಲ್ಲಿ ರೋಗಿಗಳ ಸೇವೆ ಎಂದು ಭಾವಿಸಿ ನಾವು ನಿಸ್ವಾರ್ಥದಿಂದ ಕೆಲಸ ಮಾಡುತ್ತಿದ್ದೇವು. ನಮಗೆ ಕ್ರಿಸ್ಟೆಲ್ ಇನ್ಫೋಟೆಕ್ ಸಂಸ್ಥೆ ಕೊಡುತ್ತಿದ್ದ 13 ಸಾವಿರ ರೂ. ಸಂಬಳ ಯಾವುದಕ್ಕೂ ಸಾಲುತ್ತಿರಲಿಲ್ಲ. ನಮಗೆ ಕೆಲಸದ ತೃಪ್ತಿ ಇತ್ತು. ನಮ್ಮ ವಿರುದ್ಧ ಆರೋಪ ಬಂದ ಬಳಿಕ ಮಾನಸಿಕವಾಗಿ ನಾವು ಸಂಪೂರ್ಣ ಕುಗ್ಗಿದ್ದೇವೆ. ಆದರೂ, ಕೌಟುಂಬ ನಿರ್ವಹಣೆ ಜವಾಬ್ದಾರಿ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಮರಳಲು ನಾವು 12 ಮಂದಿ ಪತ್ರವನ್ನು ಕೊಟ್ಟಿದ್ದೆವು. ಸಂಸ್ಥೆ ಕಡೆಯಿಂದ ಈವರೆಗೂ ಕೆಲಸಕ್ಕೆ ಬರಲು ಸ್ಪಂದಿಸುತ್ತಿಲ್ಲ. ಹೀಗಾಗಿ ನಾನು ಹೊಸ ಕೆಲಸದ ಹುಡುಕಾಟದಲ್ಲಿದ್ದೇನೆ' ಎಂದು ಅಕ್ರಮ್ ತಿಳಿಸಿದರು.

'ಆರೋಪ ಹೊರಿಸಲಾದ 17 ಮಂದಿ ಮುಸ್ಲಿಮ್ ಸಿಬ್ಬಂದಿ ಪೈಕಿ 5 ಮಂದಿ ಕರ್ತವ್ಯಕ್ಕೆ ಗೈರುಹಾಜರಾಗಿದ್ದು, ಉಳಿದ 12 ಮಂದಿಯ ಪೈಕಿ ಒಬ್ಬಿಬ್ಬರನ್ನು ಹೊರತುಪಡಿಸಿದರೆ ಉಳಿದ 10 ಮಂದಿ ಇಂದು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದೇವೆ. ಚಾಮರಾಜಪೇಟೆ ಶಾಸಕ ಝಮೀರ್ ಅಹ್ಮದ್ ಖಾನ್ ಅವರು ನಮಗೆ ಕೆಲಸದ ಭರವಸೆ ನೀಡಿದ್ದರು. ನಮಗೆ ಈ ವರೆಗೂ ಕೆಲಸವಿಲ್ಲ. ಅಲ್ಲದೆ, ಸಂಸ್ಥೆ ನಮಗೆ ಹಿಂದಿನ ಸಂಬಳವನ್ನು ಈವರೆಗೂ ನೀಡಿಲ್ಲ. ಕೂಡಲೇ ಬಾಕಿ ವೇತನ ನೀಡಿದರೆ ಒಳ್ಳೆಯದು. ನಮ್ಮನ್ನು ಕೆಲಸಕ್ಕೆ ಪುನಃ ತೆಗೆದುಕೊಳ್ಳಬೇಕು' ಎಂದು ಅಕ್ರಮ್ ಒತ್ತಾಯಿಸಿದರು.


 ಜೂನ್ ನಿಂದ ಮಕ್ಕಳ ಮೇಲೆ ಕೋವಾಕ್ಸಿನ್ ಪ್ರಯೋಗ ಸಾಧ್ಯತೆ: ಅನುಮತಿ ಖಾತ್ರಿಪಡಿಸಿದ ಭಾರತ್ ಬಯೋಟೆಕ್ ಅಧಿಕಾರಿ! ಜೂನ್ ನಿಂದ ಮಕ್ಕಳ ಮೇಲೆ ಕೋವಾಕ್ಸಿನ್ ಪ್ರಯೋಗ ಸಾಧ್ಯತೆ: ಅನುಮತಿ ಖಾತ್ರಿಪಡಿಸಿದ ಭಾರತ್ ಬಯೋಟೆಕ್ ಅಧಿಕಾರಿ!

ಜೂನ್ ನಿಂದ ಮಕ್ಕಳ ಮೇಲೆ ಕೋವಾಕ್ಸಿನ್ ಪ್ರಯೋಗ ಸಾಧ್ಯತೆ: ಅನುಮತಿ ಖಾತ್ರಿಪಡಿಸಿದ ಭಾರತ್ ಬಯೋಟೆಕ್ ಅಧಿಕಾರಿ! ಜೂನ್ ನಿಂದ ಮಕ್ಕಳ ಮೇಲೆ ಕೋವಾಕ್ಸಿನ್ ಪ್ರಯೋಗ ಸಾಧ್ಯತೆ: ಅನುಮತಿ ಖಾತ್ರಿಪಡಿಸಿದ ಭಾರತ್ ಬಯೋಟೆಕ್ ಅಧಿಕಾರಿ!


ಜೂನ್ ನಿಂದ ಮಕ್ಕಳ ಮೇಲೆ ಕೋವಾಕ್ಸಿನ್ ಪ್ರಯೋಗ ಸಾಧ್ಯತೆ: ಅನುಮತಿ ಖಾತ್ರಿಪಡಿಸಿದ ಭಾರತ್ ಬಯೋಟೆಕ್ ಅಧಿಕಾರಿ!

ಹೈದ್ರಾಬಾದ್: ಭಾರತ್ ಬಯೋಟೆಕ್ ಔಷಧ ಕಂಪನಿ ಜೂನ್ ನಿಂದ ಮಕ್ಕಳ ಮೇಲೆ 'ಕೋವಾಕ್ಸಿನ್' ಕೋವಿಡ್-19 ಲಸಿಕೆಯ ಕ್ಲಿನಿಕಲ್ ಪ್ರಯೋಗವನ್ನು ಆರಂಭಿಸುವ ಸಾಧ್ಯತೆಯಿದೆ ಎಂದು ಔಷಧ ತಯಾರಿಕೆ ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹೈದ್ರಾಬಾದಿನ ಎಫ್ ಐಸಿಸಿಐ ಮಹಿಳಾ ಸಂಸ್ಥೆಯ ಸದಸ್ಯರೊಂದಿಗೆ ಎಲ್ಲ ವರ್ಚುಯಲ್ ಮೂಲಕ ಇತ್ತೀಚಿಗೆ ಲಸಿಕೆ ಕುರಿತು ಮಾತುಕತೆ ನಡೆಸಿದ ಭಾರತ್ ಬಯೋಟೆಕ್ ವ್ಯವಹಾರ ಅಭಿವೃದ್ಧಿ ಮುಖ್ಯಸ್ಥ ಮತ್ತು ಅಂತಾರಾಷ್ಟ್ರೀಯ ಸಲಹೆಗಾರ ರಾಚೆಸ್ ಎಲಾ, ಯಾವುದೇ ಲಸಿಕೆ ಶೇ 100 ರಷ್ಟು ರಕ್ಷಣೆ ನೀಡುವುದಿಲ್ಲ ಎಂದಿದ್ದಾರೆ.

ಕೋವಿಡ್-19 ನಿಯಮಗಳು ಇತರ ಸುರಕ್ಷತಾ ಶಿಷ್ಟಾಚಾರಗಳ ಪಾಲನೆಯಿಂದ ಕೋವಾಕ್ಸಿನ್ ಲಸಿಕೆಯ ದಕ್ಷತೆ ಶೇ.100 ರಷ್ಟು ರಕ್ಷಣೆಗೆ ಪ್ರಗತಿಯಾಗಬಹುದು, ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಭಾರತ್ ಬಯೋಟೆಕ್ ಅನುಮತಿ ಪಡೆದುಕೊಂಡಿದೆ. ಅದು ಬಹುಶ: ಜೂನ್ ನಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ಇದು 2-18 ವರ್ಷ ವಯಸ್ಸಿನ ಮಕ್ಕಳ ಮೇಲಿನ ಪ್ರಯೋಗವಾಗಿದೆ, ಇದಕ್ಕಾಗಿ ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತ್ ಬಯೋಟೆಕ್ ಪರವಾನಗಿ ಪಡೆಯಬಹುದು ಎಂದು ರಾಚೆಲ್ ಎಲಾ ಹೇಳಿಕೆಯನ್ನು ಉಲ್ಲೇಖಿಸಿ ಎಫ್‌ಎಲ್‌ಒ ಭಾನುವಾರ ಬಿಡುಗಡೆ ಮಾಡಿದ್ದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.

ಲಸಿಕೆ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದು, ಜೀವ ರಕ್ಷಣೆ ಮಾಡುತ್ತಿರುವುದರಿಂದ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿರುವುದಕ್ಕೆ ಸಂತೋಷವಾಗುತ್ತಿದೆ. ಈ ವರ್ಷಾಂತ್ಯದೊಳಗೆ ನಮ್ಮ ಉತ್ಪಾದನಾ ಸಾಮರ್ಥ್ಯವನ್ನು 700 ಮಿಲಿಯನ್ ಡೋಸ್‌ಗಳಿಗೆ ಹೆಚ್ಚಿಸಲಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಒಂದು ಲಸಿಕೆ ಅಭಿವೃದ್ಧಿಪಡಿಸಿ ಯಶಸ್ವಿಯಾಗಲು ಏಳರಿಂದ 10 ವರ್ಷಗಳ ಕಾಲ ಬೇಕಾಗುತ್ತದೆ. ಪ್ರಸ್ತುತ ಗರ್ಭಿಣಿಯರು,ಹಾಲುಣಿಸುವ ಮಹಿಳೆಯರು, ಮಕ್ಕಳಿಗೆ ಲಸಿಕೆ ನೀಡುತ್ತಿಲ್ಲ. ಒಂದು ಬಾರಿ ಈ ಗುಂಪಿನ ಮೇಲೆ ಪ್ರಯೋಗ ನಡೆದು ಪರಿಣಾಮಸಾಬೀತಾದ ನಂತರ ಅವರಿಗೂ ಲಸಿಕೆ ನೀಡಲಾಗುವುದು ಎಂದು ಎಲಾ ಹೇಳಿದ್ದಾರೆ.


 'ಸಿ.ಡಿಯಲ್ಲಿರುವುದು ನಾನೇ' ತನಿಖಾಧಿಕಾರಿ ಎದುರು ರಮೇಶ್ ಜಾರಕಿಹೊಳಿ ಹೇಳಿಕೆ..!?

'ಸಿ.ಡಿಯಲ್ಲಿರುವುದು ನಾನೇ' ತನಿಖಾಧಿಕಾರಿ ಎದುರು ರಮೇಶ್ ಜಾರಕಿಹೊಳಿ ಹೇಳಿಕೆ..!?

'ಸಿ.ಡಿಯಲ್ಲಿರುವುದು ನಾನೇ' ತನಿಖಾಧಿಕಾರಿ ಎದುರು ರಮೇಶ್ ಜಾರಕಿಹೊಳಿ ಹೇಳಿಕೆ..!?

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆ ಹುಟ್ಟಸಿ ಹಾಕಿದ್ಧ ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಸಿ.ಡಿ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ.

ಸಿ.ಡಿಯಲ್ಲಿರುವುದು ನಾನೇ, ಗೊತ್ತಿಲ್ಲದೇ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ ಎಂದು ಸ್ವತಃ ರಮೇಶ್ ಜಾರಿಕಿಹೊಳಿ ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿರುವುದಾಗಿ ವರದಿಯಾಗಿದೆ.

ವೀಡಿಯೊದಲ್ಲಿ ಇರುವ ಯುವತಿ ನನಗೆ ಪರಿಚಯದವಳು. ಯಾವುದೋ ಪ್ರಾಜೆಕ್ಟ್ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಪರಿಚಯ ಮಾಡಿಕೊಂಡಿದ್ದಳು. ನನ್ನನಂಬರ್ ಗೆ ಆಗಾಗ ಕರೆ ಮಾಡುತ್ತಿದ್ದಳು. ಆಕೆ ನನ್ನನ್ನು ಕೆಲವೊಮ್ಮೆ ಭೇಟಿಯಾಗುತ್ತಿದ್ದಳು. ಮೊದಲ ಭಾರಿಗೆ ಅಪಾರ್ಟ್ ಮೆಂಟ್ ವೊಂದರಲ್ಲಿ ಭೇಟಿಯಾಗಿದ್ದಳು ಎಂದಿದ್ದಾರೆ.

ಇನ್ನು, ಆಕೆಯನ್ನು ನಾನು ಅತ್ಯಾಚಾರ ಮಾಡಿಲ್ಲ. ಆಕೆಯ ಸಹಮತದೊಂದಿಗೆ ಲೈಂಗಿಕ ಸಂಪರ್ಕ ಮಾಡಿರುವುದಾಗಿ ಜಾರಕಿಹೊಳಿ ತನಿಖಾಧಿಕಾರಿ ಕವಿತಾ ಎದುರು ಹೇಳಿಕೊಂಡಿರುವುದು ದಾಖಲಾಗಿವೆ ಎಂದು ಖಾಸಗಿ ಸುದ್ದಿ ವಾಹಿನಿಗಳು ವರದಿ ಮಾಡಿವೆ.

ಈ ಸಿ.ಡಿ ಹೊರ ಬಿದ್ದಾಗ ರಮೇಶ್ ಜಾರಕಿಹೊಳಿ, ಇದನ್ನು ನಕಲಿ ವೀಡಯೊ ಎಂದು ಸಮರ್ಥಿಸಿಕೊಂಡಿದ್ದಲ್ಲದೇ, ನನ್ನನ್ನು ರಾಜಕೀಯ ಕುತಂತ್ರಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ ಎಂದು ದೂರು ನೀಡಿದ್ದರು.


 ರಾಜ್ಯದಲ್ಲಿ 300ಕ್ಕೂ ಅಧಿಕ ಬ್ಲ್ಯಾಕ್ ಫಂಗಸ್ ಸೋಂಕಿತರು ಪತ್ತೆ: ಆರೋಗ್ಯ ಸಚಿವ ಸುಧಾಕರ್

ರಾಜ್ಯದಲ್ಲಿ 300ಕ್ಕೂ ಅಧಿಕ ಬ್ಲ್ಯಾಕ್ ಫಂಗಸ್ ಸೋಂಕಿತರು ಪತ್ತೆ: ಆರೋಗ್ಯ ಸಚಿವ ಸುಧಾಕರ್


ರಾಜ್ಯದಲ್ಲಿ 300ಕ್ಕೂ ಅಧಿಕ ಬ್ಲ್ಯಾಕ್ ಫಂಗಸ್ ಸೋಂಕಿತರು ಪತ್ತೆ: ಆರೋಗ್ಯ ಸಚಿವ ಸುಧಾಕರ್

ಬೆಂಗಳೂರು, ಮೇ 24: ರಾಜ್ಯದಲ್ಲಿ 300ಕ್ಕೂ ಅಧಿಕ ಬ್ಲ್ಯಾಕ್ ಫಂಗಸ್ ಸೋಂಕಿತರು ಕಂಡುಬಂದಿದ್ದು, ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ಮಾಹಿತಿ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 300ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಸೋಂಕಿತರು ಇದ್ದಾರೆ ಎಂದು ಪ್ರಾಥಮಿಕ ವರದಿ ಬಂದಿದೆ. ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಕಪ್ಪು ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಇದೆ. 17 ಮೆಡಿಕಲ್ ಕಾಲೇಜುಗಳಲ್ಲಿಯೂ ಚಿಕಿತ್ಸೆ ವ್ಯವಸ್ಥೆ ಇದೆ. ಆದರೆ, ಔಷಧಿ ಸ್ವಲ್ಪ ಕೊರತೆ ಇದೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರೊಂದಿಗೆ ಈ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಿದರು.

ಇಡೀ ದೇಶದಲ್ಲಿ ವರ್ಷಕ್ಕೆ 100-200ರಷ್ಟು ಜನರು ಬ್ಲ್ಯಾಕ್ ಫಂಗಸ್ ಸೋಂಕಿಗೆ ಒಳಗಾಗುತ್ತಿದ್ದರು. ಈಗ ರಾಜ್ಯದಲ್ಲೇ 300 ಕ್ಕೂ ಅಧಿಕ ಸೋಂಕಿತರಿರುವಾಗ ಔಷಧಿ ಕೊರತೆ ಕಂಡುಬರುತ್ತದೆ. ಇದಕ್ಕಾಗಿ ಔಷಧ ಉತ್ಪಾದನೆ ಹೆಚ್ಚಳ ಮಾಡಲಾಗಿದೆ. 1 ಸಾವಿರಕ್ಕೂ ಅಧಿಕ ವೈಲ್‍ಗಳನ್ನು ಕಳುಹಿಸಿಕೊಡುವ ನಿರೀಕ್ಷೆಯೂ ಇದೆ. ಬ್ಲ್ಯಾಕ್ ಫಂಗಸ್‍ಗೆ 1,150 ವೈಲ್ ಔಷಧಿ ರಾಜ್ಯಕ್ಕೆ ದೊರೆತಿದೆ. 20 ಸಾವಿರ ವೈಲ್‍ಗೆ ಬೇಡಿಕೆ ಇಡಲಾಗಿದೆ ಎಂದು ಸುಧಾಕರ್ ತಿಳಿಸಿದರು.

ಈ ಸೋಂಕು ಎಲ್ಲಿಂದ ಬರುತ್ತಿದೆ ಎಂದು ಪತ್ತೆ ಮಾಡಲು ಸಮಿತಿ ರಚಿಸಿದ್ದು, ಈ ಸಮಿತಿ ವರದಿ ನೀಡಿದೆ. ಸ್ಟೀರಾಯಿಡ್ ಜೊತೆಗೆ ಹ್ಯುಮಿಡಿಫೈರ್ ನಲ್ಲಿ ನೀರು ಬಳಕೆ, ಐಸಿಯು ವೆಂಟಿಲೇಟರ್ ಅನ್ನು ಇನ್ನೊಬ್ಬರಿಗೆ ಬಳಸುವಾಗ, ಒಂದೇ ಮಾಸ್ಕ್ ದೀರ್ಘಕಾಲ ಬಳಕೆ, ಟ್ಯೂಬ್, ಹಾಸಿಗೆ ಮೊದಲಾದ ಮೂಲಗಳಿಂದ ಸೋಂಕು ಬರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದನ್ನು ತಡಗಟ್ಟುವ ಬಗೆಯನ್ನೂ ಇದರಲ್ಲಿ ತಿಳಿಸಲಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ ಕಟ್ಟಡ ನವೀಕರಣ ಕಾಮಗಾರಿ ನಡೆಸಬಾರದು, ಹೊರಗಿನವರು ವಾರ್ಡ್ ಗೆ ಬರಬಾರದು, ಪ್ರತಿ ಪಾಳಿ ಮುಗಿದ ಮೇಲೆ ಸ್ವಚ್ಛತೆ ಮಾಡಬೇಕು, ಪ್ರತಿ ಉಪಕರಣಗಳನ್ನು ಸ್ವಚ್ಛವಾಗಿಡಬೇಕು ಎಂದು ಸೂಚಿಸಲಾಗಿದೆ ಎಂದು ಅವರು ವಿವರಿಸಿದರು.

ಕೋವಿಡ್‍ನಿಂದ ಗುಣಮುಖರಾದಾಗ ಇಎನ್‍ಟಿ ವೈದ್ಯರು ಮತ್ತೆ ತಪಾಸಣೆ ಮಾಡಬೇಕು. 3, 7, 21ನೆ ದಿನ ತಪಾಸಣೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದ ಅವರು, ಆಶಾ ಕಾರ್ಯಕರ್ತರು ಸೇರಿದಂತೆ ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗೆ ವೇತನ ಪಾವತಿಸಲಾಗಿದೆ. ವೇತನ ಹೆಚ್ಚಳಕ್ಕೆ ಸಂಬಂಧಿಸಿದ ವಿಚಾರ ಕೇಂದ್ರ ಸರಕಾರದ ಮಟ್ಟದಲ್ಲಿ ಚರ್ಚೆಯಾಗಬೇಕಿದೆ. ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೆ ಚರ್ಚಿಸಲಾಗುವುದು. 10ಲಕ್ಷಕ್ಕೂ ಅಧಿಕ ಪಿಪಿಇ ಕಿಟ್ ನಮ್ಮ ಬಳಿ ಇದೆ. ಈ ವಸ್ತುಗಳ ಗುಣಮಟ್ಟದ ಬಗೆಗಿನ ಆರೋಪ ಸುಳ್ಳು ಎಂದು ಸ್ಪಷ್ಟಪಡಿಸಿದರು.


ದೆಹಲಿ ಸರ್ಕಾರದಿಂದ 6,000 ಆಮ್ಲಜನಕ ಸಿಲಿಂಡರ್ ಆಮದು

ದೆಹಲಿ ಸರ್ಕಾರದಿಂದ 6,000 ಆಮ್ಲಜನಕ ಸಿಲಿಂಡರ್ ಆಮದು


ದೆಹಲಿ ಸರ್ಕಾರದಿಂದ 6,000 ಆಮ್ಲಜನಕ ಸಿಲಿಂಡರ್ ಆಮದು

ನವದೆಹಲಿ: ತಮ್ಮ ಸರ್ಕಾರವು ಚೀನಾದಿಂದ 6,000 ಆಮ್ಲಜನಕ ಸಿಲಿಂಡರ್‌ಗಳನ್ನು ಆಮದು ಮಾಡಿಕೊಂಡಿದ್ದು, ಇದನ್ನು ಮೂರು ಡಿಪೋಗಳಲ್ಲಿ ಸಂಗ್ರಹಿಸಲಾಗುವುದು. ಕೊರೊನಾ ಮೂರನೇ ಅಲೆಯ ಸಂದರ್ಭ ಈ ಆಕ್ಸಿಜನ್ ಬಳಸಲಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಎರಡನೇ ಅಲೆಯು ಕ್ರಮೇಣ ಕ್ಷೀಣಿಸುತ್ತಿದೆ. ಹೀಗಾಗಿ, ಮೂರನೇ ಅಲೆಗೆ ಸರ್ಕಾರ ಸಿದ್ಧತೆಗಳನ್ನು ಪ್ರಾರಂಭಿಸಿದೆ ಎಂದು ಕೇಜ್ರಿವಾಲ್ ಹೇಳಿದರು.

'ಚೀನಾದಿಂದ ಸುಮಾರು 6,000 ಆಮ್ಲಜನಕ ಸಿಲಿಂಡರ್‌ಗಳನ್ನು ವಿಮಾನದಲ್ಲಿ ತರಿಸಲಾಗಿದೆ. ಅದರಲ್ಲಿ, ಈಗಾಗಲೇ 4,400 ಸಿಲಿಂಡರ್‌ಗಳು ಆಗಮಿಸಿವೆ. ಉಳಿದ 1,600 ಸಿಲಿಂಡರ್‌ಗಳು ಎರಡು ಮೂರು ದಿನಗಳಲ್ಲಿ ತಲುಪಲಿವೆ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಆಮ್ಲಜನಕ ಸಿಲಿಂಡರ್‌ಗಳನ್ನು ಆಮದು ಮಾಡಿಕೊಳ್ಳಲು ಸಹಕರಿಸಿದ ವಿದೇಶಾಂಗ ಸಚಿವಾಲಯ ಮತ್ತು ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಕೇಜ್ರಿವಾಲ್ ಅವರು ಧನ್ಯವಾದ ಹೇಳಿದ್ದಾರೆ.

ಸಿಲಿಂಡರ್‌ಗಳನ್ನು ಸಂಗ್ರಹಿಸಲು ದೆಹಲಿ ಸರ್ಕಾರ ಮೂರು ಡಿಪೋಗಳನ್ನು ರಚಿಸುತ್ತಿದೆ. ಈ ಸಿಲಿಂಡರ್‌ಗಳನ್ನು ಅಗತ್ಯವಿರುವ ಜನರಿಗೆ ನೀಡಬಹುದು ಮತ್ತು ಆಸ್ಪತ್ರೆಗಳಲ್ಲಿ ಹೆಚ್ಚುವರಿ ಆಮ್ಲಜನಕ ಹಾಸಿಗೆಗಳನ್ನು ರಚಿಸಲು ಬಳಸಬಹುದು ಎಂದು ಕೇಜ್ರಿವಾಲ್ ಹೇಳಿದರು.

'ಒಂದೊಮ್ಮೆ ಕೋವಿಡ್-19ರ ಮೂರನೇ ಅಲೆ ಆರಂಭವಾದರೆ, ಈ 6,000 ಸಿಲಿಂಡರ್‌ಗಳನ್ನು 3,000 ಆಮ್ಲಜನಕ ಹಾಸಿಗೆಗಳನ್ನು ಸಿದ್ಧಪಡಿಸಲು ಬಳಸಿಕೊಳ್ಳಬಹುದು. ಬಹುಶಃ, ಸಾಂಕ್ರಾಮಿಕ ರೋಗವು ಆರಂಭವಾದಾಗಿನಿಂದ ಭಾರತಕ್ಕೆ ತರಲಾದ ಅತಿದೊಡ್ಡ ಆಮ್ಲಜನಕದ ಸರಕು ಇದಾಗಿದೆ'ಎಂದು ಅವರು ಹೇಳಿದರು.

ಎಚ್‌ಸಿಎಲ್ ಮತ್ತು ಗಿವ್ ಇಂಡಿಯಾ ಫೌಂಡೇಶನ್ ಈ ಉದ್ದೇಶಕ್ಕಾಗಿ ದೇಣಿಗೆ ನೀಡಿದೆ ಎಂದು ಅವರು ಹೇಳಿದರು.

'ಇದಲ್ಲದೆ, ನಾವು ದೊಡ್ಡ ಪ್ರಮಾಣದಲ್ಲಿ ಆಮ್ಲಜನಕ ಸಾಂದ್ರಕಗಳನ್ನು ಖರೀದಿಸುತ್ತಿದ್ದೇವೆ. ಅಗತ್ಯವಿರುವ ಜನರಿಗೆ ಆಮ್ಲಜನಕ ಒದಗಿಸಲು ಎಲ್ಲಾ ಜಿಲ್ಲೆಗಳಲ್ಲಿ ಆಮ್ಲಜನಕ ಸಾಂದ್ರೀಕರಣ ಬ್ಯಾಂಕುಗಳನ್ನು ಸ್ಥಾಪಿಸಲಾಗಿದೆ. ಇದರ ಜೊತೆಗೆ, ಆಮ್ಲಜನಕ ಟ್ಯಾಂಕ್‌ಗಳನ್ನು ಖರೀದಿಸಲು ನಿರ್ಧರಿಸಿದ್ದೇವೆ. ಅದಕ್ಕಾಗಿ, ಆಮ್ಲಜನಕ ಸಂಗ್ರಹ ಸ್ಥಳವನ್ನು ರಚಿಸುತ್ತಿದ್ದೇವೆ'ಎಂದು ತಿಳಿಸಿದರು.

'ಎರಡನೇ ಅಲೆಯ ಸಮಯದಲ್ಲಿ ನಾವು ಎದುರಿಸಿದ ಸಮಸ್ಯೆಗಳನ್ನು ಈಗ ಪರಿಹರಿಸಲಾಗುತ್ತಿದೆ'ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

Sunday, 23 May 2021

 ಜಾಮಿಯಾ ಮಿಲ್ಲಿಯಾದ ಆರು ವಿದ್ಯಾರ್ಥಿಗಳು ಪ್ರಧಾನ ಮಂತ್ರಿ ಸಂಶೋಧನಾ ಫೆಲೋಶಿಪ್ ಗೆ ಆಯ್ಕೆ

ಜಾಮಿಯಾ ಮಿಲ್ಲಿಯಾದ ಆರು ವಿದ್ಯಾರ್ಥಿಗಳು ಪ್ರಧಾನ ಮಂತ್ರಿ ಸಂಶೋಧನಾ ಫೆಲೋಶಿಪ್ ಗೆ ಆಯ್ಕೆ


ಜಾಮಿಯಾ ಮಿಲ್ಲಿಯಾದ ಆರು ವಿದ್ಯಾರ್ಥಿಗಳು ಪ್ರಧಾನ ಮಂತ್ರಿ ಸಂಶೋಧನಾ ಫೆಲೋಶಿಪ್ ಗೆ ಆಯ್ಕೆ

ಹೊಸದಿಲ್ಲಿ,ಮೇ 23: ಇಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಪಿಎಚ್ಡಿ ಅಧ್ಯಯನ ಮಾಡುತ್ತಿರುವ ಐವರು ವಿದ್ಯಾರ್ಥಿನಿಯರು ಮತ್ತು ಓರ್ವ ವಿದ್ಯಾರ್ಥಿ ಪ್ರಧಾನ ಮಂತ್ರಿ ಸಂಶೋಧನಾ ಫೆಲೋಶಿಪ್ಗೆ ಆಯ್ಕೆಯಾಗಿದ್ದಾರೆ.

ವಿವಿಯ ವಿವಿಧ ವಿಭಾಗಗಳಲ್ಲಿ ಅಧ್ಯಯನ ನಡೆಸುತ್ತಿರುವ ಫೌಝಿಯಾ ತಬಸ್ಸುಮ್, ಮೊಮಿನಾ, ಅಝ್ರಿ ಮಲಿಕ್, ಆಲಿಯಾ ತಯ್ಯಬಾ, ಆಶಿ ಸೈಫ್ ಮತ್ತು ಫಿರೋಝ್ ಖಾನ್ ಅವರು ಲ್ಯಾಟರಲ್ ಎಂಟ್ರಿ ಯೋಜನೆಯಡಿ ಪ್ರಧಾನ ಮಂತ್ರಿ ಸಂಶೋಧನಾ ಫೆಲೋಶಿಪ್(ಪಿಎಂಆರ್ಎಫ್)ಗೆ ಆಯ್ಕೆಯಾಗಿ ದ್ದಾರೆ ಎಂದು ವಿವಿಯು ತಿಳಿಸಿದೆ. 

ಆಯ್ಕೆಯಾದವರಿಗೆ ಪ್ರತ್ಯೇಕವಾಗಿ ಮೊದಲ ಎರಡು ವರ್ಷಗಳಿಗೆ 70,000 ರೂ.,ಮೂರನೇ ವರ್ಷಕ್ಕೆ 75,000 ರೂ.ಹಾಗೂ ನಾಲ್ಕು ಮತ್ತು ಐದನೇ ವರ್ಷಗಳಿಗೆ 80,000 ರೂ.ಗಳ ಫೆಲೋಶಿಪ್ ದೊರೆಯುತ್ತದೆ. ಇದರ ಜೊತೆಗೆ ಪ್ರತಿಯೊಬ್ಬರು ವಾರ್ಷಿಕ ಎರಡು ಲ.ರೂ.ಗಳ(ಐದು ವರ್ಷಗಳಿಗೆ ಒಟ್ಟು 10 ಲ.ರೂ.)ಸಂಶೋಧನಾ ಅನುದಾನವನ್ನು ಪಡೆಯುತ್ತಾರೆ ಎಂದು ಪಿಎಂಆರ್ಎಫ್-ಜೆಎಂಯ ಸಮನ್ವಯಕಾರ ಪ್ರೊ.ಅಬ್ದುಲ್ ಖಯ್ಯೂಮ್ ಅನ್ಸಾರಿ ಅವರು ತಿಳಿಸಿದರು.

ಈ ವಿದ್ಯಾರ್ಥಿಗಳ ಸಾಧನೆಯು ಇತರ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ವಿವಿಯ ವಿದ್ಯಾರ್ಥಿನಿಯರಿಗೆ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಉತ್ತಮ ಸಾಧನೆಗೆ ಸ್ಫೂರ್ತಿ ನೀಡಲಿದೆ ಎಂದು ಕುಲಪತಿ ನಜ್ಮಾ ಅಖ್ತರ್ ಆಶಯ ವ್ಯಕ್ತಪಡಿಸಿದರು.

ಕಳೆದ ವರ್ಷ ಈ ಫೆಲೋಶಿಪ್ಗೆ ವಿವಿಯ ಇಬ್ಬರು ಸಂಶೋಧನಾ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದರು.


ಕೊರೋನದಿಂದ ಮೃತಪಟ್ಟವರ ಸಂಖ್ಯೆ 25 ಸಾವಿರಕ್ಕೆ ಏರಿಕೆ ರಾಜ್ಯದಲ್ಲಿ ಕೋವಿಡ್ ಸಾವಿನ ಪ್ರಮಾಣ ಹೆಚ್ಚಳ: ಒಂದೇ ದಿನದಲ್ಲಿ 626 ಸೋಂಕಿತರು ಮೃತ್ಯು

ಕೊರೋನದಿಂದ ಮೃತಪಟ್ಟವರ ಸಂಖ್ಯೆ 25 ಸಾವಿರಕ್ಕೆ ಏರಿಕೆ ರಾಜ್ಯದಲ್ಲಿ ಕೋವಿಡ್ ಸಾವಿನ ಪ್ರಮಾಣ ಹೆಚ್ಚಳ: ಒಂದೇ ದಿನದಲ್ಲಿ 626 ಸೋಂಕಿತರು ಮೃತ್ಯು

ಕೊರೋನದಿಂದ ಮೃತಪಟ್ಟವರ ಸಂಖ್ಯೆ 25 ಸಾವಿರಕ್ಕೆ ಏರಿಕೆ
ರಾಜ್ಯದಲ್ಲಿ ಕೋವಿಡ್ ಸಾವಿನ ಪ್ರಮಾಣ ಹೆಚ್ಚಳ: ಒಂದೇ ದಿನದಲ್ಲಿ 626 ಸೋಂಕಿತರು ಮೃತ್ಯು

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಸಾವಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು, ರವಿವಾರ ಒಂದೇ ದಿನ ಒಟ್ಟು 626 ಜನರು ಸೋಂಕಿಗೆ ಬಲಿಯಾಗಿದ್ದಾರೆ. 25,979 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 35,573 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 24,24,904ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 25,282ಕ್ಕೆ ತಲುಪಿದೆ.

ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 4,72,986ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

626 ಸೋಂಕಿತರು ಬಲಿ: ಬಾಗಲಕೋಟೆ 4, ಬಳ್ಳಾರಿ 18, ಬೆಳಗಾವಿ 13, ಬೆಂಗಳೂರು ಗ್ರಾಮಾಂತರ 30, ಬೆಂಗಳೂರು ನಗರ 362, ಬೀದರ್ 3, ಚಾಮರಾಜನಗರ 4, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 3, ಚಿತ್ರದುರ್ಗ 5, ದಕ್ಷಿಣ ಕನ್ನಡ 6, ದಾವಣಗೆರೆ 3, ಧಾರವಾಡ 9,  ಗದಗ 4, ಹಾಸನ 11, ಹಾವೇರಿ 8, ಕಲಬುರಗಿ 15, ಕೊಡಗು 3, ಕೋಲಾರ 6, ಕೊಪ್ಪಳ 12, ಮಂಡ್ಯ 13, ಮೈಸೂರು 22, ರಾಯಚೂರು 3, ರಾಮನಗರ 7, ಶಿವಮೊಗ್ಗ 13, ತುಮಕೂರು 13, ಉಡುಪಿ 4, ಉತ್ತರ ಕನ್ನಡ 17, ವಿಜಯಪುರ 5, ಯಾದಗಿರಿ ಜಿಲ್ಲೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 25,979  ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 218, ಬಳ್ಳಾರಿ 1,190, ಬೆಳಗಾವಿ 1,066, ಬೆಂಗಳೂರು ಗ್ರಾಮಾಂತರ 400, ಬೆಂಗಳೂರು ನಗರ 7,494, ಬೀದರ್ 49, ಚಾಮರಾಜನಗರ 407, ಚಿಕ್ಕಬಳ್ಳಾಪುರ 613, ಚಿಕ್ಕಮಗಳೂರು 577, ಚಿತ್ರದುರ್ಗ 365, ದಕ್ಷಿಣ ಕನ್ನಡ 899, ದಾವಣಗೆರೆ 363, ಧಾರವಾಡ 858, ಗದಗ 371, ಹಾಸನ 1,618, ಹಾವೇರಿ 243, ಕಲಬುರಗಿ 234, ಕೊಡಗು 329, ಕೋಲಾರ 439, ಕೊಪ್ಪಳ 356, ಮಂಡ್ಯ 643, ಮೈಸೂರು 2,222, ರಾಯಚೂರು 540, ರಾಮನಗರ 279, ಶಿವಮೊಗ್ಗ 643, ತುಮಕೂರು 1,269, ಉಡುಪಿ 909, ಉತ್ತರ ಕನ್ನಡ 862, ವಿಜಯಪುರ 246, ಯಾದಗಿರಿ ಜಿಲ್ಲೆಯಲ್ಲಿ  277 ಪ್ರಕರಣಗಳು ಪತ್ತೆಯಾಗಿವೆ.

ರಾಜಧಾನಿಯಲ್ಲಿ 362 ಜನರು ಸಾವು

ರಾಜಧಾನಿಯಲ್ಲಿ ರವಿವಾರದಂದು 7,494 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 362 ಜನರು ಮೃತಪಟ್ಟಿದ್ದಾರೆ. 12,407 ಸೋಂಕಿತರು ಬಿಡುಗಡೆಯಾಗಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ ಒಟ್ಟು 11,19,552  ಕೊರೋನ ಸೋಂಕಿತರು ದೃಢಪಟ್ಟಿದ್ದು, ಒಟ್ಟು 11,216 ಜನರು ಸೋಂಕಿಗೆ ಬಲಿಯಾಗಿದ್ದಾರೆ. 8,52,493  ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.


ಕೇಂದ್ರದಿಂದ ಕರ್ನಾಟಕಕ್ಕೆ 14,25,000 ವಯಲ್ಸ್ ರೆಮ್ಡಿಸಿವಿರ್ ಔಷಧಿ ಹಂಚಿಕೆ

ಕೇಂದ್ರದಿಂದ ಕರ್ನಾಟಕಕ್ಕೆ 14,25,000 ವಯಲ್ಸ್ ರೆಮ್ಡಿಸಿವಿರ್ ಔಷಧಿ ಹಂಚಿಕೆ


ಕೇಂದ್ರದಿಂದ ಕರ್ನಾಟಕಕ್ಕೆ 14,25,000 ವಯಲ್ಸ್ ರೆಮ್ಡಿಸಿವಿರ್ ಔಷಧಿ ಹಂಚಿಕೆ

ನವದೆಹಲಿ : ರೆಮ್ಡಿಸಿವಿರ್ ಔಷಧಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ರೆಮ್ಡಿಸಿವಿರ್ ಔಷಧಿ ಹಂಚಿಕೆ ಮಾಡಿದೆ.

ಮೇ 23 ರಿಂದ ಮೇ 30 ರವರೆಗಿನ ಅವಧಿಗೆ ಒಟ್ಟು 22.17 ಲಕ್ಷ ರೆಮ್ಡಿಸಿವಿರ್ ವಯಲ್ ಗಳನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಿದ್ದು, ಇದುವರೆಗೆ ಒಟ್ಟು 99 ಲಕ್ಷ ವಯಲ್ ಗಳನ್ನು ಹಂಚಿಕೆ ಮಾಡಿದೆ.

ಈ ಪೈಕಿ ಕರ್ನಾಟಕಕ್ಕೆ 14,25,000 ರೆಮ್ಡಿಸಿವಿರ್ ಹಾಗೂ ಮಹಾರಾಷ್ಟ್ರಕ್ಕೆ 17,66,000 ರೆಮ್ಡಿಸಿವಿರ್ ವಯಲ್ ಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


Saturday, 22 May 2021

 ಬೆಂಗಳೂರಿನ 'ಆಕ್ಸಿಜನ್ ಮ್ಯಾನ್' ಯತೀಶ್ ಬಗ್ಗೆ ತಿಳಿದಿದೆಯೇ?

ಬೆಂಗಳೂರಿನ 'ಆಕ್ಸಿಜನ್ ಮ್ಯಾನ್' ಯತೀಶ್ ಬಗ್ಗೆ ತಿಳಿದಿದೆಯೇ?

ಬೆಂಗಳೂರಿನ 'ಆಕ್ಸಿಜನ್ ಮ್ಯಾನ್' ಯತೀಶ್ ಬಗ್ಗೆ ತಿಳಿದಿದೆಯೇ?

ಬೆಂಗಳೂರು, ಮೇ 23; ಕರ್ನಾಟದಲ್ಲಿ ಅತಿ ಹೆಚ್ಚು ಸಕ್ರಿಯ ಪ್ರಕರಣ, ಅತಿ ಹೆಚ್ಚು ಹೊಸ ಕೋವಿಡ್ ಪ್ರಕರಣ ಬೆಂಗಳೂರಿನಲ್ಲಿ ದಾಖಲಾಗುತ್ತದೆ. ಕಳೆದ ಕೆಲವು ದಿನಗಳಿಂದ ಆಕ್ಸಿಜನ್ ಬೆಡ್, ಆಕ್ಸಿಜನ್ ಸಿಲಿಂಡರ್‌ಗಳಿಗೆ ನಗರದಲ್ಲಿ ಬೇಡಿಕೆ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಆಕ್ಸಿಜನ್ ಕಾನ್ಸನ್‌ಟ್ರೇಟರ್, ಸಿಲಿಂಡರ್‌ಗಳನ್ನು ಒದಗಿಸುವ ಹಲವಾರು ಜನರಿದ್ದಾರೆ. ಇಂತಹವರಲ್ಲಿಯೇ ಒಬ್ಬರು ಯತೀಶ್. "ಸಿಲಿಂಡರ್ ನಮ್ಮನ್ನು ಶೀಘ್ರವಾಗಿ ತಲುಪಿತು. ನಾವು ನನ್ನ ತಂಗಿಯ ಜೀವವನ್ನು ಉಳಿಸಿದೆವು. ಅವಳು ಈಗ ಚೇತರಿಸಿಕೊಳ್ಳುತ್ತಿದ್ದಾಳೆ" ಇಂತಹ ಸಂದೇಶ ನೋಡಿದಾಗ ಯತೀಶ್ ಮುಖದಲ್ಲಿ ಮಂದಹಾಸ ಮೂಡುತ್ತದೆ.

ಹೌದು, ಯತೀಶ್ ಬೆಂಗಳೂರು ನಗರದ 'ಆಕ್ಸಿಜನ್ ಮ್ಯಾನ್'. ಕಳೆದ 25 ದಿನಗಳಲ್ಲಿ ಬೆಂಗಳೂರು ನಗರದ ಹಲವಾರು ಪ್ರದೇಶಗಳ 100ಕ್ಕೂ ಹೆಚ್ಚು ಕುಟುಂಬಗಳಿಗೆ ಉಚಿತವಾಗಿ ಯತೀಶ್ ಆಮ್ಲಜನಕದ ಸಿಲಿಂಡರ್‌ ಪೂರೈಸಿದ್ದಾರೆ.

ಯತೀಶ್ ಕಳೆದ ವರ್ಷದ ಲಾಕ್‌ಡೌನ್ ಸಮಯದಲ್ಲಿ ತಮ್ಮ ಸಹೋದರ ಮತ್ತು ಬೈಕರ್ ಸ್ನೇಹಿತರೊಂದಿಗೆ ಸೇರಿ ಗ್ರಾಮೀಣ ಪ್ರದೇಶದ ಜನರಿಗೆ ಅಗತ್ಯ ಔಷಧಿಗಳನ್ನು ತಲುಪಿಸಿದ್ದರು. ಈ ಬಾರಿ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡಿ ಜನರ ಜೀವ ಉಳಿಸುತ್ತಿದ್ದಾರೆ. ಯತೀಶ್ ತಂದೆ ಶ್ವಾಸಕೋಶದ ಸೋಂಕಿನಿಂದಾಗಿ ತೀವ್ರ ಉಸಿರಾಟದ ತೊಂದರೆ ಅನುಭವಿಸಿದರು. ಬಳಿಕ ಅವರು ಚೇತರಿಸಿಕೊಂಡರು. ವೈದ್ಯರು ತಂದೆಗೆ ಅಗತ್ಯವಿದ್ದಲ್ಲಿ ಆಮ್ಲಜನಕ ಸಿಲಿಂಡರ್ ಇಟ್ಟುಕೊಳ್ಳಿ ಎಂದು ಸಹ ಸಲಹೆ ನೀಡಿದ್ದರು.

ವೈದ್ಯರ ಸಲಹೆ ಬಳಿಕ ಯತೀಶ್ 3 ಸಿಲಿಂಡರ್‌ ಖರೀದಿಸಿದರು. ಅವರು ಅಗತ್ಯವಿರುವ ಸ್ನೇಹಿತರಿಗೆ ಒಂದನ್ನು ನೀಡಿದರು ಮತ್ತು ತುರ್ತು ಉದ್ದೇಶಗಳಿಗಾಗಿ ಎರಡು ಸಿಲಿಂಡರ್‌ಗಳನ್ನು ಇಟ್ಟುಕೊಂಡರು. ಆಗ ಆಕ್ಸಿಜನ್ ಕೊರತೆ ಇಂದ ಜನರು ಸಾವನ್ನಪ್ಪುತ್ತಿರುವ ವಿಚಾರ ಮಾಧ್ಯಮಗಳಲ್ಲಿ ಬರುತ್ತಿತ್ತು.

ತುರ್ತು ಅಗತ್ಯ ಇಲ್ಲದಿದ್ದರೂ 2 ಸಿಲಿಂಡರ್‌ಗಳನ್ನು ಒಂದು ವಾರದ ತನಕ ಮನೆಯಲ್ಲಿ ಇಟ್ಟುಕೊಂಡಿರುವುದು ತಪ್ಪಿತಸ್ಥ ಭಾವವನ್ನು ಯತೀಶ್‌ರಲ್ಲಿ ಮೂಡಿಸಿತು ಮೊದಲು ಅವರು ಅಗತ್ಯವಿರುವ ಜನರಿಗೆ ಅದನ್ನು ನೀಡಲು ಮುಂದಾದರು.

ನಂತರ ಜಿಗಾನಿಯ ಕಂಪನಿಯೊಂದರಿಂದ ಸಿಲಿಂಡರ್‌ ಸಂಗ್ರಹ ಆರಂಭಿಸಿದರು. ಒಂದು ಜಂಬೊ ಆಕ್ಸಿಜನ್ ಸಿಲಿಂಡರ್ ಬೆಲೆ 19,350 ರೂ. ನಿಯಮಿತವಾಗಿ ಬಳಕೆ ಮಾಡಿದರೂ ಎರಡು ದಿನಗಳ ತನಕ ಈ ಸಿಲಿಂಡರ್ ಬರುತ್ತದೆ. ಹಿಂದೆ ಯತೀಶ್‌ಗೆ ಸಹಾಯ ಮಾಡಿದ್ದ ಸ್ನೇಹಿತರಾದ ವಿಜಯ್, ಪ್ರವೀಣ್ ಮತ್ತು ಬಸವರಾಜ್ ಈ ಬಾರಿಯೂ ಯತೀಶ್ ಜೊತೆ ಸೇರಿಕೊಂಡರು.

ಹಿರಿಯ ನಾಗರಿಕರು, ಆಕ್ಸಿಜನ್ ಸಿಲಿಂಡರ್ ಅಗತ್ಯವಿರುವ ಜನರಿಗೆ ಮೊದಲು ಸಿಲಿಂಡರ್ ನೀಡಲು ಆರಂಭಿಸಿದರು. 3-4 ನೇ ಮಹಡಿ ಮನೆಗಳಿಗೂ ಸಿಲಿಂಡರ್ ಹೊತ್ತುಕೊಂಡು ಹೋಗಿ ಜೀವ ಉಳಿಸಿದ್ದಾರೆ. ಯತೀಶ್.

ಈ ಕಾರ್ಯದಲ್ಲಿ ಸಂತಸ ಕಂಡುಕೊಂಡಿದ್ದಾರೆ. ಯತೀಶ್ ಸ್ನೇಹಿತರ ವಲಯದಲ್ಲಿ ಅಂಬ್ಯುಲೆನ್ಸ್ ಸಹ ಇದೆ. ಅಗತ್ಯವಿದ್ದರೆ ಬಿಬಿಎಂಪಿಯ ವಾರ್ಡ್ ಅಂಬ್ಯುಲೆನ್ಸ್ ಅನ್ನು ಬಳಕೆ ಮಾಡಿಕೊಂಡು ತುರ್ತು ಅಗತ್ಯ ಇರುವವರನ್ನು ಆಸ್ಪತ್ರೆಗೆ ಸೇರಿಸಲು ಸಹ ಯತೀಶ್ ಸಹಾಯ ಮಾಡುತ್ತಾರೆ.

ಪ್ರಸ್ತುತ ಆಕ್ಸಿಜನ್‌ಗೆ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ಸರ್ಕಾರ ಯಾವುದೇ ವ್ಯಕ್ತಿಗೆ ಸಿಲಿಂಡರ್ ರಿಫೀಲ್ ಮಾಡಿಸಲು ಅವಕಾಶವಿಲ್ಲ ಆದೇಶ ಹೊರಡಿಸಿದೆ. ಇದರಿಂದಾಗಿ ಯತೀಶ್ ಮತ್ತು ಇವರಂತೆಯೇ ಕಾರ್ಯ ನಿರ್ವಹಣೆ ಮಾಡುವ ಅನೇಕರಿಗೆ ತೊಂದರೆಯಾಗಿದೆ.

ಯತೀಶ್ ಒಬ್ಬ ವೈದ್ಯರು, ಒಬ್ಬ ನರ್ಸ್ ಮತ್ತು ಆಕ್ಸಿಜನ್ ಸಿಲಿಂಡರ್ ಹೊಂದಿರುವ ಒಂದು ಅಂಬುಲೆನ್ಸ್ ಇರುವ ಸಣ್ಣ ತಂಡವನ್ನು ಕಟ್ಟಲು ಬಯಸಿದ್ದಾರೆ. ತುರ್ತು ಅಗತ್ಯ ಇರುವವರಿಗೆ ಮತ್ತು ಬಡವರಿಗೆ ವೈದ್ಯಕೀಯ ಸೇವೆ ಒದಗಿಸಲು ಬಯಸಿದ್ದಾರೆ.


ಕುಸ್ತಿಪಟು ಸುಶೀಲ್ ಕುಮಾರ್ ಬಂಧನ : ಅಧಿಕೃತ ಹೇಳಿಕೆ ನೀಡಿದ ದೆಹಲಿ ಪೊಲೀಸ್

ಕುಸ್ತಿಪಟು ಸುಶೀಲ್ ಕುಮಾರ್ ಬಂಧನ : ಅಧಿಕೃತ ಹೇಳಿಕೆ ನೀಡಿದ ದೆಹಲಿ ಪೊಲೀಸ್


ಕುಸ್ತಿಪಟು ಸುಶೀಲ್ ಕುಮಾರ್ ಬಂಧನ : ಅಧಿಕೃತ ಹೇಳಿಕೆ ನೀಡಿದ ದೆಹಲಿ ಪೊಲೀಸ್

ನವದೆಹಲಿ: ರೆಸ್ಲರ್ ಸಾಗರ್ ರಾಣಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪ ಎದುರಿಸುತ್ತಿರುವ ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಇನ್ನೂ ಬಂಧಿಸಿಲ್ಲ ಎಂದು ಹೇಳಿದ್ದ ದೆಹಲಿ ಪೊಲೀಸರು ಇದೀಗ ಮತ್ತೆ ಬಂಧಿಸಿರುವುದಾಗಿ ಅಧಿಕೃತ ಹೇಳಿಕೆ ನೀಡಿದ್ದಾರೆ.

ದೆಹಲಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ ಮೇ 4 ರಂದು ಸಾಗರ್ ರಾಣಾ ಕೊಲೆಯಾಗಿದ್ದರು. ಅಂದಿನಿಂದ ತಲೆಮರೆಸಿಕೊಂಡಿದ್ದ ಸುಶೀಲ್ ಕುಮಾರ್ ರನ್ನು ಬಂಧಿಸಲು ಪೊಲೀಸರು ತೀವ್ರ ಪ್ರಯತ್ನ ನಡೆಸಿದ್ದರು. ಕುಸ್ತಿಪಟು ಸುಶೀಲ್ ಕುಮಾರ್ ಬಗ್ಗೆ ಸುಳಿವು ನೀಡಿದವರಿಗೆ ಒಂದು ಲಕ್ಷ ರೂ ಸಹ ಘೋಷಣೆಯಾಗಿದೆ.

ಸುಶೀಲ್ ಕುಮಾರ್ ಅವರನ್ನು ಇಂದು ಅಧಿಕೃತವಾಗಿ ಬಂಧಿಸಿರುವುದಾಗಿ ದೆಹಲಿ ಪೊಲೀಸ್ ಇಲಾಖೆಯ ವಿಶೇಷ ಸೆಲ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಇನ್ಸ್‌ಪೆಕ್ಟರ್ ಶಿವಕುಮಾರ್, ಇನ್ಸ್‌ಪೆಕ್ಟರ್ ಕರಂಬೀರ್ ನೇತೃತ್ವದ ವಿಶೇಷ ಸೆಲ್ ಎಸ್‌ಆರ್ ತಂಡ ಮತ್ತು ಎಸಿಪಿ ಅತ್ತಾರ್ ಸಿಂಗ್ ಅವರ ಮೇಲ್ವಿಚಾರಣೆಯಲ್ಲಿ ದೆಹಲಿಯ ಮುಂಡ್ಕಾ ಪ್ರದೇಶದಲ್ಲಿ ಸುಶೀಲ್ ಕುಮಾರ್ ಮತ್ತು ಅಜಯ್ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದೆ.

ಸಾಲಗಾರರಿಗೆ ಜಾಮೀನು ಹಾಕಿದವರ ವಿರುದ್ಧ ಕ್ರಮ ಜರುಗಿಸಲು ಬ್ಯಾಂಕುಗಳಿಗೆ ಅನುಮತಿ : ಸುಪ್ರೀಂಕೋರ್ಟ್ ನಿಂದ ಮಹತ್ವದ ತೀರ್ಪು


ಮತ್ತೆ ಏರಿಕೆಯಾದ ಪೆಟ್ರೋಲ್​ ಬೆಲೆ; ವಿವಿಧ ನಗರಗಳಲ್ಲಿ ಇಂದಿನ ದರವೆಷ್ಟು?

ಮತ್ತೆ ಏರಿಕೆಯಾದ ಪೆಟ್ರೋಲ್​ ಬೆಲೆ; ವಿವಿಧ ನಗರಗಳಲ್ಲಿ ಇಂದಿನ ದರವೆಷ್ಟು?


ಮತ್ತೆ ಏರಿಕೆಯಾದ ಪೆಟ್ರೋಲ್​ ಬೆಲೆ; ವಿವಿಧ ನಗರಗಳಲ್ಲಿ ಇಂದಿನ ದರವೆಷ್ಟು?

ನವದೆಹಲಿ(ಮೇ 23): ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಕೇಂದ್ರ ಸರ್ಕಾರ ಕೊರೊನಾ ಮೊದಲ ಅಲೆ ಇದ್ದಾಗಲೂ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುತ್ತಿತ್ತು. ಈಗ ಕೊರೊನಾ ಎರಡನೇ ಅಲೆ ತಾರಕ್ಕೇರಿರುವ ಸಂದರ್ಭದಲ್ಲೂ ಮೇ 4ರಿಂದ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ. ಈಗ ದಿನ ಬಿಟ್ಟು ದಿನ ಪೆಟ್ರೋಲ್-ಡೀಸೆಲ್ ಬೆಲೆ ಏರಿಸುವ ಹಳೆಯ ಚಾಳಿ ಅನುಸರಿಸುತ್ತಿದೆ.‌ ಮೇ 23ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 13 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 29 ಪೈಸೆ ಏರಿಕೆ ಮಾಡಿದೆ.


ಮೇ ತಿಂಗಳಲ್ಲಿ ಒಟ್ಟು 12 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗಿದೆ. ಪ್ರತಿ ಪೆಟ್ರೋಲ್ ಮೇಲೆ 2.81 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 3.34 ರೂಪಾಯಿ ಹೆಚ್ಚಳ ಮಾಡಲಾಗಿದೆ. ಮೇ 5ರಂದು ಪ್ರತಿ ಪೆಟ್ರೋಲ್ ಮೇಲೆ 13 ಪೈಸೆ ಮತ್ತು ಪ್ರತಿ ಡೀಸೆಲ್ ಮೇಲೆ 21 ಪೈಸೆ, ಮೇ 6ರಂದು ಪ್ರತಿ ಪೆಟ್ರೋಲ್ ಮೇಲೆ 18 ಪೈಸೆ ಮತ್ತು ಪ್ರತಿ ಡೀಸೆಲ್ ಮೇಲೆ 31 ಪೈಸೆ ಹಾಗೂ ಮೇ 7ರಂದು ಪ್ರತಿ ಪೆಟ್ರೋಲ್ ಮೇಲೆ 25 ಪೈಸೆ ಮತ್ತು ಪ್ರತಿ ಡೀಸೆಲ್ ಮೇಲೆ 33 ಪೈಸೆ ಬೆಲೆ ಹೆಚ್ಚಿಸಿತ್ತು. ಎರಡು ದಿನ ಮಾತ್ರ ವಿರಮಿಸಿದ್ದ ಕೇಂದ್ರ ಸರ್ಕಾರ ಬಳಿಕ ಮೇ 10ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 23 ಪೈಸೆ, ಪ್ರತಿ ಲೀಟರ್ ಡೀಸೆಲ್ ಮೇಲೆ 35 ಪೈಸೆ, ಮೇ 11ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 24 ಪೈಸೆ, ಪ್ರತಿ ಲೀಟರ್ ಡೀಸೆಲ್ ಮೇಲೆ 32 ಪೈಸೆ, ಮೇ 12ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 20 ಪೈಸೆ, ಪ್ರತಿ ಲೀಟರ್ ಡೀಸೆಲ್ ಮೇಲೆ 27 ಪೈಸೆ, ಮೇ 14ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 22 ಪೈಸೆ, ಪ್ರತಿ ಲೀಟರ್ ಡೀಸೆಲ್ ಮೇಲೆ 37 ಪೈಸೆ, ಮೇ 16ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 18 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 29 ಪೈಸೆ ಏರಿಕೆ ಮಾಡಿತ್ತು.


ಮೇ 18ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 21 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 31 ಪೈಸೆ ಏರಿಸಿತ್ತು. ಮೇ 21ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 15 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 31 ಪೈಸೆ ಹೆಚ್ಚಳ ಮಾಡಿತ್ತು. ಮೇ 23ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 13 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 29 ಪೈಸೆ ಏರಿಕೆ ಮಾಡಿದೆ.


ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್ -ಡೀಸೆಲ್ ಬೆಲೆಬೆಂಗಳೂರು- ಪೆಟ್ರೋಲ್ 96.31 ರೂ., ಡೀಸೆಲ್ 89.12 ರೂ.

ಭೂಪಾಲ್- ಪೆಟ್ರೋಲ್ 101.28 ರೂ., ಡೀಸೆಲ್ 92.50 ರೂ.

ಜೈಪುರ - ಪೆಟ್ರೋಲ್ 99.68 ರೂ., ಡೀಸೆಲ್ 92.49 ರೂ.

ಮುಂಬೈ- ಪೆಟ್ರೋಲ್ 99.49 ರೂ., ಡೀಸೆಲ್ 92.78 ರೂ.

ಪಾಟ್ನಾ- ಪೆಟ್ರೋಲ್ 95.40 ರೂ., ಡೀಸೆಲ್ 89.32 ರೂ.

ಚೆನ್ನೈ- ಪೆಟ್ರೋಲ್ 94.86 ರೂ., ಡೀಸೆಲ್ 88.87 ರೂ.

ಕೋಲ್ಕತ್ತಾ- ಪೆಟ್ರೋಲ್ 93.27 ರೂ., ಡೀಸೆಲ್ 86.91 ರೂ.

ದೆಹಲಿ- ಪೆಟ್ರೋಲ್ 93.21 ರೂ., ಡೀಸೆಲ್ 84.07 ರೂ.

ಲಕ್ನೋ- ಪೆಟ್ರೋಲ್ 90.85 ರೂ., ಡೀಸೆಲ್ 84.46 ರೂ.

ರಾಂಚಿ- ಪೆಟ್ರೋಲ್ 90.06 ರೂ., ಡೀಸೆಲ್ 88.79 ರೂ.

 ದಲಿತ ಯುವಕನಿಗೆ ಪಿಎಸ್ಐ ಮೂತ್ರ ಕುಡಿಸಿದ ಪ್ರಕರಣಕ್ಕೆ ಮತ್ತೊಂದು ತಿರುವು

ದಲಿತ ಯುವಕನಿಗೆ ಪಿಎಸ್ಐ ಮೂತ್ರ ಕುಡಿಸಿದ ಪ್ರಕರಣಕ್ಕೆ ಮತ್ತೊಂದು ತಿರುವು

ದಲಿತ ಯುವಕನಿಗೆ ಪಿಎಸ್ಐ ಮೂತ್ರ ಕುಡಿಸಿದ ಪ್ರಕರಣಕ್ಕೆ ಮತ್ತೊಂದು ತಿರುವು

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಕಿರುಗುಂದ ಗ್ರಾಮದ ದಲಿತ ಯುವಕನ ಮೇಲೆ ಗೋಣಿಬೀಡು ಪೊಲೀಸ್ ಠಾಣಾಧಿಕಾರಿ ದೌರ್ಜನ್ಯ ಎಸಗಿದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.

ದೌರ್ಜನ್ಯದ ಸಂದರ್ಭದಲ್ಲಿ ಗೋಣಿಬೀಡು ಪೊಲೀಸ್ ಠಾಣಾಧಿಕಾರಿಯು ದಲಿತ ಯುವಕನಿಗೆ ಮೂತ್ರ ಕುಡಿಸಿದ್ದಲ್ಲದೇ, ಮೂತ್ರವನ್ನು ನಾಲಿಗೆಯಿಂದ ನೆಕ್ಕಿಸಿಸುವ ಮೂಲಕ ಅಮಾನವೀಯ ಕೃತ್ಯ ಎಸಗಿದ್ದಾರೆಂದು ನೊಂದ ಯುವಕ ಹೇಳಿಕೆ ನೀಡಿದ್ದಾನೆ.

ದಲಿತ ಯುವಕನಿಗೆ ಮೂತ್ರ ಕುಡಿಸಿದ ಪಿಎಸ್ಐ ಅಮಾನವೀಯ ಕೃತ್ಯದಲಿತ ಯುವಕನಿಗೆ ಮೂತ್ರ ಕುಡಿಸಿದ ಪಿಎಸ್ಐ ಅಮಾನವೀಯ ಕೃತ್ಯ

ಘಟನೆಯ ವಿವರ

ಕಿರುಗುಂದ ಗ್ರಾಮದ ವಿವಾಹಿತ ಮಹಿಳೆ ಹಾಗೂ ಆಕೆಯ ಪತಿಯ ನಡುವಿನ ಜಗಳದ ವಿಚಾರಕ್ಕೆ ಸಂಬಂಧಿಸಿದಂತೆ ಗೋಣಿಬೀಡು ಠಾಣೆಯ ಪಿಎಸ್ಐ ಅರ್ಜುನ್ ಯಾವುದೇ ದೂರು ಇಲ್ಲದೇ ಅದೇ ಗ್ರಾಮದ ದಲಿತ ಸಮುದಾಯದ ಯುವಕ ಪುನೀತ್(22) ಎಂಬ ಯುವಕನ ಮೇಲೆ ಶಂಕೆಗೊಂಡು ಮೇ 10ರಂದು ಆತನನ್ನು ಗೋಣಿಬೀಡು ಠಾಣೆಗೆ ಕರೆದೊಯ್ದಿದ್ದರು.

ಈ ವೇಳೆ ಯುವಕ ಪುನೀತ್ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಆರೋಪ ಹೊರಿಸಿದ ಠಾಣಾಧಿಕಾರಿ ಅರ್ಜುನ್, ಮಹಿಳೆಯೊಂದಿಗಿನ ಸಂಬಂಧವನ್ನು ಒಪ್ಪಿಕೊಂಡು ಆಕೆಯನ್ನು ಬಚ್ಚಿಟ್ಟಿರುವುದಾಗಿ ಒಪ್ಪಿಕೊಳ್ಳುವಂತೆ ಹೇಳಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಪುನೀತ್‌ನನ್ನು ಠಾಣೆಯ ಕೊಠಡಿಯೊಂದರಲ್ಲಿ ತಲೆಕೆಳಗೆ ಮಾಡಿ ನೇತು ಹಾಕಿ ಪಿಎಸ್ಐ ಹಲ್ಲೆ ನಡೆಸಿದ್ದರು.

ನಂತರ ಜಾತಿ ವಿಚಾರಿಸಿ ಜಾತಿ ನಿಂದನೆ ಮಾಡಿದ್ದಾರೆ. ನಂತರ ಅಂದು ರಾತ್ರಿ 10 ಗಂಟೆಗೆ ಮನೆಗೆ ಕಳುಹಿಸಿದ್ದಾರೆಂದು ಆರೋಪಿಸಿ ನೊಂದ ಯುವಕ ಎಸ್ಪಿ, ಐಜಿ, ಡಿಐಜಿಗೆ ಪತ್ರ ಬರೆದು ತನಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದರು.

ಈ ದೂರಿನ ಮೇರೆಗೆ ಚಿಕ್ಕಮಗಳೂರು ಎಸ್ಪಿ, ಘಟನೆ ಸಂಬಂಧ ತನಿಖೆ ನಡೆಸಲು ಡಿವೈಎಸ್ಪಿ ಒಬ್ಬರನ್ನು ನೇಮಿಸಿದ್ದರು. ಬಳಿಕ ಗೋಣಿಬೀಡು ಠಾಣಾಧಿಕಾರಿ ಅರ್ಜುನ್ ಅವರನ್ನು ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಿದ್ದ ಚಿಕ್ಕಮಗಳೂರು ಎಸ್ಪಿ ಎಂ.ಎಚ್ ಅಕ್ಷಯ್, ಗೋಣಿಬೀಡು ಠಾಣೆಗೆ ಮಹಿಳಾ ಪಿಎಸ್ಐ ಒಬ್ಬರನ್ನು ನೇಮಿಸಿದ್ದರು.

ಈ ಬೆಳವಣಿಗೆಗಳ ಬಳಿಕ ಮೂಡಿಗೆರೆ ತಾಲೂಕಿನ ದಲಿತ ಪರ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು, ಎಸ್ಪಿ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿ ಪಿಎಸ್ಐ ಅರ್ಜುನ್ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದ್ದರು. ಆದರೆ ಈ ಸಂಬಂಧ ಚಿಕ್ಕಮಗಳೂರು ಎಸ್ಪಿ ಯಾವುದೇ ಕ್ರಮಕೈಗೊಂಡಿರಲಿಲ್ಲ.

ನೊಂದ ಯುವಕನ ಆಗ್ರಹವೇನು?

ಈ ಬೆಳವಣಿಗೆಗಳ ಮಧ್ಯೆ ಪಿಎಸ್ಐ ಅರ್ಜುನ್ ಅವರಿಂದ ದೌರ್ಜನ್ಯಕ್ಕೊಳಗಾದ ಯುವಕ ಪುನೀತ್, ಪಿಎಸ್ಐ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದು, ಪಿಎಸ್ಐ ಹಲ್ಲೆ ಮಾಡಿರುವುದಲ್ಲದೇ ಠಾಣೆಯಲ್ಲಿ ಕುಡಿಯಲು ನೀರು ಕೇಳಿದ್ದಕ್ಕೆ ಮೂತ್ರವನ್ನು ಕುಡಿಸಿದ್ದಾರೆಂದು ಆರೋಪಿಸಿದ್ದಾನೆ.

"ಮೇ 10ರಂದು ಯಾವುದೇ ದೂರು ಇಲ್ಲದಿದ್ದರೂ 112 ವಾಹನದಲ್ಲಿ ಬಂದು ನನ್ನನ್ನು ಗೋಣಿಬೀಡು ಠಾಣೆಗೆ ಕರೆದೊಯ್ದಿದ್ದರು. ಮಹಿಳೆಯೊಂದಿಗೆ ಸಂಬಂಧವಿದೆ ಎಂದು ಒಪ್ಪಿಕೊಳ್ಳುವಂತೆ ಹೇಳಿದ್ದರು. ಆದರೆ ನಾನು ಒಪ್ಪಿಕೊಳ್ಳದಿದ್ದಾಗ ತಲೆಕೆಳಗೆ ಮಾಡಿ ಠಾಣೆಯಲ್ಲಿ ಕಟ್ಟಿ ಹಾಕಿ ಹಲ್ಲೆ ಮಾಡಿದರು'' ಎಂದು ಹೇಳಿದ್ದಾರೆ.

ಹಲ್ಲೆಯಿಂದ ನಿತ್ರಾಣಗೊಂಡಿದ್ದ ವೇಳೆ ಕುಡಿಯಲು ನೀರು ಕೇಳಿದಾಗ, ಪೊಲೀಸ್ ಠಾಣೆಯಲ್ಲೇ ಇದ್ದ ಕಳ್ಳತನದ ಆರೋಪಿಯಿಂದ ನನ್ನ ಬಾಯಿಗೆ ಮೂತ್ರ ಮಾಡಿಸಿದ್ದಾರೆ. ನಂತರ ಮೂತ್ರವನ್ನು ನೆಕ್ಕಿಸಿದ್ದಾರೆ ಈ ಸಂಬಂಧ ಎಸ್ಪಿ, ಐಜಿ, ಡಿಐಜಿ ಹಾಗೂ ಮಾನವ ಹಕ್ಕು ಆಯೋಗಕ್ಕೂ ದೂರು ನೀಡಿದ್ದರೂ, ಪಿಎಸ್ಐ ವಿರುದ್ಧ ಯಾವುದೇ ಕಾನೂನು ಕ್ರಮಕೈಗೊಂಡಿಲ್ಲ ಎಂದು ನೊಂದ ದಲಿತ ಯುವಕ ತಿಳಿಸಿದ್ದಾನೆ.

"ಪೊಲೀಸ್ ಠಾಣಾಧಿಕಾರಿಯನ್ನು ಅಮಾನತು ಮಾಡದೇ ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಪಿಎಸ್ಐ ಹಲ್ಲೆ, ಅಮಾನವೀಯ ಹಿಂಸೆಯಿಂದ ನಾನು ಮಾನಸಿಕವಾಗಿ, ದೈಹಿಕವಾಗಿ ನೊಂದಿದ್ದು, ತನಗೆ ನ್ಯಾಯ ಕೊಡಿಸಿ'' ಎಂದು ಪುನೀತ್ ಆಗ್ರಹಿಸಿದ್ದಾನೆ.

 ಉಳ್ಳಾಲ ಕೋಡಿಯಲ್ಲಿ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್ ಅವಘಡ : 10 ಮಂದಿಯ ರಕ್ಷಣೆ

ಉಳ್ಳಾಲ ಕೋಡಿಯಲ್ಲಿ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್ ಅವಘಡ : 10 ಮಂದಿಯ ರಕ್ಷಣೆ

ಉಳ್ಳಾಲ ಕೋಡಿಯಲ್ಲಿ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್ ಅವಘಡ : 10 ಮಂದಿಯ ರಕ್ಷಣೆ

ಉಳ್ಳಾಲ: ಮಂಗಳೂರಿನ ದಕ್ಕೆಯಿಂದ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್ ಉಳ್ಳಾಲ ಕೋಡಿಯಲ್ಲಿ ಅವಘಡಕ್ಕೀಡಾಗಿ ದಡಕ್ಕೆ ಬಂದು ಅಪ್ಪಳಿಸಿದ್ದು ಬೋಟ್ ನಲ್ಲಿದ್ದ 10 ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಉಳ್ಳಾಲದ ಅಶ್ರಫ್ ಎಂಬವರಿಗೆ ಸೇರಿದ ಅಝಾನ್ ಹೆಸರಿನ ಬೋಟ್ ಎಂದು ತಿಳಿದು ಬಂದಿದೆ. ಭಾನುವಾರ ನಸುಕಿನ ಜಾವ ಆಳಸಮುದ್ರ ಮೀನುಗಾರಿಕೆಗೆ ಹೊರಟಿದ್ದು, ಬೋಟ್ ನಲ್ಲಿದ್ದ ಹತ್ತು ಮೀನುಗಾರರಲ್ಲಿ ಕನ್ಯಾಕುಮಾರಿ ಮೂಲದ ಐದು ಮಂದಿ ಮೀನುಗಾರರು ಕುಡಿತದ ಮತ್ತಿನಲ್ಲಿದ್ದು ದಡಕ್ಕೆ ಅಪ್ಪಳಿಸಿದಾಗ ಮೀನುಗಾರರು ವಾಂತಿ ಮಾಡುತ್ತಿದ್ದರು. ಚಾಲಕ ಇನ್ನೋರ್ವನ ಕೈಯಲ್ಲಿ ಬೋಟ್ ನೀಡಿದ ಪರಿಣಾಮ ಘಟನೆ ಸಂಭವಿಸಿದೆ.ಉಳ್ಳಾಲ ಪೊಲೀಸರಿಂದ ಪ್ರಕರಣ ದಾಖಲಾಗಿದೆ.


 ದೇಶದಲ್ಲಿ ಒಂದೇ ದಿನದಲ್ಲಿ 2. 40 ಲಕ್ಷ ಕೊರೋನಾ ಪ್ರಕರಣ ದಾಖಲು, 3,741 ಮಂದಿ ಸಾವು

ದೇಶದಲ್ಲಿ ಒಂದೇ ದಿನದಲ್ಲಿ 2. 40 ಲಕ್ಷ ಕೊರೋನಾ ಪ್ರಕರಣ ದಾಖಲು, 3,741 ಮಂದಿ ಸಾವು


ದೇಶದಲ್ಲಿ ಒಂದೇ ದಿನದಲ್ಲಿ 2. 40 ಲಕ್ಷ ಕೊರೋನಾ ಪ್ರಕರಣ ದಾಖಲು, 3,741 ಮಂದಿ ಸಾವು

ನವದೆಹಲಿ : ಕಳೆದ 24 ಗಂಟೆಗಳಲ್ಲಿ ಭಾರತವು ಕೋವಿಡ್-19 ರ 2,40,842 ಹೊಸ ಪ್ರಕರಣಗಳನ್ನು ದಾಖಲಿಸಿದೆ, ಇದು ಒಟ್ಟು ಪ್ರಕರಣಗಳ ಸಂಖ್ಯೆಯನ್ನು 26,530,132 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ಬೆಳಿಗ್ಗೆ ತಿಳಿಸಿದೆ.

ನಿನ್ನೆ ಒಂದೇ ದಿನದಲ್ಲಿ ಕೊರೋನಾದಿಂದ 3,741 ಸಾವುನೋವುಗಳು ಸಹ ದಾಖಲಾಗಿವೆ; ಬೆಳಿಗ್ಗೆ ೮ ಗಂಟೆಗೆ ಆರೋಗ್ಯ ಸಚಿವಾಲಯದ ನವೀಕರಣದ ಪ್ರಕಾರ ಸಾಂಕ್ರಾಮಿಕ ರೋಗದಿಂದ ಇಲ್ಲಿವರೆಗೆ ೨,೯೯,೨೬೬ ಜನರನ್ನು ಬಲಿ ತೆಗೆದುಕೊಂಡಿದೆ.

ಎರಡನೇ ಅಲೆಯು ದೇಶಾದ್ಯಂತ ಸ್ಥಿರವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಹೇಳಿದೆ, ಏಳು ರಾಜ್ಯಗಳು ದಿನಕ್ಕೆ ೧೦,೦೦೦ ಕ್ಕಿಂತ ಅಧಿಕ ಪ್ರಕರಣಗಳನ್ನು ವರದಿ ಮಾಡುತ್ತಿವೆ ಮತ್ತು ಆರು ರಾಜ್ಯಗಳು ದಿನಕ್ಕೆ ೫,೦೦೦-೧೦,೦೦೦ ಪ್ರಕರಣಗಳನ್ನು ದಾಖಲಿಸಿವೆ. ೯೩ ಕ್ಕೂ ಹೆಚ್ಚು ಜಿಲ್ಲೆಗಳು ಸಕಾರಾತ್ಮಕ ದರದಲ್ಲಿ ಕುಸಿತವನ್ನು ವರದಿ ಮಾಡುತ್ತಿವೆ.

ಆದಾಗ್ಯೂ, ಸೋಂಕು ಹರಡದಂತೆ ತಡೆಯುವ ಪ್ರಯತ್ನದಲ್ಲಿ ದೇಶಾದ್ಯಂತ ರಾಜ್ಯಗಳು ಲಾಕ್ ಡೌನ್ ನಿರ್ಬಂಧಗಳನ್ನು ವಿಸ್ತರಿಸುತ್ತಿವೆ. ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಪ್ರದೇಶ, ನಾಗಾಲ್ಯಾಂಡ್, ಮಿಜೋರಾಂ, ಮೇಘಾಲಯ, ಅರುಣಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಗೋವಾ, ಸಕ್ರಿಯ ಪ್ರಕರಣಗಳು ಇಳಿಮುಖವಾದ ನಂತರ ಕರ್ಫ್ಯೂ ರೀತಿಯ ನಿರ್ಬಂಧಗಳನ್ನು ಮತ್ತೆ ಹೇರಿವೆ, ಏಕೆಂದರೆ ಸರ್ಕಾರಗಳು ಲಸಿಕೆ ಪ್ರಯತ್ನಗಳನ್ನು ಹೆಚ್ಚಿಸಲು ಕೆಲಸ ಮಾಡಿವೆ. ಕಾಂಗೋದಲ್ಲಿ ಜ್ವಾಲಾಮುಖಿ ಸ್ಫೋಟ : ಸಾವಿರಾರು ಜನ ಸುರಕ್ಷಿತ ತಾಣಕ್ಕೆ ಸ್ಥಳಾಂತರ

ಕಾಂಗೋದಲ್ಲಿ ಜ್ವಾಲಾಮುಖಿ ಸ್ಫೋಟ : ಸಾವಿರಾರು ಜನ ಸುರಕ್ಷಿತ ತಾಣಕ್ಕೆ ಸ್ಥಳಾಂತರ


ಕಾಂಗೋದಲ್ಲಿ ಜ್ವಾಲಾಮುಖಿ ಸ್ಫೋಟ : ಸಾವಿರಾರು ಜನ ಸುರಕ್ಷಿತ ತಾಣಕ್ಕೆ ಸ್ಥಳಾಂತರ

ಗೋಮಾ : ಕಾಂಗೋ ರಾಷ್ಟ್ರದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಜನ ಸುರಕ್ಷಿತ ತಾಣಕ್ಕೆ ತೆರಳುತ್ತಿದ್ದಾರೆ. ಕಾಂಗೋದ ಗೋಮಾ ನಗರ ಸಮೀಪವಿರುವ ಮೌಂಟ್ ನೈರಾಗೊಂಗೊದಲ್ಲಿ ಜ್ವಾಲಾಮುಖಿ ಹೊರಚಿಮ್ಮಿದೆ.

ರಾತ್ರೋರಾತ್ರಿ ಜ್ವಾಲಾಮುಖಿಯನ್ನು ಕಂಡ ಗೋಮಾ ನಗರ ಹಾಗೂ ಸುತ್ತಮುತ್ತಲಿನ ಜನರು ಮನೆಗಳನ್ನು ತೊರೆದು ಸುರಕ್ಷಿತ ಪ್ರದೇಶಗಳಿಗೆ ತೆರಳಲು ಪ್ರಯತ್ನಿಸಿದ್ದಾರೆ. ಗೋಮಾದಲ್ಲಿ 20 ಲಕ್ಷಕ್ಕೂ ಹೆಚ್ಚು​ ಜನರಿದ್ದು, ಸದ್ಯಕ್ಕೆ ಯಾವುದೇ ಸಾವುನೋವು ಉಂಟಾಗಿಲ್ಲ.

ಉತ್ತರ ಕಿವು ಪ್ರಾಂತ್ಯದ ಬೆನಿ ನಗರದಿಂದ ಗೋಮಾವನ್ನು ಸಂಪರ್ಕಿಸುವ ಒಂದು ಹೆದ್ದಾರಿಯನ್ನು ಲಾವಾ ಈಗಾಗಲೇ ಆವರಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸಾಲಗಾರರಿಗೆ ಜಾಮೀನು ಹಾಕಿದವರ ವಿರುದ್ಧ ಕ್ರಮ ಜರುಗಿಸಲು ಬ್ಯಾಂಕುಗಳಿಗೆ ಅನುಮತಿ : ಸುಪ್ರೀಂಕೋರ್ಟ್ ನಿಂದ ಮಹತ್ವದ ತೀರ್ಪು


Friday, 21 May 2021

ಬೆಳಗಾವಿ: ಕಾರಿನಲ್ಲಿದ್ದ 4.9 ಕೆಜಿ ಚಿನ್ನ ನಾಪತ್ತೆ ಪ್ರಕರಣ: ಐಜಿಪಿ ಸೇರಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ

ಬೆಳಗಾವಿ: ಕಾರಿನಲ್ಲಿದ್ದ 4.9 ಕೆಜಿ ಚಿನ್ನ ನಾಪತ್ತೆ ಪ್ರಕರಣ: ಐಜಿಪಿ ಸೇರಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ

ಬೆಳಗಾವಿ: ಕಾರಿನಲ್ಲಿದ್ದ 4.9 ಕೆಜಿ ಚಿನ್ನ ನಾಪತ್ತೆ ಪ್ರಕರಣ: ಐಜಿಪಿ ಸೇರಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ

ಬೆಳಗಾವಿ, ಮೇ 21: ಬೆಳಗಾವಿ ಜಿಲ್ಲೆಯ ಯಮಕನಮರಡಿ ವ್ಯಾಪ್ತಿಯಲ್ಲಿ ಪೊಲೀಸರು ಕಾರು ತಡೆಗಟ್ಟಿ ತಪಾಸಣೆ ನಡೆಸಿದ ಬಳಿಕ ಕಾರಿನಲ್ಲಿದ್ದ 4 ಕೆ.ಜಿ. 900 ಗ್ರಾಂ. ಚಿನ್ನ ನಾಪತ್ತೆಯಾದ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ವಿಚಾರಣೆ ಆರಂಭ ಮಾಡುತ್ತಿದ್ದಂತೆಯೇ ಐಜಿಪಿ ಸೇರಿ ಹಲವು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಉತ್ತರ ವಲಯ ಐಜಿಪಿ ಎಚ್.ಜಿ.ರಾಘವೇಂದ್ರ ಸುಹಾಸ್ ಅವರನ್ನು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಐಜಿಪಿ ಹುದ್ದೆಗೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. 

ಅಲ್ಲದೆ, ಗೋಕಾಕ ಉಪ ವಿಭಾಗದ ಡಿವೈಎಸ್ಪಿ ಜಾವೀದ್ ಇನಾಮದಾರ್ ರನ್ನು ಐಎಸ್‍ಡಿಗೆ, ಡಿಎಸ್‍ಬಿ ಇನ್‍ಸ್ಪೆಕ್ಟರ್ ರಾಮೇಶ್ವರ ಕಲ್ಯಾಣಶೆಟ್ಟಿ ಅವರನ್ನು ಹುಬ್ಬಳ್ಳಿ-ಧಾರವಾಡದ ಪೊಲೀಸ್ ತರಬೇತಿ ಶಾಲೆಗೆ ಮತ್ತು ಯಮಕನಮರಡಿ ಪೊಲೀಸ್ ಠಾಣೆ ಪಿಎಸ್‍ಐ ರಮೇಶ ಪಾಟೀಲ ಅವರನ್ನು ಹುಬ್ಬಳ್ಳಿ-ಧಾರವಾಡದ ಸಿಇಎನ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಈ ಮಧ್ಯೆ, ಮಂಗಳೂರಿನ ಉದ್ಯಮಿಗೆ ಸೇರಿದ ಚಿನ್ನಾಭರಣ ನಾಪತ್ತೆಯಾಗಿರುವ ಬಗ್ಗೆ ಡಿಟೆಕ್ಟಿವ್ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡವು ತನಿಖೆಯನ್ನು ಮುಂದುವರಿಸಿದೆ.

2021ರ ಜ.9ರಂದು ಕಾರು ತಡೆದು ಪರಿಶೀಲನೆ ನಡೆಸಿದ್ದರು. ಕಾರಿನ ಒಳಗೆ ಮಾಡಿಫೈ ಮಾಡಿದ್ದರಿಂದ ಸಂಶಯಾಸ್ಪದ ವಾಹನವೆಂದು ಪ್ರಕರಣ ದಾಖಲಾಗಿತ್ತು. ನ್ಯಾಯಾಲಯವು ಪ್ರಕರಣವನ್ನು ಮುಂದೂಡಿತ್ತು. ಹೀಗಾಗಿ, ಕಾರನ್ನು ಯಮಕನಮರಡಿ ಠಾಣೆಯಲ್ಲಿ ನಿಲ್ಲಿಸಲಾಗಿತ್ತು. ಎ.16ಕ್ಕೆ ಕಾರು ನ್ಯಾಯಾಲಯದಲ್ಲಿ ಬಿಡುಗಡೆಯಾದಾಗ ಮಾಲಕರು ಪರಿಶೀಲಿಸಿದಾಗ ಅದರಲ್ಲಿ ಚಿನ್ನ ಇಲ್ಲದಿರುವುದು ತಿಳಿದು ಬಂದಿತ್ತು. 

ಈ ನಡುವೆ, ಕಾರಿನ ಹಿಂದಿನ ಭಾಗದ ಗಾಜು ಒಡೆದು ಹೊಸ ಗಾಜು ಹಾಕಿಸಲಾಗಿತ್ತು. ಇದರಿಂದ, ಅನುಮಾನಗೊಂಡ ಕಾರಿನ ಮಾಲಕರು ಚಿನ್ನ ಕಳ್ಳತನವಾಗಿದೆ ಎಂದು ದೂರು ನೀಡಿದ್ದರು. ಕಾರಿನ ಏರ್ ಬ್ಯಾಗ್‍ನ ಜಾಗದಲ್ಲಿ ಚಿನ್ನ ಇಡಲಾಗಿತ್ತು ಎಂದು ತಿಳಿಸಿದ್ದರು. ವಿಚಾರಣೆ ನಡೆಸಿದ್ದ ಜಿಲ್ಲಾ ಪೊಲೀಸರು, ಪ್ರಕರಣದಲ್ಲಿ ಇಲಾಖೆಯವರೇ ಇರಬಹುದಾದ ಸಾಧ್ಯತೆಗಳು ಇರುವುದರಿಂದ ಹೆಚ್ಚಿನ ತನಿಖೆ ನಡೆಸುವಂತೆ ಕೋರಿ ಸಿಐಡಿಗೆ ಬರೆದಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಶುರುವಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.


 

ಗಾಝಾದಲ್ಲಿ ಕದನ ವಿರಾಮ ಘೋಷಣೆ: ಜಯ ನಮ್ಮದೇ ಎಂದ ಹಮಾಸ್, ಫೆಲೆಸ್ತೀನಿಗಳಿಂದ ಸಂಭ್ರಮಾಚರಣೆ

ಗಾಝಾದಲ್ಲಿ ಕದನ ವಿರಾಮ ಘೋಷಣೆ: ಜಯ ನಮ್ಮದೇ ಎಂದ ಹಮಾಸ್, ಫೆಲೆಸ್ತೀನಿಗಳಿಂದ ಸಂಭ್ರಮಾಚರಣೆ


ಗಾಝಾದಲ್ಲಿ ಕದನ ವಿರಾಮ ಘೋಷಣೆ: ಜಯ ನಮ್ಮದೇ ಎಂದ ಹಮಾಸ್, ಫೆಲೆಸ್ತೀನಿಗಳಿಂದ ಸಂಭ್ರಮಾಚರಣೆ

ಗಾಝಾ ಸಿಟಿ,ಮೇ 21: ಗಾಝಾ ಪಟ್ಟಿಯಲ್ಲಿ ಕದನ ವಿರಾಮವನ್ನು ಘೋಷಿಸಲಾಗಿದ್ದು,ಕಳೆದ 11 ದಿನಗಳಿಂದ ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿದ್ದ ಭೀಕರ ಸಂಘರ್ಷಕ್ಕೆ ಕೊನೆಗೂ ಶುಕ್ರವಾರ ನಸುಕಿನಲ್ಲಿ ತೆರೆ ಬಿದ್ದಿದೆ. ಬೆಳ್ಳಂಬೆಳಿಗ್ಗೆಯೇ ಸಾವಿರಾರು ಫೆಲೆಸ್ತೀನಿಯರು ಬೀದಿಗಿಳಿದು ಸಂಭ್ರಮವನ್ನು ಆಚರಿಸಿದರು. ಸಂಘರ್ಷ ಫೆಲೆಸ್ತೀನಿಯರ ಪಾಲಿಗೆ ದುಬಾರಿಯಾಗಿತ್ತಾದರೂ ಇದು ಪ್ರಬಲ ಇಸ್ರೇಲ್ನ ವಿರುದ್ಧ ಹಮಾಸ್ ಗುಂಪಿನ ವಿಜಯವಾಗಿದೆ ಎಂದು ಹೆಚ್ಚಿನವರು ಪರಿಗಣಿಸಿದ್ದಾರೆ.

ಸಂಘರ್ಷದಲ್ಲಿ ಹೆಚ್ಚಿನವರು ಫೆಲೆಸ್ತೀನಿಗಳು ಸೇರಿದಂತೆ 200ಕ್ಕೂ ಅಧಿಕ ಜನರು ಕೊಲ್ಲಲ್ಪಟ್ಟಿದ್ದು,ಮೊದಲೇ ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಹಮಾಸ್ ಆಡಳಿತದ ಗಾಝಾ ಪಟ್ಟಿಯಲ್ಲಿ ಭಾರೀ ಪ್ರಮಾಣದಲ್ಲಿ ಆಸ್ತಿಪಾಸ್ತಿ ನಷ್ಟವುಂಟಾಗಿದೆ. ಇಸ್ರೇಲ್ನಲ್ಲಿ ಚಟುವಟಿಕೆಗಳನ್ನು ಸ್ತಬ್ಧಗೊಳಿಸಿದ್ದ ಹಮಾಸ್ನಿಂದ ರಾಕೆಟ್ಗಳ ಸುರಿಮಳೆಯು ಸಂಘರ್ಷದ ಭಾವನಾತ್ಮಕ ಕೇಂದ್ರಬಿಂದುವಾಗಿದ್ದ ಜೆರುಸಲೇಮ್ನಲ್ಲಿ ಇಸ್ರೇಲಿಗಳ ದೌರ್ಜನ್ಯಕ್ಕೆ ದಿಟ್ಟ ಉತ್ತರವಾಗಿತ್ತು ಎಂದು ಹೆಚ್ಚಿನ ಫೆಲೆಸ್ತೀನಿಗಳು ಭಾವಿಸಿದ್ದಾರೆ.

ಮುಸ್ಲಿಮರು ಮತ್ತು ಯಹೂದಿಗಳಿಗೆ ಪವಿತ್ರ ತಾಣವಾಗಿರುವ ಜೆರುಸಲೇಮ್ನ ಅಲ್-ಅಕ್ಸಾ ಮಸೀದಿಯಲ್ಲಿ ಶುಕ್ರವಾರ ಬೆಳಗಿನ ಜಾವ ಸಾವಿರಾರು ಫೆಲೆಸ್ತೀನಿಗಳಿಂದ ಪ್ರಾರ್ಥನೆ ಶಾಂತಿಯುತವಾಗಿ ನಡೆದಿದ್ದು,ಕದನ ವಿರಾಮವು ಯಶಸ್ವಿಯಾಗುತ್ತದೆಯೇ ಎಂಬ ಕಳವಳವು ನಿವಾರಣೆಯಾಗಿದೆ.

ನಸುಕಿನ ಎರಡು ಗಂಟೆಗೆ ಕದನ ವಿರಾಮದ ಸುದ್ದಿ ಹೊರಬೀಳುತ್ತಿದ್ದಂತೆಯೇ ಸಾವಿರಾರು ಫೆಲೆಸ್ತೀನಿಗಳು ಬೀದಿಗಳಿಗೆ ಇಳಿದು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಫೆಲೆಸ್ತೀನಿಯನ್ ಮತ್ತು ಹಮಾಸ್ ಧ್ವಜಗಳನ್ನು ಬೀಸುತ್ತಿದ್ದ ಯುವಜನರು ಪರಸ್ಪರ ಸಿಹಿಗಳನ್ನು ವಿನಿಮಯಿಸಿಕೊಂಡರು,ವಾಹನಗಳ ಹಾರ್ನ್ಗಳನ್ನು ನಿರಂತರವಾಗಿ ಬಾರಿಸುತ್ತ ಪಟಾಕಿಗಳನ್ನು ಸಿಡಿಸಿದರು. ಪೂರ್ವ ಜೆರುಸಲೇಮ್ ಮತ್ತು ಆಕ್ರಮಿತ ಪಶ್ಚಿಮ ದಂಡೆಯಲ್ಲಿಯೂ ಸಂಭ್ರಮಾಚರಣೆಗಳು ನಡೆದವು.

ಸಂಘರ್ಷದುದ್ದಕ್ಕೂ ಮುಚ್ಚಿದ್ದ ಗಾಝಾ ಸಿಟಿಯಲ್ಲಿನ ಬಯಲು ಮಾರುಕಟ್ಟೆ ಶುಕ್ರವಾರ ಬೆಳಿಗ್ಗೆ ತೆರೆದುಕೊಂಡು ವ್ಯಾಪಾರಕ್ಕೆ ಸಜ್ಜಾಗಿತ್ತು.

ಬದುಕು ಮರಳುತ್ತದೆ,ಏಕೆಂದರೆ ಇದು ಮೊದಲ ಯುದ್ಧವಲ್ಲ,ಕೊನೆಯ ಯುದ್ಧವೂ ಅಲ್ಲ ಎಂದು ಹೇಳಿದ ಅಂಗಡಿಯೊಂದರ ಮಾಲಿಕ ಅಶ್ರಫ್ ಅಬು ಮುಹಮ್ಮದ್,‘ಹೃದಯದಲ್ಲಿ ನೋವು ತುಂಬಿದೆ. ವಿನಾಶಗಳು ನಡೆದುಹೋಗಿವೆ. ಕುಟುಂಬಗಳು ನಿರ್ನಾಮಗೊಂಡಿವೆ. ಇದು ನಮಗೆ ದುಃಖವನ್ನುಂಟು ಮಾಡಿದೆ. ಆದರೆ ಇದು ಈ ನೆಲದಲ್ಲಿ ನಮ್ಮ ವಿಧಿಯಾಗಿದೆ,ಸಂಯಮದಿಂದ ಬದುಕಬೇಕಿದೆ ’ಎಂದರು.  

ಅತ್ತ ಇಸ್ರೇಲ್ನಲ್ಲಿ ಸಂಘರ್ಷವನ್ನು ಬೇಗನೆ ನಿಲ್ಲಿಸಿದ್ದಕ್ಕಾಗಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತನ್ನ ಬಲಪಂಥೀಯ ಬೆಂಬಲಿಗರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈ ಎರಡು ಬದ್ಧವೈರಿಗಳ ನಡುವಿನ ಹಿಂದಿನ ಮೂರು ಯುದ್ಧಗಳಂತೆ ಈ ಸಂಘರ್ಷವೂ ಅನಿರ್ಣಿತವಾಗಿ ಕೊನೆಗೊಂಡಿದೆ. ನೂರಾರು ವಾಯುದಾಳಿಗಳ ಮೂಲಕ ಹಮಾಸ್ಗೆ ಭಾರೀ ನಷ್ಟವನ್ನುಂಟು ಮಾಡಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆಯಾದರೂ ಹಮಾಸ್ನ ರಾಕೆಟ್ಗಳನ್ನು ತಡೆಯಲು ಅದಕ್ಕೆ ಮತ್ತೊಮ್ಮೆ ಸಾಧ್ಯವಾಗಿರಲಿಲ್ಲ.

ಗಾಝಾ ಪಟ್ಟಿಯಲ್ಲಿ ಅಪಾರ ಜೀವ,ಆಸ್ತಿಪಾಸ್ತಿ ಹಾನಿಗಳಾಗಿದ್ದರೂ ಜಯ ತನ್ನದೇ ಆಗಿದೆ ಎಂದು ಹಮಾಸ್ ಹೇಳಿದೆ. ಈಗಾಗಲೇ ತೀವ್ರ ನಿರುದ್ಯೋಗ ಮತ್ತು ಕೊರೋನವೈರಸ್ ಸಾಂಕ್ರಾಮಿಕದಿಂದ ನಲುಗಿರುವ ಗಾಝಾ ಪಟ್ಟಿಯ ಪುನರ್ನಿರ್ಮಾಣದ ಅಗಾಧ ಸವಾಲು ಈಗ ಹಮಾಸ್ ಮುಂದಿದೆ.

ದಾಳಿಗಳನ್ನು ನಿಲ್ಲಿಸುವಂತೆ ಇಸ್ರೇಲ್ನ ಮೇಲೆ ಅಮೆರಿಕದ ಒತ್ತಡದ ಬಳಿಕ ನೆರೆಯ ಈಜಿಪ್ತ್ನ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಒಪ್ಪಂದವೇರ್ಪಟ್ಟಿದೆ. ಈಜಿಪ್ತ್ನ ಪ್ರಸ್ತಾವವನ್ನು ಇಸ್ರೇಲ್ ಒಪ್ಪಿಕೊಂಡಿದೆ ಎಂದು ಗುರುವಾರ ತಡರಾತ್ರಿ ಪ್ರಕಟಿಸಿದ ನೆತಾನ್ಯಹು, ಪ್ರದೇಶದಲ್ಲಿಯ ವಾಸ್ತವ ಸ್ಥಿತಿಯು ಕದನ ವಿರಾಮದ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಒತ್ತಿ ಹೇಳಿದರು.

ಚೇತರಿಕೆ ಪ್ರಯತ್ನಗಳು ಹಾಗೂ ಇಸ್ರೇಲಿಗಳು ಮತ್ತು ಫೆಲೆಸ್ತೀನಿಗಳಿಗೆ ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ ಜತೆಯಾಗಿ ಶ್ರಮಿಸುವ ಬಗ್ಗೆ ಚರ್ಚಿಸಲು ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ಅವರು ಸದ್ಯವೇ ಅಲ್ಲಿಗೆ ಭೇಟಿ ನೀಡಲಿದ್ದಾರೆ ಎಂದು ಸಚಿವಾಲಯವು ತಿಳಿಸಿದೆ. 

ಮೇ 10ರಿಂದ ಭುಗಿಲೆದ್ದಿದ್ದ ಸಂಘರ್ಷದುದ್ದಕ್ಕೂ ಹಮಾಸ್ ಮತ್ತು ಇತರ ಬಂಡುಕೋರ ಗುಂಪುಗಳು ಇಸ್ರೇಲ್ನ ಹಲವಾರು ನಗರಗಳ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು 4,000ಕ್ಕೂ ಅಧಿಕ ರಾಕೆಟ್ಗಳನ್ನು ಉಡಾಯಿಸಿದ್ದು,ಡಝನ್ನಷ್ಟು ರಾಕೆಟ್ಗಳು ವಾಣಿಜ್ಯ ರಾಜಧಾನಿಯಾಗಿದ್ದ ಟೆಲ್ ಅವಿವ್ ಮೇಲೂ ಬಿದ್ದಿದ್ದವು.

ಸಂಘರ್ಷದಲ್ಲಿ 65 ಮಕ್ಕಳು ಮತ್ತು 39 ಮಹಿಳೆಯರು ಸೇರಿದಂತೆ ಕನಿಷ್ಠ 230 ಫೆಲೆಸ್ತೀನಿಗಳು ಕೊಲ್ಲಲ್ಪಟ್ಟಿದ್ದು, 1700 ಜನರು ಗಾಯಗೊಂಡಿದ್ದಾರೆ ಎಂದು ಗಾಝಾ ಆರೋಗ್ಯ ಸಚಿವಾಲಯವು ತಿಳಿಸಿದೆ. ಇಸ್ರೇಲ್ನಲ್ಲಿ ಐದರ ಹರೆಯದ ಬಾಲಕ ಮತ್ತು 16ರ ಹರೆಯದ ಬಾಲಕಿ ಸೇರಿದಂತೆ 12 ಜನರು ರಾಕೆಟ್ ದಾಳಿಗಳಿಂದ ಮೃತಪಟ್ಟಿದ್ದಾರೆ. ಮೃತರಲ್ಲಿ ಭಾರತದ ಕೇರಳ ಮೂಲದ ಮಹಿಳೆಯೋರ್ವರೂ ಸೇರಿದ್ದಾರೆ.