Wednesday, 28 April 2021

SSF :ಇದು ದಿಗಂತವನ್ನು ನೋಡಿ ನಿಂತಿರುವ ಪೈರು


 SSF :ಇದು ದಿಗಂತವನ್ನು ನೋಡಿ ನಿಂತಿರುವ ಪೈರು 

( ಇವತ್ತು  ಸಂಘಟನೆಯ ಸ್ಥಾಪಕ ದಿನ)

       ಅಂದು ನಾವು ಸಣ್ಣವರು ನಮಗೆ SSF ನ ಬಗ್ಗೆ ಇನ್ನೂ ತಿಳಿದುಕೊಳ್ಳಬೇಕೆಂಬ ಹಂಬಲ. ಆದುದರಿಂದ ನಾವು SSFನ ಕುರಿತು ನಮ್ಮ ಒಬ್ಬರು ಉಸ್ತಾದರಲ್ಲಿ ಕೇಳಿದಾಗ "ಅದು ಬೆಂಕಿಯಲ್ಲಿ ಬೆಳೆದ ಸಂಘಟನೆ ಆದುದರಿಂದ ಅದು ಸೂರ್ಯನ ಬಿಸಿಲಿಗೆ ಬಾಡಲ್ಲ" ಎಂದರು. ಇದರ ಒಳ ಅರ್ಥವನ್ನು ತಿಳಿಯದ ನಾವು ಒಳಾರ್ಥವನ್ನು ಕೇಳಿದಾಗ ಉಸ್ತಾದರು ಹೇಳಿದರು " ಪವಿತ್ರ ಖುರ್ ಆನ್ ಹೇಳಿದ್ದು ನಿಮ್ಮಲ್ಲಿ ಒಳಿತಿನೆಡೆಗೆ ಆಹ್ವಾನ ನೀಡುವ ಕೆಡುಕಿನ ವಿರುದ್ಧ ಶಬ್ದವೆತ್ತುವ ಸಂಘಟನೆ ಇರಲಿ. ಎಂದಿಲ್ಲವೇ? ಅಂತಹ ಒಂದು ಸಂಘಟನೆಯಾಗಿದೆ SSF " ಎಂದರು. ಆಗ ನಾವು ಬೆಂಕಿಯಲ್ಲಿ ಬೆಳೆದ ಸಂಘಟನೆಯೆಂದರೆ?  " SSF ದಾಟಿ ಬಂದ ಹಾದಿಗಳು ಸುಗಮವಾಗಿರಲಿಲ್ಲ ಹಲವು ನೋವು, ಯಾತನೆಗಳನ್ನು ಸಹಿಸಿಕೊಂಡಾಗಿದೆ SSF ಬೆಳೆದು ಬಂದದ್ದು.ನೇರ ಹಾದಿಯಲ್ಲಿ ನಿಂತು ಸತ್ಯ ಹೇಳುವಾಗ ಎಲ್ಲವನ್ನು ಸಹಿಸಬೇಕಾಗುತ್ತದೆ, ಆದರೆ ನಮ್ಮ ಸಂಘಟನೆ ಯಾವುದೇ ಸವಾಲಿಗೆ ಬಂದರು ಹಿಗ್ಗಲಿಲ್ಲ,ಬಗ್ಗಲಿಲ್ಲ,ಕುಗ್ಗಲಿಲ್ಲ. ಬಯಸಿದ್ದೆಲ್ಲವೂ ಉನ್ನತಿ ಪಡೆದದ್ದು ಕೂಡ ಸದುನ್ನತೀನೆ. ಇಂದು ಜಗತ್ತಿನಲ್ಲಿ ಎಷ್ಟು ಸಂಘಟನೆಗಳಿಲ್ಲ ಹೇಳಿ. ನಾಯಿಕೊಡೆಗಳಂತೆ ಮೇಲೇರುತ್ತಿರುವ ದಿನಕ್ಕೊಂದು ಸಂಘಟನೆಗಳು ಹತ್ತಲವು.ಆದರೆ ಅದೆಲ್ಲವೂ ಕಾಲದ ಕಡಲ ಸೆರೆಗೆ ತೇಲಿ ಹೋಗುತ್ತಿದೆ,ಅಥವಾ ಕೇವಲ ಹೆಸರಿಗೆ ಮಾತ್ರ ಸಂಘಟನೆಯಾಗಿ ನಿಲ್ಲುತ್ತಿವೆ. ಆದರೆ ಎಸ್ಎಸ್ಎಫ್ ಹಾಗಲ್ಲ ಕೇವಲ ಹೆಸರಿಗೆ ಮಾತ್ರ ಸಂಘಟನೆಯಾಗಿ ನಿಂತು ಕೊಳ್ಳದೆ ಜನ್ಮತಾಳಿದ ಅಂದಿನಿಂದ ಪವಿತ್ರ ಇಸ್ಲಾಮಿನ ನೈಜ ಆಶಯವನ್ನು ಜನಮನಕ್ಕೆ ತಲುಪಿಸಿ ಜನರನ್ನು ಸರಿದಾರಿಗೆ ಕೈ ಹಿಡಿದುಕೊಂಡು ಬಂದು ಪರಂಪರಾಗತ ಇಸ್ಲಾಮಿನ ಪತಾಕೆಯ ಕೆಳಗೆ ವಿದ್ಯಾರ್ಥಿ ಮತ್ತು ಯುವಜನತೆಯನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ"

       1978 ಎಪ್ರಿಲ್ 29 SSF ಕೇರಳ ಮಣ್ಣಿನಲ್ಲಿ ಜನ್ಮ ತಾಳಿದ ದಿನ. ಅಂದರೆ SSFನ ಸ್ಥಾಪನಾ ದಿನ. ಕರ್ನಾಟಕದ ಮಣ್ಣಲ್ಲಿ 1989 ಸೆಪ್ಟೆಂಬರ್ 19 ರಂದು SSF ರೂಪುಗೊಂಡಿತು. ಕನ್ನಡ ಮಣ್ಣಲ್ಲಿ SSFಗೆ 32 ವರ್ಷದಾಟಿದೆ. ನಾವಿರುವುದು 21ನೇ ಶತಮಾನದಲ್ಲಿ ಆಧುನಿಕ ಯುಗದಲ್ಲಿ ನೈಜ ವಿಶ್ವಾಸಿಯಾಗಿ, ನೇರ ಸುನ್ನಿಯಾಗಿ ಬದುಕು ಸಾಗಿಸುತ್ತಿದ್ದರೆ ಅದಕ್ಕಿಂತ ಮಿಗಿಲಾದ ಸೌಭಾಗ್ಯ ಬೇರಾವುದಿದೆ ಹೇಳಿ. ಸಂಘ ಬದುಕು ಎಲ್ಲಾ ರೀತಿಯಲ್ಲೂ ಅತ್ಯುತ್ತಮವಾಗಿದೆ. ವಿದ್ಯಾರ್ಥಿ ಮತ್ತು ಯುವಜನತೆಗೆ ಧಾರ್ಮಿಕತೆಯನ್ನು ನೀಡಿ ಇಸ್ಲಾಮಿನ ಪರಂಪರಾಗತ ವಿಶ್ವಾಸದಲ್ಲಿ ನೆಲೆನಿಲ್ಲಿಸಿ ಸುನ್ನೀ ಆಶಯಗಳ ಸಂರಕ್ಷಣೆಗೆ ಬೇಕಾಗಿ ಸಮರ ನಡೆಸಿದ ಕ್ರಾಂತಿಕಾರಿ ಸಂಘಟನೆಯಾಗಿದೆ SSF .

          ಮುಸ್ಲಿಮರ ಸಂಘಟನೆ ಹೇಗಿರಬೇಕೋ, ಕಾರ್ಯಕರ್ತನ ಮನೋಭಾವ ಹೇಗಿರಬೇಕೋ ಆ ರೀತಿಯಲ್ಲಿ ನಮ್ಮ ಸಂಘಟನೆ ಮುನ್ನುಗ್ಗುತ್ತಿದೆ. ಸಂಘಟನೆಯ ವೈಶಿಷ್ಟ್ಯ  ಗುರಿ ವಿಚಾರಗಳೆಲ್ಲವೂ ಭಿನ್ನವೂ ಹೌದು. ಪವಿತ್ರ ಖುರ್ ಆನ್ ಒಂದು ಕಡೆ ಕರೆ  ಕೊಟ್ಟಂತೆ ಒಳಿತಿನೆಡೆಗೆ ಆಹ್ವಾನವಿಡುವ ಕೆಡುಕಿನ ವಿರುದ್ಧ ಶಬ್ದವೆತ್ತುವ ಸಂಘಟನೆಯಾಗಿ ಅತೀ ಶೀಘ್ರದಲ್ಲಿ ಉತ್ತುಂಗ ಶಿಖರವನ್ನು SSF ಏರುತ್ತಲಿದೆ.ಅಲ್ ಹಂದುಲಿಲ್ಲ

       ಈ  ಮೂರಕ್ಷರ ರಾಷ್ಟ್ರಕ್ಕೆ, ಮುಸ್ಲಿಂ ಸಮಾಜಕ್ಕೆ ಮಾಡಿದ ಸೇವೆಯನ್ನು ಬರೆದು ಮುಗಿಸಲಸಾಧ್ಯ.ದಾರಿ ತಪ್ಪುತ್ತಿರುವ ಯುವ ಜನಾಂಗಕ್ಕೆ  ಧಾರ್ಮಿಕ ಬೋಧವನ್ನು ಕೊಟ್ಟು ಪವಿತ್ರ ಇಸ್ಲಾಮಿನ ನೈಜ ಆಶಯವನ್ನು ಮೈಗೂಡಿಸಿಕೊಂಡು,  ಅದನ್ನು ಪ್ರಚಾರ ಮಾಡುವುದರೊಂದಿಗೆ ಕಾರ್ಯಕರ್ತರು ಬದುಕುವುದನ್ನು ಕಾಣುವಾಗ ಸಂಘಟನೆಯ ಆತ್ಮೀಯ ಶಕ್ತಿಯನ್ನು ಸ್ಪಷ್ಟವಾಗಿ ಕಾಣಲು ಸಾಧ್ಯ.  ಧಾರ್ಮಿಕವಾಗಿಯೂ ಶೈಕ್ಷಣಿಕವಾಗಿಯೂ ಸಾಮಾಜಿಕವಾಗಿಯೂ ಹಲವು ಪರಿವರ್ತನೆಗೆ ನಾಂದಿ ಹಾಡಿದ ಸಂಘಟನೆಯು ದಾರಿ ತಪ್ಪುತ್ತಿರುವ ಯುವ ಜನಾಂಗದ ವಿದ್ಯಾರ್ಥಿಗಳಿಗೆ ಧಾರ್ಮಿಕ ಬೋಧವನ್ನು ಕೊಟ್ಟು ಒಳಿತಿನೆಡೆಗೆ ಕೈ ಹಿಡಿದು ಕೊಂಡೊಯ್ಯುತ್ತಿದೆ.

         ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಕಲಿಸಿಕೊಟ್ಟ ಪರಂಪರಾಗತ ಆಶಯ  ಆದರ್ಶವನ್ನು ಅಪ್ಪಿಕೊಂಡು ಸುನ್ನಿಯಾಗಿ ಮರಣದ ತನಕ ಅಲ್ಲಾಹನ ನೂರನ್ನು ಕಲಿತುಕೊಂಡು ಒಳಿತಿನೆಡೆಗೆ ಜನತೆಯನ್ನು ಮುನ್ನುಗ್ಗಿಸುತ್ತಾ.. ಸಮಾಜಕ್ಕೆ ಒಳಿತನ್ನು ಮಾಡುತ್ತಾ.. ಸುನ್ನಿ ಆದ ನೈಜ ಕಾರ್ಯಕರ್ತರನ್ನು ಸೃಷ್ಟಿಸುತ್ತಾ.. ಇದೆಲ್ಲವನ್ನೂ ಹೆಸರಲ್ಲೇ ಸೂಚಿಸುವಂತೆ SSF ಮುನ್ನೇರುತ್ತಿದೆ. ನೈತಿಕತೆ ಮಾಯವಾದ ಸಮಾಜದಲ್ಲಿ ಶಿಸ್ತುಬದ್ಧವಾದ ತಂಡವನ್ನು SSF ಕಟ್ಟಿ ಬೆಳೆಸಿದೆ.. ಬೆಳೆಸುತ್ತಿದೆ.. ಇನ್ನೂ ಬೆಳೆಸಲಿದೆ....

       ನಮಗಿಲ್ಲಿ ವಿಶ್ರಾಂತಿಗೆ  ಸಮಯವಿಲ್ಲ ,ಸುಮ್ಮನೆ ಕೂರಲು ಮನಸ್ಸಿಲ್ಲ, ಶತ್ರುಗಳ ಆಯುಧದ ಮುಂದೆ ಎದೆ ತೋರಿಸಿದವರು ನಾವು, ವಿಶ್ವಾಸವಿಟ್ಟ ಆಶಯ ಆದರ್ಶಕ್ಕೆ ಜೀವ ಕೊಡಲು ಸಿದ್ಧರಾಗಿ ನಿಂತವರು ನಾವು, ನವ ಕಾಲದ ಸವಾಲುಗಳನ್ನು ಸ್ವೀಕರಿಸಿ, ಬರುವ ಎದುರುವಿಕೆಯನ್ನು ಮೆಟ್ಟಿಲಾಗಿಸಿ, ನಿರ್ಮಾಣ ಕ್ರಿಯೆಗಳಲ್ಲಿ ಸಕ್ರಿಯರಾಗಿ ಹೋರಾಡುವೆವು ನಾವು,ಸರ್ವಧರ್ಮಿಯರ ಶಾಂತಿಯ ತೋಟವಾದ ಭಾರತ ವನ್ನು ಗೌರವಿಸಿ ಶಾಂತಿಯ ಬೆಳಕನ್ನು ಚೆಲ್ಲುತ್ತಾ ಸುನ್ನೀ ಆಶಯಗಳ ಸಂರಕ್ಷಣೆಗೆ ಬೇಕಾಗಿ ಸಮರ ನಡೆಸುತ್ತಾ.. ಮತ್ತಷ್ಟು ಸಂಘಟನಾ ಕಾರ್ಯಾಚರಣೆಯನ್ನು ಶಕ್ತಗೊಳಿಸುವವರು ನಾವಾಗೋಣ.. ಅಲ್ಲಾಹನು ತೌಫೀಖ್ ನೀಡಲಿ... ಆಮೀನ್.

    - ಅಮೀನ್ ಕೊಳಕೆ 

(ಮುಹಿಮ್ಮಾತ್ ವಿದ್ಯಾರ್ಥಿ)
SHARE THIS

Author:

0 التعليقات: