Thursday, 22 April 2021

ಬ್ರಿಟನಿನ ಸ್ಟೋಕ್ ಪಾರ್ಕ್ ಖರೀದಿಸಿದ ಮುಕೇಶ್ ಅಂಬಾನಿ


 ಬ್ರಿಟನಿನ ಸ್ಟೋಕ್ ಪಾರ್ಕ್ ಖರೀದಿಸಿದ ಮುಕೇಶ್ ಅಂಬಾನಿ

ಮುಂಬೈ: ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಮಾಲಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 57 ಮಿಲಿಯನ್ ಪೌಂಡ್ ಗಳಿಗೆ(79 ಮಿಲಿಯನ್ ಡಾಲರ್) ಸ್ಟೋಕ್ ಪಾರ್ಕ್ ಲಿಮಿಟೆಡ್ ಅನ್ನು ಖರೀದಿಸಿದೆ. ಈ ಮೂಲಕ ಬ್ರಿಟನ್‍ನ ಮತ್ತೊಂದು ಪ್ರಮುಖ ಸಂಸ್ಥೆಯನ್ನು ಖರೀದಿಸಿದೆ.

ಹೊಟೇಲ್ ಹಾಗೂ ಗಾಲ್ಫ್ ಕೋರ್ಸ್ ಹೊಂದಿರುವ ಬ್ರಿಟನ್ ಮೂಲದ ಸಂಸ್ಥೆಯು ರಿಲಯನ್ಸ್ ನ ಗ್ರಾಹಕ ಹಾಗೂ ಆತಿಥ್ಯ ಸ್ವತ್ತುಗಳನ್ನು ಹೆಚ್ಚಿಸುತ್ತದೆ ಎ್ರಂದು ರಿಲಯನ್ಸ್ ಗುರುವಾರ ತಿಳಿಸಿದೆ.

ಏಶ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಅಂಬಾನಿ ಇತ್ತೀಚಿನ ವರ್ಷಗಳಲ್ಲಿ ಸಾಂಪ್ರದಾಯಿಕ ಬ್ರಿಟನ್ ಆಟಿಕೆ ಅಂಗಡಿ ಹ್ಯಾಮ್ಲೀಸ್ ಅನ್ನು ಖರೀದಿಸಿದ್ದರು.


SHARE THIS

Author:

0 التعليقات: