ಕೋಕಾಕೋಲಾ ಬ್ರ್ಯಾಂಡ್ ಬಾಯ್ಕಾಟ್ ಮಾಡುವಂತೆ ಹೇಳಿ , ಅದನ್ನೇ ಬಳಕೆ ಮಾಡಿ ಅಪಹಾಸ್ಯಕ್ಕೀಡಾದ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್ : ಕೋಕಾಕೋಲಾ ಬ್ರ್ಯಾಂಡ್ನ್ನು ಬಾಯ್ಕಾಟ್ ಮಾಡಬೇಕು ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವತಃ ಹೇಳಿಕೆ ನೀಡಿದ ಕೇವಲ ನಾಲ್ಕು ದಿನಗಳಲ್ಲೇ ಸ್ವತಃ ಟ್ರಂಪ್ ಟೇಬಲ್ನಲ್ಲೇ ಕೋಕಾಕೋಲಾ ಬಾಟಲಿ ಕಂಡು ನೆಟ್ಟಿಗರು ಟ್ರೊಲ್ ಮಾಡಿದ್ದಾರೆ.
ಜಾರ್ಜಿಯಾ ವೋಟಿಂಗ್ ರೈಟ್ಸ್ ವೇಳೆ ಟ್ರಂಪ್ ಇಂತಹದ್ದೊಂದು ಹೇಳಿಕೆ ನೀಡಿದ್ದರು.ಇದೀಗ ಅವರ ಟೇಬಲ್ ಮೇಲೆ ಬಾಟಲ್ ಕಾಣಿಸಿಕೊಳ್ಳುವ ಮೂಲಕ ಡೊನಾಲ್ಡ್ ಟ್ರಂಪ್ ಹೊಸ ಮುಖಭಂಗವನ್ನ ಅನುಭವಿಸುವಂತಾಗಿದೆ.
ಶ್ವೇತ ಭವನದಲ್ಲಿ ಟ್ರಂಪ್ಗೆ ಮಾಜಿ ಸಲಹೆಗಾರರಾಗಿದ್ದ ಸ್ಟೀಫನ್ ಮಿಲ್ಲರ್ ಫೋಟೋವೊಂದನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ದು ಇದರಲ್ಲಿ ಟ್ರಂಪ್ ಕುಳಿತಿರುವ ಟೇಬಲ್ನಲ್ಲಿ ಕೋಲಾ ಬಾಟಲಿ ಇರೋದನ್ನ ಕಾಣಬಹುದಾಗಿದೆ.
ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿಬಿಟ್ಟಿದೆ. ಬಹುಶಃ ಕೋಕಾಕೋಲಾ ಇನ್ನೂ ಸಂಪೂರ್ಣವಾಗಿ ಬಾಯ್ಕಾಟ್ ಆಗಿಲ್ಲ ಎನಿಸುತ್ತೆ ಅಂತಾ ನೆಟ್ಟಿಗರು ಟ್ರಂಪ್ರನ್ನ ಟ್ರೊಲ್ ಮಾಡಿದ್ದಾರೆ.
0 التعليقات: