Tuesday, 6 April 2021

ಬಸ್ ಸಂಚಾರ ಸಂಪೂರ್ಣ ಬಂದ್ : ಬಸ್ ಗಾಗಿ ಪ್ರಯಾಣಿಕರ ಪರದಾಟ, ಸರ್ಕಾರಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಗಳ ದರ್ಬಾರ್


ಬಸ್ ಸಂಚಾರ ಸಂಪೂರ್ಣ ಬಂದ್ : ಬಸ್ ಗಾಗಿ ಪ್ರಯಾಣಿಕರ ಪರದಾಟ, ಸರ್ಕಾರಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಗಳ ದರ್ಬಾರ್

ಬೆಂಗಳೂರು : ಇಂದು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೆ ಎಸ್ ಆರ್ ಟಿ ಸಿ ಹಾಗೂ ಬಿಎಂಟಿಸಿ ಬಸ್ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಸಾರಿಗೆ ನೌಕರರ ಮುಷ್ಕರದಿಂದಾಗಿ ಬಸ್ ಗಳಿಲ್ಲದೇ ಪ್ರಯಾಣಿಕರು ಪರದಾಡುವಂತ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇದರ ಮಧ್ಯೆ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್ ಗಳು ಹಾಜರಾಗಿದ್ದು, ಪ್ರಯಾಣಿಕರಿಗೆ ಒಂದಷ್ಟು ಸೇವೆ ಒದಗಿಸುತ್ತಿವೆ.

ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಇಂದು ತಾರಕಕ್ಕೇರಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾರಿಗೆ ನೌಕರರ ಮುಷ್ಕರದಿಂದಾಗಿ ಸಾರಿಗೆ ಬಸ್ ಸಂಚಾರ ಬಂದ್ ಆಗಿದೆ. ಬೆಳ್ಳಂಬೆಳಿಗ್ಗೆ ಸಾರಿಗೆ ಬಸ್ ಪ್ರಯಾಣಿಕರಿಗೆ ಬಸ್ ಇರದ ಕೊರತೆ ಎದುರಾಗಿದೆ. ಶೇ.40ರಷ್ಟು ಬಸ್ ಗಳು ಮಾತ್ರವೇ ಸಂಚರಿಸುತ್ತಿರುವುದಾಗಿ ತಿಳಿದು ಬಂದಿದೆ.

ಇನ್ನೂ ಸದ್ಯಕ್ಕೆ ಬೆಳಿಗ್ಗೆ ಶೇ.40ರಷ್ಟು ಬಸ್ ಸಂಚಾರ ನಡೆಸುತ್ತಿದ್ದರೂ, ಮಧ್ಯಾಹ್ನದ ಹೊತ್ತಿಗೆ ಸಾರಿಗೆ ಬಸ್ ಸಂಚಾರ ಸಂಪೂರ್ಣ ಬಂದ್ ಆಗುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ. ಸಾರಿಗೆ ಬಸ್ ಗಳಿಲ್ಲದ ಕಾರಣ, ಖಾಸಗಿ ಬಸ್ ಗಳು ಸರ್ಕಾರಿ ಬಸ್ ನಿಲ್ದಾಣದ ಮೂಲಕ ಪ್ರಯಾಣಿಕರಿಗೆ ತೊಂದರೆಯಾಗದಂತೆ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಿದೆ. ಇಂತಹ ಸಾರಿಗೆ ಬಸ್ ಮುಷ್ಕರವನ್ನೇ ಬಂಡಾವಳ ಮಾಡಿಕೊಂಡು ಕೆಲ ಖಾಸಗಿ ಬಸ್ ಗಳು ದುಪ್ಪಟ್ಟು ದರವನ್ನು ವಸೂಲಿ ಮಾಡಿ, ಪ್ರಯಾಣಿಕರ ಸುಲಿಗೆಗೂ ಇಳಿದಿರುವ ಘಟನೆ ಅಲ್ಲಲ್ಲಿ ವರದಿಯಾಗಿದೆ.



SHARE THIS

Author:

0 التعليقات: