Friday, 9 April 2021

ಉದುಮ: ಕಾಞಂಗಾಡ್ ಜಿಲ್ಲಾ ಜೈಲು ವಾರ್ಡನ್ ಅಪಘಾತಕ್ಕೆ ಬಲಿ


 ಉದುಮ: ಕಾಞಂಗಾಡ್ ಜಿಲ್ಲಾ ಜೈಲು ವಾರ್ಡನ್ ಅಪಘಾತಕ್ಕೆ ಬಲಿ

ಕಾಸರಗೋಡು:  ಸ್ಕೂಟರ್ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಕಾಞಂಗಾಡ್ ಜಿಲ್ಲಾ ಜೈಲು ವಾರ್ಡನ್ ಮೃತಪಟ್ಟ ಘಟನೆ ಕಳೆದ ರಾತ್ರಿ ಉದುಮ ಸಮೀಪದ ಕುನಿಯ ಎಂಬಲ್ಲಿ ನಡೆದಿದೆ.

ಕಾಞಂಗಾಡ್ ಜಿಲ್ಲಾ ಜೈಲು ವಾರ್ಡನ್ ಶ್ರೀನಿವಾಸನ್(52) ಮೃತಪಟ್ಟವರು.

 ಉದುಮ ಬಾರ ನಿವಾಸಿಯಾಗಿದ್ದ ಶ್ರೀನಿವಾಸನ್ ಶುಕ್ರವಾರ ರಾತ್ರಿ ಕರ್ತವ್ಯ ಮುಗಿಸಿ ಸ್ಕೂಟರ್ ನಲ್ಲಿ ಮನೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಇವರು ಸಂಚರಿಸುತ್ತಿದ್ದ ಸ್ಕೂಟರ್ ಗೆ ಕಾಸರಗೋಡು ಕಡೆಯಿಂದ ಕಾಞ೦ಗಾಡ್ ನತ್ತ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿದೆಯೆನ್ನಲಾಗಿದೆ. ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಶ್ರೀನಿವಾಸನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಬಗ್ಗೆ ಬೇಕಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



SHARE THIS

Author:

0 التعليقات: