Saturday, 3 April 2021

ರಸ್ತೆ ಅಪಘಾತ : ಪುತ್ತೂರಿನ ನವ ವಿವಾಹಿತೆ ಮೃತ್ಯು


ರಸ್ತೆ ಅಪಘಾತ : ಪುತ್ತೂರಿನ ನವ ವಿವಾಹಿತೆ ಮೃತ್ಯು

ಪುತ್ತೂರು: ಕೋಳಿ ಸಾಗಾಟದ ಲಾರಿ ಮತ್ತು ವ್ಯಾಗನರ್ ಕಾರು ನಡುವೆ ಬೆಂಗಳೂರಿನ ನೆಲಮಂಗಲದ ಬಳಿ ಮುಖಾಮುಖಿ ಢಿಕ್ಕಿ ಸಂಭವಿಸಿ ಪುತ್ತೂರಿನ ನವ ವಿವಾಹಿತೆಯೊಬ್ಬರು ಮೃತಪಟ್ಟ ಘಟನೆ ಶನಿವಾರ ನಡೆದಿದೆ.ಗೊಪೀಕ್ ಹಾಗೂ ಧನುಷಾ ಅವರ ವಿವಾಹ  ಫೆ. 21ರಂದು ನಡೆದಿತ್ತು.

ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕು ನಿವಾಸಿ ಗೋಪಿಕ್ ಎಂಬವರ ಪತ್ನಿ ಧನುಷಾ (23) ಮೃತರು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾರು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ  ನೆಲಮಂಗಲ ಸಮೀಪಿಸುತ್ತಿದ್ದಂತೆ  ಕೋಳಿ ಸಾಗಾಟದ ಲಾರಿ ಢಿಕ್ಕಿಯಾಗಿದೆ. ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಧನುಷಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಗೊಪೀಕ್ , ರೂಪ ವೇಣುಗೋಪಾಲ್ ಹಾಗೂ ಶುಭ ಲಕ್ಷ್ಮೀ ಗಂಭೀರವಾಗಿ ಗಾಯಗೊಂಡಿದ್ದು ಅವರನ್ಬು ಆಸ್ಪತ್ರೆಗೆ ದಾಖಲಿಸಲಾಗಿದೆ.



SHARE THIS

Author:

0 التعليقات: