Friday, 2 April 2021

ನನ್ನ ಕಾರಿನ ಮೇಲೆ ಬಿಜೆಪಿ ಗೂಂಡಾಗಳು ದಾಳಿ ನಡೆಸಿದ್ದಾರೆ: ರಾಕೇಶ್ ಟಿಕಾಯತ್


ನನ್ನ ಕಾರಿನ ಮೇಲೆ ಬಿಜೆಪಿ ಗೂಂಡಾಗಳು ದಾಳಿ ನಡೆಸಿದ್ದಾರೆ: ರಾಕೇಶ್ ಟಿಕಾಯತ್

ಜೈಪುರ: ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು)ದ ನಾಯಕ ರಾಕೇಶ್ ಟಿಕಾಯತ್ ಅವರ ವಾಹನ ವ್ಯೆಹದ ಮೇಲೆ ರಾಜಸ್ಥಾನದ ಅಲವರ್ ಜಿಲ್ಲೆಯ ತಾತರ್‌ಪುರ ಗ್ರಾಮದಲ್ಲಿ ಶುಕ್ರವಾರ ದಾಳಿ ನಡೆದಿದೆ. ಈ ದಾಳಿಯಿಂದ ಟಿಕಾಯತ್ ಅವರ ಕಾರಿನ ಕಿಟಕಿಯ ಗಾಜು ಒಡೆದಿದೆ ಎಂದು ತಿಳಿದು ಬಂದಿದೆ. ರಾಕೇಶ್ ಟಿಕಾಯತ್ ಅವರ ವಾಹನ ಅಲವಾರ್‌ನ ಹರಸೋರಾ ಗ್ರಾಮದಿಂದ ಬಾನಸೂರ್‌ಗೆ ಸಂಚರಿಸುತ್ತಿದ್ದ ಸಂದರ್ಭ ಈ ದಾಳಿ ನಡೆದಿದೆ. ಹರಸೋರಾದಲ್ಲಿ ರೈತರ ಸಭೆ ಉದ್ದೇಶಿಸಿ ಮಾತನಾಡಿದ ಬಳಿಕ ರಾಕೇಶ್ ಟಿಕಾಯತ್ ಅವರು ಬಾನಸೂರ್‌ಗೆ ತೆರಳುತ್ತಿದ್ದರು. ಹಾನಿಗೀಡಾದ ಕಾರಿನ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಿರುವ ರಾಕೇಶ್ ಟಿಕಾಯತ್, ಬಿಜೆಪಿ ಗೂಂಡಾಗಳು ಈ ದಾಳಿ ನಡೆಸಿದ್ದಾರೆ ಎಂದಿದ್ದಾರೆ. ‘‘ರಾಜಸ್ಥಾನದ ಅಲವಾರ ಜಿಲ್ಲೆಯ ತಾತರ್‌ಪುರದ ಬಾನಸೂರ್ ರಸ್ತೆಯಲ್ಲಿ ಬಿಜೆಪಿಯ ಗೂಂಡಾಗಳು ದಾಳಿ ನಡೆಸಿದ್ದಾರೆ. ಇದು ಪ್ರಜಾಪ್ರಭುತ್ವದ ಸಾವು’’ ಎಂದು ಟಿಕಾಯತ್ ಟ್ವೀಟ್ ಮಾಡಿದ್ದಾರೆ. SHARE THIS

Author:

0 التعليقات: