Sunday, 25 April 2021

ಈಗಿನ ಪರಿಸ್ಥಿತಿಯಲ್ಲಿ ‘ಜನ್ ಕಿ ಬಾತ್’ ಅತ್ಯಂತ ಮುಖ್ಯವಾಗಿದೆ: ರಾಹುಲ್ ಗಾಂಧಿ


 ಈಗಿನ ಪರಿಸ್ಥಿತಿಯಲ್ಲಿ ‘ಜನ್ ಕಿ ಬಾತ್’ ಅತ್ಯಂತ ಮುಖ್ಯವಾಗಿದೆ: ರಾಹುಲ್ ಗಾಂಧಿ

ಹೊಸದಿಲ್ಲಿ: ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ರವಿವಾರ ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶದಲ್ಲಿ ಹಠಾತ್ತನೆ ಏರಿಕೆಯಾಗಿರುವ ಕೋವಿಡ್-19 ಪ್ರಕರಣಗಳಿಂದಾಗಿ ಬಳಲುತ್ತಿರುವ ನಮ್ಮ ನಾಗರಿಕರಿಗೆ ಸಹಾಯ ಮಾಡುವುದು ನಮ್ಮ ಪಕ್ಷದ ಕರ್ತವ್ಯವಾಗಿದೆ ಎಂದರು.

ಕೋವಿಡ್-19 ಎರಡನೇ ಅಲೆಯಿಂದ ದೇಶ ಬೆಚ್ಚಿಬಿದ್ದಿದೆ. ರಾಜ್ಯಗಳಿಗೆ ಸಹಾಯ ಮಾಡಲು ಕೇಂದ್ರ ಎಲ್ಲಾ ಶಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ‘ಮನ್ ಕಿಬಾತ್’ ರೇಡಿಯೊ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

 “ವ್ಯವಸ್ಥೆ ವಿಫಲವಾಗಿದೆ. ಹೀಗಾಗಿ ಜನ್ ಕಿ ಬಾತ್ ಮಾಡುವುದು ಅತ್ಯಂತ ಮುಖ್ಯವಾಗಿದೆ’’ ಎಂದು ರಾಹುಲ್ ಗಾಂಧಿ ಟ್ವೀಟಿಸಿದ್ದಾರೆ.

"ಈ ಬಿಕ್ಕಟ್ಟಿನಲ್ಲಿ ದೇಶಕ್ಕೆ ಜವಾಬ್ದಾರಿಯುತ ನಾಗರಿಕರ ಅಗತ್ಯವಿದೆ. ಎಲ್ಲಾ ರಾಜಕೀಯ ಕೆಲಸಗಳನ್ನು ಬಿಟ್ಟು ಜನರಿಗೆ ಸಹಾಯ ಮಾಡಿ. ನಮ್ಮ ದೇಶದ ಜನರ ನೋವನ್ನು ನಿವಾರಿಸಿ ಎಂದು ನನ್ನ ಕಾಂಗ್ರೆಸ್ ಸಹೋದ್ಯೋಗಿಗಳಿಗೆ ನಾನು ವಿನಂತಿಸಿಕೊಳ್ಳುತ್ತೇನೆ'' ಎಂದು ರಾಹುಲ್ ಹೇಳಿದ್ದಾರೆ.


SHARE THIS

Author:

0 التعليقات: