Saturday, 3 April 2021

ಚಿನ್ನ ಅಕ್ರಮ ಸಾಗಾಟ; ಮೂರು ಪ್ರಕರಣಗಳು ಪತ್ತೆ: ಆರೋಪಿಗಳು ಸೆರೆ


ಚಿನ್ನ ಅಕ್ರಮ ಸಾಗಾಟ; ಮೂರು ಪ್ರಕರಣಗಳು ಪತ್ತೆ: ಆರೋಪಿಗಳು ಸೆರೆ

ಮಂಗಳೂರು: ದುಬೈ ಮತ್ತು ಶಾರ್ಜಾದಿಂದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂರು ಪ್ರಕರಣವನ್ನು ಪತ್ತೆ ಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು ಸುಮಾರು 1.18 ಕೋ.ರೂ. ಮೌಲ್ಯದ ಚಿನ್ನ ವಶಪಡಿಸಿ ಮೂವರನ್ನು ಬಂಧಿಸಿದ್ದಾರೆ.ಉಳ್ಳಾಲ ನಿವಾಸಿ ಮುಹಮ್ಮದ್ ಆಸಿಫ್, ಮಣ್ಣಿಪ್ಪುರಂ ನಿವಾಸಿ ಮುಹಮ್ಮದ್ ಅಶ್ರಫ್, ಕಾಸರಗೋಡು ನಿವಾಸಿ ಅಬ್ದುಲ್ ಸಲಾಂ ಬಂಧಿತ ಆರೋಪಿಗಳು.

ಎ.1ರಂದು ಅಬ್ದುಲ್ ಸಲಾಂ ಎಂಬಾತ ಏರ್ ಇಂಡಿಗೋ ವಿಮಾನ ಮೂಲಕ ಶಾರ್ಜಾದಿಂದ ಮಂಗಳೂರಿಗೆ ಆಗಮಿಸಿದ್ದ. ಈ ಸಂದರ್ಭ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಈತ ಚಿನ್ನವನ್ನು ಅಕ್ರಮವಾಗಿ ಸಾಗಾಟ ಪತ್ತೆಯಾಗಿದೆ.

ಎ.2ರಂದು ಮುಹಮ್ಮದ್ ಅಶ್ರಫ್ ಎಂಬಾತ ಏರ್ ಇಂಡಿಯಾ ವಿಮಾನ ಮೂಲಕ ದುಬೈಯಿಂದ ಮಂಗಳೂರು ಆಗಮಿಸಿದ್ದ.ಈ ಇಬ್ಬರೂ ಆರೋಪಿಗಳು ಚಿನ್ನವನ್ನು ಅಕ್ರಮ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಎಡರೂ ಪ್ರಕರಣದಲ್ಲಿ 576 ಗ್ರಾಂನ 26,43,840 ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಎ.3ರಂದು ಮುಹಮ್ಮದ್ ಆಸಿಫ್ ಎಂಬಾತ ದುಬೈಯಿಂದ ಏರ್ ಇಂಡಿಯಾ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ್ದ. ಒಳ ಉಡುಪು, ಜೀನ್ಸ್ ಪ್ಯಾಂಟ್ ಮತ್ತು ಮೊಣಕಾಲು ಬ್ಯಾಂಡ್ ಮೂಲಕ ಪೇಸ್ಟ್ ರೂಪದಲ್ಲಿ 1.993 ಕೆಜಿ ಚಿನ್ನ ಪತ್ತೆ ಹಚ್ಚಿದ್ದಾರೆ. ಈ ಚಿನ್ನದ ಮೌಲ್ಯ 92,27,590 ರೂ. ಎಂದು ಅಂದಾಜಿಸಲಾಗಿದೆ.



SHARE THIS

Author:

0 التعليقات: