Monday, 19 April 2021

ಅತಿ‌ ದೊಡ್ಢ ತಾಜುಲ್ ಉಲಮಾ ಸ್ಮಾರಕ ಲೋಕಾರ್ಪಣೆಗೆ ಸಜ್ಜು


 ಅತಿ‌ ದೊಡ್ಢ ತಾಜುಲ್ ಉಲಮಾ ಸ್ಮಾರಕ ಲೋಕಾರ್ಪಣೆಗೆ ಸಜ್ಜು

ಇದು ಸುನ್ನಿಗಳ ಸ್ವಾಭಿಮಾನದ ಸಂಕೇತ ಆದ್ದರಿಂದ ತಾಜುಲ್ ಉಲಮಾ ದೊಂದಿಗೆ  ಕೈಜೋಡಿಸಿರಿ-ತಲಕ್ಕಿ ತಂಙಳ್

ಬಂಟ್ವಾಳ: ತಲಕ್ಕಿ ತಾಜುಲ್ ಉಲಮಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಸನದುದಾನ ಮಹಾ ಸಮ್ಮೇಳನ, ತಾಜುಲ್ ಉಲಮಾ ದ‌ಅವಾ ಕಾಲೇಜು ಹಾಗೂ ವುಮೆನ್ಸ್ ಕಾಲೇಜಿನಲ್ಲಿ ‌ಕಲಿತು ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಹಾಗೂ ತಾಜುಲ್ ಉಲಮಾ ಸ್ಮಾರಕ ಭವನದ ಲೋಕಾರ್ಪಣೆಯು ಮೇ 20,21,22 ದಿನಾಂಕಗಳಲ್ಲಿ ನಡೆಯಲಿದ್ದು ಇದರ ಸ್ವಾಗತ ಸಮಿತಿಯ ಪ್ರಥಮ ಸಭೆಯು ಸಂಸ್ಥೆಯ ಸಾರಥಿ ಸಯ್ಯಿದ್ ಶಿಹಾಬುದ್ದೀನ್ ಅಲ್ ಮಶ್‌ಹೂರ್ ತಂಙಳ್ ತಲಕ್ಕಿರವರ ನೇತೃತ್ವದಲ್ಲಿ ಸ್ವಾಗತ ಸಮಿತಿ ಚೇರ್ಮನ್ ಇಸ್ಮಾಯಿಲ್ ಝಕರಿಯಾ ಪೂಕಾಕರವರ ಅಧ್ಯಕ್ಷತೆಯಲ್ಲಿ ಆದಿತ್ಯವಾರ ನಡೆಯಿತು.

ಸಭೆಯಲ್ಲಿ ಸಯ್ಯಿದ್ ತಲಕ್ಕಿ ತಂಙಳ್ ದುಆಶಿರ್ವಚನಗೈದು ಮಾತನಾಡಿದರು;

" ಸುನ್ನಿ ಆದರ್ಶವನ್ನು ಉಳಿಸಿ ಬೆಳೆಸಿದ ನಮ್ಮ ಪರಮೋಚ್ಚ ನಾಯಕರಾದ ತಾಜುಲ್ ಉಲಮಾರ ಕರ್ಮ ಭೂಮಿಯಾದ  ಕರ್ನಾಟಕದ ಮಣ್ಣಿನಲ್ಲಿ ನಿರ್ಮಿಸಲಾದ ನಾಲ್ಕು ಅಂತಸ್ತಿನ 20 ತರಗತಿ ಕೋಣೆಗಳನ್ನು ಹೊಂದಿದ ಬೃಹತ್ ಶೈಕ್ಷಣಿಕ ಕಟ್ಟಡ ಉದ್ಘಾಟನೆ ನಡೆಯಲಿದೆ ಇದು ಸುನ್ನಿಗಳ ಸ್ವಾಭಿಮಾನದ ಸಂಕೇತವಾಗಿದೆ. ಆದ್ದರಿಂದ ಕರ್ನಾಟಕದ ಸರ್ವ ಸುನ್ನಿ ಕುಟುಂಬದ ನಾಯಕರು ಹಾಗೂ ಕಾರ್ಯಕರ್ತರು ತಾಜುಲ್ ಉಲಮಾ ಇಸ್ಲಾಮಿಕ್ ಕಾಂಪ್ಲೆಕ್ಸ್ ನೊಂದಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು

 ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಸ್ವಾಗತಿಸಿ, ಎಸ್ಸೆಸ್ಸಫ್ ದಕ್ಷಿಣ ಕನ್ನಡ ವೆಸ್ಟ್ ‌ಜಿಲ್ಲಾ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಸಭೆಯನ್ನು ಉದ್ಘಾಟಿಸಿದರು ಕೊನೆಯಲ್ಲಿ ಸಂಸ್ಥೆಯ ಮ್ಯಾನೇಜರ್ ಮೆದು ಸಿದ್ದೀಕ್ ಮದನಿಯವರುಮಾತನಾಡಿ ಮೂರು ದಿನಗಳ ವೈವಿಧ್ಯಮಯ ಕಾರ್ಯ ಕಲಾಪಗಳ ಮಾಹಿತಿಯನ್ನು ನೀಡಿದರು.ಮುಂದಿನ ತಿಂಗಳು ನಡೆಯುವ ಸಮ್ಮೇಳನದಲ್ಲಿ ಇಂಡ್ಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಸಹಿತ ಹಲವಾರು ಧಾರ್ಮಿಕ, ಸಾಮಾಜಿಕ, ರಾಜಕೀಯ ನಾಯಕರುಗಳು ಭಾಗವಹಿಸಲಿದ್ದು ಸಮ್ಮೇಳನದ ಯಶಸ್ವಿಗೆ ‌ಬೇಕಾದ ಕಾರ್ಯಯೋಜನೆಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಎಸ್.ವೈ.ಎಸ್ ದಕ್ಷಿಣ ಕನ್ನಡ ವೆಸ್ಟ್ ‌ಜಿಲ್ಲಾ ಕಾರ್ಯದರ್ಶಿ ಖಲೀಳ್ ಮುಸ್ಲಿಯಾರ್ ಕಾವೂರ್, ಏಷ್ಯನ್ ಬಾವಾ ಹಾಜಿ, ಎನ್.ಎಸ್ ಕರೀಂ ಹಾಜಿ, ಫಾರೂಕ್ ಹಾಜಿ ಉಳ್ಳಾಲ, ಜಲೀಲ್ ಮೋಂಟುಗೋಳಿ, ಸಯ್ಯಿದ್ ಕುಬೈಬ್ ತಂಙಳ್, ಇಬ್ರಾಹಿಂ ಸಖಾಫಿ ಸೆರ್ಕಳ,

ಇಬ್ರಾಹಿಂ ಅಹ್ಸನಿ ಮಂಜನಾಡಿ, ಅಕ್ಬರ್ ಅಲಿ ಮದನಿ ಆಲಂಪಾಡಿ,‌ ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಅಧ್ಯಕ್ಷರಾದ ಅಲಿ ಮದನಿ, ಎಸ್.ಜೆ.ಯು ಮುಡಿಪು ಝೋನ್ ಕಾರ್ಯದರ್ಶಿ ಸಿದ್ದೀಕ್ ಸ‌ಅದಿ ಮಿತ್ತೂರ್, ಹಾಗೂ ಸುನ್ನೀ ಸಂಘ‌ ಸಂಸ್ಥೆಗಳ ನೇತಾರರು, ಕಾರ್ಯಕರ್ತರು ಉಪಸ್ಥಿತರಿದ್ದರು.


SHARE THIS

Author:

0 التعليقات: