Saturday, 17 April 2021

ಕುಂಭಮೇಳದಿಂದ ಮರಳಿದ ನಿರ್ವಾಣಿ ಅಖಾಡದ ಮುಖ್ಯಸ್ಥ ಕೋವಿಡ್‌ ನಿಂದ ಮೃತ್ಯು


 ಕುಂಭಮೇಳದಿಂದ ಮರಳಿದ ನಿರ್ವಾಣಿ ಅಖಾಡದ ಮುಖ್ಯಸ್ಥ ಕೋವಿಡ್‌ ನಿಂದ ಮೃತ್ಯು

ಹರಿದ್ವಾರ: ದೇಶದಾದ್ಯಂತ ಕೋವಿಡ್‌ ಪ್ರಕರಣಗಳು ದೈನಂದಿನ ಏರುಗತಿಯಲ್ಲಿ ಸಾಗುತ್ತಿದೆ. ಪ್ರತಿದಿನ 2ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಹಲವಾರು ರಾಜ್ಯಗಳಲ್ಲಿ ಬಹುತೇಕ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ಆಕ್ಸಿಜನ್‌ ಮತ್ತು ಸ್ಥಳಾವಕಾಶದ ಕೊರತೆಗಳು ಕಂಡು ಬರುತ್ತಿವೆ. ಈ ನಡುವೆ ಉತ್ತರಾಖಂಡದಲ್ಲಿ ಕುಂಭಮೇಳ ನಡೆಯುತ್ತಿದ್ದು, ಲಕ್ಷಾಂತರ ಮಂದಿ ಭಾಗಿಯಾಗಿದ್ದಾರೆ. ಇದೀಗ ಕುಂಭಮೇಳದ ಶಾಹಿ ಸ್ನಾನ್‌ ನಲ್ಲಿ ಭಾಗವಹಿಸಿದ್ದ ನಿರ್ವಾಣಿ ಅಖಾಡದ ಮುಖ್ಯಸ್ಥ ಕಪಿಲ್‌ ದೇವ್‌ ಎಂಬವರು ಕೋವಿಡ್‌ ಭಾದಿತರಾಗಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕೋವಿಡ್‌ ನ ಆರಂಭಿಕ ಲಕ್ಷಣಗಳು ಕಂಡು ಬಂದ ಬಳಿಕ ಅವರನ್ನು ಡೆಹ್ರಾಡೂನ್‌ ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರದಂದು ಅವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ನಿರಂಜನಿ ಅಖಾಡದ ಕಾರ್ಯದರ್ಶಿ ರವೀಂದ್ರ ಪುರಿ ತಾನು ಕೋವಿಡ್‌ ಪಾಸಿಟಿವ್‌ ಆದ ಕುರಿತು ಈ ಹಿಂದೆ ಮಾಹಿತಿ ನೀಡಿದ್ದು, ಅವರು ಸದ್ಯ ಸ್ವಯಂ ಐಸೋಲೇಶನ್‌ ಗೆ ಒಳಗಾಗಿದ್ದಾರೆಂದು ತಿಳಿದು ಬಂದಿದೆ.

ಹಲವಾರು ಸಾಧು ಸಂತರುಗಳಲ್ಲಿ ಕೋವಿಡ್‌ ಪಾಸಿಟಿವ್‌ ಕಂಡು ಬಂದ ಬಳಿಕ ನಿರಂಜನಿ ಅಖಾಡದ ಮುಖ್ಯಸ್ಥರು, ಏಪ್ರಿಲ್ 17 ರಂದು ಕುಂಭ ಮೇಳದ ಸಮಾಪ್ತಿಯನ್ನು ಘೋಷಿಸಿದ್ದರು. 


SHARE THIS

Author:

0 التعليقات: