Saturday, 10 April 2021

ಬಸ್‌ ನಲ್ಲಿ ರಾಜಾರೋಶವಾಗಿ ಸಾಗಿಸ್ತಿದ್ದ ಕೆ.ಜಿಗಟ್ಟಲೇ ಚಿನ್ನ, ಲಕ್ಷ ಲಕ್ಷ ನಗದು ವಶಕ್ಕೆ!

 

ಬಸ್‌ ನಲ್ಲಿ ರಾಜಾರೋಶವಾಗಿ ಸಾಗಿಸ್ತಿದ್ದ ಕೆ.ಜಿಗಟ್ಟಲೇ ಚಿನ್ನ, ಲಕ್ಷ ಲಕ್ಷ ನಗದು ವಶಕ್ಕೆ! 

ಅಮರಾವತಿ: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪಂಚಲಿಂಗಾ ಚೆಕ್ ಪೋಸ್ಟ್ʼನಲ್ಲಿ ಟ್ರಾವೆಲ್ಸ್ ಬಸ್‌ʼವೊಂದರಲ್ಲಿ ಸಾಗಿಸಲಾಗ್ತಿದ್ದ ಭಾರಿ ಪ್ರಮಾಣದ ನಗದು ಮತ್ತು ಚಿನ್ನವನ್ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಪೊಲೀಸರು ಶನಿವಾರ ಬೆಳಿಗ್ಗೆ ಚೆಕ್ ಪೋಸ್ಟ್ʼನಲ್ಲಿ ಶೋಧ ನಡೆಸಲಾಗ್ತಿತ್ತು. ಇದರ ಭಾಗವಾಗಿ ಹೈದರಾಬಾದ್ ನಿಂದ ಬೆಂಗಳೂರಿಗೆ ಎಸ್ ಆರ್ ಎಸ್ ಟ್ರಾವೆಲ್ಸ್ ಬಸ್ ತಪಾಸಣೆ ಮಾಡಲಾಯಿತು. ತಪಾಸಣೆ ನಡೆಸಿದ ಪೊಲೀಸರಿಗೆ ಶಾಕ್‌ ಆಗಿದ್ದು, 3 ಕೋಟಿ ರೂ.ಗೂ ಅಧಿಕ ನಗದು ಹಾಗೂ ಒಂದು ಕಿಲೋ ಚಿನ್ನ ಪತ್ತೆಯಾಗಿದೆ. ಸರಿಯಾದ ದಾಖಲೆಗಳಿಲ್ಲದ ನಗದು ಮತ್ತು ಚಿನ್ನವನ್ನ ಪೊಲೀಸರು ವಶಪಡಿಸಿಕೊಂಡರು.

ಅಂದ್ಹಾಗೆ, ಈ ನಗದು ಚೆನ್ನೈನ ರಾಮಚಂದ್ರ ವೈದ್ಯಕೀಯ ಕಾಲೇಜಿಗೆ ಸೇರಿದ್ದು, ಚಿನ್ನವು ಹೈದರಾಬಾದ್ʼನ ಪ್ರಮುಖ ಆಭರಣ ಅಂಗಡಿಗೆ ಸಂಬಂಧಿಸಿದೆ ಎಂದು ಹೇಳಲಾಗ್ತಿದೆ. ಸಾಗಾಣಿಕೆಯಲ್ಲಿ ತೊಡಗಿದ್ದ ಚೇತನ್ ಕುಮಾರ್ʼನನ್ನ ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.


SHARE THIS

Author:

0 التعليقات: